ಆಗಮೆಮ್ನಾನ್

ಆಗಮೆಮ್ನಾನ್ ಗ್ರೀಕ್ ಪುರಾಣಗಳಲ್ಲಿ ಪ್ರಸಿದ್ಧನಾಗಿರುವ ಮೈಸಿನೀ ದೇಶದ ದೊರೆ.

ಮೆನೆಲಾಸ್‍ನ ಸೋದರ. ಟ್ರಾಯ್ ಮೇಲಿನ ಯುದ್ಧದಲ್ಲಿ ಗ್ರೀಕರ ನಾಯಕ. ತಂದೆ ಅಟ್ರಿಯಸ್ (ಕೆಲವರ ಅಭಿಪ್ರಾಯದಲ್ಲಿ ಪ್ಲೀಸ್ಥೆನೀಸ್). ಮೆನೆಲಾಸ್‍ನ ಹೆಂಡತಿಯಾದ ಹೆಲೆನ್ನಳನ್ನು ಟ್ರಾಯ್ ರಾಜ ಪ್ಯಾರಿಸ್ ಅಪಹರಿಸಿಕೊಂಡು ಹೋಗಲಾಗಿ ಆಗಮೆಮ್ನಾನ್ ಸಹೋದರನೊಡನೆ ಟ್ರಾಯ್ ಮೇಲೆ ಯುದ್ಧ ಹೂಡಿದ. ದಂಡೆತ್ತಿ ಹೋಗಬೇಕಾದ ದಿನ ವಿರುದ್ಧ ಮಾರುತಗಳನ್ನೆಬ್ಬಿಸಿದ ಅರ್ಟೆಮಿಸ್ ದೇವತೆಯ ಉಪಶಮನಕ್ಕಾಗಿ ತನ್ನ ಮಗಳಾದ ಇಫಿಜೀನಿಯಳನ್ನು ಬಲಿಕೊಟ್ಟ. ಯುದ್ಧದ ನಡುವೆ ಅಕಿಲೀಸನೊಡನೆ ಮನಸ್ತಾಪ ಬೆಳೆದು ಅವನೊಡನೆ ಹೊಡೆದಾಡಿದ. ಹತ್ತು ವರ್ಷ ನಡೆದ ಘೋರಯುದ್ಧದಲ್ಲಿ ಗೆದ್ದು ಬಂದಿಯಾದ ಕೆಸ್ಸಾಂಡ್ರಳೊಂದಿಗೆ ಸ್ವದೇಶಕ್ಕೆ ಹಿಂತಿರುಗಿದಾಗ ಅವನ ಹೆಂಡತಿ ಕ್ಲೈಟಮ್ನೆಸ್ಟ್ರ ತನ್ನ ಪ್ರಿಯನೊಂದಿಗೆ ಪಿತೂರಿ ಹೂಡಿ ಅವನನ್ನು ಕೊಲೆ ಮಾಡಿದಳು. ಆಗಮೆಮ್ನಾನನ ಮಕ್ಕಳು ತಂದೆಯ ಕೊಲೆಗೆ ಸರಿಯಾದ ಪ್ರತೀಕಾರ ಮಾಡಿದ ಕಥೆ ಮುಂದಿನದು. ಈ ಪ್ರಸಂಗ ಹೋಮರನ ಈಲಿಯಡ್ ಮಹಾಕಾವ್ಯದಲ್ಲಿದ್ದು ಮುಂದೆ ರಚನೆಗೊಂಡ ಅನೇಕ ರುದ್ರನಾಟಕಗಳಿಗೆ ವಸ್ತುವಾಗಿದೆ.

ಆಗಮೆಮ್ನಾನ್
The Mask of Agamemnon which was discovered by Heinrich Schliemann in 1876 at Mycenae, now believed to pre-date the legendary Trojan War.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Agamemnon - Ancient History Encyclopedia

ಆಗಮೆಮ್ನಾನ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಪುರಾತತ್ತ್ವ ಶಾಸ್ತ್ರಬ್ರಾಟಿಸ್ಲಾವಾಸಾರಜನಕಶ್ರೀ ರಾಘವೇಂದ್ರ ಸ್ವಾಮಿಗಳುಜೇನು ಹುಳುಎಚ್. ಜೆ . ಲಕ್ಕಪ್ಪಗೌಡಆಂಗ್‌ಕರ್ ವಾಟ್ಪುನೀತ್ ರಾಜ್‍ಕುಮಾರ್ಆರ್ಥಿಕ ಬೆಳೆವಣಿಗೆಶ್ರೀವಿಜಯಯುನೈಟೆಡ್ ಕಿಂಗ್‌ಡಂಭಾರತದ ಬಂದರುಗಳುಮಹಾವೀರಯುವರತ್ನ (ಚಲನಚಿತ್ರ)ವರ್ಣತಂತು (ಕ್ರೋಮೋಸೋಮ್)೨೦೧೬ ಬೇಸಿಗೆ ಒಲಿಂಪಿಕ್ಸ್ನಿರುದ್ಯೋಗಹಸ್ತಪ್ರತಿಪುತ್ತೂರುಶಿಕ್ಷಕಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಚಾಮುಂಡರಾಯಹಸಿರುಮನೆ ಪರಿಣಾಮಹೃದಯಅಮೀಬಾದ್ರಾವಿಡ ಭಾಷೆಗಳುಜಿ.ಪಿ.ರಾಜರತ್ನಂಕರ್ನಾಟಕ ಲೋಕಾಯುಕ್ತಭಾರತದ ಗವರ್ನರ್ ಜನರಲ್ಶಿರಾಭಾರತದಲ್ಲಿ ಬ್ರಿಟಿಷ್ ಆಳ್ವಿಕೆಭಾರತವಿಕ್ರಮಾದಿತ್ಯ ೬ತಂಬಾಕು ಸೇವನೆ(ಧೂಮಪಾನ)ದಕ್ಷಿಣ ಭಾರತದ ನದಿಗಳುಚಂಪೂಮಾನವನ ನರವ್ಯೂಹಆರ್ಯಭಟ (ಗಣಿತಜ್ಞ)ಮತದಾನಕರ್ನಾಟಕದ ಏಕೀಕರಣRX ಸೂರಿ (ಚಲನಚಿತ್ರ)ವಿರಾಟ್ ಕೊಹ್ಲಿಪ್ಯಾರಾಸಿಟಮಾಲ್ಕರಗಕರ್ನಾಟಕದಲ್ಲಿ ಬ್ಯಾಂಕಿಂಗ್ಲಾರ್ಡ್ ಡಾಲ್ಹೌಸಿಮೆಣಸಿನಕಾಯಿಗಣರಾಜ್ಯೋತ್ಸವ (ಭಾರತ)ಕಲಬುರಗಿಭಗತ್ ಸಿಂಗ್ಭಾರತೀಯ ಭೂಸೇನೆದ್ಯುತಿಸಂಶ್ಲೇಷಣೆಭಾರತದ ಮಾನವ ಹಕ್ಕುಗಳುಯು.ಆರ್.ಅನಂತಮೂರ್ತಿಅಳತೆ, ತೂಕ, ಎಣಿಕೆತರಂಗದಾಸ ಸಾಹಿತ್ಯಗ್ರೀಸ್ಆಸ್ಟ್ರೇಲಿಯಗುಡುಗುನಾಗಮಂಡಲ (ಚಲನಚಿತ್ರ)ಸಿದ್ದಲಿಂಗಯ್ಯ (ಕವಿ)ಸವದತ್ತಿಪೃಥ್ವಿರಾಜ್ ಚೌಹಾಣ್ಪೌರತ್ವಗಾದೆಹಂಪೆದ್ವಿರುಕ್ತಿಉಪನಯನಪಾಲುದಾರಿಕೆ ಸಂಸ್ಥೆಗಳುಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಬಿದಿರುಹ್ಯಾಲಿ ಕಾಮೆಟ್ಗ್ರಾಮಗಳುಉಪ್ಪಿನ ಸತ್ಯಾಗ್ರಹಆರೋಗ್ಯರಾಷ್ಟ್ರಕವಿವಚನ ಸಾಹಿತ್ಯ🡆 More