ಆಲದ ಮರ

ಇದು ಹಲಸಿನ ಕುಟುಂಬಕ್ಕೆ ಸೇರಿದ (ಮೋರೇಸೀ ಕುಟುಂಬ), ಬೃಹತ್ತಾಗಿ ಬೆಳೆಯುವ ವೃಕ್ಷವಾಗಿದ್ದು ಮೊದಲಿಗೆ ಎಪಿಫೈಟಿಕ್ ಆಗಿ ಜನ್ಮ ತಾಳುತ್ತದೆ.

ಎಪಿಫೈಟಿಕ್ ಅಂದರೆ ಬೇರೊಂದು ಮರದ ಮೇಲೆ ಬಿದ್ದ ಬೀಜ ಹುಟ್ಟಿ ಅಲ್ಲಿಂದ ತನ್ನ ಜೀವನ ಚಕ್ರ ಆರಂಭಿಸುತ್ತದೆ. ಇದು ನಮ್ಮ ದೇಶದ ರಾಷ್ಟ್ರೀಯ ವೃಕ್ಷವಾಗಿದೆ. ಅಶ್ವತ್ಥ ವೃಕ್ಷವೂ ಇದೇ ಜಾತಿಯದ್ದಾಗಿದೆ.

ಆಲದ ಮರ
ಆಲದ ಮರ

ಪರಿಚಯ

  • ಆಲದ ಮರ ಒಮ್ಮೆ ನೆಲದ ಮೇಲೆ ಬೇರು ಬಿಟ್ಟರೆ, ಅದು ನೂರಾರು ವರ್ಷಗಳ ಕಾಲ ಬೆಳೆದು ಬದುಕ ಬಲ್ಲದು. ಆಲದ ಮರ ಬೆಳೆದಂತೆ ಅನೇಕ ಬಿಳಲುಗಳನ್ನು ಹೊಂದಿ ವಿಸ್ತಾರವಾಗುತ್ತಾ, ಸುಮಾರು ಒಂದು ಎಕರೆಯಷ್ಟು ಸ್ಥಳವನ್ನು ಅದು ಆಕ್ರಮಿಸಿಕೊಂಡು ಬಿಡುತ್ತದೆ.
  • ಮನುಷ್ಯನ ಜೀವನಕ್ಕೂ ಆಲದ ಮರಕ್ಕೂ ಅವಿನಾಭಾವ ಸಂಬಂಧವಿದೆ. ಸಾಮಾನ್ಯವಾಗಿ ತಂದೆಯನ್ನು ಆಲದ ಮರಕ್ಕೆ ಹೋಲಿಸುವರು. ಏಕೆಂದರೆ ಇದು ಬಹುಪಯೋಗಿ ಮರ. ಹಾಗಾಗಿ ಮನುಷ್ಯರ ವಂಶಾವಳಿಯನ್ನು ಆಲದ ಮರಕ್ಕೆ ಹೋಲಿಸುತ್ತಾರೆ. 'ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ' ಎಂಬ ನುಡಿಗಟ್ಟು ಪ್ರಚಲಿತದಲ್ಲಿದೆ.
  • ಇದು ಸು. 100' ಎತ್ತರ ಬೆಳೆದು ಒಳ್ಳೆ ಹರವಾಗಿ ಹಬ್ಬುತ್ತದೆ. ಮರದ ಟೊಂಗೆಗಳಿಂದ ಜೋತುಬಿದ್ದ ಬಿಳಲುಗಳು ಅಥವಾ ಜಡೆ ಬೇರುಗಳು ಟೊಂಗೆಗಳಿಗೆ ಕಂಬಗಳಂತೆ ಆಧಾರ ಕೊಟ್ಟು ಅದರ ಹಬ್ಬುವಿಕೆಗೆ ಸಹಾಯ ಮಾಡುತ್ತವೆ. ಈ ಮರಗಳನ್ನು ದಾರಿಯುದ್ದಕ್ಕೂ ನೆರಳಿಗಾಗಿ ಬಳಸುತ್ತಾರೆ.
  • ಇದರ ಎಲೆ ಆಡು, ಕುರಿ, ದನಕರುಗಳಿಗೆ ಒಳ್ಳೆಯ ಆಹಾರ. ಕಾಗದ ತಯಾರಿಕೆಗೆ ಬೇಕಾಗುವ ಪಲ್ಪನ್ನು ತಯಾರಿಸಲು ಇದರ ಕಟ್ಟಿಗೆಯನ್ನು ಬಳಸುವರು. ಈ ಮರ ಸೌದೆಗೆ ಉಪಯೋಗವಾಗುತ್ತದೆ. ಆಲದ ಮರದ ಹಾಲನ್ನು ಹಲ್ಲುನೋವಿನ ಶಮನಕ್ಕೂ ಗಂಟುಕಟ್ಟಿದ ಹುಣ್ಣುಗಳಿಗೆ, ಬೆಚ್ಚಾರದಂತೆ ಬಾವು ಬಂದ ಭಾಗಕ್ಕೆ ಲೇಪವಾಗಿಯೂ ಉಪಯೋಗಿಸುವುದುಂಟು.
  • ಚಿಗುರಿನ ಕಷಾಯವನ್ನು ಭೇದಿಗೆ ಔಷಧವಾಗಿ ಕೊಡುತ್ತಾರೆ. ಹಾಲನ್ನು ಸಂಧಿವಾತಕ್ಕೆ ಉಪಯೋಗಿಸುತ್ತಾರೆ. ಆಲದ ಹಣ್ಣು ಅಳಿಲುಗಳಿಗೆ ತುಂಬಾ ಪ್ರಿಯವಾದ ಆಹಾರ. ಆಲದ ಗಿಡವನ್ನು ಕುಬ್ಜವಾಗಿಸಿ (ಬೋನ್ಸಾಯ್) ಅಲಂಕಾರಿಕ ಗಿಡವಾಗಿಯೂ ಬಳಸುತ್ತಾರೆ.

Tags:

ಕುಟುಂಬದೇಶ

🔥 Trending searches on Wiki ಕನ್ನಡ:

ಕನ್ನಡ ಸಾಹಿತ್ಯ ಪರಿಷತ್ತುಬಹಮನಿ ಸುಲ್ತಾನರುಮತದಾನಬಾಹುಬಲಿಗೀತಾ (ನಟಿ)ಹೆಸರುಕ್ರೀಡೆಗಳುಹನುಮಾನ್ ಚಾಲೀಸರಮ್ಯಾದ್ವಿಗು ಸಮಾಸಯೋಗಸತ್ಯ (ಕನ್ನಡ ಧಾರಾವಾಹಿ)ಅಂತರ್ಜಲಸಿದ್ದಪ್ಪ ಕಂಬಳಿಮಡಿವಾಳ ಮಾಚಿದೇವವಿಚ್ಛೇದನವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಚಂದ್ರಯಾನ-೩ಕ್ಯಾರಿಕೇಚರುಗಳು, ಕಾರ್ಟೂನುಗಳುಮಲ್ಲಿಕಾರ್ಜುನ್ ಖರ್ಗೆಸಾವಯವ ಬೇಸಾಯಜಲ ಮಾಲಿನ್ಯಏಡ್ಸ್ ರೋಗಪ್ರಾಥಮಿಕ ಶಾಲೆಕನ್ನಡಪ್ರಭತಲಕಾಡುಭಾರತ ಸಂವಿಧಾನದ ಪೀಠಿಕೆಮುದ್ದಣಪೆರಿಯಾರ್ ರಾಮಸ್ವಾಮಿದೇವನೂರು ಮಹಾದೇವಮೂಲಭೂತ ಕರ್ತವ್ಯಗಳುಬಯಲಾಟಮಡಿಕೇರಿಸಮಾಜಶಾಸ್ತ್ರಉತ್ತರ ಕನ್ನಡಭಾರತೀಯ ಮೂಲಭೂತ ಹಕ್ಕುಗಳುಕರ್ನಾಟಕದ ಏಕೀಕರಣಹಿಂದೂ ಮಾಸಗಳುಸಂವಿಧಾನರಾಜಕೀಯ ಪಕ್ಷಕ್ರಿಯಾಪದಕುವೆಂಪುಧರ್ಮಸ್ಥಳಭಾರತದಲ್ಲಿನ ಜಾತಿ ಪದ್ದತಿವಿರಾಮ ಚಿಹ್ನೆಅಸ್ಪೃಶ್ಯತೆಕನಕದಾಸರುದೇವತಾರ್ಚನ ವಿಧಿಭಾರತದ ಆರ್ಥಿಕ ವ್ಯವಸ್ಥೆಭಾರತೀಯ ಸ್ಟೇಟ್ ಬ್ಯಾಂಕ್ಕುಮಾರವ್ಯಾಸಬಾಲಕಾರ್ಮಿಕಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಸಜ್ಜೆರಾಹುಲ್ ಗಾಂಧಿಸಂಭೋಗದಿಯಾ (ಚಲನಚಿತ್ರ)ಚಾಲುಕ್ಯಜಪಾನ್ಶಿವಮೊಗ್ಗಕನ್ನಡದಲ್ಲಿ ಗಾದೆಗಳುಜ್ಞಾನಪೀಠ ಪ್ರಶಸ್ತಿಡಿ.ವಿ.ಗುಂಡಪ್ಪಮಲೇರಿಯಾಜಾತ್ರೆಲಕ್ಷ್ಮೀಶದ್ವಂದ್ವ ಸಮಾಸಭೂಕಂಪಹಾಸನ ಜಿಲ್ಲೆಸುಮಲತಾಕರ್ನಾಟಕದ ಹಬ್ಬಗಳುಜಶ್ತ್ವ ಸಂಧಿಹೆಚ್.ಡಿ.ದೇವೇಗೌಡದ್ಯುತಿಸಂಶ್ಲೇಷಣೆಮಾನವನಲ್ಲಿ ನಿರ್ನಾಳ ಗ್ರಂಥಿಗಳುಅಡಿಕೆಬೇಲೂರುಮೋಳಿಗೆ ಮಾರಯ್ಯ🡆 More