ಅನಂತ ಪೈ

ಕಾರ್ಕಳ ವೆಂಕಟ್ರಾಯ ಅನಂತ್ ಪೈ ರವರು (೧೭ ಸೆಪ್ಟೆಂಬರ್ ೧೯೨೯ -೨೪ ಫೆಬ್ರುವರಿ ೨೦೧೧) ಭಾರತದ ಅಥವಾ ವಿಶ್ವದ ಮಕ್ಕಳಿಗೆ ’ಅಂಕಲ್ ಪೈ’ ಯೆಂದೇ ಪ್ರಸಿದ್ದರಾಗಿದ್ದಾರೆ.

ವ್ಯಂಗ್ಯ ಚಿತ್ರಗಳು ಅಷ್ಟೇನೂ ಹೆಸರುಮಾಡಿರದ ಕಾಲದಲ್ಲಿ 'ಅನಂತ ಪೈ'ರವರು ಮಕ್ಕಳ ಮನಸ್ಸಿಗೆ ನಾಟುವಂತೆ ಸೃಷ್ಟಿಸಿದ ಕಥಾಚಿತ್ರಗಳು, ಅವರ ಕಥೆಯನ್ನು ಹೇಳುವ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಮಕ್ಕಳ ಸುಶುಪ್ತ ಚೇತನವನ್ನು ಹುರಿಗೊಳಿಸಿ ಅತ್ಯಂತ ಕ್ಲಿಶ್ಟವಾದ ಪೌರಾಣಿಕ ಐತಿಹಾಸಿಕ ಕಥಾ ಸನ್ನಿವೇಷಗಳನ್ನು ಮಕ್ಕಳಿಗೆ ತಿಳಿಯುವ ರೀತಿಯಲ್ಲಿ ಹೇಳಿ ರಂಜಿಸಿದ ಕೀರ್ತಿ 'ಪೈ'ರವರಿಗೆ ಸಲ್ಲುತ್ತದೆ. 'ಅನಂತ್ ಪೈ' ಒಬ್ಬ ಸೃಜನಶೀಲ ಬರಹಗಾರರು. ಮಕ್ಕಳನ್ನು ಕಂಡರೆ ಅವರಿಗೆ ಅತೀವ ಪ್ರೀತಿ. ಸ್ವತಃ ಆವರಿಗೆ ಮಕ್ಕಳಿಲ್ಲದಿದ್ದರೂ ವಿಶ್ವದ ಮಕ್ಕಳಿಗಾಗಿ ಅವರು ರಚಿಸಿದ ಕಥಾಚಿತ್ರಗಳು ಅಪಾರ ; ಹಾಗೂ ಅನನ್ಯ. ಫೆಬ್ರವರಿ ೧೯ ರಂದು 'ಭಾರತದ ಮೊಟ್ಟಮೊದಲ ಕಾಮಿಕ್ಸ್ ಸಮಾವೇಶ'ದಲ್ಲಿ 'ಜೀವಮಾನದ ಸಾಧನೆ ಪ್ರಶಸ್ತಿ ' ಪಡೆದು ಸನ್ಮಾನಿಸಲ್ಪಟ್ಟರು.

ಅನಂತ ಪೈ
Born(೧೯೨೯-೦೯-೧೭)೧೭ ಸೆಪ್ಟೆಂಬರ್ ೧೯೨೯
Died24 February 2011(2011-02-24) (aged 81)
Other namesಅಂಕಲ್ ಪೈ
Occupationವ್ಯಂಗ್ಯಚಿತ್ರ ಬರಹಗಾರ
Websiteಅಧಿಕೃತ ಜಾಲತಾಣ
ಚಿತ್ರ:Uncle anant pai.jpg
ಅನಂತ ಪೈ

ಪಂಚತಂತ್ರದ ಅಮೂಲ್ಯ ಕಥೆಗಳು

'ಅಮರಚಿತ್ರ ಕಥೆಗಳ ಪುಸ್ತಕ'ಗಳಲ್ಲಿ 'ಪೈ'ರವರು ಹೆಣೆದಿರುವ 'ಪಂಚತಂತ್ರದ ಅದ್ಬುತ ಕಥೆಗಳು', 'ವಿಷ್ಣು ಶರ್ಮರ, ಜಾತಕ ಕಥೆ'ಗಳನ್ನುಆಧರಿಸಿವೆ. ಅದಲ್ಲದೆ, ಅಮರ ಚಿತ್ರ ಕಥಾ ಸಂಗ್ರಹ, ಧೀರ-ಶೂರ-ಯೋಧರ ಜೀವನ ಕಥೆಯ ಚಿತ್ರಗಳು, ಸಾಂಪ್ರದಾಯಿಕ, ಜನಪದೀಯ ಕೃತಿಗಳ ಸಂಗಮ. 'ಅಮರಚಿತ್ರ ಕಥೆಗಳ ಪುಸ್ತಕಗಳು' ವರ್ಷದಲ್ಲಿ ೩ ಮಿಲಿಯನ್ ಪ್ರತಿಗಳು ಮಾರಾಟವಾಗುತ್ತಿವೆ.

ಜನನ, ಬಾಲ್ಯ, ವಿದ್ಯಾಭ್ಯಾಸ

ಅವರ ತಂದೆ, ವೆಂಕಟ್ರಾಯ ಮತ್ತು ತಾಯಿ ಸುಶೀಲಾ ಪೈ. ಈ ಕೊಂಕಣಿ ಭಾಷೆಯನ್ನು ಮಾತಾಡುವ ದಂಪತಿಗಳ ಮಗನಾಗಿ ಅವರು, ೧೯೨೯ ರ ಸೆಪ್ಟೆಂಬರ್, ೧೭ ರಂದು ಕಾರ್ಕಳದಲ್ಲಿ ಜನಿಸಿದರು. ಅವ್ರು ಇನ್ನೂ ಎರಡುವರ್ಷದ ಮಗುವಾಗಿರುವಾಗಲೇ ತಂದೆತಾಯಿಗಳು ಮೃತರಾದರು. ಸಂಬಂಧಿಕರ ಸಹಕಾರದಿಂದ ಅನಂತ್ ರವರು ಬಾಲ್ಯಾವಸ್ಥೆಯನ್ನು ಕಳೆದರು. ಅವರು ತಮ್ಮ ೧೨ ನೆಯ ವಯಸ್ಸಿನಲ್ಲಿ ಬೊಂಬಾಯಿಗೆ ಬಂದರು. ಅಲ್ಲಿ ಬೊಂಬಾಯಿನ ಉಪನಗರವಾದ ಮಾಹಿಮ್ ನ 'ಓರಿಯೆಂಟಲ್ ಶಾಲೆ'ಯಲ್ಲಿ ಶಿಕ್ಷಣವನ್ನು ಪಡೆದರು. ಮುಂದೆ, ಮುಂಬಯಿ 'ವಿಶ್ವವಿದ್ಯಾಲಯದ ಕೆಮಿಕಲ್ ಟೆಕ್ನೋಲಜಿ ವಿಭಾಗ'ದಲ್ಲಿ ಎರಡು ಪದವಿಗಳನ್ನು ಗಳಿಸಿದರು.

ಚಿತ್ರಕಲೆಯಲ್ಲಿ ನಿಷ್ಣಾತರು

ಬಾಲ್ಯದಿಂದಲೇ ಚಿತ್ರಗಳನ್ನು ಸಮರ್ಪಕವಾಗಿ ಬರೆಯುತ್ತಿದ್ದ ಅನಂತ್ ರವರು, ಆ ಕಲೆಯನ್ನು ಚೆನ್ನಾಗಿ ಬೆಳೆಸಿಕೊಳ್ಳಲು ಅವರ ಬಂಧುವರ್ಗದವರು, ಸಹಾಯಮಾಡಿದರು. ಮುಂದೆ ಅವರು ಬೊಂಬಾಯಿನ ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆಯ ಪುಸ್ತಕ ವಿಭಾಗದಲ್ಲಿ ಕೆಲಸಮಾಡುತ್ತಿದ್ದರು. 'ಇಂದ್ರ ಜಾಲ ಕಾಮಿಕ್ಸ್' ನಲ್ಲಿ ಕೆಲಸಮಾಡುತ್ತಿರುವಾಗ, ಒಂದು ಕ್ವಿಝ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಸನ್ನಿವೇಶ ಒದಗಿತು. ಭಾರತದ ಮಕ್ಕಳು, ಗ್ರೀಕ್, ರೋಮನ್ ದೇವಿ-ದೇವತೆಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದು, ನಮ್ಮದೇಶದ ರಾಮಾಯಣ, ಮಹಾಭಾರತ ಮುಂತಾದ ಮಹಾಕಾವ್ಯಗಳ ಬಗ್ಗೆ ತಿಳುವಳಿಕೆ ಇಲ್ಲದ್ದನ್ನು ಮನಗಂಡರು. ಈ ಸಂಗತಿ ಅವರಿಗೆ ಬೇಸರತಂದಿದ್ದಲ್ಲದೆ ಈ ಜಾಡಿನಲ್ಲಿ ತಾವು ಕೆಲಸಮಾಡಿ ನಮ್ಮ ಮಕ್ಕಳ ಮನಸ್ಸಿನಲ್ಲಿ ಪುರಾಣಗಳ ಬಗ್ಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ದಿಕ್ಕಿನಲ್ಲಿ ತಮ್ಮ ಚಿತ್ರಕಥೆಗಳನ್ನು ಹೆಣೆಯಲು ಹೆಣಗಿ ಯಶಸ್ವಿಯಾದರು.

ಅಮರ ಚಿತ್ರ ಕಥೆ

೧೯೬೭ ರಲ್ಲಿ, ಮೊಟ್ಟಮೊದಲು ಅನಂತ ಪೈ ಹೊರತಂದ ಚಿತ್ರಕಥಾ ಸಂಗ್ರಹವೆಂದರೆ 'ಅಮರಚಿತ್ರಕಥಾ'. ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಬರಹವಿದ್ದ ಈ ಪ್ರತಿಗಳು ಕಾಲಾಂತರದಲ್ಲಿ ಭಾರತದ ಹಲವು ಭಾಷೆಗಳಲ್ಲಿ, ನಂತರ ವಿಶ್ವ ಪ್ರಮುಖ ಭಾಷೆಗಳಲ್ಲಿ ಬರಲಾರಂಭಿಸಿದವು. ತೆನಾಲಿರಾಮನ ಚಿತ್ರದ ಜೊತೆ ತೆನಾಲಿ ರಾಮಕೃಷ್ಣ ನ ಕಥೆ ಓದಿದ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಅಚ್ಚೊತ್ತಿರುವ ವ್ಯಕ್ತಿತ್ವ ಅನನ್ಯವಾದದ್ದು. ಬೇರೆ ಪಾತ್ರಗಳಾದ ಸಾವಿತ್ರಿ, ನಳ ದಮಯಂತಿ, ವಸಂತಸೇನೆ-ಉದಯನ, ರಾಮ, ಪರಶುರಾಮ, ಶ್ರವಣಕುಮಾರ, ಶಿಶುಪಾಲ, ಜರಾಸಂಧ, ಶಕುಂತಲೆ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ಎಲ್ಲ ಒಂದೊಂದು ಕಲ್ಪನೆಯನ್ನು ಉಳಿಸಿಹೋಗಿದ್ದಾರೆ.

'ಅಮರಚಿತ್ರಕಥ,' ಬೆಂಗಳೂರಿನಲ್ಲಿ ೧೯೬೫ ರಲ್ಲೇ ಆರಂಭವಾಗಿತ್ತು

ಸನ್. ೧೯೬೫ ರಲ್ಲೇ, 'ಐ.ಬಿ.ಎಚ್'ನ, ಬೆಂಗಳೂರು ಶಾಖಾ ಪ್ರಭಾರಿ,ಜಿ. ಕೆ. ಅನಂತರಾಮ್ ರವರಿಂದ 'ಅಮರಚಿತ್ರಕಥಾ' ಎಂಬ ಹೆಸರಿನಲ್ಲಿ ಕನ್ನಡ ಕಥಾ ಸಂಗ್ರಹ, ಪ್ರಥಮವಾಗಿ ಶುರುವಾಯಿತು. ಇದು 'ಅಂಕಲ್ ಪೈ' ರವರಿಗಿಂತ ಮೊದಲೇ ಸ್ಥಾಪಿಸಲ್ಪಟ್ಟಿತ್ತು, ಎನ್ನುವ ವಿಷಯ ಔಟ್ ಲುಕ್ ಪತ್ರಿಕೆ ಯಲ್ಲಿ ದಾಖಲಾಗಿದೆ. ಇಂಗ್ಲೀಷ್ ಕಾಮಿಕ್ಸ್ ಪುಸ್ತಕಗಳು ಹಾಗೂ ಹಲವು ವಿಧದ ಕೇವಲ ಇಂಗ್ಲೀಷ್ ಲೇಖಕರ ಪುಸ್ತಕಗಳನ್ನು ಮಾರಿ-ಮಾರಿ ಬೇಸತ್ತಿದ್ದ ಅನಂತರಾಮ್, ಕನ್ನಡ ಭಾಷೆಯಲ್ಲಿ ಭಾರತದ ಅಮೂಲ್ಯ ಹಾಗೂ ವಿಪುಲವಾಗಿ ಲಭ್ಯವಿರುವ, ಇತಿಹಾಸ, ಪುರಾಣ, ಮಹಾಕಾವ್ಯಗಳ ಕಥಾ-ಪ್ರಸಂಗಗಳನ್ನು ಏಕೆ ನಮ್ಮ ಭಾರತೀಯ ಮಕ್ಕಳಿಗೆ ಪರಿಚಯಿಸಬಾರದು ಎನ್ನುವ ಮಹದಾಂಕ್ಷೆಯನ್ನು ಹೃದಯದಲ್ಲಿ ಹೊಂದಿದ್ದು, ಅವಕಾಶಗಳಿಗಾಗಿ ಕಾದಿದ್ದರು. ಶಿವರಾಮಕಾರಂತರಂತಹ ಬರಹಗಾರ, ಮೇಧಾವಿಯ ಜೊತೆಗೂಡಿ, ಸನ್ ೧೯೬೫ ರಲ್ಲಿ ಅಮರಚಿತ್ರಕಥಾ ಎಂಬ ಚಿತ್ರಕಥಾ ಗುಚ್ಛವನ್ನು ಹೊರತಂದರು. ಕಾಲಾಂತರದಲ್ಲಿ 'ಐ.ಬಿ.ಎಚ್'. ನ ಮಾಲೀಕರಾಗಿದ್ದ ಮಿರ್ಚಂದಾನಿಯವರು ಮಕ್ಕಳ ಕಥೆಗಳ ವಲಯದಲ್ಲಿನ ಅಪಾರ ಬೇಡಿಕೆ ಹಾಗೂ ಸಾಧ್ಯತೆಗಳನ್ನು ಅರಿತು, ಆ ಕ್ಷೇತ್ರವನ್ನು ವಿಸ್ತರಿಸಲು, ಅನಂತ ಪೈ ರವರನ್ನು ಆಹ್ವಾನಿಸಿದರು. ಮುಂದೆ 'ದೈತ್ಯ ಪ್ರತಿಭೆ'ಯ 'ಅನಂತ ಪೈ'ರವರು, ಚಿತ್ರಕಥೆಗಳನ್ನು ಸೊಗಸಾಗಿ ಹೆಣೆದು, ಮಕ್ಕಳಿಗೆ ಹೃದಯಂಗಮವಾಗಿ ಪ್ರಸ್ತುತಪಡಿಸಿ ಮನರಂಜಿಸಿ ಪ್ರಸಿದ್ಧಪಡಿಸಿದ ಮಹಾನ್ ಕಾರ್ಯಗಳೆಲ್ಲಾ ಇತಿಹಾಸವಾಯಿತು.

ಮಕ್ಕಳಿಗಾಗಿ ಪುಸ್ತಕಗಳೇ ಇರದಕಾಲದಲ್ಲಿ

ಭಾರತದಲ್ಲಿ 'ಟೆಲಿವಿಶನ್' ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ, ಪಟ್ಟಣಗಳಲ್ಲಿ, 'ಫ್ಯಾಂಟಮ್','ಸೂಪರ್ ಮ್ಯಾನ್', 'ಆರ್ಚಿ', ಮೊದಲಾದ ಇಂಗ್ಲೀಷ್ ಚಿತ್ರಕಥೆಗಳ ಪುಸ್ತಕಗಳು ಜನಪ್ರಿಯವಾಗಿದ್ದವು. ಭಾರತೀಯ ಭಾಷೆಗಳಲ್ಲಿ ಉತ್ತಮ ಮಟ್ಟದ ಕಥಾಚಿತ್ರಪುಸ್ತಕಗಳು ಹೆಚ್ಚಿಗೆ ಬಂದಿರಲಿಲ್ಲ. ಆ ಸಮಯದಲ್ಲಿ 'ಪೈ'ರವರ ದೂರಾಲೋಚನೆ, ಸಮಯಪ್ರಜ್ಞೆಯ ಜೊತೆಗೆ, ಸ್ವಾರಸ್ಯವಾದ ನಿರೂಪಣೆ, ಮತ್ತು ತಕ್ಕ ಚಿತ್ರಗಳ ಅಳವಡಿಕೆ ಕ್ರಮಗಳಿಂದ ಭಾರತದ ಪುರಾಣಗಳು ಮತ್ತು ಇತಿಹಾಸದಿಂದ ಆಯ್ದು ಸಿದ್ಧಪಡಿಸಿದ ಸುಂದರ ಕಥಾ ಪ್ರಸಂಗಗಳು ಒಮ್ಮೆಲೇ ಮಕ್ಕಳ ಆಸಕ್ತಿಯನ್ನು ಕೆರಳಿಸಿ ಜನಪ್ರಿಯವಾದವು.

ದೇಶದಾದ್ಯಂತ 'ಪೈ'ರವರ ಪುಸ್ತಕಗಳು ಲಭ್ಯವಾದವು

ಕತೆ ಪುಸ್ತಕ ಓದುವ ಗೀಳನ್ನು ಕೇವಲ ಮಕ್ಕಳಿಗಲ್ಲದೆ ವಯಸ್ಕರಿಗೂ ಅಭ್ಯಾಸ ಮಾಡಿಸಿದ ಹಿರಿಮೆ 'ಅಂಕಲ್ ಪೈ'ರವರದು ಈ ಬೆಳವಣಿಗೆಯಿಂದ ಸ್ಪೂರ್ಥಿಪಡೆದ ಪೈರವರು, ಸನ್, ೧೯೮೦ ರಲ್ಲಿ ಟಿಂಕಲ್ ಎಂಬ 'ವ್ಯಂಗ್ಯ ಚಿತ್ರಪುಸ್ತಕ'ವನ್ನು ಮಾರುಕಟ್ಟೆಗೆ ತಂದರು. ಇದು ಮಕ್ಕಳು ದೊಡ್ಡವರೆನ್ನದೆ, ಮನೆಮಂದಿಗೆಲ್ಲ ಪ್ರಿಯವಾದ ಪತ್ರಿಕೆಯಾಗಿ ಪ್ರತಿಯೊಬ್ಬರ ಮನೆಯ 'ದೀವಾನ್ ಖಾನೆಯ ಶೋಭೆ'ಯಾಗಿ ಪರಿಣಮಿಸಿತು. ಈ ಎರಡು ಪುಸ್ತಕ ಸರಣಿಗಳು ಭಾರತೀಯ ಇತಿಹಸದಲ್ಲಿ ಪ್ರಥಮಬಾರಿ ದಾಖಲೆಯನ್ನು ಸೃಷ್ಟಿಸಿದವು. ೨೦ ಭಾಷೆಗಳಲ್ಲಿ ಪ್ರಕಟವಾದ ೪೪೦ ಶೀರ್ಶಿಕೆಗಳನ್ನು ಹೊಂದಿದ ೮.೬ ಮಿಲಿಯನ್ ಪ್ರತಿಗಳನ್ನು ಕೊಂಡು ಓದುತ್ತಿರುವುದನ್ನು ಊಹಿಸುವುದು ಕಷ್ಟವಾಗಿದೆ.'ಟಿಂಕಲ್' ಪತ್ರಿಕೆಯಲ್ಲಿ, Letters to Uncle Pai, ಯೆಂಬ 'ಶಿರೋನಾಮ'ದಡಿಯಲ್ಲಿ ಮಕ್ಕಳ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನು ಹೇಳುವ ಪರಿ ಅನನ್ಯವಾಗಿತ್ತು, ಮತ್ತು ಅದು ಆ ಪತ್ರಿಕೆಯ ಜನಪ್ರಿಯತೆಗೆ ಸಾಕ್ಷಿ ಸಹಿತ.

ಟಿಂಕಲ್ ಪತ್ರಿಕೆಯ ತಾರೆಗಳು

  • 'ಸುಪ್ಪಂಡಿ',
  • 'ಶಿಕಾರಿ ಶಂಭು',
  • 'ಕಾಲಿಯ ದ ಕ್ರೊ',
  • 'ತಂತ್ರಿ ದ ಮಂತ್ರಿ', ಚಿತ್ರಣಗಳು ವೈವಿಧ್ಯಮಯವಾಗಿದ್ದು ಮಕ್ಕಳ ಮನಸ್ಸನ್ನು ರಂಜಿಸಿವೆ.

ಈಗ 'ಅಮರಚಿತ್ರಕಥ' ಮತ್ತಿತರ ಬ್ರಾಂಡ್ ಗಳು,'ಡಿಜಿಟಲ್ ಮಾದರಿಯಲ್ಲಿ ಲಭ್ಯ'

'ಸಮೀರ್ ಪಟೇಲ್' ರ ಸ್ವಾಮಿತ್ವದಲ್ಲಿ 'ಅನಂತ ಪೈ'ರವರು, ಕಥೆಗಾರರಾಗಿ ಕೆಲಸಮಾಡುತ್ತಿದ್ದರು. ಈಗ 'ಅಮರಚಿತ್ರಕಥ' ಮತ್ತಿತರ ಕಥಾಚಿತ್ರದ ಬ್ರಾಂಡ್ ಸಂಗ್ರಹಗಳು, ಎ.ಸಿ.ಕೆ ಮೀಡಿಯಾದಲ್ಲಿ, 'ಡಿಜಿಟಲ್ ಅವತಾರ'ವನ್ನು ಪಡೆದಿವೆ. 'ರಾಮಾಯಣ', 'ಮಹಾಭಾರತ',ಮತ್ತು 'ಮದರ್ ತೆರೇಸ' ರಂತಹ ವ್ಯಕ್ತಿಸಂಗ್ರಹಗಳು ಲಭ್ಯ.

ಪ್ರಶಸ್ತಿ ಗೌರವಗಳು

  • 'ಕೊಂಕಣಿ ಮಿಲೇನಿಯಂ ಪ್ರಶಸ್ತಿ'
  • 'ಹಿಂದಿ ಸಾಹಿತ್ಯ ಅಕಾಡೆಮಿ'
  • 'ಮಹಾರಾಷ್ಟ್ರ ರಾಜ್ಯಹಿಂದಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'
  • 'ಮಣಿಪಾಲ್ ನ ಡಾ. ಟಿ.ಎಮ್.ಎ.ಪೈ ಸ್ಮಾರಕ ಪ್ರಶಸ್ತಿ'
  • 'ಪ್ರಿಯದರ್ಶಿನಿ ಅಕಾಡೆಮಿ ಅವಾರ್ಡ್',
  • 'ಚಂಢೀಗಡ್ ಸಂಸ್ಕೃತಿ ಸಂಸ್ಥಾನ್ ಭಾರತ್ ಗೌರವ್ ಪ್ರಶಸ್ತಿ'
  • 'ಕಪೂರ್ ಚಂದ್ ಪ್ರಶಸ್ತಿ'
  • 'ಮರಾಠಿ ಬಾಲ್ ಕುಮಾರ್ ಸಾ ಸಂಸ್ಥೆಯ ಅಧ್ಯಕ್ಷಪದವಿ'
  • ಸನ್, ೨೦೧೦ ರಲ್ಲಿ, ಮುಂಬಯಿನ ಉಪನಗರ ಚೆಂಬೂರಿನ ಕರ್ನಾಟಸಂಘದವರು ತಮ್ಮ ಸುವರ್ಣ ಮಹೋತ್ಸವದಲ್ಲಿ ಅನಂತ್ ಪೈರವರ ಸಾಧನೆಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿನೀಡಿ ಗೌರವಿಸಿದರು.

ಮರಣ

೮೧ ವರ್ಷದ ಹರೆಯದ,'ಅಂಕಲ್ ಪೈ'ರವರು, ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲೆ ಮೆಟ್ಟಿಲಿನಿಂದ ಕೆಳಗೆ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸನ್, ೨೦೧೧ ರ ಫೆಬ್ರವರಿ ತಿಂಗಳ, ೨೪ ರ ಗುರುವಾರ, ಸಾಯಂಕಾಲ ೫ ಗಂಟೆಗೆ, 'ಹೃದಯ ಸ್ತಂಭನ'ದಿಂದ ಮರಣಿಸಿದರು. ಮೃತರು, ಪ್ರೀತಿಯ ಪತ್ನಿ ಲಲಿತ, ಹಾಗೂ ಅಪಾರ ಬಂಧುವರ್ಗ ಮತ್ತು ಅವರ ಕಾಮಿಕ್ ಪುಸ್ತಕಗಳನ್ನು ಪ್ರತಿತಿಂಗಳೂ ಕಾದಿದ್ದು ಪ್ರೀತಿಯಿಂದ ಓದುವ, ವಿಶ್ವದ ಅಸಂಖ್ಯ ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ

  1. .↑ In India, New Life for Comic Books as TV Cartoons New York Times, 19 July 2009.
  2. .↑ The World of Amar Chitra Katha Media and the Transformation of Religion in South Asia, by Lawrence A Babb, Susan S. Wadley. Motilal Banarsidass Publ., 1998. ISBN 8120814533. Chapt. 4, p. 76-86.
  3. .↑ Now, Amar Chitra Katha gets even younger Vijay Singh, TNN, The Times of India, 16 October 2009.
  4. .↑ Tales of Uncle Pai S Surekha, DNA. Saturday, 21 March 2009.
  5. .↑ ಅಮರ ಚಿತ್ರಕಥೆ ಪುಸ್ತಕಗಳ ಪಟ್ಟಿ
  6. .↑ [೧]
  7. .↑ ಅಮರ ಚಿತ್ರ ಕಥೆ
  8. .↑ [೨]

Tags:

ಅನಂತ ಪೈ ಪಂಚತಂತ್ರದ ಅಮೂಲ್ಯ ಕಥೆಗಳುಅನಂತ ಪೈ ಜನನ, ಬಾಲ್ಯ, ವಿದ್ಯಾಭ್ಯಾಸಅನಂತ ಪೈ ಚಿತ್ರಕಲೆಯಲ್ಲಿ ನಿಷ್ಣಾತರುಅನಂತ ಪೈ ಅಮರ ಚಿತ್ರ ಕಥೆಅನಂತ ಪೈ ಅಮರಚಿತ್ರಕಥ, ಬೆಂಗಳೂರಿನಲ್ಲಿ ೧೯೬೫ ರಲ್ಲೇ ಆರಂಭವಾಗಿತ್ತುಅನಂತ ಪೈ ಮಕ್ಕಳಿಗಾಗಿ ಪುಸ್ತಕಗಳೇ ಇರದಕಾಲದಲ್ಲಿಅನಂತ ಪೈ ದೇಶದಾದ್ಯಂತ ಪೈರವರ ಪುಸ್ತಕಗಳು ಲಭ್ಯವಾದವುಅನಂತ ಪೈ ಟಿಂಕಲ್ ಪತ್ರಿಕೆಯ ತಾರೆಗಳುಅನಂತ ಪೈ ಈಗ ಅಮರಚಿತ್ರಕಥ ಮತ್ತಿತರ ಬ್ರಾಂಡ್ ಗಳು,ಡಿಜಿಟಲ್ ಮಾದರಿಯಲ್ಲಿ ಲಭ್ಯಅನಂತ ಪೈ ಪ್ರಶಸ್ತಿ ಗೌರವಗಳುಅನಂತ ಪೈ ಮರಣಅನಂತ ಪೈ ಹೆಚ್ಚಿನ ಮಾಹಿತಿಗಾಗಿಅನಂತ ಪೈಅನಂತ್ ಪೈ

🔥 Trending searches on Wiki ಕನ್ನಡ:

ಜ್ಯೋತಿಬಾ ಫುಲೆಚಾಣಕ್ಯತೆಂಗಿನಕಾಯಿ ಮರಅವರ್ಗೀಯ ವ್ಯಂಜನಜೈನ ಧರ್ಮಸಾಮ್ರಾಟ್ ಅಶೋಕಧರ್ಮರಾಯ ಸ್ವಾಮಿ ದೇವಸ್ಥಾನರೇಡಿಯೋಜಾತ್ರೆಕೃಷ್ಣವೃತ್ತಪತ್ರಿಕೆಛಂದಸ್ಸುಕರ್ನಾಟಕ ಹೈ ಕೋರ್ಟ್ದಾಸವಾಳಬಾಲ್ಯ ವಿವಾಹಮುಟ್ಟುಹಾಗಲಕಾಯಿಕರ್ನಾಟಕದ ಶಾಸನಗಳುಪ್ಲೇಟೊಅರ್ಥಶಾಸ್ತ್ರಶಿವರಾಜ್‍ಕುಮಾರ್ (ನಟ)ಮಾರುತಿ ಸುಜುಕಿಭಾರತದಲ್ಲಿ ಕೃಷಿಭಾರತದ ಉಪ ರಾಷ್ಟ್ರಪತಿಕರ್ನಾಟಕದ ಮಹಾನಗರಪಾಲಿಕೆಗಳುವಿಮರ್ಶೆಕರ್ನಾಟಕದ ಜಿಲ್ಲೆಗಳುಚಿತ್ರದುರ್ಗಕಂಸಾಳೆಶಾತವಾಹನರುಬಂಡಾಯ ಸಾಹಿತ್ಯಚಾಲುಕ್ಯಅಲಂಕಾರಭಾರತದ ರಾಷ್ಟ್ರೀಯ ಉದ್ಯಾನಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗುಲಾಬಿಗೌತಮ ಬುದ್ಧಸಂಸ್ಕೃತಅರಕಾಂಕ್ರೀಟ್ಪಾಲಕ್ನಯನತಾರಹೈನುಗಾರಿಕೆದ್ಯುತಿಸಂಶ್ಲೇಷಣೆಎಚ್.ಎಸ್.ಶಿವಪ್ರಕಾಶ್ವಾಟ್ಸ್ ಆಪ್ ಮೆಸ್ಸೆಂಜರ್ಪಾಟೀಲ ಪುಟ್ಟಪ್ಪವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಬೆಳಕುಕೊರೋನಾವೈರಸ್ವಸ್ತುಸಂಗ್ರಹಾಲಯವಿಜಯದಾಸರುಹುಣ್ಣಿಮೆಬಾದಾಮಿ ಗುಹಾಲಯಗಳುಔಡಲಶ್ರೀರಂಗಪಟ್ಟಣಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭಾರತದಲ್ಲಿ ಪಂಚಾಯತ್ ರಾಜ್ಕರ್ನಾಟಕ ಲೋಕಸೇವಾ ಆಯೋಗಭರತನಾಟ್ಯಎಮ್.ಎ. ಚಿದಂಬರಂ ಕ್ರೀಡಾಂಗಣಚಂದ್ರಯಾನ-೩ಭಾರತದ ಸರ್ವೋಚ್ಛ ನ್ಯಾಯಾಲಯಭಗವದ್ಗೀತೆಅರ್ಥಸಂಯುಕ್ತ ಕರ್ನಾಟಕಕಿತ್ತೂರುಸ್ತ್ರೀಸಿಂಧೂತಟದ ನಾಗರೀಕತೆಜಯಚಾಮರಾಜ ಒಡೆಯರ್ಜವಾಹರ‌ಲಾಲ್ ನೆಹರುಪ್ರೇಮಾಮದ್ಯದ ಗೀಳುಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದ ಚುನಾವಣಾ ಆಯೋಗ🡆 More