ಟೈಟೇನಿಯಮ್: ಪರಮಾಣು ಸಂಖ್ಯೆ 22 ರ ರಾಸಾಯನಿಕ ಅಂಶ

22 ಸ್ಕ್ಯಾಂಡಿಯಮ್ಟೈಟೇನಿಯಮ್ವನಾಡಿಯಮ್
-

Ti

Zr
ಟೈಟೇನಿಯಮ್: ದೊರಕುವಿಕೆ, ಉತ್ಪಾದನೆ, ಗುಣಗಳು ಮತ್ತು ಉಪಯೋಗಗಳು
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಟೈಟೇನಿಯಮ್, Ti, 22
ರಾಸಾಯನಿಕ ಸರಣಿಸಂಕ್ರಮಣ ಧಾತು
ಗುಂಪು, ಆವರ್ತ, ಖಂಡ ೪, ೪, d
ಸ್ವರೂಪಬೂದು-ಬಿಳಿ
ಟೈಟೇನಿಯಮ್: ದೊರಕುವಿಕೆ, ಉತ್ಪಾದನೆ, ಗುಣಗಳು ಮತ್ತು ಉಪಯೋಗಗಳು
ಅಣುವಿನ ತೂಕ 47.867(1) g·mol−1
ಋಣವಿದ್ಯುತ್ಕಣ ಜೋಡಣೆ [Ar] 3d2 4s2
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು 2, 8, 8, 4
ಭೌತಿಕ ಗುಣಗಳು
ಹಂತsolid
ಸಾಂದ್ರತೆ (ಕೋ.ತಾ. ಹತ್ತಿರ)4.506 g·cm−3
ದ್ರವಸಾಂದ್ರತೆ at ಕ.ಬಿ.4.11 g·cm−3
ಕರಗುವ ತಾಪಮಾನ1941 K
(1668 °C, 3034 °ಎಫ್)
ಕುದಿಯುವ ತಾಪಮಾನ3560 K
(3287 °C, 5949 °F)
ಸಮ್ಮಿಲನದ ಉಷ್ಣಾಂಶ14.15 kJ·mol−1
ಭಾಷ್ಪೀಕರಣ ಉಷ್ಣಾಂಶ425 kJ·mol−1
ಉಷ್ಣ ಸಾಮರ್ಥ್ಯ(25 °C) 25.060 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 1982 2171 (2403) 2692 3064 3558
ಅಣುವಿನ ಗುಣಗಳು
ಸ್ಪಟಿಕ ಸ್ವರೂಪhexagonal
ಆಕ್ಸಿಡೀಕರಣ ಸ್ಥಿತಿಗಳು6 [೧], 4, 3, 2, 1 [೨]
(amphoteric oxide)
ವಿದ್ಯುದೃಣತ್ವ1.54 (Pauling scale)
ಅಣುವಿನ ತ್ರಿಜ್ಯ140 pm
ಅಣುವಿನ ತ್ರಿಜ್ಯ (ಲೆಖ್ಕಿತ)176 pm
ತ್ರಿಜ್ಯ ಸಹಾಂಕ136 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆparamagnetic
ವಿದ್ಯುತ್ ರೋಧಶೀಲತೆ(20 °C) 0.420 µΩ·m
ಉಷ್ಣ ವಾಹಕತೆ(300 K) 21.9 W·m−1·K−1
ಉಷ್ಣ ವ್ಯಾಕೋಚನ(25 °C) 8.6 µm·m−1·K−1
ಶಬ್ದದ ವೇಗ (ತೆಳು ಸರಳು)(r.t.) 5090 m·s−1
ಯಂಗ್ ಮಾಪಾಂಕ116 GPa
ವಿರೋಧಬಲ ಮಾಪನಾಂಕ44 GPa
ಸಗಟು ಮಾಪನಾಂಕ110 GPa
ವಿಷ ನಿಷ್ಪತ್ತಿ 0.32
ಮೋಸ್ ಗಡಸುತನ6.0
Vickers ಗಡಸುತನ970 MPa
ಬ್ರಿನೆಲ್ ಗಡಸುತನ716 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-32-6
ಉಲ್ಲೇಖನೆಗಳು

ಟೈಟೇನಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಹಗುರವಾಗಿರುವ ಈ ಲೋಹ ಜಂಗು ಹಿಡಿಯಬಲ್ಲದ ತಾಕತ್ತನ್ನು ಹೊಂದಿದೆ. ಹೀಗಾಗಿ ಕಬ್ಬಿಣ, ಅಲ್ಯೂಮಿನಿಯಮ್ ಇತ್ಯಾದಿಗಳೊಂದಿಗೆ ಇದು ಶಕ್ತಿಯುತ, ಹಗುರ ಮಿಶ್ರಲೋಹಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಈ ಮಿಶ್ರಲೋಹಗಳು ಗಗನನೌಕೆ, ವಿಮಾನ, ಕೃತಕ ಅವಯವ, ಇತ್ಯಾದಿಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ಈ ಧಾತುವನ್ನು ಇಂಗ್ಲೆಂಡ್ವಿಲಿಯಮ್ ಗ್ರೆಗೊರ್ ೧೭೯೧ರಲ್ಲಿ ಮೊದಲು ಅನ್ವೇಶಿಸಿದರು. ಗ್ರೀಕ್ ಪುರಾಣದ ಬಲಾಢ್ಯ ಟೈಟನರು ಇದರ ಹೆಸರಿಗೆ ಸ್ಪೂರ್ತಿಯಾದರು.

ಇದು ಆವರ್ತಕೋಷ್ಟಕದ 4ನೆಯ ಗುಂಪಿನಲ್ಲಿದೆ. ಪ್ರತೀಕ Ti. ಪರಮಾಣು ಸಂಖ್ಯೆ 22. ಪರಮಾಣು ತೂಕ 47.9. ಎಲೆಕ್ಟ್ರಾನ್ ವಿನ್ಯಾಸ [Ar] 3d2 4s2. 1947ರ ವರೆಗೆ ಟೈಟಾನಿಯಮನ್ನು ವಿರಳ ಧಾತು ಎಂದು ಪರಿಗಣಿಸಲಾಗಿತ್ತು. ಆದರೆ ಅಲ್ಲಿಂದೀಚೆಗೆ ಇದನ್ನು ಕ್ರೋಲನ ಪದ್ಧತಿಯಿಂದ ಅಧಿಕವಾಗಿ ತಯಾರಿಸಲಾಗುತ್ತಿದೆ. ಇದು ಪ್ರಕೃತಿಯಲ್ಲಿ ಹೇರಳವಾಗಿ ದೊರೆಯುವ ಅತ್ಯಧಿಕ ಪ್ರಮಾಣದ ಧಾತುಗಳಲ್ಲಿ 9ನೆಯ ಮುಖ್ಯ ಧಾತು. ಭೂಮಿಯ ಮೇಲ್ಮೈ ಪದರದಲ್ಲಿ ಟೈಟಾನಿಯಮ್ ಸುಮಾರು 0.63% ಉಂಟು. ವಿಲಿಯಮ್ ಗ್ರೆಗೋರ್ ಇಂಗ್ಲೆಂಡಿನ ಕಾರ್ನ್‌ವಾಲಿನ ಕಪ್ಪು ಮರಳಿನಿಂದ ಮೊತ್ತಮೊದಲು ಬೇರ್ಪಡಿಸಿದ (1791). ಆದರೆ ಮುಂದೆ 1795ರಲ್ಲಿ ಕ್ಲ್ಯಾಪ್‌ರಾಥ್ ಎಂಬಾತ ಹಂಗರಿಯ ಒಂದು ಖನಿಜದಿಂದ ಇದನ್ನು ಬೇರ್ಪಡಿಸಿದ ಮೇಲೆಯೇ ಇದಕ್ಕೆ ಈಗಿರುವ ಟೈಟಾನಿಯಮ್ ಎಂಬ ಹೆಸರು ಬಂದದ್ದು. ಅವನು ಈ ಹೆಸರನ್ನು ಗ್ರೀಕ್ ಪೌರಾಣಿಕ ಕಥೆಗಳಲ್ಲಿ ಬರುವ ಪ್ರಕೃತಿಯ ಮೊದಲ ಮಕ್ಕಳಾದ ಟೈಟಾನರುಗಳ ನೆನಪಿಗಾಗಿ ಇಟ್ಟ. ಗ್ರೆಗೋರನಾಗಲಿ ಕ್ಲ್ಯಾಪ್‌ರಾಥ್‌ನಾಗಲಿ ಆವಿಷ್ಕರಿಸಿದ್ದು ಟೈಟಾನಿಯಮ್ ಧಾತುವಾಗಿರದೇ ಅದರ ಆಕ್ಸೈಡ್ ಆಗಿತ್ತು. ಟೈಟಾನಿಯಮ್ ಧಾತುವನ್ನು ಬರ್ಜೀ಼ಲಿಯಸ್ 1825 ರಲ್ಲಿ ಮೊತ್ತಮೊದಲಿಗೆ ತಯಾರಿಸಿದ.

ದೊರಕುವಿಕೆ

ಪ್ರಕೃತಿಯಲ್ಲಿ ಟೈಟಾನಿಯಮ್ ಅತಿ ವಿಸ್ತಾರವಾಗಿ ಹರಡಿಕೊಂಡಿದ್ದರೂ ಕೈಗಾರಿಕೋಪಯುಕ್ತ ನಿಕ್ಷೇಪಗಳು ವಿರಳ. ಟೈಟಾನಿಯಮಿನ ಅತಿ ಮುಖ್ಯ ಅದುರುಗಳೆಂದರೆ ರುಟ್ವಿಲ, ಅನತ್ಸೆ (ಟೈಟಾನಿಯಮ್ ಡೈ ಆಕ್ಸೈಡಿನ ಭಿನ್ನರೂಪಗಳು) ಮತ್ತು ಇಲ್ಮೆನೈಟ್ (FeTiO3). ಇವುಗಳ ಪೈಕಿ ಇಲ್ಮೆನೈಟ್ ಹೇರಳವಾಗಿ ಸಿಗುವ ಅದುರು. ಇದರಲ್ಲಿ ಕಬ್ಬಿಣದ ಹಾಗೂ ಟೈಟಾನಿಯಮಿನ ಆಕ್ಸೈಡುಗಳು ಕೂಡಿದ್ದು, ಟೈಟಾನಿಯಮ್ ಸುಮಾರು 32% ಹಾಗೂ ಕಬ್ಬಿಣ 37% ಇರುತ್ತವೆ. ಈ ಅದುರುಗಳು ಅಮೆರಿಕ, ಕೆನಡ, ಭಾರತ, ಬ್ರಜಿ಼ಲ್, ನಾರ್ವೆ, ಮೆಕ್ಸಿಕೋ, ಸ್ವೀಡನ್, ರಷ್ಯ ದೇಶಗಳಲ್ಲಿ ಸಿಗುತ್ತವೆ. ಭಾರತದಲ್ಲಿ ಕೇರಳದ ಸಮುದ್ರತೀರದ ಮರಳಿನಿಂದ 1939ರಲ್ಲಿ 237,835 ಟನ್ ಇಲ್ಮೆನೈಟನ್ನು ತಯಾರಿಸಲಾಗಿತ್ತು. ತಿರುವಾಂಕೂರಿನಲ್ಲಿರುವ ಟೈಟಾನಿಯಮ್ ಕಾರ್ಖಾನೆಯಲ್ಲಿ ಈಗ ದಿನವೊಂದಕ್ಕೆ 18  ಟನ್ನಿನಷ್ಟು ಟೈಟಾನಿಯಮ್ ಡೈ ಆಕ್ಸೈಡ್‌ನ್ನು ಉತ್ಪಾದಿಸಲಾಗುತ್ತದೆ.

ಉತ್ಪಾದನೆ

ಟೈಟಾನಿಯಮ್ಮಿನ ಉತ್ಪಾದನೆ ಮೊದಲು ಬಲು ಕಠಿಣವಾದ ಕೆಲಸವಾಗಿತ್ತು ಏಕೆಂದರೆ ಇದು ಇಂಗಾಲ, ಆಕ್ಸಿಜನ್, ನೈಟ್ರೋಜನ್ ಮುಂತಾದ ಅಲೋಹಗಳೊಡನೆ ಹೆಚ್ಚಿನ ಉಷ್ಣತೆಯ ಮಟ್ಟದಲ್ಲಿ ಸಂಯೋಜಿಸುತ್ತದೆ. ಆದರೆ ಈಗ ಟೈಟಾನಿಯಮ್ ಟೆಟ್ರಕ್ಲೋರೈಡಿನಿಂದ ಈ ಲೋಹವನ್ನು ಉತ್ತಮ ರೀತಿಯಲ್ಲಿ ತಯಾರಿಸುತ್ತಾರೆ. ಮೊದಲು ಇಲ್ಮೆನೈಟ್ ಅಥವಾ ರುಟೈಲನ್ನು ಇಂಗಾಲದ ಹಾಗೂ ಕ್ಲೋರಿನ್ನಿನೊಂದಿಗೆ ಕೆಂಗಾವಿಸುವರು. ಅನಂತರ ಹೀಗೆ ಬಂದ ಟೈಟಾನಿಯಮ್ ಟೆಟ್ರಕ್ಲೋರೈಡನ್ನು ಆಂಶಿಕ ಆಸವನದಿಂದ ಬೇರ್ಪಡಿಸಿ ಕರಗಿದ ಮೆಗ್ನೀಸಿಯಮಿನಿಂದ ಆರ್ಗಾನ್ ವಾತಾವರಣದಲ್ಲಿ 8000C ಸುಮಾರಿಗೆ ಅಪಕರ್ಷಿಸಲಾಗುವುದು. ಇದು ಕ್ರೋಲನ ಪದ್ಧತಿ. ಹಂಟರನ ಪದ್ಧತಿಯ ಪ್ರಕಾರ ಮೆಗ್ನೀಸಿಯಮಿನ ಬದಲು ಸೋಡಿಯಮನ್ನು ಉಪಯೋಗಿಸಬಹುದು. ಎರಡೂ ವಿಧಾನಗಳಿಂದ ಟೈಟಾನಿಯಮ್ ಸ್ಪಂಜಿನ ರೂಪದಲ್ಲಿ ಹೊರಬರುತ್ತದೆ. ಇದು ಅಶುದ್ಧವಾಗಿದ್ದು ಇದನ್ನು ಟೈಟಾನಿಯಮಿನ ಮಿಶ್ರಲೋಹ ಮಾಡಲು ಕಚ್ಚಾಮಾಲು ಆಗಿ ಬಳಸುತ್ತಾರೆ. ಶುದ್ಧವಾದ ಟೈಟಾನಿಯಮ್ ಬೇಕಾದರೆ ಈ ಸ್ಪಂಜನ್ನು ಆರ್ಗಾನ್ ವಾತಾವರಣದಲ್ಲಿ ವಿದ್ಯುಚ್ಚಾಪದಿಂದ ಕರಗಿಸಿ ಲೋಹದ ಗಟ್ಟಿಯಾಗಿ ಎರಕ ಹೊಯ್ಯುತ್ತಾರೆ.

ಗುಣಗಳು ಮತ್ತು ಉಪಯೋಗಗಳು

ಪರಿಶುದ್ಧವಾದ ಟೈಟಾನಿಯಮ್ ಹಗುರಾದ, ಬೆಳ್ಳಿಯ ಹೊಳಪಿನ ಲೋಹ. ಇದನ್ನು ಬಲು ಸಣ್ಣ ವ್ಯಾಸದ ತಂತಿಯನ್ನಾಗಿ ಎಳೆಯಬಹುದು. ಸಾಂದ್ರತೆ 4.51 g/ml, ವಿಶಿಷ್ಟ ಉಷ್ಣ 0.125, ದ್ರವನ ಬಿಂದು 16700 C, ಕುದಿಬಿಂದು 32600 C. ಸಾಮಾನ್ಯವಾಗಿ ಇದು ನಿಷ್ಪಟುತ್ವವುಳ್ಳದ್ದು. ಏಕೆಂದರೆ ಲೋಹದ ಮೇಲಿರುವ ಆಕ್ಸೈಡಿನ ಒಂದು ಪೊರೆ ರಕ್ಷಣಾಕವಚದಂತೆ ವರ್ತಿಸುತ್ತದೆ. ಟೈಟಾನಿಯಮಿನ ತುಕ್ಕುನಿರೋಧಕ ಸಾಮರ್ಥ್ಯ ಪ್ಲಾಟಿನಮಿನ ಸಾಮರ್ಥ್ಯಕ್ಕೆ ಸಮವಾಗಿದೆ; ಇದು ಸ್ಟೇನ್‌ಲೆಸ್ ಸ್ಟೀಲಿಗಿಂತಲೂ ಹೆಚ್ಚು. ಈ ಲೋಹದ ಮೇಲೆ ಬಿಸಿ ಪ್ರತ್ಯಾಮ್ಲದ ದ್ರಾವಣಕ್ಕಾಗಲಿ, ಕೊಠಡಿ ಉಷ್ಣತೆಯಲ್ಲಿ ಖನಿಜ ಆಮ್ಲಗಳಿಗಾಗಲೀ ಯಾವ ಕ್ರಿಯೆಯೂ ಇಲ್ಲ. ಆದರೆ ಹೈಡ್ರೊಫ್ಲೊರಿಕ್ ಆಮ್ಲದಲ್ಲಿ ಮಾತ್ರ ವಿಲೀನವಾಗುತ್ತದೆ. ಸುಲಭವಾಗಿ ಮಿಶ್ರಲೋಹವಾಗುವುದು ಟೈಟಾನಿಯಮಿನ ಅತಿಮುಖ್ಯ ಗುಣ. ಟೈಟಾನಿಯಮನ್ನು ತಾಮ್ರ ಹಾಗೂ ಅಲ್ಯೂಮಿನಿಯಮ್ ಬಿಟ್ಟು ಎಲ್ಲ ಲೋಹಗಳೊಡನೆಯೂ ಹೆಚ್ಚಿನ ಅಲೋಹಗಳೊಡನೆಯೂ ಮಿಶ್ರ ಲೋಹೀಕರಿಸಬಹುದು. ಮಿಶ್ರಲೋಹವಾಗುವುದರಿಂದ ಇದರ ತನ್ಯತೆಯನ್ನು 35,000 lb/in2 ದಿಂದ 200,000lb/in2 ವರೆಗೆ ಹೆಚ್ಚಿಸಬಹುದು. ಟೈಟಾನಿಯಮ್ ಲೋಹದ ತನ್ಯತೆ ಮತ್ತು ಅದರ ತೂಕ ಇವುಗಳ ಪ್ರಮಾಣ ಬಲು ಹೆಚ್ಚು ಇದೆ. ಹೀಗಾಗಿ ಇದನ್ನು ಅತಿವೇಗದಿಂದ ಚಲಿಸುವ ಮಿಲಿಟರಿ ವಿಮಾನ, ಚಿಮ್ಮುವ ಯಂತ್ರ ಮತ್ತು ಕ್ಷಿಪಣಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದಕ್ಕೆ ಶ್ರೇಷ್ಠವಾದ ತುಕ್ಕುನಿರೋಧಕ ಸಾಮರ್ಥ್ಯ ಇರುವುದರಿಂದ ಇದನ್ನು ತುಕ್ಕುಕಾರಕ ರಾಸಾಯನಿಕ ದ್ರವ್ಯವನ್ನೊಳಗೊಂಡ ರಾಸಾಯನಿಕ ಕ್ರಿಯೆ ಮಾಡಲು ಬೇಕಾಗುವ ಉಪಕರಣಗಳನ್ನು ತಯಾರಿಸಲೂ ಯಾವಾಗಲೂ ಸಮುದ್ರದ ನೀರಿನಲ್ಲಿಯೇ ಮುಳುಗಿರುವ ಹಡಗಿನ ಭಾಗಗಳನ್ನು ತಯಾರಿಸಲೂ ಬಳಸುತ್ತಾರೆ. ಪ್ರಪಂಚದಲ್ಲಿ ಉತ್ಪಾದಿಸಿದ ಟೈಟಾನಿಯಮಿನ ಬಹುಭಾಗವನ್ನು ಫೆರೊಟೈಟಾನಿಯಮ್ ಎಂಬ ಮಿಶ್ರಲೋಹವನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಉಕ್ಕನ್ನು ಶುದ್ಧೀಕರಿಸುವಾಗ ಅದರ ದ್ರವದಲ್ಲಿ ಅಡಗಿದ ಆಕ್ಸಿಜನ್ ನೈಟ್ರೊಜನ್‌ಗಳ ಕೊನೆಕೊನೆಯ ಅಂಶಗಳನ್ನು ತೆಗೆದುಹಾಕಲು ಫೆರೊಟೈಟಾನಿಯಮನ್ನು ಉಪಯೋಗಿಸುತ್ತಾರೆ. ಇತ್ತೀಚಿಗೆ ಶಸ್ತ್ರಚಿಕಿತ್ಸೆಯ ಸಾಧನಗಳನ್ನು ತಯಾರಿಸಲು ಕೂಡ ಈ ಲೋಹವನ್ನು ಬಳಸಲಾಗುತ್ತಿದೆ.

ಪ್ರಮುಖ ಸಂಯುಕ್ತಗಳು

ಅತಿ ಹೆಚ್ಚಾಗಿ ಉಪಯೋಗಿಸಲಾಗುತ್ತಿರುವ ಟೈಟಾನಿಯಮ್ ಡೈ ಆಕ್ಸೈಡ್, TiO2. ಇದು ತನ್ನ ಬಿಳಿಯ ವರ್ಣ, ಅಪಾರದರ್ಶಕತ್ವ ಮತ್ತು ರಾಸಾಯನಿಕ ನಿಷ್ಪಟುತ್ವಕ್ಕಾಗಿ ಹೆಸರಾದದ್ದು. ಇದನ್ನು ಬಿಳಿವರ್ಣದ್ರವ್ಯವೆಂದು ಎನ್ಯಾಮಲ್ ವರ್ಣಲೇಪನಕ್ಕೆ ಬಳಸುತ್ತಾರೆ. ರಬ್ಬರ್, ಕಾಗದ, ಜವಳಿ ಹಾಗೂ ಸೌಂದರ್ಯವರ್ಧಕ ರಾಸಾಯನಿಕಗಳನ್ನು ತಯಾರಿಸುವ ಉದ್ದಿಮೆಗಳಲ್ಲಿಯೂ ಇದರ ಉಪಯೋಗ ಉಂಟು. ಟೈಟಾನಿಯಮ್ ಟೆಟ್ರಕ್ಲೋರೈಡು (TiCl4) ಟೈಟಾನಿಯಮನ್ನು ತಯಾರಿಸಲು ಬೇಕಾಗುವ ಮುಖ್ಯ ಸಂಯುಕ್ರ. ಆರ್ದ್ರ ವಾತಾವರಣದಲ್ಲಿ ಇದು ಸುಲಭವಾಗಿ ಜಲವಿಶ್ಲೇಷಣೆ ಹೊಂದಿ ಬಿಳಿಹೊಗೆಯನ್ನು ಕೊಡುತ್ತದೆ. ಟೈಟಾನಿಯಮ್ ಟೆಟ್ರಕ್ಲೋರೈಡಿನಿಂದ ಜಲಾಭೇದ್ಯ ಮತ್ತು ಅಗ್ನಿನಿರೋಧಕ ಬಟ್ಟೆಗಳನ್ನೂ ತಯಾರಿಸಲು ಬೇಕಾಗುವ ಟೈಟಾನಿಯಮಿನ ಕೆಲವು ಎಸ್ಟರುಗಳನ್ನು ತಯಾರಿಸಬಹುದು.

ಟೈಟಾನಿಯಮ್ ಲೋಹದ ಗುಣಧರ್ಮಗಳು ಎಷ್ಟೋ ರೀತಿಯಿಂದ ಆದರ್ಶವಾಗಿದ್ದರೂ ಈ ಲೋಹವು ದುಬಾರಿ ಬೆಲೆಯದಾದ್ದರಿಂದ ಇದರ ಉಪಯೋಗಗಳು ಸೀಮಿತವಾಗಿವೆ. ಇದು ಹೇರಳವಾಗಿ ಕಡಿಮೆ ಬೆಲೆಗೆ ಸಿಗುವಂತಾದರೆ ಇದನ್ನು ಉಗಿಬಂಡಿ, ಬಸ್ಸು, ಹಡಗು ಮತ್ತಿತರ ಇಂಥ ವಸ್ತುಗಳ ತಯಾರಿಕೆಗೆ ಉಪಯೋಗಿಸಬಹುದು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ಟೈಟೇನಿಯಮ್: ದೊರಕುವಿಕೆ, ಉತ್ಪಾದನೆ, ಗುಣಗಳು ಮತ್ತು ಉಪಯೋಗಗಳು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಟೈಟೇನಿಯಮ್ ದೊರಕುವಿಕೆಟೈಟೇನಿಯಮ್ ಉತ್ಪಾದನೆಟೈಟೇನಿಯಮ್ ಗುಣಗಳು ಮತ್ತು ಉಪಯೋಗಗಳುಟೈಟೇನಿಯಮ್ ಪ್ರಮುಖ ಸಂಯುಕ್ತಗಳುಟೈಟೇನಿಯಮ್ ಉಲ್ಲೇಖಗಳುಟೈಟೇನಿಯಮ್ ಹೊರಗಿನ ಕೊಂಡಿಗಳುಟೈಟೇನಿಯಮ್

🔥 Trending searches on Wiki ಕನ್ನಡ:

ಜಲ ಮಾಲಿನ್ಯಭಾರತದ ಆರ್ಥಿಕ ವ್ಯವಸ್ಥೆವೈದಿಕ ಯುಗಮಫ್ತಿ (ಚಲನಚಿತ್ರ)ತೇಜಸ್ವಿ ಸೂರ್ಯಕ್ಯುಆರ್ ಕೋಡ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಸ್ಫಿಂಕ್ಸ್‌ (ಸಿಂಹನಾರಿ)ಪ್ರವಾಸಿಗರ ತಾಣವಾದ ಕರ್ನಾಟಕದ್ರೌಪದಿ ಮುರ್ಮುಕೆ. ಎಸ್. ನರಸಿಂಹಸ್ವಾಮಿನರೇಂದ್ರ ಮೋದಿಅಮಿತ್ ಶಾಬಿ. ಆರ್. ಅಂಬೇಡ್ಕರ್ಕೇಂದ್ರ ಸಾಹಿತ್ಯ ಅಕಾಡೆಮಿನೀತಿ ಆಯೋಗದೊಡ್ಡಬಳ್ಳಾಪುರಭಾರತದಲ್ಲಿ ಕೃಷಿರಾಮ್ ಮೋಹನ್ ರಾಯ್ಮುಂಗಾರು ಮಳೆಭರತೇಶ ವೈಭವಕುಮಾರವ್ಯಾಸಕರ್ನಾಟಕದ ಹಬ್ಬಗಳುಆಭರಣಗಳುಕಲಬುರಗಿತಿರುಪತಿಮದುವೆಅಂಕಗಣಿತಭಕ್ತಿ ಚಳುವಳಿಶಬ್ದಮಣಿದರ್ಪಣಹದಿಹರೆಯರಾಜ್‌ಕುಮಾರ್ಗರ್ಭಕಂಠದ ಕ್ಯಾನ್ಸರ್‌ರಾಣೇಬೆನ್ನೂರುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಭಾರತದ ರಾಷ್ಟ್ರೀಯ ಉದ್ಯಾನಗಳುಶಾಲೆರತ್ನತ್ರಯರುಎಚ್‌.ಐ.ವಿ.ಕಿರುಧಾನ್ಯಗಳುಟೆನಿಸ್ ಕೃಷ್ಣಚೋಳ ವಂಶರೌಲತ್ ಕಾಯ್ದೆಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮತತ್ಸಮ-ತದ್ಭವಕರ್ನಾಟಕದ ಏಕೀಕರಣಪಶ್ಚಿಮ ಬಂಗಾಳಕೇದರನಾಥ ದೇವಾಲಯಭಾರತೀಯ ಶಾಸ್ತ್ರೀಯ ನೃತ್ಯಭಾರತದಲ್ಲಿ ತುರ್ತು ಪರಿಸ್ಥಿತಿಬಿಳಿಗಿರಿರಂಗನ ಬೆಟ್ಟಸಾಮಾಜಿಕ ಸಮಸ್ಯೆಗಳುಗೋವಿಂದ ಪೈಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಮಲೈ ಮಹದೇಶ್ವರ ಬೆಟ್ಟಗೌತಮಿಪುತ್ರ ಶಾತಕರ್ಣಿಲಿನಕ್ಸ್ಭಗತ್ ಸಿಂಗ್ಸಂಸ್ಕಾರಮೌರ್ಯ ಸಾಮ್ರಾಜ್ಯಶ್ರೀ ರಾಮಾಯಣ ದರ್ಶನಂವಿಜಯನಗರರಾಷ್ಟ್ರೀಯ ಸ್ವಯಂಸೇವಕ ಸಂಘರೇಣುಕಶಿಶುನಾಳ ಶರೀಫರುಋಗ್ವೇದಸರ್ವಜ್ಞಕನ್ನಡ ಪತ್ರಿಕೆಗಳುಅಣ್ಣಯ್ಯ (ಚಲನಚಿತ್ರ)ಕೃತಕ ಬುದ್ಧಿಮತ್ತೆಭೂಕಂಪಚಂದ್ರವಿಭಕ್ತಿ ಪ್ರತ್ಯಯಗಳುಉತ್ತರ ಕರ್ನಾಟಕಹಲ್ಮಿಡಿ ಶಾಸನಜಾತ್ರೆ🡆 More