ಸುನಿಲ್ ದತ್

ಸುನಿಲ್ ದತ್ (ಜೂನ್ ೬, ೧೯೨೯ – ಮೇ ೨೫, ೨೦೦೫) ಭಾರತೀಯ ನಟ, ರಾಜಕಾರಣಿ.

ಬಾಲಿವುಡ್ ಎಂದೇ ಖ್ಯಾತವಾದ ಹಿಂದಿ ಚಿತ್ರರಂಗದಲ್ಲಿ ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದವರು. ಪ್ರಸ್ತುತ ಮನಮೋಹನ್ ಸಿಂಗ್ ನಾಯಕತ್ವದ ಸರಕಾರದಲ್ಲಿ ಕೇಂದ್ರ ಮಂತ್ರಿಯಾಗಿ ಕ್ರೀಡೆ ಹಾಗೂ ಯುವಜನ ಖಾತೆಯನ್ನು ವಹಿಸಿಕೊಂಡಿದ್ದರು.

ಸುನಿಲ್ ದತ್
ಸುನಿಲ್ ದತ್

ಜೀವನ

೧೯೨೯ರಲ್ಲಿ ಖರ್ಡ್ ಹಳ್ಳಿಯಲ್ಲಿ (ಇಂದಿನ ಪಾಕಿಸ್ತಾನ, ಅಂದಿನ ಭಾರತ) ಹುಟ್ಟಿದ ಇವರು ೧೯೪೭ರಲ್ಲಿ ಭಾರತದ ವಿಭಜನೆಯಾದ ನಂತರ ಹುಟ್ಟೂರನ್ನು ತೊರೆದರು. ಇವರು ವಿದ್ಯಾಭ್ಯಾಸ ಮಾಡಿದ್ದು ಮುಂಬೈನ ಜಯ್ ಹಿಂದ್ ಕಾಲೇಜಿನಲ್ಲಿ.

ಸುನಿಲ್ ದತ್ 
ವಿವಾಹದ ಚಿತ್ರ

ಹಿಂದಿ ಚಿತ್ರರಂಗದಲ್ಲಿ ಅಪಾರ ಯಶಸ್ಸು ಪಡೆದಿದ್ದ ನಟಿ ನರ್ಗಿಸ್ ಜೊತೆ "ಮದರ್ ಇಂಡಿಯಾ" ಚಿತ್ರದಲ್ಲಿ ಆಕೆಯ ಮಗನ ಪಾತ್ರದಲ್ಲಿ ಸುನಿಲ್ ದತ್ ನಟಿಸಿದರು. ಸುನಿಲ್ ದತ್ ಮತ್ತು ನರ್ಗಿಸ್ ೧೧-೦೩-೧೯೫೮ರಂದು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು. ಮಗ ಸಂಜಯ್ ದತ್ ಕೂಡ ಬಾಲಿವುಡ್ ತಾರೆ. ಸುನಿಲ್ ದತ್ ೨೫-೦೫-೨೦೦೫ರಂದು ಬಾಂದ್ರಾ, ಮುಂಬೈನಲ್ಲಿ ಹೃದಯಾಘಾತದಿಂದ ನಿದ್ರೆಯಲ್ಲಿಯೇ ಮರಣ ಹೊಂದಿದರು.

ಬಾಲಿವುಡ್

ಆಕಾಶವಾಣಿಯಲ್ಲಿ ಕೆಲಸ ಪ್ರಾರಂಭಿಸಿದ ಇವರು ಹಿಂದಿ ಸಿನೆಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು. ೧೯೫೬ರ ಹೊತ್ತಿಗೆ ಯಶಸ್ವಿ ನಟರಾದರು. ಮದರ್ ಇಂಡಿಯಾ ಚಿತ್ರದಲ್ಲಿ ಶ್ರೀಮಂತ ಜಮೀನುದಾರನ ವಿರುದ್ಧ ಬಂಡಾಯ ಹೂಡುವ ಬಡರೈತನ ಮಗನಾಗಿ ಕಾಣಿಸಿಕೊಂಡರು. ತಮ್ಮ ಪಾತ್ರದಲ್ಲಿ ಅತ್ಯಂತ ಸಹಜವಾಗಿ ನಟಿಸಿ ಎಲ್ಲರ ಗಮನ ಸೆಳೆದರು. ಮುಂದೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯ ನಟರಾದರು. "ಪಡೋಸನ್" ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿ ಜನಮನವನ್ನು ಗೆದ್ದರು. "ರೇಷ್ಮಾ ಔರ್ ಶೇರಾ" ಚಿತ್ರದಲ್ಲಿ ಬಹಳ ಗಂಭೀರ ಪಾತ್ರವನ್ನೂ ಅಷ್ಟೇ ಸಹಜವಾಗಿ ನಿರ್ವಹಿಸಿದರು. ಪ್ರಖ್ಯಾತ ಬಾಲಿವುಡ್ ನತಿಯರಾದ ಆಶಾ ಪರೇಖ್, ವಹೀದಾ ರಹಮಾನ್, ಸಾಧನಾ, ಸಾಯಿರಾ ಬಾನು ಮೊದಲಾದವರ ಜೊತೆ ನಟಿಸಿದ್ದಾರೆ.

ರಾಜಕೀಯ

೧೯೮೪ರಲ್ಲಿ ಇವರು ಕಾಂಗ್ರೆಸ್ (ಐ) ಪಕ್ಷವನ್ನು ಸೇರಿದರು, ಹಾಗೂ ಮುಂಬೈನ ವಾಯುವ್ಯ ಚುನಾವಣಾ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿ ಬಂದರು.

ಸಿನೆಮಾಗಳು

  • ರೈಲ್ವೆ ಪ್ಲಾಟ್ ಫಾರ್ಮ್
  • ಏಕ್ ಹೀ ರಿಷ್ತಾ (೧೯೫೬)
  • ಮದರ್ ಇಂಡಿಯಾ (ಭಾರತ ಮಾತೆ) (೧೯೫೬)
  • ಸಾಧನಾ (೧೯೫೮)
  • ಸುಜಾತಾ (೧೯೫೯)
  • ಮೇ ಚುಪ್ ರಹೂಂಗೀ (೧೯೬೨)
  • ಗುಮ್ರಾಹ್ (೧೯೬೩)
  • ಮುಜೆ ಜೀನೇ ದೋ (೧೯೬೩)
  • ಯೇ ರಾಸ್ತೇ ಹೆ ಪ್ಯಾರ್ ಕೇ (೧೯೬೩)
  • ಯಾದೇನ್ (೧೯೬೪)
  • ವಕ್ತ್ (೧೯೬೫)
  • ಹಮ್ರಾಝ್ (೧೯೬೭)
  • ಮೆಹೆರ್ಬಾ (೧೯೬೭)
  • ಮಿಲನ್ (೧೯೬೭)
  • ಪಡೋಸನ್ (೧೯೬೮)
  • ರೇಶ್ಮಾ ಔರ್ ಶೇರಾ (೧೯೭೧)
  • ಝಕ್ಮೀ (೧೯೭೫)
  • ಜಾನೀ ದುಶ್ಮನ್ (೧೯೭೮)
  • ಮುನ್ನಾಭಾಯಿ ಎಂ ಬೀ ಬಿ ಎಸ್ (೨೦೦೩)

ಸಮಕಾಲೀನ ನಟರು: ನರ್ಗೀಸ್, ಜಾನಿ ವಾಲ್ಕರ್, ವಹೀದಾ ರಹ್ಮಾನ್, ಸಾಧನಾ, ಮೀನಾ ಕುಮಾರಿ, ನೂತನ್

Tags:

ಸುನಿಲ್ ದತ್ ಜೀವನಸುನಿಲ್ ದತ್ ಬಾಲಿವುಡ್ಸುನಿಲ್ ದತ್ ರಾಜಕೀಯಸುನಿಲ್ ದತ್ ಸಿನೆಮಾಗಳುಸುನಿಲ್ ದತ್ಜೂನ್ ೬ಬಾಲಿವುಡ್ಭಾರತಮನಮೋಹನ್ ಸಿಂಗ್ಮೇ ೨೫೧೯೨೯೨೦೦೫

🔥 Trending searches on Wiki ಕನ್ನಡ:

ಮಾರ್ಕ್ಸ್‌ವಾದಸಾರಾ ಅಬೂಬಕ್ಕರ್ಜಗನ್ನಾಥದಾಸರುಪ್ರವಾಸಿಗರ ತಾಣವಾದ ಕರ್ನಾಟಕಮಡಿಕೇರಿನಾಯಕ (ಜಾತಿ) ವಾಲ್ಮೀಕಿರಾಜಧಾನಿಗಳ ಪಟ್ಟಿಪತ್ರಟಿಪ್ಪು ಸುಲ್ತಾನ್ಪಟ್ಟದಕಲ್ಲುಕ್ರೀಡೆಗಳುಚಿತ್ರದುರ್ಗಮಳೆಗಾಲಉಡಆದಿ ಶಂಕರಭಾರತದಲ್ಲಿ ಕೃಷಿತಿಂಥಿಣಿ ಮೌನೇಶ್ವರತೀ. ನಂ. ಶ್ರೀಕಂಠಯ್ಯಬಾಲ್ಯಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಜ್ಞಾನಪೀಠ ಪ್ರಶಸ್ತಿಐಹೊಳೆಹಿಂದೂ ಮಾಸಗಳುಸರಸ್ವತಿ ವೀಣೆಕೊಡಗಿನ ಗೌರಮ್ಮಗುಣ ಸಂಧಿದಸರಾಹೈದರಾಲಿರಾಹುಲ್ ಗಾಂಧಿಮದಕರಿ ನಾಯಕಕಾಂತಾರ (ಚಲನಚಿತ್ರ)ಕರ್ನಾಟಕದ ವಾಸ್ತುಶಿಲ್ಪಜಾಗತೀಕರಣವಿಜಯನಗರಸಂಕಲ್ಪರಾಷ್ಟ್ರಕೂಟಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕರ್ನಾಟಕ ಸಂಘಗಳುಮುಖ್ಯ ಪುಟಮೈಸೂರು ಅರಮನೆಮತದಾನ ಯಂತ್ರಚದುರಂಗದ ನಿಯಮಗಳುನಿರ್ವಹಣೆ ಪರಿಚಯನಿರ್ಮಲಾ ಸೀತಾರಾಮನ್ಮೈಸೂರುಕರಗಮಾಧ್ಯಮಬೈಲಹೊಂಗಲಕರ್ನಾಟಕ ಲೋಕಸಭಾ ಚುನಾವಣೆ, 2019ವಿಜಯಪುರಅಷ್ಟಾಂಗ ಮಾರ್ಗಕಲಬುರಗಿವೃದ್ಧಿ ಸಂಧಿಮಲೈ ಮಹದೇಶ್ವರ ಬೆಟ್ಟಮಂತ್ರಾಲಯನೀರುರಾಮ ಮಂದಿರ, ಅಯೋಧ್ಯೆಕೊಪ್ಪಳಕಲ್ಲುಹೂವು (ಲೈಕನ್‌ಗಳು)ಗಾದೆದೂರದರ್ಶನಭೀಮಸೇನಹರಿಹರ (ಕವಿ)ಕೃಷ್ಣದೇವರಾಯಉದಯವಾಣಿಪಾಕಿಸ್ತಾನಕನ್ನಡ ಬರಹಗಾರ್ತಿಯರುಸರ್ಪ ಸುತ್ತುಹಂಪೆಗದಗತಾಳೆಮರಸು.ರಂ.ಎಕ್ಕುಂಡಿಕರ್ನಾಟಕದ ಜಾನಪದ ಕಲೆಗಳುತೆಂಗಿನಕಾಯಿ ಮರಸಾರ್ವಜನಿಕ ಹಣಕಾಸುಕಮಲದಹೂಮುರುಡೇಶ್ವರ🡆 More