ಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ

13°00′51.7″N 74°52′21.2″E / 13.014361°N 74.872556°E / 13.014361; 74.872556

ಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ
ಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ is located in Karnataka
ಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ
ಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ
13°00′52″N 74°52′21″E / 13.014370°N 74.872567°E / 13.014370; 74.872567
DenominationRoman Catholic (Latin rite)
History
Foundedಅಕ್ಟೋಬರ್ ೨೪,೧೯೬೫
Consecratedಮೇ ೧೬, ೧೯೬೩
Administration
Parishಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ
Archdioceseರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ ಬೆಂಗಳೂರು
Dioceseರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು
Districtದಕ್ಷಿಣ ಕನ್ನಡ
Clergy
Archbishopಅತಿ ವಂ. ಬರ್ನಾಡ್ ಮೊರಾಸ್ ಬ್ಲೇಸಿಯಸ್ ಮೊರಾಸ್
Bishop(s)ವಂ. ಅಲೋಷಿಯಸ್ ಪೌಲ್ ಡಿ'ಸೋಜಾ
Vicar(s)ವಂ. ಎಡ್ವಿನ್ ವಿನ್ಸೆಂಟ್ ಕೊರೇಯಾ

ಸಂ. ಜೋನ್ ಬ್ಯಾಪ್ಟಿಸ್ಟ್, ಪೆರ್ಮುದೆ ಚರ್ಚು ರೋಮನ್ ಕಥೋಲಿಕ ಚರ್ಚ್ ಪಂಖಕ್ತಿಗೆ ಸೇರಿದ್ದು ಪೆರ್ಮುದೆ ಪ್ರದೇಶದಲ್ಲಿದ್ದು,ಮಂಗಳೂರು ತಾಲ್ಲೂಕುಇದರ ವ್ಯಾಪ್ತಿಯಲ್ಲಿದೆ. ಈ ಚರ್ಚು ಬಜ್ಪೆ ಮೂಲಕ ಕಟೀಲು ಇಲ್ಲಿಗೆ ಹಾದುಹೋಗುವ ಹಾದಿಯಲ್ಲಿ ಸಿಗುತ್ತದೆ. ಚರ್ಚನ್ನು ಸತ್ಯ ಹಾಗೂ ನ್ಯಾಯಕ್ಕೆ ಹೆಸರುವಾಸಿಯಾಗಿದ್ದ ಸಂ.ಜೋನ್ ಬ್ಯಾಪ್ಟಿಸ್ಟ್ ಅವರಿಗೆ ಸಮರ್ಪಿಸಲಾಗಿದೆ.

ಇತಿಹಾಸ

ಹಿಂದಿನ ಕಾಲದಲ್ಲಿ ಹೆಚ್ಚಿನ ಪೆರ್ಮುದೆ ಜನರು ಕೃಷಿಕ ಹಾಗೂ ಶ್ರಮಜೀವಿಗಳಾಗಿದ್ದರು. ವರ್ಷಗಳಿಂದೀಚೆಗೆ ಕೃಷಿ ಹಾಗೂ ತೋಟಗಾರಿಕೆಯು ಇವರ ಮುಖ್ಯ ಕಾಯಕವಾಗಿತ್ತು. ಹಿಂದಿನ ಕಾಲದಲ್ಲಿ, ಹಾಲಿನ ಉತ್ಪಾದನೆಯು ಹೆಚ್ಚಾಗಿದ್ದುದರಿಂದ ಇಲ್ಲಿಗೆ ಪೇರ್ದ ಮುಡ್ಡೆ(ತುಳು ಭಾಷೆ) ಎಂಬ ಅಡ್ಡ ಹೆಸರನ್ನೂ ಹೊಂದಿತ್ತು . ಪೆರ್ಮುದೆ ಚರ್ಚ್ ಕಟ್ಟಡದ ಅಡಿಪಾಯಕ್ಕೂ ಮುನ್ನ ಇಲ್ಲಿನ ಕಥೋಲಿಕರು ಬಜ್ಪೆ ಮತ್ತು ಕಳವಾರು ಚರ್ಚ್ ಸದಸ್ಯರಾಗಿದ್ದರು. ತಮ್ಮ ಧಾರ್ಮಿಕ ಅವಶ್ಯಕತೆಗಳಿಗಾಗಿ ಪೆರ್ಮುದೆ ಭಕ್ತರು ಹಲವಾರು ಮೈಲಿಗಳು ದೂರವಿದ್ದ ಬಜ್ಪೆ ಹಾಗೂ ಕಳವಾರು ಚರ್ಚನ್ನು ಅವಲಂಬಿಸಿದ್ದು, ವಾಹನಗಳಿಲ್ಲದ ಕಾರಣ ನಡೆದುಕೊಂಡೇ ಹೋಗುತ್ತಿದ್ದರು. ಅದಾಗಲೇ ಕಥೋಲಿಕ ಸಮುದಾಯವು ಪೆರ್ಮುದೆಯಲ್ಲಿ ಚರ್ಚನ್ನು ನಿರ್ಮಿಸುವ ಅವಶ್ಯಕತೆಯ ಬಗ್ಗೆ ಚಿಂತಿಸಿದರು. ಈ ಸಮಯದಲ್ಲಿ ಚಿಕ್ಕಮಗಳೂರು ಪ್ರದೇಶದ ಕಾಫಿ ಉದ್ಯಮಿಯಾದ ಪೆರ್ಮುದೆ ನಿವಾಸಿ ಜೋನ್ ದೆ ಬ್ಯಾಪ್ಟಿಸ್ಟ್ ನಜ್ರೆತ್ ಅವರು ಅಸ್ವಸ್ಥಗೊಂಡರು. ಅವರ ಆರೋಗ್ಯವನ್ನು ಮರಳಿ ಪಡೆಯಲು ತಾನು ಚರ್ಚು ಕಟ್ಟುತ್ತೇನೆ ಎಂದು ಅವರ ಹೆಂಡತಿಯಾದ ಸೆರಾಫಿನ್ ನಜ್ರೆತ್ ಅವರು ದೇವರಿಗೆ ಹರಕೆ ಹೊತ್ತಿದ್ದರು. ಹಾಗಾಗಿ ಸೆರಾಫಿನ್ ಅವರ ಮಗಳೊಂದಿಗೆ ಸೇರಿ ಚರ್ಚ್ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿ, ಅವರ ಮಗಳು ಕಟ್ಟಡ ಕಾಮಗಾರಿಯ ಉಸ್ತುವಾರಿಯನ್ನು ವಹಿಸಿದ್ದು, ಅವರ ಅಳಿಯ ಆಲ್ಬರ್ಟ್ ಅಂಬುದಿಯಾಸ್ ರೊಡ್ರಿಗಸ್ ಇದಕ್ಕೆ ಸಹಕಾರ ನೀಡಿದರು. ವೆಚ್ಚದ ಮೂರನೇ ಒಂದು ಭಾಗವನ್ನು ಪೋಷಕರು ಭರಿಸಿದ್ದು ಉಳಿದ ವೆಚ್ಚವನ್ನು ಚರ್ಚ್ ಸದಸ್ಯರು ಹಲಾವಾರು ಸಾಮಾಗ್ರಿ ಮತ್ತು ಮಾನವ ಶ್ರಮವನ್ನು ದಾನವಾಗಿ ನೀಡಿದರು.

ಬಿಷಪ್ ಆದ ದಿ. ಅತಿ. ವಂ. ರೇಮಂಡ್ ಡಿ'ಮೆಲ್ಲೊ ಅವರು ನವೆಂಬರ್ ೨೫, ೧೯೫೯ರಲ್ಲಿ ಚರ್ಚ್ ಮೂಲ ಅಡಿಪಾಯವನ್ನು ಆಶೀರ್ವದಿಸಿದ್ದರು. ಚರ್ಚ್ ದಾಖಲೆಗಳಿಗೆ ಇದನ್ನು ಮೇ ೧೬, ೧೯೬೩ರಲ್ಲಿ ಸೇರಿಸಿ ಆಶೀರ್ವದಿಸಲಾಯಿತು. ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು ಇಲಲ್ಇನ ಅಧಿಕೃತ ದಾಖಲೆಗಳ ಪ್ರಕಾರ ಪೆರ್ಮುದೆ ಚರ್ಚು ಅಕ್ಟೋಬರ್ ೨೪, ೧೯೬೫ರಲ್ಲಿ ಬಜ್ಪೆ ಮತ್ತು ಕಳವಾರು ಚರ್ಚ್-ಗಳಿಂದ ಪ್ರತ್ಯೇಕಗೊಂಡು ಸ್ವತಂತ್ರವಾಗಿ ಸ್ಥಾಪಿತಗೊಂಡಿತು. ದಿ| ವಂ. ಜೇಕಬ್ ಕ್ರಾಸ್ತಾ ಅವರು ಇಲ್ಲಿ ನ ಮೊದಲ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು.

ಚರ್ಚನ್ನು ಶ್ರೀ ಜೋನ್ ಬ್ಯಾಪ್ಟಿಸ್ಟ್ ಬಾಲ್ತಾಜಾರ್ ನಜ್ರೆತ್ ಅವರ ಸವಿನೆನಪಿಗಾಗಿ ನಿರ್ಮಿಸಿದ್ದರಿಂದ ನ್ಯಾಯ ಹಾಗೂ ಸತ್ಯದ ಪ್ರತೀಕವಾದ ಸಂ.ಜೋನ್ ಬ್ಯಾಪ್ಟಿಸ್ಟ್ ಅವರಿಗೆ ಸಮರ್ಪಿಸಲಾಗಿದೆ. ಕಟೀಲು ಚರ್ಚ್ ಸ್ಥಾಪನೆಗೊಳ್ಳುವವರೆಗೂ ಪೆರ್ಮುದೆ ಚರ್ಚು ಸುತ್ತಲಿನ ಭಕ್ತರ ಧಾರ್ಮಿಕ ಅವಶ್ಯಕತೆಗಳನ್ನು ಕಟೀಲು ಮತ್ತು ಎಕ್ಕಾರು ಪ್ರದೇಶದವರೆಗೂ ವಿಸ್ತಾರವನ್ನು ಹೊಂದಿತ್ತು. ೧೯೭೧ರಲ್ಲಿ ಕಟೀಲು ಚರ್ಚು ಸ್ಥಾಪಿತವಾಗಿದ್ದು, ಕಟೀಲು ಹಾಗೂ ಎಕ್ಕಾರು ಪ್ರದೇಶದ ಕ್ರೈಸ್ತರು ಕಟೀಲು ಚರ್ಚಿನ ಸದಸ್ಯರಾದರು. ಕ್ರೈಸ್ತ ಭಕ್ತರ ಧಾರ್ಮಿಕ ಅವಶ್ಯಕತೆಗಳನ್ನು ಪೂರೈಸಲು ಈ ಚರ್ಚು ಹಲವಾರು ಧರ್ಮಗುರು ಹಾಗೂ ಧರ್ಮಭಗಿನಿಯರನ್ನು ರೂಪಿಸಿದೆ.

ಜೂನ್ ೧೩, ೨೦೧೬ರಲ್ಲಿ ಈ ಚರ್ಚಿನ ಸುವರ್ಣ ಮಹೋತ್ಸವವನ್ನು ಆಚರಿಸಲಾಗಿದೆ.

ಜನಸ್ಂಖ್ಯೆ

ಚರ್ಚು ೧೮೦ ಕುಟುಂಬಗಳಲ್ಲಿ, ಸುಮಾರು ೮೨೬ ಸದಸ್ಯರನ್ನು ನವೆಂಬರ್ ೨೦೧೫ರ ಜನಗಣತಿ ಪ್ರಕಾರ ಹೊಂದಿದೆ.

ಆಡಳಿತ

ಇದರ ಸ್ಥಾಪನೆ ಆದ ಬಳಿಕ ೧೧ ಮಂದಿ ಚರ್ಚ್ ಧರ್ಮಗುರುಗಳು ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಹೆಸರುಗಳನ್ನು ಕೆಳಗೆ ನೀಡಲಾಗಿದೆ.

  • ವಂ. ಜೇಕಬ್ ಎಸ್. ಕ್ರಾಸ್ತ*ವಂ. Edwin Pinto
  • ವಂ. ಹಿಲರಿ ಸ್ಯಾಂಕ್ಟಿಸ್
  • ವಂ. ಹೆನ್ರಿ ಫೆರ್ನಾಡಿಸ್
  • ವಂ. ವರ್ನನ್ ವಾಸ್
  • ವಂ. ಡೆನಿಸ್ ಮೊರಾಸ್ ಫ್ರಭು
  • ವಂ. ವಿಕ್ಟರ್ ಜೋರ್ಜ್ ಡಿ'ಸೋಜಾ
  • ವಂ. ಪೀಟರ್ ಥಿಯೋದೊರ್ ಡಿ'ಸೋಜಾ
  • ವಂ. ರಿಚ್ಚರ್ಡ್ ಲಸ್ರಾದೊ
  • ವಂ. ಓಸ್ವಾಲ್ಡ್ ಲಸ್ರಾದೊ
  • ವಂ. ವಲೇರಿಯನ್ ರೊಡ್ರಿಗಸ್
  • ವಂ. ಎಡ್ವಿನ್ ವಿನ್ಸೆಂಟ್ ಕೊರೇಯಾ (ಪ್ರಸ್ತುತ ಧರ್ಮಗುರು ಮತ್ತು ವಿಕಾರ್)

ಮುಂದೆ ನೋಡಿ

  • Roman Catholicism in Mangalore
  • Goan Catholics
  • Deanery of Belthangady
  • Christianity in Karnataka
  • Most Holy Redeemer Church, Belthangady
  • St. Patrick Church, Siddakatte

ಆಧಾರಗಳು

ಬಾಹ್ಯ ಕೊಂಡಿಗಳು

Tags:

ಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ ಇತಿಹಾಸಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ ಜನಸ್ಂಖ್ಯೆಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ ಆಡಳಿತಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ ಮುಂದೆ ನೋಡಿಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ ಆಧಾರಗಳುಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ ಬಾಹ್ಯ ಕೊಂಡಿಗಳುಸಂ. ಜೋನ್ ಬ್ಯಾಪ್ಟಿಸ್ಟ್ ಚರ್ಚು, ಪೆರ್ಮುದೆ

🔥 Trending searches on Wiki ಕನ್ನಡ:

ಬೀಚಿಡೊಳ್ಳು ಕುಣಿತಕರಗಬರವಣಿಗೆಚಂದ್ರಯಾನ-೩ಕನ್ನಡ ವ್ಯಾಕರಣಪಿ.ಲಂಕೇಶ್ವಚನ ಸಾಹಿತ್ಯಸಮಾಜ ವಿಜ್ಞಾನಸಂತಾನೋತ್ಪತ್ತಿಯ ವ್ಯವಸ್ಥೆನಾಯಕ (ಜಾತಿ) ವಾಲ್ಮೀಕಿಅಲ್ಲಮ ಪ್ರಭುಸಂವಿಧಾನಕೃಷ್ಣರಾಜಸಾಗರಶೈಕ್ಷಣಿಕ ಮನೋವಿಜ್ಞಾನಪೆರಿಯಾರ್ ರಾಮಸ್ವಾಮಿನಿರುದ್ಯೋಗಶ್ರುತಿ (ನಟಿ)ಮಧುಮೇಹಮೂಕಜ್ಜಿಯ ಕನಸುಗಳು (ಕಾದಂಬರಿ)ವೆಂಕಟೇಶ್ವರ ದೇವಸ್ಥಾನವಿಚಿತ್ರ ವೀಣೆಮಾರ್ಕ್ಸ್‌ವಾದಆದೇಶ ಸಂಧಿವಿತ್ತೀಯ ನೀತಿಟಿಪ್ಪು ಸುಲ್ತಾನ್ಋತುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಮಂಡ್ಯಮಹಾಕವಿ ರನ್ನನ ಗದಾಯುದ್ಧತುಮಕೂರುಮೈಗ್ರೇನ್‌ (ಅರೆತಲೆ ನೋವು)ಬಾಬು ಜಗಜೀವನ ರಾಮ್ಭಾರತೀಯ ಸ್ಟೇಟ್ ಬ್ಯಾಂಕ್ರಾಯಲ್ ಚಾಲೆಂಜರ್ಸ್ ಬೆಂಗಳೂರುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಮೌರ್ಯ ಸಾಮ್ರಾಜ್ಯಎಚ್.ಎಸ್.ಶಿವಪ್ರಕಾಶ್ದಶಾವತಾರಅಸಹಕಾರ ಚಳುವಳಿಭಯೋತ್ಪಾದನೆಭಾರತದ ಸಂವಿಧಾನದ ೩೭೦ನೇ ವಿಧಿಪುಟ್ಟರಾಜ ಗವಾಯಿಭಾರತದಲ್ಲಿನ ಜಾತಿ ಪದ್ದತಿಗಾಳಿ/ವಾಯುಗ್ರಹಕುಂಡಲಿಬೆಟ್ಟದ ನೆಲ್ಲಿಕಾಯಿಸೆಸ್ (ಮೇಲ್ತೆರಿಗೆ)ಅಕ್ಷಾಂಶ ಮತ್ತು ರೇಖಾಂಶಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಸಂವಹನಜಯಂತ ಕಾಯ್ಕಿಣಿಅಷ್ಟ ಮಠಗಳುರಾಘವಾಂಕಅಂತಿಮ ಸಂಸ್ಕಾರಅಂತರರಾಷ್ಟ್ರೀಯ ನ್ಯಾಯಾಲಯದೇಶಪಪ್ಪಾಯಿವಚನಕಾರರ ಅಂಕಿತ ನಾಮಗಳುಯೋಗಮನರಂಜನೆಬೆಳಗಾವಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಜನ್ನಕಬ್ಬುಸರ್ಕಾರೇತರ ಸಂಸ್ಥೆಕರ್ನಾಟಕದ ಕಲೆ ಮತ್ತು ಸಂಸ್ಕೃತಿಊಳಿಗಮಾನ ಪದ್ಧತಿಭಾರತೀಯ ಸಂಸ್ಕೃತಿವಿಷ್ಣುವರ್ಧನ್ (ನಟ)ದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಸಂಚಿ ಹೊನ್ನಮ್ಮಕರ್ಬೂಜಕರ್ನಾಟಕದ ಮಹಾನಗರಪಾಲಿಕೆಗಳುಅರಬ್ಬೀ ಸಾಹಿತ್ಯಚಂದ್ರಶೇಖರ ಕಂಬಾರಮಂತ್ರಾಲಯಅಟಲ್ ಬಿಹಾರಿ ವಾಜಪೇಯಿ🡆 More