ಮುಳ್ಳುಗಳು, ಸ್ಪೈನ್‍ಗಳು ಮತ್ತು ಮುಳ್ಳಿನ ಗಂತಿಗಳು

ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ.

ಸಸ್ಯ ರೂಪವಿಜ್ಞಾನದಲ್ಲಿ, ಮುಳ್ಳುಗಳು, ಸ್ಪೈನ್‍ಗಳು ಮತ್ತು ಮುಳ್ಳಿನ ಗಂತಿಗಳು, ಮತ್ತು ಸಾಮಾನ್ಯವಾಗಿ ಮುಳ್ಳಿನಂಥ ರಚನೆಗಳು ಎಂದರೆ ಗಟ್ಟಿ, ಗಡುಸಾದ ವಿಸ್ತರಣೆಗಳು ಅಥವಾ ಎಲೆಗಳು, ಬೇರುಗಳು, ಕಾಂಡಗಳು ಅಥವಾ ಮೊಗ್ಗುಗಳ ಮಾರ್ಪಾಡುಗಳು. ಇವು ಚೂಪಾದ, ಬಿರುಸು ಕೊನೆಗಳನ್ನು ಹೊಂದಿರುತ್ತವೆ ಮತ್ತು ಸಾಮಾನ್ಯವಾಗಿ ಒಂದೇ ಕಾರ್ಯವನ್ನು ನಿರ್ವಹಿಸುತ್ತವೆ: ಸಸ್ಯ ವಸ್ತುವನ್ನು ತಿನ್ನದಿರುವಂತೆ ಪ್ರಾಣಿಗಳನ್ನು ದೈಹಿಕವಾಗಿ ತಡೆಯುವುದು. ಸಾಮಾನ್ಯ ಭಾಷೆಯಲ್ಲಿ ಈ ಪದಗಳನ್ನು ಹೆಚ್ಚು ಕಡಿಮೆ ಅದಲುಬದಲಾಗಿ ಬಳಸಲಾಗುತ್ತದೆ, ಆದರೆ ಸಸ್ಯಶಾಸ್ತ್ರೀಯ ಪದಗಳಲ್ಲಿ, ಮುಳ್ಳುಗಳು ಕುಡಿಗಳಿಂದ ಹುಟ್ಟಿಕೊಂಡಿರುತ್ತವೆ (ಇವು ಶಾಖೆಗಳನ್ನು ಹೊಂದಬಹುದು ಅಥವಾ ಹೊಂದದಿರಬಹುದು, ಎಲೆಗಳನ್ನು ಹೊಂದಿರಬಹುದು ಅಥವಾ ಹೊಂದದಿರಬಹುದು, ಮತ್ತು ಇವು ಮೊಗ್ಗಿನಿಂದ ಹುಟ್ಟಿಕೊಳ್ಳಬಹುದು ಅಥವಾ ಹುಟ್ಟದೇ ಇರಬಹುದು), ಸ್ಪೈನ್‍ಗಳು ಎಲೆಗಳಿಂದ ಹುಟ್ಟಿಕೊಂಡಿರುತ್ತವೆ (ಸಂಪೂರ್ಣ ಎಲೆಯಿಂದ ಅಥವಾ ಒಳಗೆ ನಾಳೀಯ ಕಟ್ಟುಗಳನ್ನು ಹೊಂದಿರುವ ಎಲೆಯ ಯಾವುದೋ ಭಾಗದಿಂದ, ಉದಾ. ಪರ್ಣವೃಂತ, ಅಥವಾ ಕಾವಿನೆಲೆ), ಮತ್ತು ಮುಳ್ಳಿನ ಗಂತಿಗಳು ಬಾಹ್ಯಪದರ ಅಂಗಾಂಶದಿಂದ ಹುಟ್ಟಿಕೊಂಡಿರುತ್ತವೆ (ಹಾಗಾಗಿ ಇವು ಸಸ್ಯದ ಮೇಲೆ ಎಲ್ಲಿಯಾದರೂ ಕಾಣಬಹುದು ಮತ್ತು ಒಳಗಡೆ ನಾಳೀಯ ಕಟ್ಟುಗಳನ್ನು ಹೊಂದಿರುವುದಿಲ್ಲ).

ಮುಳ್ಳುಗಳು, ಸ್ಪೈನ್‍ಗಳು ಮತ್ತು ಮುಳ್ಳಿನ ಗಂತಿಗಳು

ಸ್ಪೈನ್‍ಗಳು ಅಥವಾ ಗ್ಲಾಕಿಡ್‍ಗಳ ಎಲ್ಲ ಕಾರ್ಯಗಳು ಸಸ್ಯಾಹಾರಿಗಳು ಮತ್ತು ಇತರ ಪ್ರಾಣಿಗಳ ದೈಹಿಕ ದಾಳಿಗಳಿಂದ ರಕ್ಷಣೆಗೆ ಸೀಮಿತವಾಗಿಲ್ಲ. ಕೆಲವು ಸಂದರ್ಭಗಳಲ್ಲಿ, ಸ್ಪೈನ್‍ಗಳು ಅವನ್ನು ಬೆಳೆಸುವ ಸಸ್ಯಗಳಿಗೆ ನೆರಳು ಒದಗಿಸುತ್ತವೆ ಅಥವಾ ಹೊದಿಕೆ ಒದಗಿಸುತ್ತವೆ ಎಂದು ತೋರಿಸಲಾಗಿದೆ. ಹೀಗೆ, ಇವು ಸಸ್ಯಗಳನ್ನು ಅತಿಯಾದ ಉಷ್ಣಾಂಶಗಳಿಂದ ರಕ್ಷಿಸುತ್ತವೆ. ಉದಾಹರಣೆಗೆ ಕಳ್ಳಿಗಿಡಗಳ ಸ್ಪೈನ್‍ಗಳು ಬೇಸಿಗೆಯಲ್ಲಿ ಶೃಂಗದ ವರ್ಧನೋತಕಕ್ಕೆ ನೆರಳು ಒದಗಿಸುತ್ತವೆ, ಮತ್ತು ಅಪಂಟಿಯೋಡಿಯೈಯ ಸದಸ್ಯರಲ್ಲಿ ಗ್ಲಾಕಿಡ್‍ಗಳು ಚಳಿಗಾಲದಲ್ಲಿ ಶೃಂಗದ ವರ್ಧನೋತಕಕ್ಕೆ ಹೊದಿಕೆ ಒದಗಿಸುತ್ತವೆ. ಸ್ಪೈನ್‍ಗಳು ವಿಶೇಷ ಪರಾಗಸ್ಪರ್ಶಕಗಳ ಮೇಲೆ ಕಡಿಮೆ ಪ್ರಭಾವವನ್ನು ಹೊಂದಿವೆ ಎಂದು ತೋರುತ್ತದೆ ಎಂದು ಅಗ್ರವಾಲ್ ಮತ್ತು ಇತರರು ಕಂಡುಕೊಂಡರು. ಪರಾಗಸ್ಪರ್ಶಕಗಳ ಮೇಲೆ ಅನೇಕ ಸಸ್ಯಗಳು ಸಂತಾನೋತ್ಪತ್ತಿಗಾಗಿ ಅವಲಂಬಿಸುತ್ತವೆ.

ಮುಳ್ಳುಗಳು ಮಾರ್ಪಾಡುಗೊಂಡ ಶಾಖೆಗಳು ಅಥವಾ ಕಾಂಡಗಳು. ಅವು ಸರಳವಾಗಿರಬಹುದು ಅಥವಾ ಕವಲೊಡೆದಿರಬಹುದು. ಸ್ಪೈನ್‍ಗಳು ಮಾರ್ಪಾಡುಗೊಂಡ ಎಲೆಗಳು, ಪರ್ಣವೃಂತಗಳು ಅಥವಾ ಎಲೆಗಳ ಭಾಗಗಳಾಗಿವೆ, ಉದಾಹರಣೆಗೆ ಎಲೆಯ ಎಳೆಗಳ ವಿಸ್ತರಣೆಗಳು. ಕೆಲವು ಲೇಖಕರು ಸ್ಪೈನ್‍ಗಳು ಮತ್ತು ಮುಳ್ಳುಗಳನ್ನು ವ್ಯತ್ಯಾಸ ಮಾಡಲು ಇಷ್ಟಪಡುವುದಿಲ್ಲ, ಏಕೆಂದರೆ ಮುಳ್ಳುಗಳಂತೆ, ಸ್ಪೈನ್‍ಗಳು ಸಾಮಾನ್ಯವಾಗಿ ನಾಳೀಯ ಅಂಗಾಂಶವನ್ನು ಹೊಂದಿರುತ್ತವೆ.

ಉಲ್ಲೇಖಗಳು

Tags:

en:Wikipedia:Glossaryen:Wikipedia:Guide to layouten:Wikipedia:Manual of Style

🔥 Trending searches on Wiki ಕನ್ನಡ:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಎಸ್. ಬಂಗಾರಪ್ಪಕದಂಬ ಮನೆತನವಿಜಯನಗರವಚನ ಸಾಹಿತ್ಯಶರಭಮೂಲಧಾತುಗಳ ಪಟ್ಟಿಭಗವದ್ಗೀತೆಅಲೆಕ್ಸಾಂಡರ್ವಾಯು ಮಾಲಿನ್ಯಉಪನಯನಮಾರಾಟ ಪ್ರಕ್ರಿಯೆಸಾಮ್ರಾಟ್ ಅಶೋಕಸಿಂಹಜ್ಞಾನಪೀಠ ಪ್ರಶಸ್ತಿಜೋಡು ನುಡಿಗಟ್ಟುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಸುಭಾಷ್ ಚಂದ್ರ ಬೋಸ್ಭಾರತೀಯ ಕಾವ್ಯ ಮೀಮಾಂಸೆಕ್ರಿಯಾಪದಪೋಲಿಸ್ಭಾರತ ರತ್ನಮದಕರಿ ನಾಯಕಮತದಾನ (ಕಾದಂಬರಿ)ಅಮಿತ್ ಶಾಯೋಗವಾಹಚಂದ್ರಶೇಖರ ಪಾಟೀಲಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರಪು. ತಿ. ನರಸಿಂಹಾಚಾರ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಹೆಚ್.ಡಿ.ದೇವೇಗೌಡಕನ್ನಡ ಸಾಹಿತ್ಯಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗುಣ ಸಂಧಿಕಾಲ್ಪನಿಕ ಕಥೆವರ್ಗೀಯ ವ್ಯಂಜನಮಾನವನ ಚರ್ಮಇಚ್ಛಿತ್ತ ವಿಕಲತೆಬಿರಿಯಾನಿಅಣ್ಣಯ್ಯ (ಚಲನಚಿತ್ರ)ಕೃಷ್ಣದೇವರಾಯಜೂಜುಗಣಗಲೆ ಹೂಖ್ಯಾತ ಕರ್ನಾಟಕ ವೃತ್ತಧನಂಜಯ್ (ನಟ)ಆದಿವಾಸಿಗಳುಬಲಗೋಕರ್ಣವ್ಯವಹಾರಗೋಲ ಗುಮ್ಮಟಉತ್ತಮ ಪ್ರಜಾಕೀಯ ಪಕ್ಷಶ್ರೀ ಕೃಷ್ಣ ಪಾರಿಜಾತಮಹೇಂದ್ರ ಸಿಂಗ್ ಧೋನಿನಾಗರೀಕತೆಸಂಸ್ಕಾರಅಂತರಜಾಲಪ್ರಬಂಧಹೆಚ್.ಡಿ.ಕುಮಾರಸ್ವಾಮಿಜಗನ್ನಾಥ ದೇವಾಲಯಕೆ ವಿ ನಾರಾಯಣಭೂಕಂಪಶಿವಪ್ಪ ನಾಯಕಶೃಂಗೇರಿ ಶಾರದಾಪೀಠಯಕ್ಷಗಾನಛತ್ರಪತಿ ಶಿವಾಜಿಕನ್ನಡ ನ್ಯೂಸ್ ಟುಡೇಭಾರತದಲ್ಲಿ ಮೀಸಲಾತಿಕಿತ್ತೂರು ಚೆನ್ನಮ್ಮರಾಷ್ಟ್ರಕೂಟನರೇಂದ್ರ ಮೋದಿಸೀತೆಧರ್ಮಪೊನ್ನಮಡಿವಾಳ ಮಾಚಿದೇವಮಾಟ - ಮಂತ್ರವಾಣಿ ಹರಿಕೃಷ್ಣಕನ್ನಡದಲ್ಲಿ ಕಾದಂಬರಿ ಸಾಹಿತ್ಯಜೋಗಿ (ಚಲನಚಿತ್ರ)🡆 More