ಆಶ್ರಿತ ರಾಜ್ಯಗಳು

ಸಂಪುರ್ಣವಾಗಿ ಸ್ವಂತ ಆಡಳಿತಾಧಿಕಾರವಿಲ್ಲದ ಪ್ರದೇಶಗಳು (ಡಿಪೆಂಡೆನ್ಸೀಸ್).

ಸಾಮಾನ್ಯವಾಗಿ ಆಳುವ ರಾಷ್ಟ್ರದ ಪ್ರದೇಶವೂ ಆಶ್ರಿತರಾಜ್ಯದ ಪ್ರದೇಶವೂ ಪರಸ್ಪರ ಭಿನ್ನವಾಗಿಯೂ ದೂರದೂರದಲ್ಲೂ ಇದ್ದು, ಈ ಎರಡು ಪ್ರದೇಶಗಳಲ್ಲಿ ವಾಸಿಸುವ ಜನರು ಭಿನ್ನ ಬುಡಕಟ್ಟುಗಳಿಗೆ ಸೇರಿದವರಾಗಿರುತ್ತಾರೆ. ಆಶ್ರಿತ ಪ್ರದೇಶಗಳ ಮೇಲೆ ಆಳುವ ರಾಷ್ಟ್ರಗಳು ಹೊಂದಿರುವ ಹತೋಟಿ ಒಂದೇ ಸಮನಾಗಿರುವುದಿಲ್ಲ. ಕೆಲವು ಆಶ್ರಿತರಾಜ್ಯಗಳ ಆಡಳಿತದ ಸಂಪುರ್ಣ ಹೊಣೆಯನ್ನೆಲ್ಲ ಆಳುವ ರಾಷ್ಟ್ರವೇ ವಹಿಸಬಹುದು; ಆಳುವ ರಾಷ್ಟ್ರದ ಸರ್ಕಾರದಿಂದ ನಿಯೋಜಿತರಾಗಿ ಬಂದ ಅಧಿಕಾರಿಗಳೇ ಆ ಪ್ರದೇಶಗಳ ಆಡಳಿತ ನಿರ್ವಹಿಸಬಹುದು. ಇನ್ನೂ ಕೆಲವು ಪ್ರದೇಶಗಳಲ್ಲಿ ಅಲ್ಲಿನ ಜನರು ಸ್ಥಳೀಯ ನಾಯಕರ ಮೂಲಕವಾಗಿ ಪ್ರಭುತ್ವ ನಡೆಸಬಹುದು. ಇಂಥ ಆಳಿಕೆ ಪರೋಕ್ಷ. ಇನ್ನೂ ಕೆಲವು ಪ್ರದೇಶಗಳಲ್ಲಿ ಜನರ ಪ್ರಾತಿನಿಧ್ಯ ಹೊಂದಿದ ಆಡಳಿತ ವ್ಯವಸ್ಥೆ ಏರ್ಪಟ್ಟಿರಬಹುದು. ಇಂಥ ಪ್ರದೇಶಗಳಲ್ಲಿ ಆಡಳಿತ ನಡೆಸುವ ಸರ್ಕಾರಗಳಿಗೆ ಅಲ್ಲಿನ ಆಂತರಿಕ ವ್ಯವಹಾರಗಳಲ್ಲಿ ಬಹಳಮಟ್ಟಿಗೆ ಸ್ವಯಮಾಡಳಿತಾಧಿಕಾರವಿರುತ್ತದೆ. ಆಶ್ರಿತರಾಜ್ಯವನ್ನು ವಸಾಹತು ಎಂಬ ಅರ್ಥದಲ್ಲೂ ಬಳಸುವುದುಂಟು. ಆದರೆ ಎರಡಕ್ಕೂ ಸೂಕ್ಷ್ಮವ್ಯತ್ಯಾಸಗಳುಂಟು. ಆಶ್ರಿತ ರಾಜ್ಯಗಳ ಹಿತರಕ್ಷಣೆ ಮಾಡಿ, ಅವುಗಳ ಮೇಲ್ವಿಚಾರಣೆ ನಡೆಸುವ ಕೆಲಸ ಈಗ ಹೆಚ್ಚು ಹೆಚ್ಚಾಗಿ ವಿಶ್ವಸಂಸ್ಥೆಯ ಹೊಣೆಯಾಗುತ್ತಿದೆ.

Tags:

ವಿಶ್ವಸಂಸ್ಥೆ

🔥 Trending searches on Wiki ಕನ್ನಡ:

ಮಾನವ ಹಕ್ಕುಗಳುಸಾರಾ ಅಬೂಬಕ್ಕರ್ಚದುರಂಗದ ನಿಯಮಗಳುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಶಬ್ದವೇಧಿ (ಚಲನಚಿತ್ರ)ಎಕರೆಹಣಕಾಸುಶಾಂತಲಾ ದೇವಿಬೆಂಗಳೂರುಸ್ಟಾರ್‌ಬಕ್ಸ್‌‌ಸರಸ್ವತಿ ಪ್ರಭಾ ಕೊಂಕಣಿ ಮಾಸಿಕನುಡಿ (ತಂತ್ರಾಂಶ)ಗಾಳಿ/ವಾಯುಎಚ್ ಎಸ್ ಶಿವಪ್ರಕಾಶ್ಯಣ್ ಸಂಧಿಜನಪದ ಕರಕುಶಲ ಕಲೆಗಳುಗಣರಾಜ್ಯೋತ್ಸವ (ಭಾರತ)ಚಂದ್ರಗುಪ್ತ ಮೌರ್ಯಪೋಕ್ಸೊ ಕಾಯಿದೆಕರ್ನಾಟಕ ವಿಧಾನ ಪರಿಷತ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಜಾಗತಿಕ ತಾಪಮಾನಜಾತ್ರೆದಂತಿದುರ್ಗಓಂ ನಮಃ ಶಿವಾಯಹೆಚ್.ಡಿ.ಕುಮಾರಸ್ವಾಮಿರಾಷ್ಟ್ರೀಯ ಮತದಾರರ ದಿನಊಟಬಾಲ್ಯ ವಿವಾಹಕೈಗಾರಿಕಾ ನೀತಿದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಆರ್ಯಭಟ (ಗಣಿತಜ್ಞ)ನರೇಂದ್ರ ಮೋದಿಸಬಿಹಾ ಭೂಮಿಗೌಡಪೊನ್ನಅಖ್ರೋಟ್ಬಾಗಿಲುಸಂಕಲ್ಪಕುಮಾರವ್ಯಾಸಕನ್ನಡದಲ್ಲಿ ವಚನ ಸಾಹಿತ್ಯಖಾತೆ ಪುಸ್ತಕರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಆಮ್ಲ ಮಳೆಅಶ್ವತ್ಥಾಮಸಿ ಎನ್ ಮಂಜುನಾಥ್ಭಾರತದ ಆರ್ಥಿಕ ವ್ಯವಸ್ಥೆಕನ್ನಡ ಚಂಪು ಸಾಹಿತ್ಯಸಂಭವಾಮಿ ಯುಗೇ ಯುಗೇವಿಜಯದಾಸರುದೇವರ/ಜೇಡರ ದಾಸಿಮಯ್ಯಚಾಮರಾಜನಗರಸಾಮಾಜಿಕ ಸಮಸ್ಯೆಗಳುಬುಡಕಟ್ಟುಭಾರತದಲ್ಲಿನ ಶಿಕ್ಷಣಸಮಾಜವಾದಮತದಾನ (ಕಾದಂಬರಿ)ಧರ್ಮವಿಕ್ರಮಾರ್ಜುನ ವಿಜಯದ್ವಿರುಕ್ತಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುತೇಜಸ್ವಿ ಸೂರ್ಯಆಗಮ ಸಂಧಿಸು.ರಂ.ಎಕ್ಕುಂಡಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸುಗ್ಗಿ ಕುಣಿತಕರ್ನಾಟಕ ಲೋಕಾಯುಕ್ತಮಲಬದ್ಧತೆದ.ರಾ.ಬೇಂದ್ರೆಆದಿವಾಸಿಗಳುಪಿತ್ತಕೋಶಶೃಂಗೇರಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮಲೇರಿಯಾಅಶ್ವತ್ಥಮರತ್ರಿಪದಿಭಾರತ🡆 More