ಅವನಿ ಲೇಖರ: ಭಾರತೀಯ ಶೂಟಿಂಗ್ ಕ್ರೀಡಾಪಟು

ಅವನಿ ಲೇಖರ (ಜನನ 8 ನವೆಂಬರ್ 2001) ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ರೈಫಲ್ ಶೂಟರ್ .

ಟೋಕಿಯೊ ೨೦೨೦ ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್‌ನಲ್ಲಿ ಚಿನ್ನದ ಪದಕ ಮತ್ತು 50 ಮೀಟರ್ ಏರ್ ರೈಫಲ್ ಸ್ಟಾಂಡಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಲೇಖರ ಪ್ರಸ್ತುತ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 (ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ ರ್ಯಾಂಕಿಂಗ್ಸ್) ನಲ್ಲಿ ವಿಶ್ವ ನಂ ೫ . ಇವರು ೨೦೨೧ರ ವರ್ಲ್ಡ್ ಪ್ಯಾರಾ ಶೂಟಿಂಗ್ ವರ್ಲ್ಡ್ ಕಪ್ ನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ . ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಅವಳನ್ನು ಗೋಸ್ಪೋರ್ಟ್ಸ್ ಫೌಂಡೇಶನ್ ಬೆಂಬಲಿಸಿದೆ. ಒಂದೇ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಇವರು . ರಾಜಸ್ಥಾನ ಸರ್ಕಾರವು ಆಕೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಎಸಿಎಫ್) ಹುದ್ದೆಯನ್ನು ನೀಡಿ ಗೌರವಿಸಿದೆ.

ಅವನಿ ಲೇಖರ
ಅವನಿ ಲೇಖರ: ಪ್ಯಾರಾಲಿಂಪಿಕ್ಸಿನಲ್ಲಿ ಸಾಧನೆ, ವೈಯುಕ್ತಿಕ ಬದುಕು, ಉಲ್ಲೇಖಗಳು
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಅವನಿ ಲೇಖರ
ಜನನ (2001-11-08) ೮ ನವೆಂಬರ್ ೨೦೦೧ (ವಯಸ್ಸು ೨೨)
ಜೈಪುರ, ರಾಜಸ್ಥಾನ, ಭಾರತ
ಎತ್ತರ5 ft 3 in (160 cm)
Sport
ದೇಶಭಾರತ
ಕ್ರೀಡೆಶೂಟಿಂಗ್
ಸ್ಪರ್ಧೆಗಳು(ಗಳು)Air Rifle SH1
ತರಬೇತುದಾರರುಸುಮಾ ಸಿದ್ಧಾರ್ಥ ಶಿರೂರ್
Achievements and titles
ಪ್ಯಾರಲಂಪಿಕ್ ಫ಼ೈನಲ್‌ಗಳು೨೦೨೦ರ ಪ್ಯಾರಾಲಿಂಪಿಕ್ಸ್ : 10m air rifle standing SH1 – Gold

ಪ್ಯಾರಾಲಿಂಪಿಕ್ಸಿನಲ್ಲಿ ಸಾಧನೆ

ಲೇಖರ ಪ್ಯಾರಾಲಿಂಪಿಕ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ. ಲೇಖರ ೨೦೨೦ ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕವನ್ನು ಗೆದ್ದರು. ಅಂತಿಮ ಈವೆಂಟ್‌ನಲ್ಲಿ 249.6 ಪಾಯಿಂಟ್‌ಗಳ ಸ್ಕೋರ್‌ನೊಂದಿಗೆ, ಯುವ ಶೂಟರ್ ಪ್ಯಾರಾಲಿಂಪಿಕ್ ದಾಖಲೆಯನ್ನು ನಿರ್ಮಿಸಿದರು ಮತ್ತು ವಿಶ್ವ ದಾಖಲೆಯನ್ನು ಸರಿಗಟ್ಟಿದರು. ಅವರು ೨೦೧೫ ರಲ್ಲಿ ಮಾಜಿ ಒಲಿಂಪಿಕ್ ಚಾಂಪಿಯನ್ ಅಭಿನವ್ ಬಿಂದ್ರಾ ಅವರಿಂದ ಸ್ಫೂರ್ತಿ ಪಡೆದರು ಮತ್ತು ನಂತರ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ೩ ಸೆಪ್ಟೆಂಬರ್ ೨೦೨೧ ರಂದು, ಮಹಿಳೆಯರ 50 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ಕಂಚು ಗೆದ್ದ ನಂತರ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾಲಿಂಪಿಯನ್ ಆದರು.

ಅವರು ಪ್ರಸ್ತುತ ಭಾರತೀಯ ಶೂಟರ್ ಸುಮಾ ಶಿರೂರ್ ಅವರಿಂದ ತರಬೇತಿ ಪಡೆದಿದ್ದಾರೆ.

ವೈಯುಕ್ತಿಕ ಬದುಕು

೨೦೧೨ ರಲ್ಲಿ ನಡೆದ ಕಾರು ಅಪಘಾತದ ನಂತರ ೧೧ ನೇ ವಯಸ್ಸಿನಲ್ಲಿ ಆಕೆಗೆ ಸಂಪೂರ್ಣ ಪಾರ್ಶ್ವವಾಯು ಉಂಟಾಯಿತು . ನಂತರ ಅವರ ತಂದೆ ಅವರನ್ನು ಕ್ರೀಡೆಗೆ ಸೇರಲು ಪ್ರೋತ್ಸಾಹಿಸಿದರು. ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆಯುತ್ತಿದ್ದರೂ ಅವರಿಗೆ ಶೂಟಿಂಗಿನಲ್ಲಿ ಆಸಕ್ತಿ ಮೂಡಿ ಆ ಕ್ರೀಡೆಯತ್ತ ಹೊರಳಿದರು. ಅವರು ಪ್ರಸ್ತುತ ಭಾರತದ ರಾಜಸ್ಥಾನದಲ್ಲಿ ಕಾನೂನು ಅಧ್ಯಯನ ಮಾಡುತ್ತಿದ್ದಾರೆ.

ಉಲ್ಲೇಖಗಳು

ಇವನ್ನೂ ನೋಡಿ

ಒಲಂಪಿಕ್ ಕ್ರೀಡಾಕೂಟ

Tags:

ಅವನಿ ಲೇಖರ ಪ್ಯಾರಾಲಿಂಪಿಕ್ಸಿನಲ್ಲಿ ಸಾಧನೆಅವನಿ ಲೇಖರ ವೈಯುಕ್ತಿಕ ಬದುಕುಅವನಿ ಲೇಖರ ಉಲ್ಲೇಖಗಳುಅವನಿ ಲೇಖರ ಇವನ್ನೂ ನೋಡಿಅವನಿ ಲೇಖರ

🔥 Trending searches on Wiki ಕನ್ನಡ:

ಮಾನವ ಹಕ್ಕುಗಳುಮೈಸೂರುಬೆಂಗಳೂರು ಗ್ರಾಮಾಂತರ ಜಿಲ್ಲೆಧಾರವಾಡಕೇಂದ್ರಾಡಳಿತ ಪ್ರದೇಶಗಳುಲಕ್ಷ್ಮೀಶವಿಧಾನ ಸಭೆದಿಕ್ಕುಅಶ್ವತ್ಥಮರಸಂಸ್ಕೃತ ಸಂಧಿಅರ್ಥಶಾಸ್ತ್ರಜೋಡು ನುಡಿಗಟ್ಟುಭಾರತದ ಭೌಗೋಳಿಕತೆಬೆಂಕಿಬಾಲಕಾರ್ಮಿಕಎಂ. ಕೆ. ಇಂದಿರಸೀತಾ ರಾಮಗಾಳಿ/ವಾಯುಪಂಚತಂತ್ರಕೃಷಿಕರ್ನಾಟಕ ಲೋಕಸಭಾ ಚುನಾವಣೆ, 20191935ರ ಭಾರತ ಸರ್ಕಾರ ಕಾಯಿದೆಸಂಚಿ ಹೊನ್ನಮ್ಮಧರ್ಮರಾಯ ಸ್ವಾಮಿ ದೇವಸ್ಥಾನವಿಜಯ್ ಮಲ್ಯಹೊಯ್ಸಳವಿಜಯಪುರಮಾನವನಲ್ಲಿ ನಿರ್ನಾಳ ಗ್ರಂಥಿಗಳುಜೋಗಿ (ಚಲನಚಿತ್ರ)ಮುಪ್ಪಿನ ಷಡಕ್ಷರಿಉಪೇಂದ್ರ (ಚಲನಚಿತ್ರ)ಫೇಸ್‌ಬುಕ್‌ಶಿವಮೊಗ್ಗಭೂಮಿಭಾರತೀಯ ಕಾವ್ಯ ಮೀಮಾಂಸೆಸ್ಯಾಮ್ ಪಿತ್ರೋಡಾತಂತ್ರಜ್ಞಾನದ ಉಪಯೋಗಗಳುಪುರಂದರದಾಸವಡ್ಡಾರಾಧನೆಸಜ್ಜೆಏಕರೂಪ ನಾಗರಿಕ ನೀತಿಸಂಹಿತೆಕೃತಕ ಬುದ್ಧಿಮತ್ತೆತತ್ಪುರುಷ ಸಮಾಸಜಯಪ್ರಕಾಶ್ ಹೆಗ್ಡೆಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭತ್ತಪೆಟ್ರೋಮ್ಯಾಕ್ಸ್ (ಚಲನಚಿತ್ರ)ಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಏಡ್ಸ್ ರೋಗಸುಗ್ಗಿ ಕುಣಿತಕಿತ್ತೂರು ಚೆನ್ನಮ್ಮಶಾಸನಗಳುಬೀಚಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಜಿಡ್ಡು ಕೃಷ್ಣಮೂರ್ತಿಖ್ಯಾತ ಕರ್ನಾಟಕ ವೃತ್ತಮಲ್ಲಿಗೆಹಯಗ್ರೀವಎಕರೆರೇಣುಕವ್ಯಂಜನವಚನಕಾರರ ಅಂಕಿತ ನಾಮಗಳುನರೇಂದ್ರ ಮೋದಿಹೊಯ್ಸಳೇಶ್ವರ ದೇವಸ್ಥಾನಅಕ್ಬರ್ಮುದ್ದಣವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಪರಿಸರ ವ್ಯವಸ್ಥೆಎ.ಎನ್.ಮೂರ್ತಿರಾವ್ಭಕ್ತಿ ಚಳುವಳಿಭಾರತೀಯ ಧರ್ಮಗಳುಕನ್ನಡ ರಾಜ್ಯೋತ್ಸವಸಂವಿಧಾನಅರಬ್ಬೀ ಸಾಹಿತ್ಯಉಪಯುಕ್ತತಾವಾದಖಗೋಳಶಾಸ್ತ್ರ🡆 More