ಟಕ್ಕಳಕಿ, ಮುದ್ದೇಬಿಹಾಳ

ಟಕ್ಕಳಕಿ ಗ್ರಾಮವು ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿದೆ.

ಟಕ್ಕಳಕಿ, ಮುದ್ದೇಬಿಹಾಳ
ಟಕ್ಕಳಕಿ
village
Population
 (೨೦೧೨)
 • Total೧೫೦೦

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 2500 ಇದೆ. ಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಟಕ್ಕಳಕಿ, ಮುದ್ದೇಬಿಹಾಳ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ

ಮಸೀದಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಕೃಷಿ ಮತ್ತು ತೋಟಗಾರಿಕೆ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಹಬ್ಬ

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.

ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು ಬಿಜಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಬಿಜಾಪುರ

ಕರ್ನಾಟಕ

Tags:

ಟಕ್ಕಳಕಿ, ಮುದ್ದೇಬಿಹಾಳ ಭೌಗೋಳಿಕಟಕ್ಕಳಕಿ, ಮುದ್ದೇಬಿಹಾಳ ಹವಾಮಾನಟಕ್ಕಳಕಿ, ಮುದ್ದೇಬಿಹಾಳ ಜನಸಂಖ್ಯೆಟಕ್ಕಳಕಿ, ಮುದ್ದೇಬಿಹಾಳ ಸಾಂಸ್ಕೃತಿಕಟಕ್ಕಳಕಿ, ಮುದ್ದೇಬಿಹಾಳ ಕಲೆ ಮತ್ತು ಸಂಸ್ಕೃತಿಟಕ್ಕಳಕಿ, ಮುದ್ದೇಬಿಹಾಳ ಧರ್ಮಟಕ್ಕಳಕಿ, ಮುದ್ದೇಬಿಹಾಳ ಭಾಷೆಟಕ್ಕಳಕಿ, ಮುದ್ದೇಬಿಹಾಳ ದೇವಾಲಯಟಕ್ಕಳಕಿ, ಮುದ್ದೇಬಿಹಾಳ ಮಸೀದಿಟಕ್ಕಳಕಿ, ಮುದ್ದೇಬಿಹಾಳ ನೀರಾವರಿಟಕ್ಕಳಕಿ, ಮುದ್ದೇಬಿಹಾಳ ಕಾಲುವೆಟಕ್ಕಳಕಿ, ಮುದ್ದೇಬಿಹಾಳ ಕೃಷಿ ಮತ್ತು ತೋಟಗಾರಿಕೆಟಕ್ಕಳಕಿ, ಮುದ್ದೇಬಿಹಾಳ ಆರ್ಥಿಕತೆಟಕ್ಕಳಕಿ, ಮುದ್ದೇಬಿಹಾಳ ಉದ್ಯೋಗಟಕ್ಕಳಕಿ, ಮುದ್ದೇಬಿಹಾಳ ಬೆಳೆಟಕ್ಕಳಕಿ, ಮುದ್ದೇಬಿಹಾಳ ಸಸ್ಯಟಕ್ಕಳಕಿ, ಮುದ್ದೇಬಿಹಾಳ ಪ್ರಾಣಿಟಕ್ಕಳಕಿ, ಮುದ್ದೇಬಿಹಾಳ ಹಬ್ಬಟಕ್ಕಳಕಿ, ಮುದ್ದೇಬಿಹಾಳ ಶಿಕ್ಷಣಟಕ್ಕಳಕಿ, ಮುದ್ದೇಬಿಹಾಳ ಸಾಕ್ಷರತೆಟಕ್ಕಳಕಿ, ಮುದ್ದೇಬಿಹಾಳ ರಾಜಕೀಯಟಕ್ಕಳಕಿ, ಮುದ್ದೇಬಿಹಾಳಕರ್ನಾಟಕಬಿಜಾಪುರಮುದ್ದೇಬಿಹಾಳ

🔥 Trending searches on Wiki ಕನ್ನಡ:

ಆದಿ ಶಂಕರರು ಮತ್ತು ಅದ್ವೈತಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಕನ್ನಡ ಚಂಪು ಸಾಹಿತ್ಯವ್ಯಕ್ತಿತ್ವತೆರಿಗೆಸಿಗ್ಮಂಡ್‌ ಫ್ರಾಯ್ಡ್‌ಸ್ಫಿಂಕ್ಸ್‌ (ಸಿಂಹನಾರಿ)ದಲಿತವೇದವ್ಯಾಸಮಂಗಳೂರುವಿಶ್ವೇಶ್ವರ ಜ್ಯೋತಿರ್ಲಿಂಗವಿಧಾನಸೌಧಹಾವೇರಿಭಗೀರಥಗಣೇಶಹದ್ದುಭಾರತದ ಜನಸಂಖ್ಯೆಯ ಬೆಳವಣಿಗೆಭಾರತದಲ್ಲಿ ಪಂಚಾಯತ್ ರಾಜ್ಉಪನಯನಭಾರತದಲ್ಲಿನ ಶಿಕ್ಷಣಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆವೈದಿಕ ಯುಗಕನ್ನಡ ವಿಶ್ವವಿದ್ಯಾಲಯಋಗ್ವೇದವೆಂಕಟೇಶ್ವರ ದೇವಸ್ಥಾನಅಕ್ಕಮಹಾದೇವಿಗಂಗ (ರಾಜಮನೆತನ)ರಾಷ್ಟ್ರಕೂಟಸರ್ವೆಪಲ್ಲಿ ರಾಧಾಕೃಷ್ಣನ್ಕ್ಯುಆರ್ ಕೋಡ್ಬೀಚಿರಾಜಾ ರವಿ ವರ್ಮಭಾರತದ ರಾಷ್ಟ್ರೀಯ ಚಿಹ್ನೆಧಾರವಾಡಸಾಮಾಜಿಕ ಸಮಸ್ಯೆಗಳುಬಸವೇಶ್ವರಶಿವರಾಮ ಕಾರಂತಸಂಭೋಗಜನಪದ ಆಭರಣಗಳುಭಾರತದಲ್ಲಿ ಕೃಷಿಹೈದರಾಲಿಮಲ್ಲಿಕಾರ್ಜುನ ಜ್ಯೋತಿರ್ಲಿಂಗನಗರೀಕರಣಭಾರತೀಯ ಸಂಸ್ಕೃತಿಟೈಗರ್ ಪ್ರಭಾಕರ್ಭಾರತದ ಸಂವಿಧಾನದ ಏಳನೇ ಅನುಸೂಚಿರಾಷ್ಟ್ರಕವಿಚರ್ಚ್ಸರ್ಪ ಸುತ್ತುಮಂಡಲ ಹಾವುಕಾರ್ಮಿಕ ಕಾನೂನುಗಳುನೊಬೆಲ್ ಪ್ರಶಸ್ತಿಗರ್ಭಪಾತಶ್ರೀಕೃಷ್ಣದೇವರಾಯಜಿ.ಪಿ.ರಾಜರತ್ನಂತಾಳಗುಂದ ಶಾಸನರೌಲತ್ ಕಾಯ್ದೆಕೃಷ್ಣ ಮಠವಂದೇ ಮಾತರಮ್ವಿಶ್ವ ಕನ್ನಡ ಸಮ್ಮೇಳನಲಕ್ಷ್ಮಣಭಾರತದ ತ್ರಿವರ್ಣ ಧ್ವಜಯೋನಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಒಂದೆಲಗಉಡಶಿಕ್ಷಣಕೆ. ಅಣ್ಣಾಮಲೈಆಯುಷ್ಮಾನ್ ಭಾರತ್ ಯೋಜನೆರಾಣೇಬೆನ್ನೂರುಕೈಗಾರಿಕಾ ಕ್ರಾಂತಿಕರ್ನಾಟಕದ ಶಾಸನಗಳುಛತ್ರಪತಿ ಶಿವಾಜಿಸಿಂಧನೂರುಮಾನವ ಸಂಪನ್ಮೂಲಗಳುಸಂಸ್ಕೃತ ಸಂಧಿ🡆 More