ಟೇಬಲ್ ಪರ್ವತ

ಟೇಬಲ್ ಪರ್ವತ - ದಕ್ಷಿಣ ಆಫ್ರಿಕದಲ್ಲಿ ಕೇಪ್ ಟೌನಿಗೆ ದಕ್ಷಿಣದಲ್ಲಿ ಮೇಜಿನಂತಿರುವ ಚಪ್ಪಟೆ ತಲೆಯ ಪರ್ವತ.

ಎತ್ತರವಾದ ಬಂಡೆಗಳಿಂದ ಕೂಡಿದ ಕೇಪ್ ಪರ್ಯಾಯ ದ್ವೀಪದ ಉತ್ತರ ತುದಿ.

Table Mountain
ಟೇಬಲ್ ಪರ್ವತ
View of Table Mountain and Cape Town seen from Bloubergstrand. Table Mountain is flanked by Devil's Peak on the left and Lion's Head on the right.
Highest point
ಎತ್ತರ1,084.6 m (3,558 ft)
ಪ್ರಾಮುಖ್ಯತೆ1,055 m (3,461 ft)
ಪಟ್ಟಿList of mountains in South Africa
ನಿರ್ದೇಶಾಂಕಗಳು33°57′26.33″S 18°24′11.19″E / 33.9573139°S 18.4031083°E / -33.9573139; 18.4031083
Geography
Geology
ಬಂಡೆಯ ವಯಸ್ಸುSilurian/Ordovician
ಪರ್ವತ ಪ್ರಕಾರSandstone
Climbing
ಮೊದಲ ಆರೋಹಣAntónio de Saldanha, 1503
ಸುಲಭವಾದ ಮಾರ್ಗPlatteklip Gorge

ರಚನೆ

ಟೇಬಲ್ ಪರ್ವತ 
Table Mountain seen from Lion's Head with low-lying cloud cover over Cape Town.
Cape Town under the clouds

ಇದರ ಮರಳುಗಲ್ಲಿನ ಗಟ್ಟಿಯಾದ ಮತ್ತು ದಟ್ಟವಾದ ಬಂಡೆಯಿಂದಾಗಿ ಇದಕ್ಕೆ ಮೇಜಿನ ಆಕಾರ ಬಂದಿದೆ. ನೀರಿನ ಹಾಗೂ ಗಾಳಿಯ ತೀವ್ರ ಕೊರತೆಯಿಂದ ಇದರ 3.22ಕಿ.ಮೀ ಉದ್ದದ ಉತ್ತರಮುಖ ಗೋಡೆಯಂತೆ ಕಡಿದಾಗಿ ಪರಿಣಮಿಸಿದೆ. ಈ ಪರ್ವತ ಪ್ರಸ್ಥಭೂಮಿಯ ಎತ್ತರ ಸುಮಾರು 1,065ಮೀ. ಇದರ ಹಿಂಬದಿಯಲ್ಲಿ ಅಲ್ಲಲ್ಲಿ ಆಳವಾಗಿ ಕತ್ತರಿಸಲ್ಪಟ್ಟ ಸ್ವಲ್ಪ ತಗ್ಗಿನ ಪ್ರಸ್ಥಭೂಮಿಯ ಇದೆ. ಟೇಬಲ್ ಪರ್ವತದ ಅತ್ಯುನ್ನತ ಸ್ಥಳ ಮ್ಯಾಕ್ಲಿಯರ್ ಬೀಕನ್ 1,087 ಮೀ. ಭೂಸವೆತದಿಂದಾಗಿ ಮುಖ್ಯ ಪರ್ವತಭಾಗದಿಂದ ಪ್ರತ್ಯೇಕವಾಗಿರುವ ಎರಡು ಶಿಖರಗಳಲ್ಲಿ ಒಂದು ಡೆವಿಲ್ಸ್ ಶಿಖರ 997ಮೀ ಇದು ಈಶಾನ್ಯದಲ್ಲಿದೆ. ವಾಯುವ್ಯಕ್ಕಿರುವುದು ಲೈಯನ್ ಹೆಡ್ ಶಿಖರ 664ಮೀ.

ಹವಾಮಾನ

ಟೇಬಲ್ ಪರ್ವತದ ಮೇಲೆ ಬೀಸುವ ಆಗ್ನೇಯ ಮಾರುತಗಳು ತರುವ ಹಸಿರು ಮಿಶ್ರಿತ ಬಿಳಿ ಮೋಡಗಳು ಪರ್ವತಾಗ್ರವನ್ನೂ ಪೂರ್ವದ ಬದಿಯನ್ನು ಆಗಾಗ ದಟ್ಟವಾಗಿ ಕವಿಯುವುದುಂಟು. ಇದು ಮೇಜಿನ ಮೇಲೆ ಹರವಿದ ಬಟ್ಟೆಯಂತಿರುವುದರಿಂದ ಇದನ್ನು ಟೇಬಲ್ ಕ್ಲಾತ್ ಎಂದು ಕರೆಯುತ್ತಾರೆ. ಮಳೆ ಬರುವುದು ಬಹುತೇಕ ವಾಯುವ್ಯ ಮಾರುತಗಳಿಂದ. ಚಳಿಗಾಲದಲ್ಲಿ, ಸ್ಥಳದಿಂದ ಸ್ಥಳಕ್ಕೆ ಮಳೆಯ ಪರಿಮಾಣ ಬದಲಾಗುತ್ತದೆ; ನೆತ್ತಿಯ ಮೇಲೆ 60” ಮಿಮೀ.; ಪರ್ವತದ ತಪ್ಪಲಿನಲ್ಲಿ ಕೇಪ್ ಟೌನಿನ ಕೆಲವು ಭಾಗಗಳ ಮೇಲೆ 560ಮಿಮೀ. ಪರ್ವತದ ಮೇಲಿರುವ ಐದು ಜಲಾಶಯಗಳಿಂದ ಕೇಪ್ ಟೌನಿಗೆ ನೀರು ಸರಬರಾಯಿ ಆಗುತ್ತದೆ.

ಸಸ್ಯಗಳು

ಟೇಬಲ್ ಪರ್ವತದ ಮೇಲೆ ಹೆಚ್ಚಾಗಿ ಮಳೆ ಬೀಳುವ ಪ್ರದೇಶಗಳಲ್ಲಿ ಪ್ರೋಟೀಯ, ಹೀತ್, ಡಿಸಾ ಸೀತೆ ಹೂವಿನ ಗಿಡ ಮುಂತಾದವು ವಿಶೇಷವಾಗಿ ಬೆಳೆಯುತ್ತವೆ. ಡೇಸಿ ಪರಿವಾರದ ಅನೇಕ ಸ್ಥಳೀಯ ಜಾತಿಗಳ ಸಸ್ಯಗಳೂ ಉಂಟು. ಹೆಚ್ಚು ಮಳೆ ಬೀಳದ ಪಶ್ಚಿಮ ಪಾಶ್ರ್ವದಲ್ಲಿ ಮಾಂಸಲ ಸಸ್ಯಗಳುಂಟು. ಸ್ಪಿಂಕ್‍ವುಡ್, ಯೆಲ್ಲೋವುಡ್, ಸಿಲ್ವರ್ ಮರ ಮುಂತಾದವು ಕಾಡುಗಳಲ್ಲಿ ಬೆಳೆಯುತ್ತವೆ.

ಪ್ರವಾಸೋದ್ಯಮ

ಪರ್ವತದ ಮೇಲಕ್ಕೆ ಸು.300 ಹಾದಿಗಳುಂಟು. 1929ರಲ್ಲಿ ಇಲ್ಲಿಗೆ ಹೊರಜಿ ಮಾರ್ಗ ಏರ್ಪಡಿಸಲಾಯಿತು. ಇದರ ಮೂಲಕ ಪ್ರತಿ ವರ್ಷವೂ ಸು.50,000 ಮಂದಿ ಪರ್ವತದ ಮೇಲಕ್ಕೆ ಹೋಗಿ ಬರುತ್ತಾರೆ

ಛಾಯಾಂಕಣ

ಬಾಹ್ಯಸಂಪರ್ಕಗಳು

ಟೇಬಲ್ ಪರ್ವತ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಟೇಬಲ್ ಪರ್ವತ ರಚನೆಟೇಬಲ್ ಪರ್ವತ ಹವಾಮಾನಟೇಬಲ್ ಪರ್ವತ ಸಸ್ಯಗಳುಟೇಬಲ್ ಪರ್ವತ ಪ್ರವಾಸೋದ್ಯಮಟೇಬಲ್ ಪರ್ವತ ಛಾಯಾಂಕಣಟೇಬಲ್ ಪರ್ವತ ಬಾಹ್ಯಸಂಪರ್ಕಗಳುಟೇಬಲ್ ಪರ್ವತದಕ್ಷಿಣ ಆಫ್ರಿಕ

🔥 Trending searches on Wiki ಕನ್ನಡ:

ಭಾರತದಲ್ಲಿ ಕೃಷಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಗೋಪಾಲಕೃಷ್ಣ ಅಡಿಗಕಂಪ್ಯೂಟರ್ಕಾಮಾಲೆಭೌಗೋಳಿಕ ಲಕ್ಷಣಗಳುಬಿ.ಎಲ್.ರೈಸ್ಜವಾಹರ‌ಲಾಲ್ ನೆಹರುನೈಸರ್ಗಿಕ ಸಂಪನ್ಮೂಲಹೊರನಾಡುಅರ್ಥಶಾಸ್ತ್ರಗರ್ಭಧಾರಣೆಕಪ್ಪೆ ಅರಭಟ್ಟಪ್ರಾಣಾಯಾಮಭಾರತದ ಚಲನಚಿತ್ರೋದ್ಯಮವಿಷ್ಣುವರ್ಧನ್ (ನಟ)ಗಣರಾಜ್ಯೋತ್ಸವ (ಭಾರತ)ಕೂಡಲ ಸಂಗಮಬೌದ್ಧ ಧರ್ಮವಿಶ್ವೇಶ್ವರ ಜ್ಯೋತಿರ್ಲಿಂಗಸರ್ವೆಪಲ್ಲಿ ರಾಧಾಕೃಷ್ಣನ್ಕವಿರಾಜಮಾರ್ಗಚದುರಂಗದ ನಿಯಮಗಳುಗುರುರಾಜ ಕರಜಗಿಗುರುಸಿಗ್ಮಂಡ್‌ ಫ್ರಾಯ್ಡ್‌ಬಸವೇಶ್ವರವಸುಧೇಂದ್ರಸಂಶೋಧನೆಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ2ನೇ ದೇವ ರಾಯಭಾರತದಲ್ಲಿ ತುರ್ತು ಪರಿಸ್ಥಿತಿಪುರಂದರದಾಸಗುಡಿಸಲು ಕೈಗಾರಿಕೆಗಳುಜೋಗಿ (ಚಲನಚಿತ್ರ)ಹಲ್ಮಿಡಿವಿಜಯಪುರಪೊನ್ನಜನತಾ ದಳ (ಜಾತ್ಯಾತೀತ)ಸಾಹಿತ್ಯಚೆನ್ನಕೇಶವ ದೇವಾಲಯ, ಬೇಲೂರುರಾಜ್ಯಗಳ ಪುನರ್ ವಿಂಗಡಣಾ ಆಯೋಗವಾಲ್ಮೀಕಿಭಾರತದ ರಾಷ್ಟ್ರೀಯ ಚಿಹ್ನೆಸಮಾಸಪೂನಾ ಒಪ್ಪಂದಒಗಟುಟಿಪ್ಪು ಸುಲ್ತಾನ್ಲಿನಕ್ಸ್ವರ್ಗೀಯ ವ್ಯಂಜನವೀರಗಾಸೆಒಪ್ಪಂದಪಂಚಾಂಗಮೇರಿ ಕ್ಯೂರಿಚಂಪೂಭಾವಗೀತೆಶ್ರೀ. ನಾರಾಯಣ ಗುರುಕೊರೋನಾವೈರಸ್ ಕಾಯಿಲೆ ೨೦೧೯ವಚನ ಸಾಹಿತ್ಯಅಣ್ಣಯ್ಯ (ಚಲನಚಿತ್ರ)ಮಂಜುಳವಾಣಿವಿಲಾಸಸಾಗರ ಜಲಾಶಯಮಹಾಭಾರತಬಾದಾಮಿಎಲೆಕ್ಟ್ರಾನಿಕ್ ಮತದಾನಕುವೆಂಪುಜ್ವಾಲಾಮುಖಿಹಿಂದೂ ಧರ್ಮಶ್ರೀನಿವಾಸ ರಾಮಾನುಜನ್ಮೋಕ್ಷಗುಂಡಂ ವಿಶ್ವೇಶ್ವರಯ್ಯಬೆರಳ್ಗೆ ಕೊರಳ್ಹೊಯ್ಸಳ ವಾಸ್ತುಶಿಲ್ಪಎಚ್‌.ಐ.ವಿ.ಗಿರೀಶ್ ಕಾರ್ನಾಡ್ಗ್ರಾಮ ಪಂಚಾಯತಿಸೂಪರ್ (ಚಲನಚಿತ್ರ)ಶಿವಗಂಗೆ ಬೆಟ್ಟರೋಹಿತ್ ಶರ್ಮಾಹಲಸು🡆 More