ಕೂಗರ್

Also see text

ಕೂಗರ್
Temporal range: 0.3–0 Ma
PreꞒ
O
S
D
C
P
T
J
K
Pg
N
Middle Pleistocene–Holocene
ಕೂಗರ್
Captive cougar at the Cincinnati Zoo
Conservation status
ಕೂಗರ್
Least Concern (IUCN 3.1)
Scientific classification e
Unrecognized taxon (fix): Puma
ಪ್ರಜಾತಿ:
P. concolor
Binomial name
Puma concolor
(Linnaeus, 1771)
Subspecies
  • P. c. anthonyi – eastern South America
  • P. c. cabrerae – central South America
  • P. c. concolor – northern South America
  • P. c. coryi? – south Florida
  • P. c. costaricensis – Central America
  • P. c. cougar – North America
  • P. c. puma – southern South America

ಕೂಗರ್
Cougar range
Synonyms
  • Felis concolor

ಕೂಗರ್ ಅಮೆರಿಕ ಖಂಡಗಳಿಗೆ ಸೀಮಿತವಾಗಿರುವ ಒಂದು ಹಬ್ಬೆಕ್ಕು.ಇದಕ್ಕೆ ಪ್ಯೂಮ, ಮೌಂಟನ್ ಲಯನ್, ಪ್ಯಾಂಥರ್, ಕ್ಯಾಟಮೌಂಟ್, ಪಯಿಂಟರ್ (ಬಹುಶಃ ಪ್ಯಾಂಥರ್ ಎಂಬುದರ ಅಪಭ್ರಂಶ) ಎಂಬ ಹೆಸರುಗಳೂ ಇವೆ.

ವೈಜ್ಞಾನಿಕ ವಿಂಗಡಣೆ

ಕಾರ್ನಿವೋರ ಗಣದ ಫೆಲಿಡೀ ಕುಟುಂಬಕ್ಕೆ ಸೇರಿದೆ. ಫೆಲಿಸ್ ಕಾನ್‍ಕಲರ್ ಎಂಬ ವೈಜ್ಞಾನಿಕ 933-936 ಕೂಗುಸಿರು ಹೆಸರಿನ ಈ ಜಾತಿಯಲ್ಲಿ ಸುಮಾರು 15 ಉಪಪ್ರಭೇದಗಳನ್ನು ಗುರುತಿಸಲಾಗಿದೆ.

ಭೌಗೋಳಿಕ ಹರಡುವಿಕೆ

19ನೆಯ ಶತಮಾನದ ಕೊನೆಯವರೆಗೂ ಕೆನಡದ ಬ್ರಿಟಿಷ್ ಕೊಲಂಬಿಯದಿಂದ ಹಿಡಿದು ದಕ್ಷಿಣ ಅಮೆರಿಕದ ಅರ್ಜೆಂಟೀನ, ಪಟಗೋನಿಯಗಳವರೆಗೂ ಕೂಗರ್ ಹರಡಿತ್ತು. ಆದರೆ ಬೇಟೆಯಿಂದಾಗಿ ಇದರ ವ್ಯಾಪ್ತಿ ಕುಗ್ಗಿದೆ. ಈಗ ಕೆನಡದ ಪಶ್ಚಿಮ ಪರ್ವತ ಪ್ರದೇಶಗಳಲ್ಲಿ ರಾಕಿ ಪರ್ವತಗಳಲ್ಲಿ ಮತ್ತು ದಕ್ಷಿಣ ಅಮೆರಿಕದ ಕಾಡುಗಳಲ್ಲಿ ಮಾತ್ರ ಕಂಡುಬರುತ್ತದೆ. ವಿವಿಧ ಬಗೆಯ ವಾಯುಗುಣಗಳಲ್ಲಿ ಜೀವಿಸಬಲ್ಲ ಪರಿಹೊಂದಾಣಿಕೆಯ ಸಾಮಥ್ರ್ಯವನ್ನು ಪಡೆದಿದೆ. ಸಮುದ್ರಮಟ್ಟದಿಂದ ಹಿಡಿದು 14,000' ಎತ್ತರದ ಪರ್ವತ ಪ್ರದೇಶಗಳಲ್ಲೂ ಬದುಕಬಲ್ಲದು.

ಲಕ್ಷಣಗಳು

ಕೂಗರ್ 
Cougar skull and jawbone

ಅಮೆರಿಕದಲ್ಲಿ ಕಾಣಬರುವ ಬೆಕ್ಕಿನ ಜಾತಿಯ ಪ್ರಾಣಿಗಳಲ್ಲಿ ಗಾತ್ರದ ದೃಷ್ಟಿಯಿಂದ ಇದಕ್ಕೆ ಎರಡನೆಯ ಸ್ಥಾನ. ಬೆಳೆವಣಿಗೆಯ ಪೂರ್ಣಾವಸ್ಥೆಯನ್ನು ತಲುಪಿದ ಗಂಡು ಕೂಗರ್ 190-270 ಸೆಂಮೀ. ಉದ್ದವೂ (ಬಾಲವೂ ಸೇರಿ) 60-75 ಸೆಂಮೀ. ಎತ್ತರವೂ ಇರುತ್ತದೆ. 36-45ಕೆಜಿ. ತೂಗುತ್ತದೆ. Of this length, 63 to 95 cm (25 to 37 in). ಕೆಲವು ಗಂಡುಗಳು 90 ಕೆಜಿ. ತೂಗಿರುವ ದಾಖಲೆಯೂ ಉಂಟು. ಹೆಣ್ಣು ಗಂಡಿಗಿಂತ ಚಿಕ್ಕದು. ಕೂಗರಿನ ಮೈಬಣ್ಣ ಕೆಂಪುಮಿಶ್ರಿತ ಕಂದು. ಕಾಲು, ಹೊಟ್ಟೆ, ಕತ್ತಿನ ತಳಬಾಗ ಮತ್ತು ಮೇಲ್ದುಟಿ ಮಾಸಲು ಬಿಳುಪು. ಕೂಗರ್ ಕೊಂಚಮಟ್ಟಿಗೆ ಸಿಂಹವನ್ನು ಹೋಲುವುದಾದರೂ ಸಿಂಹಕ್ಕಿರುವಂತೆ ಕೇಸರ ಇದರಲ್ಲಿಲ್ಲ. ಕಿವಿಗಳು ಅಗಲವಾಗಿ ದುಂಡು ಆಕಾರದವಾಗಿವೆ. ಬಾಲ ದಪ್ಪ ಹಾಗೂ ಉರುಳೆಯಂತಿದೆ. ಬಾಲದ ಮತ್ತು ಕಿವಿಯ ತುದಿಗಳು ಸ್ವಲ್ಪ ಕಪ್ಪುಬಣ್ಣದವು. ಬಾಲದ ತುದಿಯಲ್ಲಿ ಕೂದಲಿನ ಸಣ್ಣ ಗೊಂಡೆಯಿದೆ. ಕೂಗರ್ ಹಗಲಿನಲ್ಲಿ ಸಾಮಾನ್ಯವಾಗಿ ಬೆಟ್ಟಗಳ ಗುಹೆಗಳಲ್ಲಿ ನಿದ್ದೆ ಮಾಡುತ್ತಲೋ ಇಲ್ಲವೆ ಎತ್ತರವಾದ ಬಂಡೆಗಳ ಮೇಲೆ ಬಿಸಿಲಿಗೆ ಮೈಯೊಡ್ಡಿ ವಿಶ್ರಾಂತಿ ಪಡೆಯುತ್ತಲೋ ಕಾಲ ಕಳೆಯುತ್ತದೆ. ಸಂಜೆಯಾದ ಮೇಲೆ ಆಹಾರಾನ್ವೇಷಣೆಗೆ ಹೊರಡುತ್ತದೆ.

ಆಹಾರ

ಕೂಗರ್ 
A captive cougar feeding: Cougars are ambush predators, feeding mostly on deer and other mammals.

ಜಿಂಕೆ, ಮೊಲ, ಕಾಡುಕುರಿ, ಗಿನಿಹಂದಿ ವಿವಿಧ ಬಗೆಯ ಹಕ್ಕಿಗಳು ಇದರ ಆಹಾರ, ದನ, ಕುರಿ, ಮುಂತಾದ ಸಾಕುಪ್ರಾಣಿಗಳನ್ನು ಬೇಟೆಯಾಡುವುದೂ ಉಂಟು . ಆಹಾರಕ್ಕಾಗಿ ತನ್ನ ವಾಸಸ್ಥಳದಿಂದ ಬಲುದೂರ ಸಂಚಾರ ಹೊರಡುವ ಇದು ಅಗಲವಾದ ನದಿಗಳನ್ನು ಸರಾಗವಾಗಿ ಈಜಿಕೊಂಡು ಸಾಗುತ್ತದೆ. ಹುಲಿ, ಸಿಂಹಗಳಂತೆಯೇ ಬೇಟೆಯಲ್ಲಿ ಬಹಳ ಕುಶಲಿ. ಎರೆ ಕಣ್ಣಿಗೆ ಬಿದ್ದರೆ ಅದಕ್ಕೆ ತನ್ನ ಸುಳಿವು ಸಿಕ್ಕದಂತೆ ನಿಶ್ಯಬ್ಧವಾಗಿ ಅದರ ಹತ್ತಿರ ಬರುತ್ತದೆ. ಸಾಕಷ್ಟು ಹತ್ತಿರ ಬಂದ ಮೇಲೆ ಎರೆಯ ಮೇಲೆ ಚಂಗನೆ ನೆಗೆದು ಅದರ ಎದೆ ಅಥವಾ ಕುತ್ತಿಗೆಗೆ ಬಾಯಿಹಾಕಿ ಹಿಡಿದು ನೆಲಕ್ಕುರುಳಿಸುತ್ತದೆ. ಸುಮಾರು 20' ದೂರಕ್ಕೆ ನೆಗೆಯಬಲ್ಲುದೆಂದು ಹೇಳಿಕೆಯಿದೆ. ತುಂಬ ಬಲಶಾಲಿಯಾದ ಇದು ತನಗಿಂತ ಐದುಪಟ್ಟು ಭಾರವಾದ ಎರೆಯನ್ನು 90-100ಮೀ. ದೂರದ ವರೆಗೂ ಎಳೆದೊಯ್ಯಬಲ್ಲುದು. ಸಂತೃಪ್ತಿಯಾಗಿ ತಿಂದ ಮೇಲೆ ಉಳಿಯುವ ಮಾಂಸವನ್ನು ಪೊದೆಯಲ್ಲಿ ಮುಚ್ಚಿಟ್ಟು ಮತ್ತೆ ಮಾರನೆಯ ದಿನ ಬಂದು ತಿನ್ನುವುದುಂಟು. ಮನುಷ್ಯನಿಗೆ ಉಪದ್ರವ ಕೊಡುವುದು ಬಲುವಿರಳ. ಅವನನ್ನು ಕಂಡರೆ ಹೆದರುತ್ತದೆ. ಆದರೂ ಕೆಲವೊಮ್ಮೆ ಮನುಷ್ಯನನ್ನು ಕೊಲ್ಲುವುದುಂಟು. ಬಹುಶಃ ರೇಗಿಸಿದರೆ ಘಾಸಿ ಮಾಡಿದರೆ ಮಾತ್ರ ದಾಳಿಮಾಡುತ್ತದೆ.

ಸಂತಾನೋತ್ಪತ್ತಿ

ಕೂಗರ್‍ಗೆ ನಿರ್ದಿಷ್ಟವಾದ ಸಂತಾನೋತ್ಪತ್ತಿಯ ಕಾಲ ಇಲ್ಲ. ವರ್ಷದ ಯಾವ ತಿಂಗಳಿನಲ್ಲಾದರೂ ಮರಿ ಹಾಕಬಲ್ಲುದು. 2-3 ವರ್ಷಗಳಿಗೊಮ್ಮೆ ಮರಿ ಹಾಕುತ್ತದೆ. ಮರಿಗಳ ಸಂಖ್ಯೆ ಸೂಲಿಗೆ 1-6. ಗರ್ಭಧಾರಣೆಯ ಕಾಲ 90-96 ದಿವಸಗಳು. ಆಗತಾನೆ ಹುಟ್ಟಿದ ಮರಿ ಸುಮಾರು 30 ಸೆಂಮೀ ಉದ್ದವಿದ್ದು 500 ಗ್ರಾಂ. ತೂಗುತ್ತದೆ. ಮರಿ ಕಣ್ಣು ತೆರೆದಿರುವುದಿಲ್ಲ. ಇದರ ಮೈಬಣ್ಣ ಹಳದಿ. ಅದರ ಮೇಲೆಲ್ಲ ಚಿಕ್ಕ ಕಪ್ಪು ಮಚ್ಚೆಗಳಿರುತ್ತವೆ. ಆರು ತಿಂಗಳ ಅನಂತರ ಮಚ್ಚೆಗಳು ಮಾಯವಾಗುತ್ತವೆ. ಮರಿಗಳು 1-2 ವರ್ಷ ವಯಸ್ಸಿನ ವರೆಗೂ ತಾಯಿಯೊಂದಿಗೇ ಇದ್ದು ಅನಂತರ ಸ್ವತಂತ್ರ ಜೀವನ ಆರಂಭಿಸುತ್ತವೆ. ಕೂಗರ್‍ನ ಆಯಸ್ಸು ಸುಮಾರು 20 ವರ್ಷಗಳು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಕೂಗರ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕೂಗರ್ ವೈಜ್ಞಾನಿಕ ವಿಂಗಡಣೆಕೂಗರ್ ಭೌಗೋಳಿಕ ಹರಡುವಿಕೆಕೂಗರ್ ಲಕ್ಷಣಗಳುಕೂಗರ್ ಆಹಾರಕೂಗರ್ ಸಂತಾನೋತ್ಪತ್ತಿಕೂಗರ್ ಉಲ್ಲೇಖಗಳುಕೂಗರ್ ಬಾಹ್ಯ ಸಂಪರ್ಕಗಳುಕೂಗರ್

🔥 Trending searches on Wiki ಕನ್ನಡ:

ಜಿಡ್ಡು ಕೃಷ್ಣಮೂರ್ತಿಕಾಮಸೂತ್ರಕ್ರಿಯಾಪದದಿಕ್ಸೂಚಿಮಡಿಕೇರಿಕೊಪ್ಪಳಲೋಕಸಭೆಕರ್ನಾಟಕ ಹೈ ಕೋರ್ಟ್ಸೈಯ್ಯದ್ ಅಹಮದ್ ಖಾನ್ಮಿಲಾನ್ಮಾನವ ಹಕ್ಕುಗಳುಗುರುರಾಜ ಕರಜಗಿತೆಂಗಿನಕಾಯಿ ಮರಮಂಡಲ ಹಾವುಸುಗ್ಗಿ ಕುಣಿತಭೂತಕೋಲಬಿ.ಎಸ್. ಯಡಿಯೂರಪ್ಪಭಾರತದಲ್ಲಿ ತುರ್ತು ಪರಿಸ್ಥಿತಿವ್ಯವಸಾಯಸರ್ವೆಪಲ್ಲಿ ರಾಧಾಕೃಷ್ಣನ್ಎಳ್ಳೆಣ್ಣೆಸಂಧಿದಾಸ ಸಾಹಿತ್ಯಕಲ್ಲಂಗಡಿಗೋಕಾಕ್ ಚಳುವಳಿವಾಯು ಮಾಲಿನ್ಯಕೆ. ಅಣ್ಣಾಮಲೈಉತ್ತರ ಕನ್ನಡಕನ್ನಡ ಛಂದಸ್ಸುಮಾನವನಲ್ಲಿ ನಿರ್ನಾಳ ಗ್ರಂಥಿಗಳುಒಡೆಯರ್ಕನ್ನಡದಲ್ಲಿ ಗಾದೆಗಳುಪರಿಣಾಮಚದುರಂಗದ ನಿಯಮಗಳುಅವರ್ಗೀಯ ವ್ಯಂಜನಎಂ. ಕೆ. ಇಂದಿರಉಪನಯನಅಶ್ವತ್ಥಮರಆಟಿಸಂಹಾಗಲಕಾಯಿಗೋವಿಂದ ಪೈತೀ. ನಂ. ಶ್ರೀಕಂಠಯ್ಯಯೋಗ ಮತ್ತು ಅಧ್ಯಾತ್ಮಬ್ಯಾಂಕ್ಮೋಕ್ಷಗುಂಡಂ ವಿಶ್ವೇಶ್ವರಯ್ಯಜಪಾನ್ತುಮಕೂರುಸ್ತ್ರೀರಾಹುಲ್ ಗಾಂಧಿಸಾಮ್ರಾಟ್ ಅಶೋಕಮಾಸವ್ಯಕ್ತಿತ್ವನ್ಯೂಟನ್‍ನ ಚಲನೆಯ ನಿಯಮಗಳುದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಕನ್ನಡ ಜಾನಪದಕರಗ (ಹಬ್ಬ)ಹೆಚ್.ಡಿ.ದೇವೇಗೌಡಆರೋಗ್ಯಬಸವ ಜಯಂತಿಮದುವೆಅಂತಿಮ ಸಂಸ್ಕಾರಬಾಲ್ಯ ವಿವಾಹಆವಕಾಡೊಶ್ರವಣಬೆಳಗೊಳಬಾರ್ಲಿವೆಬ್‌ಸೈಟ್‌ ಸೇವೆಯ ಬಳಕೆಗ್ರಹಗೀತಾ (ನಟಿ)ಕಾಗೋಡು ಸತ್ಯಾಗ್ರಹಮಾರ್ಕ್ಸ್‌ವಾದಮಹಾಕವಿ ರನ್ನನ ಗದಾಯುದ್ಧರಾಮಾಚಾರಿ (ಕನ್ನಡ ಧಾರಾವಾಹಿ)ಬಾದಾಮಿ ಶಾಸನಶ್ರುತಿ (ನಟಿ)ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳು🡆 More