ಕುಂತಲ ದೇಶ

ಕುಂತಲ ದೇಶವು  ಪುರಾತನ ಭಾರತೀಯ ರಾಜಕೀಯ ಪ್ರದೇಶ . ಇದು  ಬಹುಶಃ ಪಶ್ಚಿಮ ಡೆಕ್ಕನ್ ಮತ್ತು ದಕ್ಷಿಣ ಕರ್ನಾಟಕ ದ ಕೆಲವು ಭಾಗ (ಹಿಂದಿನ ಉತ್ತರ ಮೈಸೂರು ರಾಜ್ಯದ ಉತ್ತರ ಭಾಗ ) ಗಳನ್ನು  ಒಳಗೊಳ್ಳುತ್ತದೆ.

ಸುಮಾರು ಕ್ರಿ. ಪೂ. 600-450 ಅವಧಿಯ  ಕುಂತಲ ನಾಣ್ಯಗಳು ಲಭ್ಯ ಇವೆ .  ಕುಂತಲವು   ಕ್ರಿ.ಶ.  10-12 ನೇ ಶತಮಾನಗಳ ಹೊತ್ತಿಗೆ  ದಕ್ಷಿಣ ಭಾರತದ  ಮುಖ್ಯ ಭಾಗಗಳಲ್ಲಿ ಒಂದಾಗಿತ್ತು  (ಚೋಳ, ಚೇರ, ಪಾಂಡ್ಯ ಮತ್ತು ಆಂಧ್ರ ಇತರ ಭಾಗಗಳು ). ಪ್ರತಿ ಭಾಗವೂ  ತನ್ನದೇ ಆದ ಸಂಸ್ಕೃತಿ ಮತ್ತು ಆಡಳಿತವನ್ನು ಅಭಿವೃದ್ಧಿ ಪಡಿಸಿತು. ತಾಳಗುಂದ ಶಾಸನಗಳಲ್ಲಿ ಬಳ್ಳಿಗಾವಿ ಮತ್ತು ಹತ್ತಿರದ ಪ್ರದೇಶಗಳನ್ನು  ಕುಂತಲದ ಭಾಗಗಳೆಂದು ಉಲ್ಲೇಖಿಸಲಾಗಿದೆ.

ಧರ್ಮಗ್ರಂಥಗಳಲ್ಲಿ ಉಲ್ಲೇಖಗಳು

  • ದೇವಗಿರಿಯ ಯಾದವರ ತಾಮ್ರಪತ್ರಗಳು ನಾಗರನ್ನು ಕುಂತಲದ  ಅತ್ಯಂತ ಹಳೆಯ ರಾಜರು ಎಂದು ಉಲ್ಲೇಖಿಸುತ್ತವೆ.  ಕಲ್ಲುಬರಹಗಳು ಮತ್ತು ತಾಮ್ರಪಟಗಳು  ಸೂಚಿಸುವಂತೆ ರಾಷ್ಟ್ರಕೂಟರು, ಸಾತವಾಹನರು, ವಾಕಾಟಕರು, ಚಾಲುಕ್ಯರು , ಚುಟುಗಳು,ವಿಷ್ಣುಕುಂಡಿನರು ಕುಂತಲವನ್ನು ಆಳಿದ್ದಾರೆ. ಕುಂತಲವನ್ನು ರಟ್ಟಪಾಡಿ ಅಂದರೆ ರಟ್ಟರ ನಾಡು ಎಂದು  ಗುರುತಿಸಲಾಗಿದೆ.  ಇಮ್ಮಡಿ ಪುಲಿಕೇಶಿಯ ತಾಮ್ರಪಟಗಳು ಅವನನ್ನು ಮೂರು ಮಹಾರಾಷ್ಟ್ರಗಳ ರಾಜ ಎಂದು ಹೇಳುತ್ತವೆ (ಇತರ ಎರಡು ವಿದರ್ಭ , ಮತ್ತು ಕೊಂಕಣ ).
  • ಕಾಳಿದಾಸನು  ಕುಂತಲ ಮತ್ತು ಕುಂತಲದ ರಾಜರನ್ನು ತನ್ನ ಕೃತಿಗಳಲ್ಲಿ  ಉಲ್ಲೇಖಿಸಿದ್ದಾನೆ.

ಪೂರಕ ಮಾಹಿತಿ

  • ಕುಂತಲ

ಪ್ರಾಚೀನ ಕಾಲದಲ್ಲಿ ಪ್ರಖ್ಯಾತಿ ಪಡೆದಿದ್ದ ಒಂದು ಕರ್ಣಾಟಕದಲ್ಲಿದ್ದ ಜನಪದ ರಾಜ್ಯ. ಸಾತವಾಹನ ಮನೆತನದ ಒಬ್ಬ ರಾಜ ಕುಂತಲ ವಿಷಯದಲ್ಲಿ ಹುಟ್ಟಿದ್ದರಿಂದ ಇವನಿಗೆ ಕುಂತಲ ಶಾತಕರ್ಣಿ ಎಂಬ ಹೆಸರಿತ್ತೆಂದು ತಿಳಿದು ಬಂದಿದೆ. 4-5ನೆಯ ಶತಮಾನಗಳ ವಾಕಾಟಕದ ಶಾಸನಗಳಲ್ಲಿ ಕುಂತಳದ ಉಲ್ಲೇಖವಿದೆ. ಮಾನಾಂಕನೆಂಬ ರಾಷ್ಟ್ರಕೂಟ ಅರಸನು 5ನೆಯ ಶತಮಾನದಲ್ಲಿ ಕುಂತಳ ದೇಶವನ್ನು ಆಳುತಿದ್ದ. 6ನೆಯ ಶತಮಾನದ ವರಾಹಮಿಹಿರನ ಬೃಹತ್‍ಸಂಹಿತೆಯಲ್ಲಿಯೂ ಇದರ ಹೆಸರು ಉಕ್ತವಾಗಿದೆ. ಕುಂತಲವಿಷಯ ಕರ್ಣಾಟಧರಾ ಮಂಡಲದ ಮಧ್ಯದಲ್ಲಿತ್ತೆಂದು ಹಂಯ ಒಂದು ಶಾಸನ ಹೇಳುತ್ತದೆ. ಕನ್ನಡ ನಾಡಿನಲ್ಲಿ ದೊರೆತ 10ನೆಯ ಶತಮಾನದಿಂದೀಚಿನ ಶಾಸನಗಳಿಂದ ಶಿವಮೊಗ್ಗೆಯಿಂದ ಉತ್ತರಕ್ಕೆ Wಟz(ವಾಟಕದ) ಮೇಲಿನ ಕರ್ಣಾಟಕದ ಎಲ್ಲ ಜಿಲ್ಲಗಳೂ ಕುಂತಳ ದೇಶಕ್ಕೆ ಸೇರಿದ್ದುವೆಂದು ವ್ಯಕ್ತವಾಗುತ್ತದೆ. ಇದಕ್ಕೆ ಶಾಸನಗಳಲ್ಲಿ ಕುಂತಲ ಸಪ್ತಾರ್ಥಲಕ್ಷ (ಏಳೂವರೆ ಲಕ್ಷ ಗ್ರಾಮಗಳನ್ನೊಳಗೊಂಡ ದೇಶ) ಎಂಬ ಹೆಸರಿದೆ. ಚಾಳುಕ್ಯರು ಕಲ್ಯಾಣ ರಾಜಧಾನಿಯಿಂದ ಈ ದೇಶವನ್ನು ಅಳುತಿದ್ದರು. ಮೇಲೆ ಹೇಳಿರುವ ರಾಷ್ಟ್ರಕೂಟ ಮಾನಾಂಕನ ರಾಜಧಾನಿಯಾಗಿದ್ದ ಮಾನಪುರ ಈಗಿನ ಸಾತಾರಾ ಜಿಲ್ಲೆಯಲ್ಲಿರುವ ಮಾಣ್ ಎಂಬುದು. ಅದ್ದರಿಂದ ಸಾತಾರಾ ಜಿಲ್ಲೆಯವರೆಗಾದರೂ ಕುಂತಳ ದೇಶ ವ್ಯಾಪಿಸಿತ್ತೆಂಬುದು ಸ್ಪಷ್ಟ. ಅಶ್ಮPಕ್ ಮತ್ತು ದರ್ಭದ ರಾಜರುಗಳನ್ನು ಸೋಲಿಸಿದುದಾಗಿ ಮಾನಾಂಕ ಹೇಳಿಕೊಂಡಿರುವುದರಿಂದಲೂ ದರ್ಭದ ಒಡೆಯರಾಗಿದ್ದ ವಾಕಾಟಕರು ಕುಂತಳ ರಾಜರನ್ನು ಜೈಸಿರುವುದಾಗಿ ಕೇಳಿಕೊಂಡಿರುವುದರಿಂದಲೂ ಕೂಂತಲ ರಾಜ ಅಶ್ಮದ (ಈಗಿನ ಅಹಮದ್ ನಗರ ಮತ್ತು ಬೀದರ ಜಿಲ್ಲೆಗಳು) ಮತ್ತು ದರ್ಭಗಳಿಗೆ ನೆರೆ ರಾಜ್ಯವಾಗಿದ್ದಿರಬೇಕು. ಸೊಡ್ಡಲ ದೇವನೆಂಬ ಸಂಸ್ಕøತಕವಿ ತನ್ನ 'ಉದಯ ಸುಂದರಿ'ಯಲ್ಲಿ ಗೋದಾವರಿ ತಿರದ ಪ್ರತಿಷ್ಠಾನ (ಈಗಿನ ಔರಂಗಾಬಾದ್ ಜಿಲ್ಲೆಯ ಪ್ಶೆಠಣ) ಕುಂತಲದ ರಾಜಧಾನಿಯಾಗಿತ್ತೆಂದು ಹೇಳಿದ್ದಾನೆ.(ಎನ್.ಎಲ್.ಆರ್.)

ಆಧಾರಗಳು

Tags:

ಆಂಧ್ರ ಪ್ರದೇಶಕರ್ನಾಟಕಚೋಳ ವಂಶತಾಳಗುಂದ ಶಾಸನದಖ್ಖನ್ ಪೀಠಭೂಮಿಪಾಂಡ್ಯ ರಾಜವಂಶಮೈಸೂರು ರಾಜ್ಯ

🔥 Trending searches on Wiki ಕನ್ನಡ:

ಹರಿಹರ (ಕವಿ)ದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಅಶ್ವತ್ಥಾಮಸಂಸ್ಕೃತಿಪ್ರಜಾವಾಣಿನಾಗವರ್ಮ-೧ದುಂಡು ಮೇಜಿನ ಸಭೆ(ಭಾರತ)ಕಲ್ಯಾಣಿನದಿಹಣಕಾಸುಹಲ್ಮಿಡಿಬುಧಎರಡನೇ ಮಹಾಯುದ್ಧಭಾರತೀಯ ಸಂವಿಧಾನದ ತಿದ್ದುಪಡಿಜಯಮಾಲಾನಾಥೂರಾಮ್ ಗೋಡ್ಸೆಜಾನಪದಭರತ-ಬಾಹುಬಲಿಕಂದಮಾಧ್ಯಮಪಾಂಡವರುಯುಗಾದಿಸೋಮನಾಥಪುರಪುನೀತ್ ರಾಜ್‍ಕುಮಾರ್ಸರ್ವೆಪಲ್ಲಿ ರಾಧಾಕೃಷ್ಣನ್ಪಂಚತಂತ್ರಪ್ರಾಚೀನ ಈಜಿಪ್ಟ್‌ಜನಪದ ಕಲೆಗಳುಕ್ಯಾನ್ಸರ್ಮಹಾಭಾರತಕೈಗಾರಿಕೆಗಳುಕಲೆಇನ್ಸ್ಟಾಗ್ರಾಮ್ಕುರುಬಪ್ಲೇಟೊವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಗೋವಿಂದ ಪೈಚಾಣಕ್ಯಜಾತ್ರೆಡಿಸ್ಲೆಕ್ಸಿಯಾರಾಣಿ ಅಬ್ಬಕ್ಕಕೆ. ಎಸ್. ನರಸಿಂಹಸ್ವಾಮಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಹಣ್ಣುನೇರಳೆಚದುರಂಗದ ನಿಯಮಗಳುರಾಮ ಮನೋಹರ ಲೋಹಿಯಾದ್ರಾವಿಡ ಭಾಷೆಗಳುಸರ್ಕಾರೇತರ ಸಂಸ್ಥೆಚಿಕ್ಕಮಗಳೂರುಜಯಚಾಮರಾಜ ಒಡೆಯರ್ಅಕ್ಷಾಂಶ ಮತ್ತು ರೇಖಾಂಶನುಡಿ (ತಂತ್ರಾಂಶ)ಕನ್ನಡದಲ್ಲಿ ವಚನ ಸಾಹಿತ್ಯಮಹಮದ್ ಬಿನ್ ತುಘಲಕ್ದಾಸವಾಳಅರ್ಕಾವತಿ ನದಿಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿರನ್ನಕರ್ನಾಟಕದ ಶಾಸನಗಳುಅಡೋಲ್ಫ್ ಹಿಟ್ಲರ್ಭಾರತದ ಬಂದರುಗಳುಸೂರ್ಯ (ದೇವ)ಜಿ.ಪಿ.ರಾಜರತ್ನಂಕಲಬುರಗಿಕನ್ನಡಮಹಾತ್ಮ ಗಾಂಧಿಧರ್ಮರಾಯ ಸ್ವಾಮಿ ದೇವಸ್ಥಾನಪತ್ರವಚನಕಾರರ ಅಂಕಿತ ನಾಮಗಳುಸೀತೆಶ್ರೀರಂಗಪಟ್ಟಣರಾಮಕನ್ನಡ ರಾಜ್ಯೋತ್ಸವಹಲಸುಕಂಸಾಳೆಭಗವದ್ಗೀತೆ🡆 More