ಭೀಮಾ

ಭೀಮಾ ನದಿಯು ಕೃಷ್ಣಾ ನದಿಯ ಉಪನದಿಯಾಗಿದೆ.

ಉಗಮ--ಸಂಗಮ

ಭೀಮಾ ನದಿಯು ಮಹಾರಾಷ್ಟ್ರದಲ್ಲಿ ಪುಣೆಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯ ಕಡ್ಲೂರು ಊರ ಹತ್ತಿರ, ಆಂಧ್ರಪ್ರದೇಶದ ಗಡಿಗೆ ಸಮೀಪವಾಗಿ ಈ ನದಿಯು ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸುಮಾರು ೩೦೦ ಕಿ.ಮೀ.ಗಳಷ್ಟು.

ಉಪನದಿಗಳು

ಕರ್ನಾಟಕದಲ್ಲಿ ಅಮರಜಾ, ಮುಲ್ಲಾಮಾರಿ, ಗಂಡೋರಿ ಹಳ್ಳ, ಕಾಗಿನಾ ಹಾಗು ಬೆಣ್ಣೆತೊರಾ ಇವು ಭೀಮಾನದಿಯ ಉಪನದಿಗಳು.(tributaries)

ಆಣೆಕಟ್ಟುಗಳು

ಭೀಮಾ ನದಿಗೆ ಕಲಬುರ್ಗಿ ಜಿಲ್ಲೆಯ ನೆಲೊಗಿ "ಗ್ರಾಮದ ಹತ್ತಿರ ಆಣೆಕಟ್ಟು ಕಟ್ಟುವ ಯೋಜನೆ ಇದೆ. ಭೀಮಾ ನದಿಯ ಉಪನದಿಗಳಿಗೆ ಈಗಾಗಲೆ ಸಣ್ಣಪುಟ್ಟ ಆಣೆಕಟ್ಟುಗಳನ್ನು ಕಟ್ಟಲಾಗಿದೆ.jwusj

ಮಹತ್ವದ ತೀರ ಪ್ರದೇಶಗಳು

ಭೀಮಾನದಿಯ ಉಗಮದಲ್ಲಿರುವ ಭೀಮಾಶಂಕರವು ಒಂದು ಪವಿತ್ರ ಯಾತ್ರಾಸ್ಥಳ. ದ್ವಾದಶಲಿಂಗಗಳಲ್ಲಿಯ ಒಂದು ಲಿಂಗ ಭೀಮಾಶಂಕರದಲ್ಲಿದೆ.

ಅಷ್ಟವಿನಾಯಕರಲ್ಲಿಯ ಒಂದು ವಿನಾಯಕ ದೇವಾಲಯವು ಸಿದ್ಧಟೇಕದಲ್ಲಿದೆ.

ಸುಪ್ರಸಿದ್ಧ ಪಂಢರಪುರ ವಿಠ್ಠಲ ದೇವಸ್ಥಾನವು ಸೊಲ್ಲಾಪುರ ಜಿಲ್ಲೆಯಲ್ಲಿದೆ.

ಸುಪ್ರಸಿದ್ಧ ಧೂಳಖೇಡ ಶಂಕರಲಿಂಗ ದೇವಸ್ಥಾನವು ವಿಜಯಪುರ ಜಿಲ್ಲೆಯಲ್ಲಿದೆ.

ಪ್ರಸಿದ್ಧ ದತ್ತಪೀಠವಾದ ಗಾಣಗಾಪುರವು ಭೀಮಾದ ಉಪನದಿಯಾದ ಅಮರಜಾದ ತೀರದಲ್ಲಿದೆ.

ಪ್ರಸಿದ್ಧ ಶಕ್ತಿಪೀಠವಾದ, ಚಂದ್ರಲಾ ಪರಮೇಶ್ವರಿಯ ದೇವಸ್ಥಾನವಿರುವ ಸನ್ನತಿ ಗ್ರಾಮವು ಭೀಮಾನದಿಯ ದಂಡೆಯ ಮೇಲಿದೆ. ಇದೇ ಗ್ರಾಮದಲ್ಲಿ ಪ್ರಾಚ್ಯ ಸಂಶೋಧಕರಿಗೆ ಬೌದ್ಧ ವಿಹಾರದ ಅವಶೇಷಗಳು ದೊರೆತಿವೆ.

ಕಾಗಿನಾ ಉಪನದಿಯ ತೀರದಲ್ಲಿ ಹೊನಗುಂಟಾ ಗ್ರಾಮದಲ್ಲಿ ಚಂದ್ರಲಾ ಪರಮೇಶ್ವರಿಯ ಮತ್ತೊಂದು ದೇವಸ್ಥಾನವಿದೆ.

Tags:

ಭೀಮಾ ಉಗಮ--ಸಂಗಮಭೀಮಾ ಉಪನದಿಗಳುಭೀಮಾ ಆಣೆಕಟ್ಟುಗಳುಭೀಮಾ ಮಹತ್ವದ ತೀರ ಪ್ರದೇಶಗಳುಭೀಮಾಕೃಷ್ಣಾ

🔥 Trending searches on Wiki ಕನ್ನಡ:

ರಾಘವಾಂಕಕಳಿಂಗ ಯುದ್ದ ಕ್ರಿ.ಪೂ.261ಕೂಡಲ ಸಂಗಮವಾರ್ಧಕ ಷಟ್ಪದಿಕ್ರೋಮ್ ಕಾರ್ಯಾಚರಣಾ ವ್ಯವಸ್ಥೆಬುದ್ಧಅರ್ಜುನಗುಪ್ತ ಸಾಮ್ರಾಜ್ಯಎಂ. ಎಂ. ಕಲಬುರ್ಗಿರಾವಣರಂಜಾನ್ಭಾರತದ ಇತಿಹಾಸಕೆಂಗಲ್ ಹನುಮಂತಯ್ಯಬ್ಯಾಸ್ಕೆಟ್‌ಬಾಲ್‌ದೂರದರ್ಶನಕೆ ವಿ ನಾರಾಯಣಧಾರವಾಡಚನ್ನವೀರ ಕಣವಿಒಂದನೆಯ ಮಹಾಯುದ್ಧವೇದಭಾಮಿನೀ ಷಟ್ಪದಿಜಲ ಚಕ್ರಬುಡಕಟ್ಟುದ್ವಿಗು ಸಮಾಸಮಳೆರಾಮಾಚಾರಿ (ಚಲನಚಿತ್ರ)ಸಾರ್ವಜನಿಕ ಹಣಕಾಸುಗೋಪಾಲಕೃಷ್ಣ ಅಡಿಗಮೊಬೈಲ್ ಅಪ್ಲಿಕೇಶನ್ಜಿ.ಎಸ್.ಶಿವರುದ್ರಪ್ಪಕುಕ್ಕೆ ಸುಬ್ರಹ್ಮಣ್ಯ ದೇವಾಲಯಜಯದೇವಿತಾಯಿ ಲಿಗಾಡೆಕರ್ನಾಟಕದ ಮಹಾನಗರಪಾಲಿಕೆಗಳುತಂತ್ರಜ್ಞಾನಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಸಾಮ್ರಾಟ್ ಅಶೋಕಎಚ್ ನರಸಿಂಹಯ್ಯಶಿಕ್ಷಕಭಾರತಮಗುವಿನ ಬೆಳವಣಿಗೆಯ ಹಂತಗಳುಕೇಟಿ ಪೆರಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮೈಸೂರು ಸಂಸ್ಥಾನಮಯೂರವರ್ಮಶ್ರೀ ರಾಘವೇಂದ್ರ ಸ್ವಾಮಿಗಳುಭಾರತದಲ್ಲಿ ಕಪ್ಪುಹಣರಚಿತಾ ರಾಮ್ಚಾಣಕ್ಯಕನ್ನಡದಲ್ಲಿ ಪ್ರವಾಸ ಸಾಹಿತ್ಯಭಾರತದ ಮುಖ್ಯ ನ್ಯಾಯಾಧೀಶರುಶ್ರೀರಂಗಪಟ್ಟಣಏಡ್ಸ್ ರೋಗಫ್ರಾನ್ಸ್ವಿಜಯನಗರಕರ್ನಾಟಕದ ತಾಲೂಕುಗಳುಮಂಜಮ್ಮ ಜೋಗತಿಮಾನವನ ಕಣ್ಣುಭಾರತದಲ್ಲಿ ತುರ್ತು ಪರಿಸ್ಥಿತಿಜೀವನತ್ರಿಪದಿಕೆ.ವಿ.ಸುಬ್ಬಣ್ಣಭತ್ತಅಗ್ನಿ(ಹಿಂದೂ ದೇವತೆ)ಖಾಸಗೀಕರಣಮಾದಿಗಕಲ್ಯಾಣಿಕೃಷ್ಣರಾಜಸಾಗರಕರ್ನಾಟಕದ ಏಕೀಕರಣಆರೋಗ್ಯಭಗವದ್ಗೀತೆವಿಶ್ವ ರಂಗಭೂಮಿ ದಿನನಡುಕಟ್ಟುಎರಡನೇ ಮಹಾಯುದ್ಧಮಾರ್ಕ್ಸ್‌ವಾದಪ್ರಗತಿಶೀಲ ಸಾಹಿತ್ಯಯೋಗಮಾನವ ಹಕ್ಕುಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಶ್ರೀಪಾದರಾಜರು🡆 More