ಝರತುಷ್ಟ್ರ

ಝರತುಷ್ಟ್ರ-ಪ್ರಾಚೀನ ಇರಾನೀ ಜನರ ಪ್ರವಾದಿ.

ಗ್ರೀಕ್ ಮತ್ತು ಇತರ ಐರೋಪ್ಯ ಭಾಷೆಗಳಲ್ಲಿ ಈತನನ್ನು ಝೊರೊ ಆಸ್ಟರ್ ಎನ್ನಲಾಗಿದೆ.

ಈತನ ಕಾಲವೂ ವೈದಿಕ ಋಷಿಮುನಿಗಳ ಕಾಲ ಹೇಗೋ ಹಾಗೆ ನಿಖರವಾಗಿ ತಿಳಿದುಬಂದಿಲ್ಲ. ಕ್ರಿಸ್ತನಿಗಿಂತ ಈತ 5000 ವರ್ಷಗಳಷ್ಟು ಹಿಂದಿನವನಿದ್ದಿರಬೇಕೆಂದು ವಿದ್ವಾಂಸರ ಊಹೆ.

ಝರತುಷ್ಟ್ರ ವೀರಕ್ಷತ್ರಿಯರ ಪವಿತ್ರ ಕುಟುಂಬದಲ್ಲಿ ಜನಿಸಿದ. ತಾಯಿ ದುಗ್ಥಾ. ಕನ್ಯಾವಸ್ಥೆಯಲ್ಲಿದ್ದ ಆಕೆಯ ಗರ್ಭವನ್ನು ಜ್ಯೋತಿಕಿರಣವೊಂದು ಪ್ರವೇಶಿಸಿತು. ಗರ್ಭವತಿಯಾದಳು. ಹೂಮೊಗದ ಹಸುಗೂಸು ಹುಟ್ಟಿತು. ಹುಟ್ಟುತ್ತಲೇ ನಸುನಕ್ಕಿತು. ಝರತುಷ್ಟ್ರ ಹುಟ್ಟಿದಾಗಲೇ ನಕ್ಕ ಏಕೈಕ ಮಾನವ. ಹದಿನೈದನೆಯ ವರ್ಷಕ್ಕಾಗಲೇ ಅವನಿಗೆ ವೈರಾಗ್ಯ ಮೂಡಿತು. ಮಾನವನ ಅಸ್ತಿತ್ವದ ರಹಸ್ಯವನ್ನರಿಯುವ ಗಹನ ಚಿಂತನೆಯಲ್ಲಿ ಧ್ಯಾನಮಗ್ನನಾಗಿ ಏಳು ವರ್ಷ ಏಕಾಂತ ವಾಸಮಾಡಿದ. ಮದುವೆ ಆಯಿತು. ಮೂರು ಜನ ಹೆಂಡತಿಯರು. ಮೂರು ಹೆಣ್ಣು ಮೂರು ಗಂಡು ಮಕ್ಕಳು. ಕೊನೆಗೆ ಎಲ್ಲವನ್ನೂ ಬಿಟ್ಟು ವರ್ಷಗಟ್ಟಲೆ ಕಾಡಿನಲ್ಲಿದ್ದುಕೊಂಡು ಹಾಲುಕೆನೆಯಿಂದಲೇ ಜೀವನ ನಿರ್ವಹಣೆ ಮಾಡಿ, ಕೊನೆಗೆ ಏಲ್‍ಬುರ್ಜ್ ಗುಡ್ಡದ ಮೇಲೆ ಕಾಲದ ಪರಿವೆ ಇಲ್ಲದೆ ಧ್ಯಾನಮಗ್ನನಾಗಿ ಕುಳಿತು ಬಿಟ್ಟ. ಅಹ್ರಿಮನ್ ಎಂಬ ದುಷ್ಟಶಕ್ತಿ ಆತನಿಗೆ ದುರಾಶೆ ತೋರಿಸಿ ವಿಚಲಿತನನ್ನಾಗಿ ಮಾಡಲು ಯತ್ನಿಸಿ ಸೋತು ಹಿಂತಿರುಗಿತು. ಝರತುಷ್ಟ್ರ ಗೆದ್ದ. ಜ್ಞಾನೋದಯವಾಯಿತು. ಅದು ಅವನ ಆತ್ಮವನ್ನು ಅಹುರಮಜ್ದ ಸನ್ನಿಧಿಗೊಯ್ಯಿತು. ಹೇ ಮಜ್ದ, ಪ್ರಪ್ರಥಮವಾಗಿ ನನ್ನ ಧ್ಯಾನದಲ್ಲಿ ನಿನ್ನ ಕಲ್ಪನೆ ಮಾಡಿಕೊಂಡಾಗ ಶುದ್ಧ ಹೃದಯದಿಂದ ನಾನು ನಿನ್ನನ್ನು ವಿಶ್ವದ ಪ್ರಥಮ ಅಭಿನೇತೃವೆಂದು ನಂಬಿದೆ. ವಿವೇಕದ ಜನಕ ನೀನು; ಸದಾಚಾರದ ಮಾನವ ಚಟುವಟಿಕೆಗಳ ನಿಯಂತೃ ನೀನು.-ಎಂದು ಝರತುಷ್ಟ್ರ ಹೊಗಳಿದ.

ಜ್ಞಾನಿ ಝರತುಷ್ಟ್ರ ಹೊರಲೋಕದಲ್ಲೀಗ ಅಡ್ಡಾಡಿದ. ಜನಕ್ಕೆ ಧರ್ಮಬೋಧೆಮಾಡಿದ. ಧರ್ಮ ಮತ್ತು ಅಧರ್ಮಗಳ ಹೋರಾಟ ನಿರಂತರವೆಂದೂ ಅದರಲ್ಲಿ ಧರ್ಮಕ್ಕೇ ಅಂತಿಮ ಜಯ ಎಂದೂ ತಿಳಿಸಿದ. ಆ ಕಾಲದ ಖಳ ಸ್ವಭಾವದ ದೊರೆಯೊಬ್ಬ ಈತನಿಗೆ ಚಿತ್ರಹಿಂಸೆಯನ್ನಿತ್ತನಂತೆ. ಭರ್ಜಿಗಳಿಂದ ಗಾಯಗೊಳಿಸಿ, ಕುದುರೆಗಳಿಂದ ಗೂಳಿಗಳಿಂದ ತುಳಿಸಿ, ಅಗ್ನಿದಿವ್ಯಕ್ಕೆ ಒಡ್ಡಿದಾಗಲೂ ಝರತುಷ್ಟ್ರ ಸೋಲದೆ ಕಾಯ್ದ ಹಿತ್ತಾಳೆಯಂತೆ ತೊಳಗಿ ಬೆಳಗಿದನೆನ್ನಲಾಗಿದೆ.

ಸುಮಾರು ಐವತ್ತು ವರ್ಷಗಳ ಕಾಲ ಝರತುಷ್ಟ್ರ ತನ್ನ ಮತಪ್ರಚಾರ ಮಾಡಿದ. ಈತನ ಮತ ಝರತುಷ್ಟ್ರ ಮತವೆಂದು ಪ್ರಸಿದ್ಧವಾಗಿದೆ.

ಝರತುಷ್ಟ್ರ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಇರಾನ್

🔥 Trending searches on Wiki ಕನ್ನಡ:

ಮಾನ್ವಿತಾ ಕಾಮತ್ಭಾರತದ ಸಂವಿಧಾನ ರಚನಾ ಸಭೆಕರ್ಣಪೆಟ್ರೋಮ್ಯಾಕ್ಸ್ (ಚಲನಚಿತ್ರ)ಉಡುಪಿ ಜಿಲ್ಲೆವಿದುರಾಶ್ವತ್ಥಜಾಗತಿಕ ತಾಪಮಾನಅಶ್ವತ್ಥಾಮಮುದ್ದಣಹಸ್ತ ಮೈಥುನಪ್ರವಾಹಜವಾಹರ‌ಲಾಲ್ ನೆಹರುನೀರುಕನ್ನಡಪ್ರಭಅಮೇರಿಕ ಸಂಯುಕ್ತ ಸಂಸ್ಥಾನಕಾಲ್ಪನಿಕ ಕಥೆಕೆಂಪು ಕೋಟೆಮಹಾತ್ಮ ಗಾಂಧಿಹಾಲುರಾಮೇಶ್ವರ ಕ್ಷೇತ್ರಓಂ ನಮಃ ಶಿವಾಯಮನುಸ್ಮೃತಿಕಾದಂಬರಿತಾಳೀಕೋಟೆಯ ಯುದ್ಧಮಳೆಗಾಲಚನ್ನವೀರ ಕಣವಿಹೆಚ್.ಡಿ.ಕುಮಾರಸ್ವಾಮಿವಿರಾಮ ಚಿಹ್ನೆಪಂಚ ವಾರ್ಷಿಕ ಯೋಜನೆಗಳುಭಾರತದ ರಾಷ್ಟ್ರಪತಿಗಳ ಪಟ್ಟಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಅನುಭವ ಮಂಟಪಪಂಚತಂತ್ರಸಂತಾನೋತ್ಪತ್ತಿಯ ವ್ಯವಸ್ಥೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಮದುವೆನೈಸರ್ಗಿಕ ಸಂಪನ್ಮೂಲಇಸ್ಲಾಂ ಧರ್ಮಕರ್ನಾಟಕ ಸಂಗೀತಭಾರತದ ಸಂಸತ್ತುಒಡೆಯರ್ವಿಶ್ವವಿದ್ಯಾಲಯ ಧನಸಹಾಯ ಆಯೋಗಸಂಶೋಧನೆಅರಣ್ಯನಾಶಹನಿ ನೀರಾವರಿವಿತ್ತೀಯ ನೀತಿಕಬ್ಬಿಣವಾಲ್ಮೀಕಿಆಡು ಸೋಗೆಈಡನ್ ಗಾರ್ಡನ್ಸ್ಒಂದನೆಯ ಮಹಾಯುದ್ಧರಾಧಿಕಾ ಗುಪ್ತಾಗುಣ ಸಂಧಿಅಕ್ಕಮಹಾದೇವಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಪುರಂದರದಾಸಪ್ರಾರ್ಥನಾ ಸಮಾಜಸಿದ್ದರಾಮಯ್ಯಆಗಮ ಸಂಧಿಭಗವದ್ಗೀತೆಶಬ್ದಕಾವೇರಿ ನದಿಏಡ್ಸ್ ರೋಗಎಸ್.ನಿಜಲಿಂಗಪ್ಪಸಾಲುಮರದ ತಿಮ್ಮಕ್ಕಚಂದ್ರಶೇಖರ ಕಂಬಾರಜಾನಪದಮೂಢನಂಬಿಕೆಗಳುತಂತ್ರಜ್ಞಾನಮೋಕ್ಷಗುಂಡಂ ವಿಶ್ವೇಶ್ವರಯ್ಯನಿಯತಕಾಲಿಕಮಾನವನ ವಿಕಾಸಶ್ರೀ ರಾಘವೇಂದ್ರ ಸ್ವಾಮಿಗಳುಮಾಹಿತಿ ತಂತ್ರಜ್ಞಾನಒಕ್ಕಲಿಗಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕೊಪ್ಪಳಬಂಡಾಯ ಸಾಹಿತ್ಯ🡆 More