ಅಪಚಯ

ಅಪಚಯ ಅಣುಗಳನ್ನು ಹೆಚ್ಚು ಸಣ್ಣ ಘಟಕಗಳಾಗಿ ವಿಭಜಿಸುವ ಚಯಾಪಚಯ ಮಾರ್ಗಗಳ ಸಮೂಹ.

ಈ ಸಣ್ಣ ಘಟಕಗಳನ್ನು ಶಕ್ತಿ ಬಿಡುಗಡೆಮಾಡಲು ಉತ್ಕರ್ಷಿಸಲಾಗುತ್ತದೆ, ಅಥವಾ ಇತರ ಚಯ ಪ್ರತಿಕ್ರಿಯೆಗಳಲ್ಲಿ ಬಳಸಲಾಗುತ್ತದೆ. ಅಪಚಯವು (ಪಾಲಿಸ್ಯಾಕರೈಡ್‍ಗಳು, ಲಿಪಿಡ್‍ಗಳು, ನ್ಯೂಕ್ಲೆಯಿಕ್ ಆಮ್ಲಗಳು ಮತ್ತು ಪ್ರೋಟೀನ್‍ಗಳಂತಹ) ದೊಡ್ಡ ಅಣುಗಳನ್ನು (ಅನುಕ್ರಮವಾಗಿ ಮೋನೊಸ್ಯಾಕರೈಡ್‍ಗಳು, ನೆಣಾಮ್ಲಗಳು, ನ್ಯೂಕ್ಲಿಯೊಟೈಡ್‍ಗಳು, ಮತ್ತು ಅಮೈನೊ ಆಮ್ಲಗಳಂತಹ) ಸಣ್ಣ ಘಟಕಗಳಾಗಿ ವಿಭಜಿಸುತ್ತದೆ.

ಅಪಚಯ
ಸಾಂಕೇತಿಕ ರೇಖಾಚಿತ್ರ

ಜೀವಕೋಶಗಳು ವಿಭಜನೆಗೊಳ್ಳುತ್ತಿರುವ ಪಾಲಿಮರ್‍ಗಳಿಂದ ಬಿಡುಗಡೆಗೊಂಡ ಮೋನೊಮರ್‍ಗಳನ್ನು ಹೊಸ ಪಾಲಿಮರ್ ಅಣುಗಳನ್ನು ನಿರ್ಮಿಸಲು, ಅಥವಾ ಮೋನೊಮರ್‍ಗಳನ್ನು ಇನ್ನಷ್ಟು ವಿಭಜಿಸಿ ಸರಳ ತ್ಯಾಜ್ಯ ಉತ್ಪನ್ನಗಳಾಗಿ ಪರಿವರ್ತಿಸಿ (ಜೊತೆಗೆ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ) ಬಳಸುತ್ತವೆ. ಲ್ಯಾಕ್ಟಿಕ್ ಆಮ್ಲ, ಅಸಿಟಿಕ್ ಆಮ್ಲ, ಇಂಗಾಲದ ಡೈಆಕ್ಸೈಡ್, ಅಮೋನಿಯಾ, ಮತ್ತು ಯೂರಿಯಾ ಜೀವಕೋಶಗಳ ತ್ಯಾಜ್ಯಗಳಲ್ಲಿ ಸೇರಿವೆ. ಈ ತ್ಯಾಜ್ಯಗಳ ಸೃಷ್ಟಿಯು ಸಾಮಾನ್ಯವಾಗಿ ಒಂದು ಉತ್ಕರ್ಷಣ ಪ್ರಕ್ರಿಯೆಯಾಗಿದೆ, ಹಾಗಾಗಿ ರಾಸಾಯನಿಕ ಮುಕ್ತ ಶಕ್ತಿಯ ಬಿಡುಗಡೆಯಾಗುತ್ತದೆ, ಇದರಲ್ಲಿ ಸ್ವಲ್ಪ ಭಾಗ ಶಾಖವಾಗಿ ಕಳೆದುಹೋಗುತ್ತದೆ, ಆದರೆ ಉಳಿದದ್ದನ್ನು ಅಡಿನೋಸಿನ್ ಟ್ರೈಫ಼ಾಸ್‍ಫ಼ೇಟ್‍ನ ಸಂಶ್ಲೇಷಣೆಯನ್ನು ಚಾಲನೆಮಾಡಲು ಬಳಸಲಾಗುತ್ತದೆ. ಈ ಅಣುವು ಜೀವಕೋಶಕ್ಕೆ ಅಪಚಯದಿಂದ ಬಿಡುಗಡೆಯಾದ ಶಕ್ತಿಯನ್ನು ಚಯವನ್ನು ರೂಪಿಸುವ ಶಕ್ತಿ ಬೇಕಾದ ಪ್ರತಿಕ್ರಿಯೆಗಳಿಗೆ ವರ್ಗಾಯಿಸುವ ವಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ, ಅಪಚಯವು ಜೀವಕೋಶಗಳ ನಿರ್ವಹಣೆ ಮತ್ತು ಬೆಳವಣಿಗೆಗೆ ಅಗತ್ಯವಾದ ರಾಸಾಯನಿಕ ಶಕ್ತಿಯನ್ನು ಒದಗಿಸುತ್ತದೆ. ಗ್ಲೈಕಾಲಿಸಿಸ್, ಸಿಟ್ರಿಕ್ ಆಮ್ಲ ಚಕ್ರ, ಸ್ನಾಯು ಪ್ರೋಟೀನ್‍ನ ವಿಭಜನೆ, ಅಡಿಪೋಸ್ ಅಂಗಾಂಶದಲ್ಲಿ ಕೊಬ್ಬಿನ ವಿಭಜನೆಯಿಂದ ನೆಣಾಮ್ಲಗಳ ರಚನೆ, ಇತ್ಯಾದಿ ಅಪಚಯ ಪ್ರಕ್ರಿಯೆಗಳ ಕೆಲವು ಉದಾಹರಣೆಗಳಾಗಿವೆ.

ಅಪಚಯವನ್ನು ನಿಯಂತ್ರಿಸುವ ಅನೇಕ ಸಂಜ್ಞೆಗಳಿವೆ. ಪರಿಚಿತವಿರುವ ಬಹುತೇಕ ಸಂಜ್ಞೆಗಳು ಹಾರ್ಮೋನುಗಳು ಮತ್ತು ಸ್ವತಃ ಚಯಾಪಚಯ ಕ್ರಿಯೆಯಲ್ಲಿ ಸೇರಿದ ಅಣುಗಳಾಗಿವೆ. ಅಂತಃಸ್ರಾವಶಾಸ್ತ್ರಜ್ಞರು ಸಾಂಪ್ರದಾಯಿಕವಾಗಿ ಅನೇಕ ಹಾರ್ಮೋನ್‍ಗಳನ್ನು, ಅವು ಚಯಾಪಚಯ ಕ್ರಿಯೆಯ ಯಾವ ಭಾಗವನ್ನು ಉದ್ರೇಕಿಸುತ್ತವೆ ಎಂಬುದನ್ನು ಆಧರಿಸಿ, ಚಯ ಹಾರ್ಮೋನು ಅಥವಾ ಅಪಚಯ ಹಾರ್ಮೋನು ಎಂದು ವರ್ಗೀಕರಿಸಿದ್ದಾರೆ. ಕಾರ್ಟಿಸಾಲ್, ಗ್ಲೂಕಗಾನ್, ಮತ್ತು ಅಡ್ರೆನಲಿನ್ ೨೦ನೇ ಶತಮಾನದ ಮುಂಚಿನಿಂದ ಪರಿಚಿತವಿರುವ ಅಪಚಯ ಹಾರ್ಮೋನ್‍ಗಳು.

ಉಲ್ಲೇಖಗಳು

Tags:

ಅಣುಅಮಿನೊ ಆಮ್ಲನ್ಯೂಕ್ಲಿಯಿಕ್ ಆಮ್ಲನ್ಯೂಕ್ಲಿಯೊಟೈಡ್ಪ್ರೋಟೀನ್ಶಕ್ತಿ

🔥 Trending searches on Wiki ಕನ್ನಡ:

ಪನಾಮ ಕಾಲುವೆಕರ್ನಾಟಕ ಹೈ ಕೋರ್ಟ್ಬ್ಯಾಂಕ್ಭಗತ್ ಸಿಂಗ್ಕ್ರಿಯಾಪದಕರ್ನಾಟಕದ ಏಕೀಕರಣಮುಖ್ಯ ಪುಟತ್ರಿಪದಿಜಾರಿ ನಿರ್ದೇಶನಾಲಯಭಾರತೀಯ ನದಿಗಳ ಪಟ್ಟಿಭಾರತೀಯ ಕಾವ್ಯ ಮೀಮಾಂಸೆಚೈತ್ರ ಮಾಸಲೋಹತತ್ತ್ವಶಾಸ್ತ್ರರಾಷ್ಟ್ರೀಯ ಶಿಕ್ಷಣ ನೀತಿಸಂಶೋಧನೆವಿಷ್ಣುವರ್ಧನ್ (ನಟ)ಬಿಳಿಗಿರಿರಂಗನ ಬೆಟ್ಟವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಗಂಗ (ರಾಜಮನೆತನ)ಭೂಮಿಯ ವಾಯುಮಂಡಲಮಂಗಳೂರುದ.ರಾ.ಬೇಂದ್ರೆಹಣರಗಳೆಜಿ.ಎಸ್.ಶಿವರುದ್ರಪ್ಪಬರವಣಿಗೆಗರ್ಭಧಾರಣೆನಿರ್ವಹಣೆ, ಕಲೆ ಮತ್ತು ವಿಜ್ಞಾನಈರುಳ್ಳಿಅಶೋಕನ ಶಾಸನಗಳುಭಾರತದ ಜನಸಂಖ್ಯೆಯ ಬೆಳವಣಿಗೆಪಾಂಡವರುಇಂಡೋನೇಷ್ಯಾವಿರೂಪಾಕ್ಷ ದೇವಾಲಯಅಲೆಕ್ಸಾಂಡರ್ಮಯೂರಶರ್ಮಕನ್ನಡ ಸಂಧಿಭಾರತದಲ್ಲಿ ಪಂಚಾಯತ್ ರಾಜ್ಸದಾನಂದ ಮಾವಜಿಭಾರತೀಯ ಧರ್ಮಗಳುಹಸ್ತ ಮೈಥುನಭತ್ತಭಾರತದ ಪಂಚಾಯತ್ ರಾಜ್ ವ್ಯವಸ್ಥೆನಾಟಕಮೋಕ್ಷಗುಂಡಂ ವಿಶ್ವೇಶ್ವರಯ್ಯನಯಾಗರ ಜಲಪಾತಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪುನೀತ್ ರಾಜ್‍ಕುಮಾರ್ಚಂದ್ರಾ ನಾಯ್ಡುಬಂಡಾಯ ಸಾಹಿತ್ಯಹೆಚ್.ಡಿ.ದೇವೇಗೌಡಕೆಂಪು ಮಣ್ಣುಹೃದಯಕುದುರೆಗ್ರಾಮೀಣ ಪ್ರಾದೇಶಿಕ ಬ್ಯಾಂಕ್ಕವಿಗಳ ಕಾವ್ಯನಾಮಕರ್ನಾಟಕ ಸಂಗೀತಹೊನಗೊನ್ನೆ ಸೊಪ್ಪುಆದಿ ಶಂಕರರು ಮತ್ತು ಅದ್ವೈತಪುತ್ತೂರುಪಾಕಿಸ್ತಾನವಿರಾಟ್ ಕೊಹ್ಲಿಗೋದಾವರಿಭಾರತದ ಸಂವಿಧಾನ ರಚನಾ ಸಭೆಷಟ್ಪದಿಅಂತಾರಾಷ್ಟ್ರೀಯ ಸಂಬಂಧಗಳುಕಾನೂನುಭಂಗ ಚಳವಳಿಐಹೊಳೆಕಲ್ಯಾಣ ಕರ್ನಾಟಕಕಲ್ಲಂಗಡಿಜಿ.ಪಿ.ರಾಜರತ್ನಂಭಾರತೀಯ ಶಾಸ್ತ್ರೀಯ ನೃತ್ಯಸಂಸ್ಕಾರಕುಕ್ಕೆ ಸುಬ್ರಹ್ಮಣ್ಯ ದೇವಾಲಯಚೀನಾದ ಇತಿಹಾಸದಶಾವತಾರಕೃಷ್ಣದೇವರಾಯ🡆 More