ಟಿಲ್ಯಾಂಡ್ಸೀಯ

ಟಿಲ್ಯಾಂಡ್ಸೀಯ -ಬ್ರೊಮೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ವಿಚಿತ್ರ ಬಗೆಯ ಅಪ್ಪು ಗಿಡ.

ಅಮೇರಿಕಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದು ಮರಗಳ ಕೊಂಬೆಗಳಿಂದ ಜೋತುಬಿದ್ದು, ಉಸ್ನಿಯ ಎಂಬ ಶಿಲಾವಲ್ಕದಂತೆ ಕಾಣುವುದುಂಟು. ಇದು ಮರಗಳ ಮೇಲೆ ಬೆಳೆದರೂ ಪರಾವಲಂಬಿಯಲ್ಲ. ಬರಿಯ ಆಸರೆಗಾಗಿ ಮಾತ್ರವೇ ಹೀಗೆ ಬೆಳೆಯುತ್ತದೆ. ಇದು ಇತರ ಹಸಿರು ಸಸ್ಯಗಳಂತೆಯೇ ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳಬಲ್ಲದು. ಆದರೆ ಇದಕ್ಕೆ ಸುಲಭವಾಗಿ ನೀರು ದೊರೆಯದು. ಇದರಿಂದಾಗಿ ಮಳೆಯ ರೂಪದಲ್ಲಿ ಇಲ್ಲವೆ ಇಬ್ಬನಿಯ ರೂಪದಲ್ಲಿ ದೊರೆಯುವ ನೀರಿನಂಶವನ್ನು ಸಂಗ್ರಹಿಸಿಟ್ಟುಕೊಳ್ಳುವ ಅಪೂರ್ವ ಸಾಮಥ್ರ್ಯ ಇದಕ್ಕೆ ಉಂಟು. ಹೀಗೆ ನೀರನ್ನು ಹಿಡಿಯುವುದಕ್ಕಾಗಿ ಎಲೆಗಳು ಬಟ್ಟಲಿನಾಕಾರದ ರಚನೆಗಳಾಗಿ ಮಾರ್ಪಾಟಾಗಿರುವುದೂ ಉಂಟು. ಅಲ್ಲದೆ ಮರದ ತೊಗಟೆಯಲ್ಲಿ ತನ್ನ ಬೇರಿನ ಬಲೆಯಲ್ಲ್ಲಿ ಸಂಗ್ರಹವಾಗುವ ಹಾಗೂ ಗಾಳಿಯಲ್ಲಿ ತೂರಿಬಂದ ದೂಳು, ಕಲ್ಮಷವಸ್ತುಗಳು ಮತ್ತು ಕೊಳೆಯುವ ಸಾವಯವ ವಸ್ತುಗಳು ಇತ್ಯಾದಿಗಳಿಂದ ತನಗೆ ಬೇಕಾಗುವ ಖನಿಜ ವಸ್ತುಗಳನ್ನು ದೊರಕಿಸಿಕೊಳ್ಳುತ್ತದೆ. ಇದು ಬಹುವಾರ್ಷಿಕ ಮೂಲಿಕ ಸಸ್ಯ. ಹೂಗಳು ಕದಿರು ಇಲ್ಲವೆ ಚಂಡು ಮಂಜರಿ ರೀತಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳ ಬಣ್ಣ ನೀಲಿ, ನೇರಿಳೆ, ಕೆಂಪು, ಹಳದಿ, ಇಲ್ಲವೆ ಬಿಳಿ. ಪ್ರತಿಹೂವಿನಲ್ಲಿ 3 ಪತ್ರಗಳು, 3 ದಳಗಳು, 6 ಕೇಸರಗಳು ಮತ್ತು 3 ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಇವೆ. ಫಲ ಸಂಪುಟ ಮಾದರಿಯದು. ಬೀಜಗಳ ಮೇಲೆ ಸಣ್ಣ ಕೂದಲುಗಳುಂಟು. ಇದರಿಂದ ಕಾಯಿ ಒಡೆದಾಗ ಹೊರಬರುವ ಬೀಜಗಳು ಗಾಳಿಯಲ್ಲಿ ತೇಲಿಹೋಗಲು ಅನುಕೂಲವಾಗಿದೆ. ಟಿಲ್ಯಾಂಡ್ಸೀಯದ ಎಲೆಗಳೂ ಹೂಗಳೂ ಸುಂದರವಾಗಿ ಕಾಣುವುದರಿಂದ ಅಲಂಕಾರ ಸಸ್ಯವನ್ನಾಗಿ ಬೆಳೆಸುತ್ತಾರೆ. ಇದನ್ನು ಬೀಜಗಳ ಮೂಲಕ ಇಲ್ಲವೆ ಬೇರುಸಸಿಗಳ ಮೂಲಕ ಬೆಳೆಸಬಹುದು. ಹೆಚ್ಚಿನ ಉಷ್ಣತೆ ಹಾಗೂ ಬೆಳಕು ಮತ್ತು ಸಸ್ಯಾಂಗಾರವಿರುವ ಭೂಮಿ ಇದರ ಬೆಳೆವಣಿಗೆಗೆ ಅಗತ್ಯ. ಟಿಲ್ಯಾಂಡ್ಸೀಯದ ಮುಖ್ಯ ಪ್ರಭೇದಗಳಿವು: ಊಸ್ನಿಯಾಯ್ಡಿಸ್, ರಿಕರ್ವೇಟ, ಆನ್ಸೆಪ್ಸ್, ಲಿಂಡೆನಿಯಾನ, ಬಲ್ಬೋಸ, ಪಾಲಿಸ್ಟ್ಯಾಕಿಯ, ಫ್ಯಾಸಿಕ್ಯುಲೇಟ ಮತ್ತು ಯುಟ್ರಿಕ್ಯುಲೇಟ.



ಟಿಲ್ಯಾಂಡ್ಸೀಯ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಅಪ್ಪುಗಿಡ

🔥 Trending searches on Wiki ಕನ್ನಡ:

ರಂಗಭೂಮಿಚಪಾತಿಪಾಂಡವರುಆಡಮ್ ಸ್ಮಿತ್ಹಗ್ಗಕೊರೋನಾವೈರಸ್ಮಧ್ವಾಚಾರ್ಯಹಬಲ್ ದೂರದರ್ಶಕಮಾಧ್ಯಮಓಂ (ಚಲನಚಿತ್ರ)ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಸೀತೆಛತ್ರಪತಿ ಶಿವಾಜಿಮೂಲಧಾತುಕೃಷ್ಣಹದಿಬದೆಯ ಧರ್ಮಅಣ್ಣಯ್ಯ (ಚಲನಚಿತ್ರ)ಸ್ತ್ರೀಕುಟುಂಬಮಾರಾಟ ಪ್ರಕ್ರಿಯೆಫ್ರಾನ್ಸ್ಸಂಕಷ್ಟ ಚತುರ್ಥಿಹೊಂಗೆ ಮರಕೆಂಪು ಮಣ್ಣುಅಂತಿಮ ಸಂಸ್ಕಾರಮಾಸ್ತಿ ವೆಂಕಟೇಶ ಅಯ್ಯಂಗಾರ್ವಾಯುಗೋಳರಾಮ್ ಮೋಹನ್ ರಾಯ್ಕಲೆವಾದಿರಾಜರುಸಂಚಿ ಹೊನ್ನಮ್ಮಶಿವಕೋಟ್ಯಾಚಾರ್ಯಕಾವೇರಿ ನದಿಪರಿಸರ ವ್ಯವಸ್ಥೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ಜಾಯಿಕಾಯಿಛಂದಸ್ಸುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಹಾಭಾರತಕರಗಸಾರಾ ಅಬೂಬಕ್ಕರ್ವಸಾಹತುಶಿಕ್ಷಕಜೈಮಿನಿ ಭಾರತದಲ್ಲಿ ನವರಸಗಳುಲೆಕ್ಕ ಪರಿಶೋಧನೆಹೃದಯರೊಸಾಲಿನ್ ಸುಸ್ಮಾನ್ ಯಲೋವ್ಮೆಂತೆಪ್ರಸ್ಥಭೂಮಿಪೌರತ್ವಸವದತ್ತಿಸಗಟು ವ್ಯಾಪಾರಕನ್ನಡ ಅಂಕಿ-ಸಂಖ್ಯೆಗಳುಭಾರತೀಯ ಜನತಾ ಪಕ್ಷಅಶೋಕನ ಶಾಸನಗಳುಆದಿ ಕರ್ನಾಟಕಡಿಜಿಟಲ್ ಇಂಡಿಯಾಚದುರಂಗ (ಆಟ)ಶಾತವಾಹನರುಪ್ರಜಾಪ್ರಭುತ್ವವಾಯು ಮಾಲಿನ್ಯಝೆನಾನ್ಮದರ್‌ ತೆರೇಸಾಮಲೇರಿಯಾಭಾರತೀಯ ಸಂಸ್ಕೃತಿಚೀನಾದ ಇತಿಹಾಸಭಾರತೀಯ ರೈಲ್ವೆಸಕಲೇಶಪುರಕರ್ನಾಟಕ ರತ್ನಚಿನ್ನದ ಗಣಿಗಾರಿಕೆಕನ್ನಡ ಸಾಹಿತ್ಯ ಪರಿಷತ್ತುಪೂರ್ಣಚಂದ್ರ ತೇಜಸ್ವಿಮೈಸೂರುಗ್ರಾಮೀಣ ಪ್ರಾದೇಶಿಕ ಬ್ಯಾಂಕ್ಪ್ರಜಾಪ್ರಭುತ್ವದ ವಿಧಗಳು🡆 More