ಕೊಂಗಾಳ್ವರು

ಕೊಂಗಾಳ್ವರು ಮೈಸೂರು ರಾಜ್ಯದಲ್ಲಿ ಅರಕಲಗೂಡು-ಕೊಡಗು ಪ್ರದೇಶಗಳನ್ನೊಳಗೊಂಡಿದ್ದ ಕೊಂಗನಾಡಿನ ಅರಸರು.

ಇವರ ಮೂಲ ಪುರುಷ ಪಂಚವ. ಸು.1004ರಲ್ಲಿ ಹನಸೋಗೆಯ ಕದನದಲ್ಲಿ ಚೆಂಗಾಳ್ವರನ್ನು ಸೋಲಿಸಿದ ಪಂಚವ ಮಹಾರಾಯನಿಗೆ `ಕ್ಷತ್ರಿಯ ಶಿಖಾಮಣಿ ಕೊಂಗಾಳ್ವನೆಂಬ ಬಿರುದಿನೊಂದಿಗೆ ಈ ಪ್ರದೇಶದ ಆಳ್ವಿಕೆಯನ್ನು ಚೋಳ ಚಕ್ರವರ್ತಿ ರಾಜರಾಜ ವಹಿಸಿ ಕೊಟ್ಟುದರಿಂದ ಈ ವಂಶದ ಅರಸರಿಗೆ ಕೊಂಗಾಳ್ವರೆಂದು ಹೆಸರಾಯಿತು. ವೆಂಗಿ ಮತ್ತು ಗಂಗ ಮಂಡಲಗಳ ಮಹಾದಂಡನಾಯಕ ಪದವಿಯನ್ನೂ ಈತನಿಗೆ ನೀಡಲಾಗಿತ್ತು. ಇವನು ಮಲಬಾರ್ ಪ್ರದೇಶದಲ್ಲಿ ಚೇರಮನನ್ನೂ ಸೋಲಿಸಿದುದಾಗಿ ಹೇಳಿಕೊಂಡಿದ್ದಾನೆ. ಇವನ ಅನಂತರದ ದೊರೆಗಳಲ್ಲಿ ತ್ರಿಭುವನಮಲ್ಲ ಕೊಂಗಾಳ್ವ (ಆ.1079-1105) ಚೆಂಗಾಳ್ವರನ್ನು ಸದೆಬಡಿದ. ದೊಡ್ಡ ಮಲ್ಲದೇವ ದೇವಾಲಯವನ್ನು ನಿರ್ಮಿಸಿ ದಾನಧರ್ಮಗಳನ್ನು ಮಾಡಿ ಹೆಸರುಗಳಿಸಿದ್ದ. ಸು.1115ರಲ್ಲಿ ಆಳುತ್ತಿದ್ದ ವೀರ ಕೊಂಗಾಳ್ವ ಸತ್ಯವಾಕ್ಯನೇ ಜಿನಾಲಯದ ನಿರ್ಮಾತ. ಈ ವಂಶದ ತ್ರಿಭುವನಮಲ್ಲ ವೀರ ದೊಡ್ಡ ಕೊಂಗಾಳ್ವ (ಆ.1171-1177) ಹೊಯ್ಸಳರ ಆಕ್ರಮಣವನ್ನು ಹಿಮ್ಮೆಟ್ಟಿಸಿದ.

ಕೊಂಗಾಳ್ವರು ಜೈನಧರ್ಮೀಯರು. ಆ ಮತಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಪಂಚಮಹಾಶಬ್ದ, ಪೂರ್ವಶೈಲಸೂರ್ಯ, ಚೋಳಕುಲ ಘರಟ್ಟ, ಸೂರ್ಯವಂಶ ಚೂಡಾಮಣಿ-ಇವು ಇವರ ಕೆಲವು ಬಿರುದುಗಳು. 1390ರ ಸುಮಾರಿನಲ್ಲಿ ಈ ವಂಶದ ರಾಜರು ವಿಜಯನಗರ ಸಾಮ್ರಾಜ್ಯದಲ್ಲಿ ವಿಲೀನರಾಗಿರಬಹುದು.

ಕೊಂಗಾಳ್ವರು
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕೊಂಗು ರಾಜ್ಯಚೋಳಮೈಸೂರು ರಾಜ್ಯವೆಂಗಿನಾಡು

🔥 Trending searches on Wiki ಕನ್ನಡ:

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಉತ್ತರ ಕನ್ನಡಹಲ್ಮಿಡಿಭಾರತದ ಉಪ ರಾಷ್ಟ್ರಪತಿವಾಯು ಮಾಲಿನ್ಯಸ್ವಚ್ಛ ಭಾರತ ಅಭಿಯಾನಸಂತೋಷ್ ಆನಂದ್ ರಾಮ್ಓಂ (ಚಲನಚಿತ್ರ)ಹಳೆಗನ್ನಡಜಾತಿರಚಿತಾ ರಾಮ್ಹಲಸಿನ ಹಣ್ಣುಕರಗ (ಹಬ್ಬ)ಮಧ್ವಾಚಾರ್ಯಸುದೀಪ್ಮುಹಮ್ಮದ್ಅದ್ವೈತರೈತವಾರಿ ಪದ್ಧತಿಅಕ್ಬರ್ನೀರಿನ ಸಂರಕ್ಷಣೆಬಡತನಶ್ರೀನಿವಾಸ ರಾಮಾನುಜನ್ಕನ್ನಡ ಸಾಹಿತ್ಯ ಪರಿಷತ್ತುಜೋಸೆಫ್ ಸ್ಟಾಲಿನ್ಹಾಗಲಕಾಯಿಕಾವೇರಿ ನದಿಮಾನವನ ನರವ್ಯೂಹಅಕ್ಕಮಹಾದೇವಿಚಿಕ್ಕಮಗಳೂರುಸರ್ವಜ್ಞನೊಬೆಲ್ ಪ್ರಶಸ್ತಿಸಂಗೊಳ್ಳಿ ರಾಯಣ್ಣಆಯ್ದಕ್ಕಿ ಲಕ್ಕಮ್ಮಅಭಿಮನ್ಯುಭಾರತದ ಮುಖ್ಯಮಂತ್ರಿಗಳುಕೋಲಾರಪ್ಲಾಸಿ ಕದನವಜ್ರಮುನಿಕನ್ನಡ ಸಂಧಿತ್ರಿಪದಿಷಟ್ಪದಿಮಾಸ್ತಿ ವೆಂಕಟೇಶ ಅಯ್ಯಂಗಾರ್ಗುರು (ಗ್ರಹ)ಕರ್ಣಾಟ ಭಾರತ ಕಥಾಮಂಜರಿಮಾನವ ಸಂಪನ್ಮೂಲಗಳುಅಟಲ್ ಬಿಹಾರಿ ವಾಜಪೇಯಿಕರ್ನಾಟಕ ಜನಪದ ನೃತ್ಯಮಲ್ಲಿಕಾರ್ಜುನ್ ಖರ್ಗೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕರ್ನಾಟಕದ ಮುಖ್ಯಮಂತ್ರಿಗಳುಜ್ಯೋತಿಷ ಶಾಸ್ತ್ರಬಸವೇಶ್ವರಹೈದರಾಬಾದ್‌, ತೆಲಂಗಾಣಗಣರಾಜ್ಯೋತ್ಸವ (ಭಾರತ)ದ್ವಾರಕೀಶ್ವಚನ ಸಾಹಿತ್ಯಅಮರೇಶ ನುಗಡೋಣಿವಿಜ್ಞಾನನ್ಯೂಟನ್‍ನ ಚಲನೆಯ ನಿಯಮಗಳುಸೂರ್ಯವಂಶ (ಚಲನಚಿತ್ರ)ಸಂಗೀತಕಲ್ಯಾಣ ಕರ್ನಾಟಕಕಾಂತಾರ (ಚಲನಚಿತ್ರ)ಯೋನಿಆಮ್ಲಗಾಂಧಿ ಜಯಂತಿವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಬ್ರಾಹ್ಮಣಲೋಕಸಭೆಗರ್ಭಧಾರಣೆಕೈಮಗ್ಗಮಲೆನಾಡುಬೃಹದೀಶ್ವರ ದೇವಾಲಯರಾಜ್ಯಸಭೆ🡆 More