ವಿದ್ಯುನ್ಮಾನ ನಗರ

ಎಲೆಕ್ಟ್ರಾನಿಕ್ ಸಿಟಿ ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿರುವ ಮಾಹಿತಿ ತಂತ್ರಜ್ಞಾನ ಹಾಗು ವಿದ್ಯುನ್ಮಾನ ಸಂಸ್ಥೆಗಳ ಬೃಹತ್ ತಾಣವಾಗಿದೆ.

ಇದು ಭಾರತದ ಅತಿದೊಡ್ಡ ವಿದ್ಯುನ್ಮಾನ ಕೈಗಾರಿಕಾ ಪಾರ್ಕುಗಳಲ್ಲಿ ಒಂದಾಗಿದೆ. ಇದನ್ನು ೩ ಹಂತಗಳಾಗಿ ನಿರ್ಮಾಣ ಮಾಡಲಾಗಿದೆ. ಹಂತ I, ಹಂತ II ಮತ್ತು ಹಂತ III. ಎಲೆಕ್ಟ್ರಾನಿಕ್ ಸಿಟಿಯನ್ನು ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಅಭಿವೃದ್ಧಿ ಪ್ರವರ್ತಕ ಕಿಯೋನಿಕ್ಸ್ ಕರ್ನಾಟಕ ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟಿತು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ೨೦೦ಕ್ಕೂ ಹೆಚ್ಚು ಪ್ರಮುಖ ಐಟಿ ಐಟಿಇಎಸ್, ಏವಿಯಾನಿಕ್ಸ್ ಕಂಪನಿಗಳಿವೆ. ಬೆಂಗಳೂರು ನಗರದಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಇಲ್ಲಿ ತಮ್ಮ ಕಛೇರಿಗಳನ್ನು ಹೊಂದಿವೆ.

ಎಲೆಟ್ರಾನಿಕ್ ಸಿಟಿ
Electronic City
Suburb
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ನಗರ ಜಿಲ್ಲೆ
ಸ್ಥಾಪಿಸಿದವರುRama Krishna Baliga
Area
 • Total೧೩೪ ha (೩೩೨ acres)
Languages
 • Officialಕನ್ನಡ
ಸಮಯ ವಲಯಯುಟಿಸಿ+5:30
ISO 3166 codeIN-KA
ವಾಹನ ನೋಂದಣಿKA-51
ಜಾಲತಾಣwww.electronic-city.in
Electronic City
ಸ್ಥಾಪನೆ1978
ಸ್ಥಳHosur Road, ಬೆಂಗಳೂರು
ಪ್ರದೇಶ332 acres (134 ha)
ಕೈಗಾರಿಕೆಗಳುವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ,Avionics
ಪ್ರಮುಖ ಕಂಪನಿಗಳುBHEL, ವಿಪ್ರೊ, ಟೆಕ್‌ ಮಹೀಂದ್ರಾ, ಹೆವ್ಲೆಟ್-ಪ್ಯಾಕರ್ಡ್, ಇನ್ಫೋಸಿಸ್, Patni Computer Systems, C-DOT, CGI, ಸೀಮೆನ್ಸ್ ಎಜಿ,Amphenol,IIITB
ಉದ್ಯೋಗಿಗಳು100,000
ಬಂಡವಾಳUS$ 2,000,000

ಇತಿಹಾಸ

೧೯೭೮ರಲ್ಲಿ ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಕೋನಪ್ಪನ ಅಗ್ರಹಾರ, ದೊಡ್ಡ ತೋಗುರು ಹಳ್ಳಿಗಳ ೩೩೨ ಎಕರೆ (೧.೩ ಚ.ಕಿ.ಮೀ) ವಿಸ್ತೀರ್ಣ ಪ್ರದೇಶದಲ್ಲಿ ಕರ್ನಾಟಕ ರಾಜ್ಯದ ಸರಕಾರಿ ಸಂಸ್ಥೆಯಾದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ದಿ ನಿಗಮ (ಕಿಯೋನಿಕ್ಸ್)ನಿಂದ ಸ್ಥಾಪಿಸಲಾಯಿತು. ೧೯೯೭ರಲ್ಲಿ ಕಿಯೋನಿಕ್ಸ್ ಎಲೆಕ್ಟ್ರಾನಿಕ್ ಸಿಟಿ ನಿರ್ವಹಣೆಯನ್ನು ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ (ELCIA)ಗೆ ವಹಿಸಿತು. ಇದು ಸ್ಥಳೀಯ ಇಂಡಸ್ಟ್ರಿಗಳ ಪ್ರತಿನಿಧಿಗಳನ್ನು ಹೊಂದಿದೆ. ಭದ್ರತಾ ವವ್ಯಸ್ಥೆಯನ್ನು ELCIA ಒದಗಿಸುತ್ತದೆ ಮತ್ತು ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸಾರಿಗೆ

ಎಲೆಕ್ಟ್ರಾನಿಕ್ ಸಿಟಿ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಹೆದ್ದಾರಿ ಉನ್ನತೀಕರಿಸಲಾಗಿದೆ. ನಾಲ್ಕು ಲೇನ್‍ಗಳ ಮಿಶ್ರ ಕಾರಿಡಾರ್ ಅನ್ನು ೨೨ ಜನವರಿ ೨೦೧೦ ರಂದು ತೆರೆಯಲಾಯಿತು. ೯೯೮೫ ಕಿಮೀ ಉದ್ದದ ಎಕ್ಸ್‍ಪ್ರೆಸ್ ವೇ ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದಾಗಿದೆ. ಈ ಎತ್ತರದ ಏರಿಕೆಯು, ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೋರ್ಡ್ ವರೆಗು ಕಡಿಮೆಯೆಂದರೆ ೧೫ ನಿಮಿಷಗಳಲ್ಲಿ ಪ್ರಯಾಣಿಸಬಹುದು.

ಉಲ್ಲೇಖಗಳು

Tags:

ಕರ್ನಾಟಕಭಾರತ

🔥 Trending searches on Wiki ಕನ್ನಡ:

ಗುಪ್ತ ಸಾಮ್ರಾಜ್ಯಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಸಂಗೀತಜೋಡು ನುಡಿಗಟ್ಟುಜೈನ ಧರ್ಮಕಟ್ಟುಸಿರುಬಿ. ಆರ್. ಅಂಬೇಡ್ಕರ್ಚೌರಿ ಚೌರಾ ಘಟನೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕೊರೋನಾವೈರಸ್ಪರಮಾಣುಮೈಗ್ರೇನ್‌ (ಅರೆತಲೆ ನೋವು)ಕುರಿಒನಕೆ ಓಬವ್ವಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಸಾರ್ವಜನಿಕ ಹಣಕಾಸುಕನ್ನಡದಲ್ಲಿ ವಚನ ಸಾಹಿತ್ಯಅರ್ಥಶಾಸ್ತ್ರಕೃಷ್ಣದೇವರಾಯದರ್ಶನ್ ತೂಗುದೀಪ್ಹೊಯ್ಸಳ ವಿಷ್ಣುವರ್ಧನವಸುಧೇಂದ್ರಕ್ರಿಯಾಪದಬಾನು ಮುಷ್ತಾಕ್ದಕ್ಷಿಣ ಕನ್ನಡಮಾರ್ಕ್ಸ್‌ವಾದಗಂಗಾಭಾರತದ ರಾಜಕೀಯ ಪಕ್ಷಗಳುಗೋವಡಿ.ಆರ್. ನಾಗರಾಜ್ಶಾಂತಕವಿವ್ಯಂಜನಜ್ಞಾನಪೀಠ ಪ್ರಶಸ್ತಿದ್ವಿಗು ಸಮಾಸಲಾಲ್ ಬಹಾದುರ್ ಶಾಸ್ತ್ರಿಬೆಂಗಳೂರಿನ ಇತಿಹಾಸಟಾಮ್ ಹ್ಯಾಂಕ್ಸ್ತ್ರಿಪದಿಶ್ರೀ ರಾಘವೇಂದ್ರ ಸ್ವಾಮಿಗಳುಬ್ಯಾಡ್ಮಿಂಟನ್‌೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಗೌರಿ ಹಬ್ಬಬೀದರ್ಎಂ. ಎಂ. ಕಲಬುರ್ಗಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಬೇಸಿಗೆಬೌದ್ಧ ಧರ್ಮತೆಂಗಿನಕಾಯಿ ಮರವಿಧಾನ ಸಭೆಬಾಬು ಜಗಜೀವನ ರಾಮ್ಅಂಕಿತನಾಮಕಯ್ಯಾರ ಕಿಞ್ಞಣ್ಣ ರೈಅಣ್ಣಯ್ಯ (ಚಲನಚಿತ್ರ)ಗೋವಿಂದ ಪೈದ್ವಂದ್ವ ಸಮಾಸವ್ಯಾಯಾಮಡಿ.ವಿ.ಗುಂಡಪ್ಪದಿಕ್ಕುಮಕರ ಸಂಕ್ರಾಂತಿಭಾವಗೀತೆವಿಜಯದಾಸರುಅಕ್ಬರ್ಮಂಜುಳಪತ್ರಹರಪ್ಪಬ್ಯಾಬಿಲೋನ್ಕನ್ನಡ ಸಂಧಿಪ್ಲೇಟೊಸಂತಾನೋತ್ಪತ್ತಿಯ ವ್ಯವಸ್ಥೆಪ್ರವಾಹಶಂಕರ್ ನಾಗ್ಕಂಪ್ಯೂಟರ್ರಜಪೂತಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಸಮುಚ್ಚಯ ಪದಗಳುಕರ್ನಾಟಕ ಸರ್ಕಾರಮೋಕ್ಷಗುಂಡಂ ವಿಶ್ವೇಶ್ವರಯ್ಯಶಿಕ್ಷಣ🡆 More