ಮರುಳ ಮುನಿಯನ ಕಗ್ಗ

ಮರುಳ ಮುನಿಯನ ಕಗ್ಗ ಮಂಕುತಿಮ್ಮನ ಕಗ್ಗದ ಮುಂದುವರಿದ ಭಾಗವೇ ಆಗಿದೆ.

ಇದು ಡಿವಿಜಿಯವರ ಮರಣಾನಂತರ ಆಯ್ದು ಪ್ರಕಟಿಸಿರುವ ಕವಿತೆಗಳ ಗೊಂಚಲು. ಪರಮಾತ್ಮನ ಸಾಕ್ಷಾತ್ಕಾರದ ಕುರಿತು ಅತೀವ ಆಸಕ್ತಿ ವಹಿಸಿದ್ದ ವ್ಯಕ್ತಿಯೊಬ್ಬನ ಭಾವಾಭಿವ್ಯಕ್ತಿಯ ಸಾಧನವಾಗಿ ಇದನ್ನು ಕಾಣಬಹುದು. ಮರುಳನೊಬ್ಬ ಬರೆದಿರುವಂತೆ ತೋರ್ಪಡಿಸಿಕೊಂಡರೂ ಪ್ರಬುದ್ಧ ವ್ಯಕ್ತಿಯ ಜ್ಞಾನಶ್ರೇಷ್ಠತೆಯನ್ನು ಒಂದೊಂದು ಕವಿತೆಯಲ್ಲಿಯೂ ಕಾಣಬಹುದು. "ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ" ಎಂದಿದ್ದರೂ ಮರುಳ ಮುನಿಯ ಅಭಿವ್ಯಕ್ತಿಯಲ್ಲಿ ಮಂಕುತಿಮ್ಮನಿಗಿಂತಲೂ ಮಾಗಿದ್ದಾನೆ, ಹೆಚ್ಚು ಅನುಭವ ಪಡೆದಿದ್ದಾನೆ ಎನ್ನಬಹುದು. ಇದರ ಒಂದೊಂದು ಸಾಲನ್ನೂ ಡಿ.ವಿ.ಜಿ. ಅನುಭವಿಸಿ ಬರೆದರು.

ಮರುಳ ಮುನಿಯನ ಕಗ್ಗ
ಲೇಖಕರುಡಿ.ವಿ.ಗುಂಡಪ್ಪ
ಮೂಲ ಹೆಸರುಮಂಕುತಿಮ್ಮನ ಕಗ್ಗ ಭಾಗ ೨
ದೇಶಭಾರತ
ಭಾಷೆಕನ್ನಡ
ಸರಣಿಮಂಕುತಿಮ್ಮನ ಕಗ್ಗ
ಪ್ರಕಾಶಕರುಕಾವ್ಯಾಲಯ, ಮೈಸೂರು
ಪ್ರಕಟವಾದ ದಿನಾಂಕ
1984
ಮಾಧ್ಯಮ ಪ್ರಕಾರಪೇಪರ್ ಬ್ಯಾಕ್
ಪುಟಗಳು೨೧೭

ವಿವರ

ಡಿವಿಜಿ ಕಾಲಾಕಾಲಕ್ಕೆ ಬರೆದಿರುವ ಕವಿತೆಗಳನ್ನು ಸಂಗ್ರಹಿಸಿ ಇಲ್ಲಿ ಒಟ್ಟುಗೂಡಿಸಲಾಗಿದೆ. ಯಾವಾಗ ಪ್ರಕಟಗೊಳ್ಳಲಿವೆಯೆಂದು ಪ್ರಾಯಶಃ ಅವರಿಗೂ ಗೊತ್ತಿರಲಿಲ್ಲ. ಗೋಖಲೆ ಸಾರ್ವಜನಿಕ ಸಂಸ್ಥೆಯೊಂದಿಗೆ ಡಿವಿಜಿ ಅವರಿಗೆ ಸುದೀರ್ಘ ಕಾಲದ ಒಡನಾಟವಿದ್ದುದರಿಂದ ಅವರ ಸೊಸೆ ವಸಂತಮ್ಮ (ಬಿಜಿಎಲ್ ಸ್ವಾಮಿಯವರ ಧರ್ಮಪತ್ನಿ) ಕವಿತೆಗಳನ್ನು ಪ್ರಕಟಿಸುವ ಹಕ್ಕನ್ನು ಸಂಸ್ಥೆಗೆ ಬಿಟ್ಟುಕೊಟ್ಟರು. ಸಂಸ್ಥೆ ಇದಕ್ಕಾಗಿ ಸಮಿತಿಯೊಂದನ್ನು ರಚಿಸಿ ನಿಟ್ಟೂರು ಶ್ರೀನಿವಾಸ ರಾಯರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿತು. ಆ ಸಮಿತಿ ಡಿವಿಜಿಯವರ ಸಮಾನಮನಸ್ಕರೂ ಆಪ್ತರೂ ಆದಂಥ ಎನ್. ರಂಗನಾಥ ಶರ್ಮಾರವರಿಗೆ ಕವಿತೆಗಳ ಕರಡು ತಿದ್ದಲು ಅನುವು ಮಾಡಿಕೊಟ್ಟಿತು. ಎನ್. ರಂಗನಾಥ ಶರ್ಮಾರವರು ಕರಡು ತಿದ್ದುವ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕೆಲವೆಡೆ ಅಕ್ಷರಗಳು ಸ್ಪಷ್ಟವಿರಲಿಲ್ಲ, ಇನ್ನು ಕೆಲವೆಡೆ ಪದಗಳು ಬಿಟ್ಟುಹೋಗಿದ್ದುವು. ಈ ಎಲ್ಲಾ ಲೋಪಗಳನ್ನು ಛಂದಸ್ಸಿಗೂ ಅರ್ಥಕ್ಕೂ ಚ್ಯುತಿಯಾಗದಂತೆ ರಂಗನಾಥ ಶರ್ಮಾರವರು ನಿವಾರಿಸಿದರು. ರಂಗನಾಥ ಶರ್ಮಾರವರು ಸೇರಿಸಿದ ಪದಗಳನ್ನೂ ಸಾಲುಗಳನ್ನೂ ಒಳಗೊಂಡ ಕವಿತೆಗಳನ್ನು ಅನುಬಂಧವಾಗಿ ಸೇರಿಸಿದ್ದಾರೆ. ಈ ವಿವರಗಳನ್ನು ಮರುಳ ಮುನಿಯನ ಕಗ್ಗದ ಮುನ್ನುಡಿಯಲ್ಲಿ ಓದಬಹುದು.

ಕವಿತೆಗಳು

ಬೆಟ್ಟತಿಟ್ಟುಗಳಿಂದೆ ವಾಯುರಭಸಕೆ ತಡೆಯೆ? |
ತಿಟ್ಟುತಗ್ಗುಗಳಿಂದೆ ಹೊಳೆ (ಹರಿಯದಿಹುದೆ)? ||
ರಟ್ಟೆಬೆಟ್ಟುಗಳು ಬಾಗದೆ (ನೆಟ್ಟಗಿರಬಹುದೆ)? |
ಸೊಟ್ಟಿಗುಂ ಬೆಲೆಯುಂಟು - ಮರುಳ ಮುನಿಯ || (೫೯೨)

ಅಂದಿನಂದಂದಿಗದು ಮುಂದೆ ಸಾಗುವ ಲೀಲೆ |
ಸಂಧಾನಗಳನೆಲ್ಲ ಮೀರ‍್ದುದಾ ಲೀಲೆ ||
ಅಂದಂದಿಗಂದಂದು ಬಂದಿಹುದು ಕರ್ತವ್ಯ |
ಸಂದುದನು ನಿರ್ವಹಿಸು - ಮರುಳ ಮುನಿಯ || (೫೯೩)

ಮರುಳ ಮುನಿಯನ ಕಗ್ಗದಲ್ಲಿ ಒಟ್ಟು ೮೨೫ ಕವಿತೆಗಳಿವೆ. ಮಂಕುತಿಮ್ಮನ ಕಗ್ಗಕ್ಕೆ ಹೋಲಿಸಿದರೆ ಸಂಖ್ಯೆಯಲ್ಲಿ ಅದಕ್ಕಿಂತ ೧೨೦ ಕಡಿಮೆ. ಆದರೆ ಒಟ್ಟಂದದಲ್ಲಿ ಮಂಕುತಿಮ್ಮನ ಕಗ್ಗಕ್ಕಿಂತಲೂ ಮರುಳ ಮುನಿಯನ ಕಗ್ಗ ಮಿಗಿಲೆಂದು ಬಲ್ಲವರು ಹೇಳುತ್ತಾರೆ.

ಹೆಚ್ಚಿಗೆ ಓದಲು

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಮರುಳ ಮುನಿಯನ ಕಗ್ಗ ವಿವರಮರುಳ ಮುನಿಯನ ಕಗ್ಗ ಕವಿತೆಗಳುಮರುಳ ಮುನಿಯನ ಕಗ್ಗ ಹೆಚ್ಚಿಗೆ ಓದಲುಮರುಳ ಮುನಿಯನ ಕಗ್ಗ ಉಲ್ಲೇಖಗಳುಮರುಳ ಮುನಿಯನ ಕಗ್ಗ ಬಾಹ್ಯ ಸಂಪರ್ಕಗಳುಮರುಳ ಮುನಿಯನ ಕಗ್ಗಮಂಕುತಿಮ್ಮನ ಕಗ್ಗ

🔥 Trending searches on Wiki ಕನ್ನಡ:

ಸಂಖ್ಯೆಕರ್ನಾಟಕದ ಸಂಸ್ಕೃತಿಬೌದ್ಧ ಧರ್ಮಜಲ ಮಾಲಿನ್ಯಕಾಮಾಲೆಕನ್ನಡ ಗುಣಿತಾಕ್ಷರಗಳುಭಾರತ ರತ್ನಬೇಸಿಗೆಜಾಗತಿಕ ತಾಪಮಾನ ಏರಿಕೆಭಾರತದ ಆರ್ಥಿಕ ವ್ಯವಸ್ಥೆಬಹುವ್ರೀಹಿ ಸಮಾಸಚಾರ್ಲ್ಸ್ ಡಾರ್ವಿನ್ಪಾರ್ವತಿಭಾರತದ ಮುಖ್ಯ ನ್ಯಾಯಾಧೀಶರುಕಾರ್ಮಿಕ ಕಾನೂನುಗಳುಭಾರತದ ಉಪ ರಾಷ್ಟ್ರಪತಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಎಂ ಕಲಿಕೆಜಾನಪದಗುರುರಾಜ ಕರಜಗಿಮುರುಡೇಶ್ವರದಿಕ್ಕುಡೊಳ್ಳು ಕುಣಿತಮನೆಶಿವಮೊಗ್ಗಆತ್ಮಚರಿತ್ರೆಕಣ್ಣುಮಾನವನ ವಿಕಾಸಮೀನಾ ಅಲೆಕ್ಸಾಂಡರ್ಭಾರತದ ಸ್ವಾತಂತ್ರ್ಯ ಚಳುವಳಿಸೂರ್ಯವ್ಯೂಹದ ಗ್ರಹಗಳುಚಿಕ್ಕ ದೇವರಾಜವೆಂಕಟೇಶ್ವರ ದೇವಸ್ಥಾನಯಕೃತ್ತುಕನ್ನಡ ವ್ಯಾಕರಣಪರಿಸರ ಕಾನೂನುಉದಯವಾಣಿಪ್ರಜಾವಾಣಿಝಾನ್ಸಿವೀರಭದ್ರಕವಿಗಳ ಕಾವ್ಯನಾಮನೆಪೋಲಿಯನ್ ಬೋನಪಾರ್ತ್ಭಾರತೀಯ ಸ್ಟೇಟ್ ಬ್ಯಾಂಕ್ಸೋಮನ ಕುಣಿತಭಾರತಕರ್ನಾಟಕದ ಜಿಲ್ಲೆಗಳುಗೊರೂರು ರಾಮಸ್ವಾಮಿ ಅಯ್ಯಂಗಾರ್ಸಂಧಿಕೋವಿಡ್-೧೯ರನ್ನಶಿಲ್ಪಾ ಶೆಟ್ಟಿಯೋಜಿಸುವಿಕೆವಿಭಕ್ತಿ ಪ್ರತ್ಯಯಗಳುಅಂತಿಮ ಸಂಸ್ಕಾರತಾಳೀಕೋಟೆಯ ಯುದ್ಧಜಯಮಾಲಾಕಳಿಂಗ ಯುದ್ದ ಕ್ರಿ.ಪೂ.261ಮಾಲಿನ್ಯಶೌರ್ಯ (ಚಲನಚಿತ್ರ)ಸಮಾಸಚನ್ನಬಸವೇಶ್ವರಸಿಂಧನೂರುಕರ್ನಾಟಕದ ಕಲೆ ಮತ್ತು ಸಂಸ್ಕೃತಿತಲಕಾಡುಕನ್ನಡ ಸಾಹಿತ್ಯ ಪರಿಷತ್ತುವಿತ್ತೀಯ ನೀತಿಸಾರಾ ಅಬೂಬಕ್ಕರ್ವೃದ್ಧಿ ಸಂಧಿಹಿಂದೂ ಮಾಸಗಳುತಂಬಾಕುಸಾಗುವಾನಿಋತುಕ್ರೀಡೆಗಳುಗಣೇಶ ಚತುರ್ಥಿಇಸ್ಲಾಂ ಧರ್ಮಹನುಮಾನ್ ಚಾಲೀಸ🡆 More