ಕೆಮ್ಮಣ್ಣುಗುಂಡಿ: ಗಿರಿಧಾಮ

ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಒಂದು ಗಿರಿಧಾಮ.

ಸಮುದ್ರ ಮಟ್ಟದಿಂದ ೧೪೩೪ ಮೀ ಎತ್ತರದಲ್ಲಿರುವ ಈ ಊರು, ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿ ಹಾಗು ಚಿಕ್ಕಮಗಳೂರಿನಿಂದ ೫೫ ಕಿಲೋ ಮೀಟರ್ ದೂರದಲ್ಲಿದೆ.. ಇದು ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಬೇಸಿಗೆ ತಾಣವಾಗಿದ್ದರಿಂದ ಇದನ್ನು "ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ" ಎಂದೂ ಕರೆಯುತ್ತಾರೆ. ಇಲ್ಲಿನ ಸುಂದರ ಉದ್ಯಾನಗಳು, ಹಸಿರು ಪ್ರಕೃತಿ, ನೀರಿನ ಅಬ್ಬಿಗಳು ಮತ್ತು ಪಶ್ಚಿಮ ಘಟ್ಟಗಳ ಮನೋಹರವಾದ ಪರ್ವತಗಳು ಈ ಸ್ಥಳವನ್ನು ಆಕರ್ಷಣೀಯವಾಗಿ ಮಾಡಿವೆ. ಪರ್ವತಾರೋಹಣ ಮೊದಲಾದ ಚಟುವಟಿಕೆಗಳಿಗೆ ಕೆಮ್ಮಣ್ಣುಗುಂಡಿಯ ಸುತ್ತಮುತ್ತಲಿನ ಗಿರಿಬೆಟ್ಟಗಳಲ್ಲಿ ಅವಕಾಶವಿದೆ.

ಕೆಮ್ಮಣ್ಣುಗುಂಡಿ
ಕೆಮ್ಮಣ್ಣುಗುಂಡಿ
ಕೆಮ್ಮಣ್ಣುಗುಂಡಿ: ಪ್ರೇಕ್ಷಣೀಯ ಸ್ಥಳಗಳು, ಚಲನಚಿತ್ರ ಶೂಟಿಂಗ್ ಸ್ಪಾಟ್
Kallatagiri 1

ಕನ್ನಡದ ಹಲವಾರು ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಕೆಲವು ಪ್ರಮುಖ ಚಿತ್ರಗಳೆಂದರೆ - ಪ್ರೇಮದ ಕಾಣಿಕೆ, ಆನಂದ್, ಪ್ರೀತಿ ಮಾಡು ತಮಾಷೆ ನೋಡು.

ಕೆಮ್ಮಣ್ಣುಗುಂಡಿಯಲ್ಲಿ ಯಥೇಚ್ಚವಾಗಿ ಕಬ್ಬಿಣಅದಿರು ದೊರಕುತ್ತದೆ. ಭದ್ರಾವತಿಯ ಸರ್.ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಕೆಮ್ಮಣ್ಣುಗುಂಡಿಯಿಂದ ಅದಿರು ಸರಬರಾಜಾಗುತಿತ್ತು.

ಪ್ರೇಕ್ಷಣೀಯ ಸ್ಥಳಗಳು

ರಾಜ ಭವನ

ರಾಜ ಭವನ ಕೆಮ್ಮಣ್ಣುಗುಂಡಿಯಲ್ಲಿರುವ ಒಂದು ಅತಿಥಿ ಗೃಹ. ಸುತ್ತಲ ಪರ್ವತಗಳ ಮತ್ತು ಸೂರ್ಯಾಸ್ತದ ದೃಶ್ಯಗಳು ಇಲ್ಲಿಂದ ಬಹಳ ಚೆನ್ನಾಗಿ ಕಾಣುತ್ತವೆ. ಇಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಬೆಳೆಸಿದ ಹೂವಿನ ಉದ್ಯಾನಗಳೂ ಇವೆ.

ಜೆಡ್ ಪಾಯಿಂಟ್

ಕೆಮ್ಮಣ್ಣುಗುಂಡಿ: ಪ್ರೇಕ್ಷಣೀಯ ಸ್ಥಳಗಳು, ಚಲನಚಿತ್ರ ಶೂಟಿಂಗ್ ಸ್ಪಾಟ್ 
ಜೆಡ್ ಪಾಯಿಂಟ್ ದಾರಿಯಲ್ಲಿರುವ ಶಾಂತಿ ಜಲಪಾತ

ಕೆಮ್ಮಣ್ಣುಗುಂಡಿಯಿಂದ ಬೆಟ್ಟದ ದಾರಿಯಲ್ಲಿ ಸುಮಾರು ೩೦ ನಿಮಿಷಗಳ ನಡಿಗೆಯ ದೂರದಲ್ಲಿರುವ ಸ್ಥಳ. ಇದೂ ಸಹ ಇಲ್ಲಿಂದ ಕಾಣುವ ಸೂರ್ಯಾಸ್ತದ ದೃಶ್ಯಕ್ಕೆ ಪ್ರಸಿದ್ಧ.

ಕೆಮ್ಮಣ್ಣುಗುಂಡಿ: ಪ್ರೇಕ್ಷಣೀಯ ಸ್ಥಳಗಳು, ಚಲನಚಿತ್ರ ಶೂಟಿಂಗ್ ಸ್ಪಾಟ್ 
ಜ಼ೆಡ್ ಪಾಯಿಂಟ್ ನ ಒಂದು ನೋಟ-2
ಕೆಮ್ಮಣ್ಣುಗುಂಡಿ: ಪ್ರೇಕ್ಷಣೀಯ ಸ್ಥಳಗಳು, ಚಲನಚಿತ್ರ ಶೂಟಿಂಗ್ ಸ್ಪಾಟ್ 
ಜ಼ೆಡ್ ಪಾಯಿಂಟ್ ನ ಒಂದು ನೋಟ-1

ಹೆಬ್ಬೆ ಜಲಪಾತ

ರಾಜ ಭವನದಿಂದ ಸುಮಾರು ೮ ಕಿಮೀ ದೂರದಲ್ಲಿರುವ ಜಲಪಾತ. ಇಲ್ಲಿ ನೀರು ೧೬೮ ಮೀ ಎತ್ತರದಿಂದ ಎರಡು ಹಂತಗಳಲ್ಲಿ (ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ) ಬೀಳುತ್ತದೆ.

ಶಾಂತಿ ಜಲಪಾತ

ಇಲ್ಲಿರುವ ಮತ್ತೊಂದು ಜಲಪಾತವೆಂದರೆ ಶಾಂತಿ ಫಾಲ್ಸ್. ರುದ್ರರಮಣೀಯ ಪ್ರಪಾತಗಳನ್ನು ನೋಡುತ್ತ ಇಲ್ಲಿನ ಶಾಂತಿ ಫಾಲ್ಸ್ ಗೆ ಭೇಟಿ ನೀಡುವ ಪ್ರವಾಸಿಗರು ಮನಸೋಲುವಂತಾಗುತ್ತದೆ. ಎತ್ತರದ ಬೆಟ್ಟದಿಂದ ರಭಸದಿಂದ ಬೀಳುವ ನೀರನನ್ನು ನೋಡುವ ಪ್ರವಾಸಿಗರಿಗೆ ಇಲ್ಲಿಂದ ಕಾಣುವ ಅನೇಕ ಕಣಿವೆಗಳು ಪ್ರಕೃತಿಯ ವಿಸ್ಮಯವನ್ನು ಮನದಟ್ಟಾಗಿಸುತ್ತವೆ. ಪಶ್ಚಿಮ ಘಟ್ಟದ ಬೆಟ್ಟಗಳ ಸಾಲುಗಳನ್ನು ಇಲ್ಲಿ ನೋಡುತ್ತ ಪ್ರವಾಸಿಗರು ಕೆಮ್ಮಣ್ಣುಗುಂಡಿಯ ಪ್ರವಾಸನ್ನು ಮರೆಯಲಾಗದ ಅನುಭವವಾಗಿಸಿಕೊಳ್ಳಬಹುದು.

ಚಲನಚಿತ್ರ ಶೂಟಿಂಗ್ ಸ್ಪಾಟ್

ಇಲ್ಲಿ ಹಳೆಯ ಕಾಲದ ಭಾಗಶಃ ಚಿತ್ರಗಳು ಚಿತ್ರಿಸಲ್ಪಟ್ಟಿವೆ. ಹಳೆಯ ಪ್ರಖ್ಯಾತ ನಾಯಕರ ಚಿತ್ರಗಳು ಚಿತ್ರಿಸಲ್ಪಿಟ್ಟಿವೆ.

Tags:

ಕೆಮ್ಮಣ್ಣುಗುಂಡಿ ಪ್ರೇಕ್ಷಣೀಯ ಸ್ಥಳಗಳುಕೆಮ್ಮಣ್ಣುಗುಂಡಿ ಚಲನಚಿತ್ರ ಶೂಟಿಂಗ್ ಸ್ಪಾಟ್ಕೆಮ್ಮಣ್ಣುಗುಂಡಿಚಿಕ್ಕಮಗಳೂರುತರೀಕೆರೆನಾಲ್ಮಡಿ ಕೃಷ್ಣರಾಜ ಒಡೆಯರ್ಪಶ್ಚಿಮ ಘಟ್ಟಗಳುಬೆಂಗಳೂರುಸಮುದ್ರ ಮಟ್ಟ

🔥 Trending searches on Wiki ಕನ್ನಡ:

ಭೂಕಂಪಬಿ. ಆರ್. ಅಂಬೇಡ್ಕರ್ಮಾನವನ ನರವ್ಯೂಹಉತ್ಪಾದನೆಅಂತರಜಾಲಹಜ್ಭಗವದ್ಗೀತೆನವೆಂಬರ್ ೧೪ಷಟ್ಪದಿಪಂಪಜ್ಯೋತಿಷ ಶಾಸ್ತ್ರಚಂಡಮಾರುತಗರ್ಭಧಾರಣೆಸಿರ್ಸಿವಸ್ತುಸಂಗ್ರಹಾಲಯRX ಸೂರಿ (ಚಲನಚಿತ್ರ)ವರ್ಲ್ಡ್ ವೈಡ್ ವೆಬ್ಲಾರ್ಡ್ ಕಾರ್ನ್‍ವಾಲಿಸ್ಮೈಸೂರುಪೊನ್ನನೈಸರ್ಗಿಕ ವಿಕೋಪಭಾರತದ ಗವರ್ನರ್ ಜನರಲ್ಅರವಿಂದ್ ಕೇಜ್ರಿವಾಲ್ಹಿಂದೂ ಧರ್ಮಗಂಗ (ರಾಜಮನೆತನ)ಗೃಹರಕ್ಷಕ ದಳಶರಣಬಸವೇಶ್ವರ ದೇವಸ್ಥಾನ ಕಲಬುರಗಿಮಯೂರಶರ್ಮಶಿವಬಿಪಾಶಾ ಬಸುಸಂಯುಕ್ತ ಕರ್ನಾಟಕವರ್ಗೀಯ ವ್ಯಂಜನಕನ್ನಡದಲ್ಲಿ ಕಾದಂಬರಿ ಸಾಹಿತ್ಯಮೈಸೂರು ಸಂಸ್ಥಾನದ ದಿವಾನರುಗಳುಕುರುಬಹೈಡ್ರೊಕ್ಲೋರಿಕ್ ಆಮ್ಲನೀರಾವರಿಸರ್ವಜ್ಞರೇಣುಕಅಲೆಕ್ಸಾಂಡರ್ಜ್ಞಾನಪೀಠ ಪ್ರಶಸ್ತಿಸಂಸ್ಕೃತಿಕಾವ್ಯಮೀಮಾಂಸೆಕನ್ನಡ ಸಾಹಿತ್ಯ ಪರಿಷತ್ತುಜಾಗತಿಕ ತಾಪಮಾನ ಏರಿಕೆಐರ್ಲೆಂಡ್ ಧ್ವಜಮಲೆನಾಡುಗ್ರಂಥಾಲಯಗಳುಭಾರತದ ಸಂವಿಧಾನ ರಚನಾ ಸಭೆಋಗ್ವೇದಬೆಂಗಳೂರುಧೂಮಕೇತುದೇವನೂರು ಮಹಾದೇವಭಾರತದ ಪಂಚಾಯತ್ ರಾಜ್ ವ್ಯವಸ್ಥೆದರ್ಶನ್ ತೂಗುದೀಪ್ನರ್ಮದಾ ನದಿಪ್ಲಾಸಿ ಕದನಶೂದ್ರ ತಪಸ್ವಿಮಂಕುತಿಮ್ಮನ ಕಗ್ಗರೇಡಿಯೋವಿಶ್ವ ಮಹಿಳೆಯರ ದಿನಅರಬ್ಬೀ ಸಮುದ್ರಕೊರೋನಾವೈರಸ್ವಿಕ್ರಮಾರ್ಜುನ ವಿಜಯಥಿಯೊಸೊಫಿಕಲ್ ಸೊಸೈಟಿಏಕೀಕರಣಕರ್ನಾಟಕದ ಮುಖ್ಯಮಂತ್ರಿಗಳುಚದುರಂಗದ ನಿಯಮಗಳುಭಾರತೀಯ ಸಂವಿಧಾನದ ತಿದ್ದುಪಡಿಇತಿಹಾಸದಾಸ ಸಾಹಿತ್ಯಚೋಳ ವಂಶಶಾಸನಗಳುಕೋಲಾರ ಚಿನ್ನದ ಗಣಿ (ಪ್ರದೇಶ)ಯಕೃತ್ತುಸಂಸ್ಕಾರಕಪ್ಪೆ ಅರಭಟ್ಟಹಲ್ಮಿಡಿ🡆 More