ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಭಾರತೀಯ ಉಕ್ಕು ಪ್ರಾಧಿಕಾರದ ಅಡಿಯಲ್ಲಿ ಒಂದು ಘಟಕವಾಗಿ ಮಿಶ್ರಲೋಹದ ಉಕ್ಕು ಮತ್ತು ಮೆದು ಕಬ್ಬಿಣದ ಉತ್ಪಾದನೆಯಲ್ಲಿ ತೊಡಗಿರುವ ಒಂದು ಕಾರ್ಖಾನೆ .

ಇದು ಭಾರತದ ಭದ್ರಾವತಿ ನಗರದಲ್ಲಿದೆ . ಸರ್.ಎಂ.ವಿಶ್ವೇಶ್ವರಯ್ಯ ಮೂಲಕ ಜನವರಿ ೧೮,೧೯೨೩ರಂದು ಮೈಸೂರು ಐರನ್ ವರ್ಕ್ಸ್ ಆರಂಭಿಸಲಾಯಿತು. ಈಗ ಇದು ಭಾರತೀಯ ಉಕ್ಕು ಪ್ರಾಧಿಕಾರದ ವ್ಯಾಪ್ತಿಗೆ ಬರುವ ಒಂದು ಉಕ್ಕು ಘಟಕವಾಗಿದೆ.ಈ ಐರನ್ ವರ್ಕ್ಸ್ ದಿವಾನ್ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಮಾರ್ಗದರ್ಶನದಲ್ಲಿ ಪ್ರಾರಂಭಿಸಲಾಯಿತು.ಇದರ ಮುಖ್ಯ ಉದ್ದೇಶ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಮತ್ತು ಕೆಮ್ಮಣ್ಣುಗುಂಡಿ ಬಳಿ ಇದ್ದ ಶ್ರೀಮಂತ ಕಬ್ಬಿಣದ ಅದಿರು ನಿಕ್ಷೇಪಗಳನ್ನು ಉಪಯೋಗಿಸಿ ಕಬ್ಬಿಣ ಮತ್ತು ಇತರ ಉತ್ಪನ್ನಗಳ ತಯಾರಿಕೆ ಆಗಿತ್ತು .

ಭದ್ರಾವತಿಯಲ್ಲಿ ಒಂದು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪಿಸುವ ಸಲುವಾಗಿ ಪ್ರಾಥಮಿಕ ತನಿಖೆಯನ್ನು ೧೯೧೫-೧೯೧೬ಗಳ ನಡುವೆ ಮಾಡಲಾಯಿತು . ಈ ತನಿಖೆಯನ್ನು ಒಂದು ನ್ಯೂಯಾರ್ಕ್ ಮೂಲದ ಸಂಸ್ಥೆ ನಿರ್ವಹಿಸಿತು . ಇದ್ದಿಲು ಇಂಧನ ಬಳಸಿ ಗಟ್ಟಿ ಕಬ್ಬಿಣ ತಯಾರಿಸುವ ಸಾಧ್ಯತೆಯನ್ನು ಪರಿಶೋಧಿಸಿದರು . ೧೯೧೮-೧೯೨೨ ವರ್ಷಗಳನ್ನು ಕಾರ್ಖಾನೆ ಸ್ಥಾಪಿಸಲು ಮತ್ತು ಆರಂಭಿಸಲು ಕಳೆದರು .ಪ್ರಾರಂಭದಲ್ಲಿ ಊದು ಕುಲುಮೆಯಲ್ಲಿ ಕಬ್ಬಿಣ ಕರಗಿಸುವ ಮತ್ತು ಇದ್ದಿಲು ಉತ್ಪಾದಿಸುವ ಉದ್ದೇಶದಿಂದ ಮರದ ಶುದ್ಧೀಕರಣ ಕಾರ್ಖಾನೆ ಸ್ಥಾಪಿಸಲಾಯಿತು . ನಂತರ ಮದ್ರಾಸ್ , ಅಹಮದಾಬಾದ್ ಮತ್ತು ಕರಾಚಿಯಲ್ಲಿ ಏಜೆನ್ಸೀಸ್ ಮತ್ತು ಬಾಂಬೆಯಲ್ಲಿ ಮಾರಾಟ ಕಚೇರಿ ತೆರೆಯಲಾಯಿತು . ಒಂದು ಎರಕ ಹೊಯ್ಯಲು ಕಬ್ಬಿಣದ ಪೈಪ್ ಘಟಕ , ಮುಕ್ತ ಬೆಂಕಿಯ ಕುಲುಮೆ, ರೋಲಿಂಗ್ ಗಿರಣಿಗಳು ಮತ್ತು ಸಿಮೆಂಟ್ ಸ್ಥಾವರ ನಂತರ ಸೇರಿಸಲ್ಪಟ್ಟವು. ಅನಂತರ ಕಾರ್ಖಾನೆಯ ಹೆಸರು ಮೈಸೂರು ಐರನ್ ಅಂಡ್ ಸ್ಟೀಲ್ ವರ್ಕ್ಸ್ನ ಎಂದು ಬದಲಾಯಿಸಲಾಯಿತು . ತದನಂತರ ೧೯೬೨ರಲ್ಲಿ ಹೆಸರನ್ನು ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಎಂದು ಬದಲಾಯಿಸಲಾಯಿತು . ನಂತರ ಕಾರ್ಖಾನೆಯನ್ನು ಜಂಟಿಯಾಗಿ ಕ್ರಮವಾಗಿ ೪೦:೬೦ ಅನುಪಾತದ ಷೇರುಗಳೊಂದಿಗೆ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ಜೊತೆಯಾಗಿ ತೆಕ್ಕೆಗೆ ತೆಗೆದುಕೊಂಡು ಒಂದು ಸರ್ಕಾರಿ ಕಂಪನಿಯನ್ನಾಗಿ ಪರಿವರ್ತಿಸಿದವು . ೧೯೬೨ರಲ್ಲಿ ಹೊಸ ಎಲ್.ಡಿ. ಪ್ರಕ್ರಿಯೆ ಬಳಸಿಕೊಂಡು ಉಕ್ಕನ್ನು ಉತ್ಪಾದಿಸುವ ಒಂದು ಹೊಸ ಉಕ್ಕಿನ ಘಟಕ ಸ್ಥಾಪಿಸಲಾಯಿತು . ಅದರ ಸಂಸ್ಥಾಪಕರನ್ನು ಗೌರವಿಸುವ ಸಲುವಾಗಿ ೧೯೭೫ರಲ್ಲಿ ಕಂಪನಿಯನ್ನು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ನಿಯಮಿತ ಎಂದು ಮರುನಾಮಕರಣ ಮಾಡಲಾಯಿತು . ಇದನ್ನು ೧೯೮೯ರಲ್ಲಿ ಭಾರತ ಉಕ್ಕು ಪ್ರಾಧಿಕಾರವು ಒಂದು ಅಂಗಸಂಸ್ಥೆ ಘಟಕವಾಗಿಸಿ ಆಕ್ರಮಿಸಿತು ಮತ್ತು ನಂತರ ಅದು ೧೯೯೮ರಲ್ಲಿ ಎಸ್.ಎ.ಐ.ಎಲ್. ಸೇರಿಕೊಂಡಿತು.

Tags:

ಭಾರತಭಾರತೀಯಮೈಸೂರು

🔥 Trending searches on Wiki ಕನ್ನಡ:

ಕರ್ಣಾಟ ಭಾರತ ಕಥಾಮಂಜರಿಕಾರವಾರಪ್ರವಾಸಿಗರ ತಾಣವಾದ ಕರ್ನಾಟಕಆಶೀರ್ವಾದನಾಗರೀಕತೆಕೃಷಿಈಸ್ಟ್‌ ಇಂಡಿಯ ಕಂಪನಿಶಿರ್ಡಿ ಸಾಯಿ ಬಾಬಾಕರುಳುವಾಳುರಿತ(ಅಪೆಂಡಿಕ್ಸ್‌)ಗಾಂಧಿ ಜಯಂತಿವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಸರ್ವೆಪಲ್ಲಿ ರಾಧಾಕೃಷ್ಣನ್ಕೊಬ್ಬಿನ ಆಮ್ಲಬುಡಕಟ್ಟುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಶಬರಿಮಹಾವೀರಭಾರತದಲ್ಲಿ ಪಂಚಾಯತ್ ರಾಜ್ವಾಲ್ಮೀಕಿಕನ್ನಡ ನ್ಯೂಸ್ ಟುಡೇನಳಂದಭಾರತದಲ್ಲಿ ಪರಮಾಣು ವಿದ್ಯುತ್ಕದಂಬ ರಾಜವಂಶಕರ್ನಾಟಕದ ಮುಖ್ಯಮಂತ್ರಿಗಳುರಾಘವಾಂಕಗಣೇಶಶ್ರೀನಿವಾಸ ರಾಮಾನುಜನ್ರಾಹುಲ್ ಗಾಂಧಿದಲಿತವರ್ಗೀಯ ವ್ಯಂಜನಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಗುಬ್ಬಚ್ಚಿಕರ್ನಾಟಕ ಸರ್ಕಾರಶೃಂಗೇರಿ ಶಾರದಾಪೀಠಕನ್ನಡ ವ್ಯಾಕರಣವಿಷ್ಣುವರ್ಧನ್ (ನಟ)ಬೀಚಿಶ್ರೀ. ನಾರಾಯಣ ಗುರುಛಂದಸ್ಸುಓಂ ನಮಃ ಶಿವಾಯಗರ್ಭಕಂಠದ ಕ್ಯಾನ್ಸರ್‌ಲಿನಕ್ಸ್ಗಾಂಡೀವನಕ್ಷತ್ರಭಾಷೆಬಾಳೆ ಹಣ್ಣುಮಂಗಳಮುಖಿಭಾವಗೀತೆಗಂಗ (ರಾಜಮನೆತನ)ಭಾರತದಲ್ಲಿ ತುರ್ತು ಪರಿಸ್ಥಿತಿಜಾಗತಿಕ ತಾಪಮಾನಮದರ್‌ ತೆರೇಸಾವಿಧಾನಸೌಧಸೂಪರ್ (ಚಲನಚಿತ್ರ)ಎಲೆಕ್ಟ್ರಾನಿಕ್ ಮತದಾನಭಾರತದ ಸ್ವಾತಂತ್ರ್ಯ ದಿನಾಚರಣೆಕೊಳ್ಳೇಗಾಲಕನ್ನಡ ಸಾಹಿತ್ಯ ಪರಿಷತ್ತುಸಾರಾ ಅಬೂಬಕ್ಕರ್ಕಾಮಧೇನುಮೊದಲನೇ ಅಮೋಘವರ್ಷಬೆಳವಲಭಾರತದ ರಾಷ್ಟ್ರೀಯ ಉದ್ಯಾನಗಳುಚಿತ್ರದುರ್ಗಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವಸಿಷ್ಠಕರ್ನಾಟಕದ ಸಂಸ್ಕೃತಿಮಧುಮೇಹಕೊರೋನಾವೈರಸ್ ಕಾಯಿಲೆ ೨೦೧೯ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತದ ರಾಜಕೀಯ ಪಕ್ಷಗಳುಉತ್ತರ ಪ್ರದೇಶನಿರುದ್ಯೋಗಹರ್ಯಂಕ ರಾಜವಂಶ🡆 More