ಖೇತ್ ರಾಮ್

ಖೇತ್ ರಾಮ್, ಖೇತಾ ರಾಮ್ / ಖೇತ್‌ರಾಮ್ (ಜನನ: ೨೦ ಸೆಪ್ಟೆಂಬರ್ ೧೯೮೬) ೨೦೧೬ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರತಿನಿಧಿಸಲು ಅರ್ಹತೆ ಹೊಂದಿರುವ ಕ್ರೀಡಾಪಟು.

ಇವರು ಭಾರತೀಯ ಸೇನೆಯಲ್ಲಿ ಸಹ ಕೆಲಸ ಮಾಡುತ್ತಾರೆ.

ಖೇತ್ ರಾಮ್
ಖೇತ್ ರಾಮ್ ಭಾರತವನ್ನು ೨೦೧೬ ಬೇಸಿಗೆ ಒಲಿಂಪಿಕ್ಸ್, ರಿಯೊನಲ್ಲಿ  ಪ್ರತಿನಿಧಿಸುತ್ತಿರುವ  ಮ್ಯಾರಥಾನ್ ಕ್ರೀಡಾಪಟು

ವೃತ್ತಿ

ಖೇತ್‌ರಾಮ್ ಒಂದು ಸ್ಥಿರ ಆದಾಯ ಪಡೆಯಲು ಸಾಮಾನ್ಯ ಕೋಟಾ ಮೂಲಕ ಭಾರತೀಯ ಸೇನೆಗೆ ಸೇರಿದರು ಮತ್ತು ಸಾಂಬಾ, ಜಮ್ಮುನಲ್ಲಿ ಕೆಲಸಕ್ಕೆ ಕಳುಹಿಸಲಾಯಿತು. ಇವರು ವಿಶ್ವದ ಮಿಲಿಟರಿ ಆಟಗಳು ಸೇರಿದಂತೆ, ವಿವಿಧ ಸ್ಪರ್ಧೆಗಳಲ್ಲಿ, ಪರಿಣಾಮಕಾರಿಯಾದ ಸರಣಿ ಓಟಗಳು ಮತ್ತು ಸಾಧನೆಯೋಂದಿಗೆ ಭಾರತವನ್ನು ಪ್ರತಿನಿಧಿಸಿದ್ದಾರೆ ಇತ್ತೀಚೆಗೆ, ಇವರ್ ಕೋಚ್ ಸುರೇಂದ್ರ ಸಿಂಗ್ ರವರು, ಖೇತ್‌ರಾಮ್ ರವರು ಸ್ಪರ್ಧಿಸುತ್ತಿರುವ ಮಧ್ಯಂತರ ದೂರದ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳನ್ನು ಬಿಟ್ಟು ಬದಲಿಗೆ ಮ್ಯಾರಥಾನ್ ದೂರ ಸ್ಪರ್ಧೆಗಳ ತರಬೇತಿ ಪಡೆಯಬೇಕು ಎಂದು ನಿರ್ಧರಿಸಿದರು . ಅವರು ಹೃದಯ ಮತ್ತು ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಲು ಇವರಿಗೆ ಸೇನೆ ಕ್ರೀಡಾ ಸಂಸ್ಥೆ ಪುಣೆ, ತಾಂಗರಾಜ್ ಕ್ರೀಡಾಂಗಣದಲ್ಲಿ ವೆಲ್ಲಿಂಗ್ಟನ್ ನ ತೆಳುಗಾಳಿಯಲ್ಲಿ / ನೀಲಗಿರಿಯ ಕೂನೂರ್ ನಲ್ಲಿ ಮತ್ತು ಇತ್ತೀಚೆಗೆ ಸಾಯಿ ಸಂಕೀರ್ಣ ಬೆಂಗಳೂರು, ಭಾರತದಲ್ಲಿ ತರಬೇತಿಯನ್ನು ನೀಡಲಾಯಿತು. ಇವರ ವಿಓ೨ ಗರಿಷ್ಠ ಸುಮಾರು ೮೪ (ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಹೋಲಿಸದರೆ,ಮಿಲಿ ಆಮ್ಲಜನಕ ಬಳಕೆ, ಒಂದು ನಿಮಿಷಕ್ಕೆ, ಪ್ರತಿ ಕೆಜಿ ದೇಹತೂಕಕ್ಕೆ), ೪೫ ಬಿ.ಪಿ.ಎಮ್. ಹೃದಯದ ವಿರಾಮದ ಬಡಿತದ ಜೊತೆ .

ಇವರು ೨೦೧೬ ಮುಂಬಯಿ ಮ್ಯಾರಥಾನ್ನಲ್ಲಿ ೦೨:೧೭:೨೩ ಮ್ಯಾರಥಾನ್ ಸಮಯದ ಮುಗಿಸಿ, ಇತರ ಮ್ಯಾರಥಾನ್ ಓಟಗಾರರಾದ ಗೋಪಿ ಟಿ ಮತ್ತು ನಿತೇಂದ್ರ ಸಿಂಗ್ ರ ಜೊತೆ ೨೦೧೬ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದರು.

ಸ್ಪರ್ಧೆಯಲ್ಲಿ ದಾಖಲೆ

ವರುಷ ಸ್ಪರ್ಧೆ ಸ್ಥಳ ಸ್ಥಾನ ಸ್ಪರ್ಧೆ ಸಮಯ ಉಲ್ಲೇಖಗಳು
೨೦೧೧ ಬೆಂಗಳೂರು ಅಂತರರಾಜ್ಯ ಬೆಂಗಳೂರು, ಭಾರತ ತಿಳಿದಿಲ್ಲ ೧೦,೦೦೦ ಮೀ ೨೯:೩೦:೩೫
೨೦೧೧ ಸನ್‌ಪೀಸ್ಟ್ ವಿಶ್ವ ೧೦ ಕೆ ಬೆಂಗಳೂರು, ಭಾರತ ೨೨ನೇ ಒಟ್ಟಾರೆ/ ೩ ನೇ ಭಾರತೀಯ ೧೦ ಕೀ.ಮೀ ರಸ್ತೆ ೩೦:೩೪
೨೦೧೧ ಹೊಸ ದಹಲಿ ಅರ್ಧ ಮ್ಯಾರಥಾನ್ ಹೊಸ ದೆಹಲಿ ಭಾರತ ೨೨ನೇ ಒಟ್ಟಾರೆ/ ೨ ನೇ ಭಾರತೀಯ ಅರ್ಧ ಮ್ಯಾರಥಾನ್ ೧:೦೪:೪೪
೨೦೧೨ ವಡೋದರ ೧೫ಎಮ್ ವಡೋದರ ಭಾರತ ತಿಳಿದಿಲ್ಲ ೧೫ ಮೈಲಿ ರಸ್ತೆ ೪೭:೧೧
೨೦೧೩ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ ಪಟಿಯಾಲ, ಭಾರತ ೧ ನೇ ೫೦೦೦ ಮೀ ೧೩:೧೫:೩೨

(೧ ಸುತ್ತು ಕಡಿಮೆ)

೨೦೧೩ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ ಪಟಿಯಾಲ, ಭಾರತ ತಿಳಿದಿಲ್ಲ ೩೦೦೦ ಮೀ ೦೮:೦೬:೩೩
೨೦೧೩ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್, ೧ ನೇ ಲೆಗ್ ಬ್ಯಾಂಕಾಕ್, ಥೈಲ್ಯಾಂಡ್ ೨ ನೇ ೫೦೦೦ ಮೀ ೧೪:೫೫:೧೨

೨೦೧೩ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ಶಿಪ್ ಪುಣೆ, ಭಾರತ ೪ ನೇ ೧೦೦೦೦ ಮೀ ೨೯:೩೫:೭೨
೨೦೧೪ ಫೆಡರೇಷನ್ ಕಪ್ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ ಚಾಂಪಿಯನ್ ಪಟಿಯಾಲ, ಭಾರತ ೧ ನೇ ೫೦೦೦ ಮೀ ೧೩:೪೯:೧೭

೨೦೧೪ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್ ಹೊಸ ದಹಲಿ ಭಾರತದ ೨ ನೇ ೧೦೦೦೦ ಮೀ ೨೯:೩೨:೭೫
೨೦೧೪ ಏಷ್ಯನ್ ಗೇಮ್ಸ್ ಇಂಚೆಯೋನ್, ದಕ್ಷಿಣ ಕೊರಿಯ ೭ ನೇ ೫೦೦೦ ಮೀ ೧೩:೨೭:೪೦
೨೦೧೫ ವಸಾಯಿ ವಿರಾರ್ ಮೇಯರ್ ಮ್ಯಾರಥಾನ್ ವಿರಾರ್, ಮುಂಬಯಿ ಮೆಟ್ರೋ ಪ್ರದೇಶ, ಭಾರತ ೧ ನೇ ಮ್ಯಾರಥಾನ್ ೦೨:೨೨:೩೨
೨೦೧೬ ಮುಂಬಯಿ ಮ್ಯಾರಥಾನ್ ಮುಂಬಯಿ, ಭಾರತ ೧೫ ನೇ ಒಟ್ಟಾರೆ/ ೩ ನೇ ಭಾರತೀಯ ಮ್ಯಾರಥಾನ್ ೦೨:೧೭:೨೩

೨೦೧೬ ದಕ್ಷಿಣ ಏಷ್ಯಾದ ಕ್ರೀಡೆಗಳು ಗೌಹಾತಿ, ಭಾರತ ೩ ನೇ ಮ್ಯಾರಥಾನ್ ೦೨:೨೧:೧೪

ವೈಯಕ್ತಿಕ ಜೀವನ

ಇವರು ಜನಿಸಿದ್ದು ರಾಜಸ್ಥಾನದ ಬಾರ್ಮರ್ ಜಿಲ್ಲಯ ಖೊಕ್ಸಾರ್ ನಲ್ಲಿ, ಖೇತ್‌ರಾಮ್ ರವರು ಜಾಟ್ ರೆಜಿಮೆಂಟ್ನ ಮೂಲದ ವಿನಮ್ರ ನಾಯಕ್ ಸುಬೇದಾರ್. ಇವರಿಗೆ ಒಬ್ಬಳು ಸಹೋದರಿ ಮತ್ತು ನಾಲ್ಕು ಸಹೋದರರು ಇದ್ದಾರೆ. ಇವರು ದಿನವು ೮ನೇ ತರಗತಿ ವರೆಗೆ ಮಾತ್ರವಿದ್ದ ಶಾಲೆಗೆ ಮರುಭೂಮಿಯ ಮೂಲಕ ಓಡಿಹೋಗುತ್ತಿದ್ದರು. ಅನೇಕ ಓಟಗಾರುರು ಗುಡ್ಡಗಾಡು ಪ್ರದೇಶದಿಂದ ಬಂದವರು, ಗುಡ್ಡಗಾಡು ಪ್ರದೇಶದಿಂದ ಬಂದವರಾಗಿದ್ದರಿಂದ ಇವರಲ್ಲಿ ಕೆಂಪು ರಕ್ತ ಕಣಗಳು, ಶ್ವಾಸಕೋಶದ ಸಾಮರ್ಥ್ಯ ಮತ್ತು ಸಹಿಷ್ಣುತೆ ಹೆಚ್ಚು ಇರುತ್ತದೆ. ಇದಕ್ಕೆ ವಿರುದ್ಧವಾಗಿ, ಖೇತ್‌ರಾಮ್ ರವರು ಸಾಮರ್ಥ್ಯಗಳಾದ ಕಣಕಾಲಿನ ಹಿ೦ಭಾಗ ಮತ್ತು ಮಂಡಿರಜ್ಜು, ಮರುಭೂಮಿಯಲ್ಲಿ ಮರಳಿನಲ್ಲಿ ಓಡಿದ್ದರಿಂದ ಬಂದಿದೆ.

ಸ್ಥಿರ ಆದಾಯಕ್ಕಾಗಿ ೧೮ ವಯಸ್ಸಿನಲ್ಲಿ ಭಾರತ ಸೇನೆ ಸೇರಿದರು, ಮತ್ತು ತನ್ನ ಅಥ್ಲೆಟಿಕ್ ಸಾಮರ್ಥ್ಯದಿಂದ ಸೇನೆಯಲ್ಲಿ ಗುರುತಿಸಿಕೊಂಡರು. ಭಾರತೀಯ ಸೇನೆಯ ವಿಶ್ವ ದರ್ಜೆಯ ಕ್ರೀಡಾ ಪಟ್ಟುಗಳನ್ನು ಸಕ್ರಿಯ ಕರ್ತವ್ಯದಿಂದ ಕ್ಷಮಾಪಾಣೆ ಕೊಟ್ಟು, ಪೂರ್ಣ ಕ್ರೀಡಾಪಟುವಾಗಿ ತರಬೇತಿ ಪಡೆಯಲು ಅವಕಾಶ ಮಾಡಿಕೊಡುತ್ತಾದೆ. ತನ್ನ ಕ್ರೀಡಾಪಟುವಿನ ಸೌಲಭ್ಯಗಳನ್ನು ತನ್ನ ಹಳ್ಳಿಯ ತೀವ್ರ ನೀರಿನ ಸಮಸ್ಯೆಗಳನ್ನು ಬಗ್ಗೆಹರಿಸಲು ಬಳಸಬೇಕು ಎಂದು ಬಯಸುತ್ತಾರೆ. ಇವರ ಪೋಷಕರು ಮತ್ತು ಪತ್ನಿ ವಿದ್ಯಾವಂತರಲ್ಲ ಮತ್ತು ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ . ಅವರು ತಮ್ಮ ಕುಟುಂಬದ ಏಕಮಾತ್ರ ದುಡಿಯುವ ಸದಸ್ಯ ಮತ್ತು ಇವರು ತಮ್ಮ ಉಳಿತಾಯದ ಹಣವನ್ನು, ಅವರ ಪೋಷಕರು, ಪತ್ನಿ ಮತ್ತು ಇಬ್ಬರು ಮಕ್ಕಳಿಗಾಗಿ ಮನೆಗೆ ಕಳುಹಿಸಿಕೊಡುತ್ತಾರೆ.ಅವರು ತಿಂಗಳಿಗೆ ಓಡುವ ಮೈಲಿ ದೂರವನ್ನು ಸರಿಹೊಂದಿಸಲು, ಅವರು ಮಾಡುವ ಮಾಸಿಕ ಶೂಗಳ ಖರೀದಿ ಅವರ ದುಡಿಮೆಯಲ್ಲಿ ಅತಿ ದೊಡ್ಡ ವೆಚ್ಚ (ಪ್ರತಿ ಜೋಡಿಗೆ ಬೆಲ ಸುಮಾರು ೧೦.೦೦೦ರೂ), ೨೦೧೬ರ ಮಧ್ಯದ ವರೆಗೆ, ಅವರು ಯಾವುದೇ ಕಾರ್ಪೊರೇಟ್ ಪ್ರಾಯೋಜಕತ್ವದ ಹೊಂದಿಲ್ಲ ಮತ್ತು ಅವರು ತನ್ನ ಶೂಗಳನ್ನು ಅವರೆ ಖರೀದಿ ಮಾಡುತಿದ್ದಾರೆ .

ಅವರು ಮತ್ತು ಅವರ ಸಹವರ್ತಿ ಕ್ರೀಡಾಪಟುಗಳು ವರ್ಷದಲ್ಲಿ ೧೨ ರಲ್ಲಿ ೧೧ ತಿಂಗಳುಗಳು ಕಾಲ ತಮ್ಮ ಕುಟುಂಬವನ್ನು ಬೇಟಿಯಾಗದೆ ಮನೆಯಿಂದ ದೂರ ಇರುತ್ತಾರೆ, ವಿಶ್ವ ವೇದಿಕೆಯಲ್ಲಿ ಪೈಪೋಟಿ ಮಾಡವ ಸಲುವಾಗಿ ಅವರು ಮಾಡಲೇ ಬೇಕಾಡ ಒಂದು ತ್ಯಾಗ.

ಉಲ್ಲೇಖಗಳು

Tags:

ಖೇತ್ ರಾಮ್ ವೃತ್ತಿಖೇತ್ ರಾಮ್ ಸ್ಪರ್ಧೆಯಲ್ಲಿ ದಾಖಲೆಖೇತ್ ರಾಮ್ ವೈಯಕ್ತಿಕ ಜೀವನಖೇತ್ ರಾಮ್ ಉಲ್ಲೇಖಗಳುಖೇತ್ ರಾಮ್ಒಲಿಂಪಿಕ್ಸ್ಭಾರತಮ್ಯಾರಥಾನ್

🔥 Trending searches on Wiki ಕನ್ನಡ:

ಪೌರತ್ವಮಿಥುನರಾಶಿ (ಕನ್ನಡ ಧಾರಾವಾಹಿ)ಮಾನವನ ವಿಕಾಸಎಕರೆಪ್ರೀತಿಏಡ್ಸ್ ರೋಗಪ್ರಜ್ವಲ್ ರೇವಣ್ಣಗ್ರಾಮ ಪಂಚಾಯತಿಅನುಶ್ರೀನುಡಿ (ತಂತ್ರಾಂಶ)ಶಬ್ದಮಣಿದರ್ಪಣಮುಹಮ್ಮದ್ದೇವತಾರ್ಚನ ವಿಧಿಕೃಷ್ಣರಾಜನಗರಚಿನ್ನವ್ಯಂಜನಪಠ್ಯಪುಸ್ತಕಮಂಡಲ ಹಾವುಪಶ್ಚಿಮ ಘಟ್ಟಗಳುಬಿ.ಎಸ್. ಯಡಿಯೂರಪ್ಪರಮ್ಯಾಶ್ರೀಕೃಷ್ಣದೇವರಾಯಕನ್ನಡ ಸಾಹಿತ್ಯ ಸಮ್ಮೇಳನಕರ್ನಾಟಕದ ನದಿಗಳುಕೃತಕ ಬುದ್ಧಿಮತ್ತೆಉಡಅ.ನ.ಕೃಷ್ಣರಾಯಸ್ಕೌಟ್ ಚಳುವಳಿಸುಗ್ಗಿ ಕುಣಿತಪೂನಾ ಒಪ್ಪಂದಪಂಜೆ ಮಂಗೇಶರಾಯ್ಕದಂಬ ರಾಜವಂಶಕನ್ನಡದಲ್ಲಿ ಕಾದಂಬರಿ ಸಾಹಿತ್ಯಬಿ. ಶ್ರೀರಾಮುಲುಹಂಪೆಜನಪದ ಕಲೆಗಳುವಿಜಯವಾಣಿಮಜ್ಜಿಗೆಸಚಿನ್ ತೆಂಡೂಲ್ಕರ್ಬಡ್ಡಿ ದರಕನ್ನಡದಲ್ಲಿ ಮಹಿಳಾ ಸಾಹಿತ್ಯರಗಳೆಮದುವೆಪೆರಿಯಾರ್ ರಾಮಸ್ವಾಮಿಶಿವಮಲೆಗಳಲ್ಲಿ ಮದುಮಗಳುತೀ. ನಂ. ಶ್ರೀಕಂಠಯ್ಯಡ್ರಾಮಾ (ಚಲನಚಿತ್ರ)ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಮಾನವ ಸಂಪನ್ಮೂಲ ನಿರ್ವಹಣೆಕನ್ನಡ ರಾಜ್ಯೋತ್ಸವಜ್ಞಾನಪೀಠ ಪ್ರಶಸ್ತಿತೆಂಗಿನಕಾಯಿ ಮರಕಾಮಸೂತ್ರಕಾಲಾಯ ತಸ್ಮೈ ನಮಃ (ಚಲನಚಿತ್ರ)ನುಗ್ಗೆಕಾಯಿಸಮಾಜ ವಿಜ್ಞಾನಭಾರತೀಯ ಸಂವಿಧಾನದ ತಿದ್ದುಪಡಿಪಂಪ ಪ್ರಶಸ್ತಿಆಂಧ್ರ ಪ್ರದೇಶರಾಯಚೂರು ಜಿಲ್ಲೆಛತ್ರಪತಿ ಶಿವಾಜಿಶಿವಪ್ಪ ನಾಯಕಭಾರತೀಯ ಸ್ಟೇಟ್ ಬ್ಯಾಂಕ್ಒಗಟುಹಲ್ಮಿಡಿತ್ರಿಪದಿಲಕ್ಷ್ಮಿವಿಜಯ ಕರ್ನಾಟಕವ್ಯವಸಾಯತಾಜ್ ಮಹಲ್ಆರೋಗ್ಯಎರಡನೇ ಮಹಾಯುದ್ಧಕರ್ನಾಟಕ ಹೈ ಕೋರ್ಟ್ಅಮ್ಮ🡆 More