ಪ್ರೆಸಿಡೆನ್ಸಿ ಕಾಲೆಜ್, ಚೆನ್ನೈ

ಪ್ರೆಸಿಡೆನ್ಸಿ ಕಾಲೆಜ್, ಚೆನ್ನೈಯನ್ನು ಮದ್ರಾಸ್ ವಿಶ್ವವಿದ್ಯಾಲಯದ ಅಗ್ರಗಾಮಿ ಕಾಲೆಜ್ ಎಂದು ಪರಿಗಣಿಸಲಾಗುತ್ತದೆ.

ಪ್ರೆಸಿಡೆನ್ಸಿ ಕಾಲೆಜ್, ಚೆನ್ನೈ
ಪ್ರೆಸಿಡೆನ್ಸಿ ಕಾಲೆಜ್
ಪ್ರೆಸಿಡೆನ್ಸಿ ಕಾಲೆಜ್, ಚೆನ್ನೈ
ಪ್ರೆಸಿಡೆನ್ಸಿ ಕಾಲೆಜ್, ಚೆನ್ನೈ(ಮುಂಬಾಗ)

ಇತಿಹಾಸ

ಸರ್ ಥೋಮಸ್ ಮನ್ರೋವಿನ ಆಜ್ಞೆಯಂತೆ ೧೮೨೬ರಲ್ಲಿ ಒಂದು ಸಾರ್ವಜನಿಕ ಶಿಕ್ಷಣ ಸಮಿತಿಯನ್ನು ರಚಿಸಲಾಯಿತು. ೧೮೩೬ರಲ್ಲಿ ಈ ಸಮಿತಿಯ ಕರ್ತವ್ಯಗಳನ್ನು ‘ದೇಶೀಯ ಶಿಕ್ಷಣ ಸಮಿತಿ(Committee of Native Education)’ ಕೈಗೆತ್ತಿಕೊಂಡಿತು. ಸಮಿತಿಯು ತಯಾರಿಸಿದ ರೂಪರೇಷೆಗಳು ಮದ್ರಾಸಿನ ಗವರ್ನರ್ ಆಗಿದ್ದ ಲಾರ್ಡ್ ಎಲ್ಫಿನ್‍ಸ್ಟನರಿಗೆ ಒಪ್ಪಿಗೆಯಾಗಲಿಲ್ಲ. ಆ ಕಾರಣ ಅವರು ೧೯ ಠರಾವುಗಳನ್ನು ಸೂಚಿಸಲಾಗಿ ಅವೆಲ್ಲವೂ ಸರ್ವಾನುಮತದಿಂದ ಅಂಗೀಕೃತವಾದವು.


ಈ ಪ್ರಕಾರ ೧೫ನೇ ಅಕ್ಟೋಬರ್ ೧೮೪೦ರಂದು ಮದ್ರಾಸಿನ (ಇಂದಿನ ಚೆನ್ನೈ) ಎಗ್ಮೋರಿನ ‘ಎಡಿನ್ ಬರ್ಗ್ ಹೋಮ್’ ಕಟ್ಟಡವನ್ನು ಬಾಡಿಗೆಗೆ ಪಡೆದು, ಪ್ರೆಸಿಡೆನ್ಸಿ ಶಾಲೆಯನ್ನು ತೆರೆಯಲಾಯಿತು. ಇದರ ಪ್ರಥಮ ಪ್ರಾಂಶುಪಾಲರಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತದ ಪ್ರೌಢಪಾಂಡಿತ್ಯದಲ್ಲಿ ಶ್ರೇಷ್ಠವರ್ಗದಲ್ಲಿ ತೇರ್ಗಡೆಯಾಗಿದ್ದ ಏರ್ ಬರ್ಟನ್ ಪವೆಲ್ (Eyre Burton Powell) ನೇಮಕವಾಗಿದ್ದರೂ ಇಂಗ್ಲೆಂಡ್ನಿಂದ ಆತ ಭಾರತವನ್ನು ಸೇರುವದು ತಡವಾದ ಕಾರಣ, ಕೊಲ್ಕತ್ತದ ಹುಗ್ಲಿ ಕಾಲೆಜಿನ ಪ್ರಾಧ್ಯಾಪಕ ಕೂಪರ್ ಎನ್ನುವವರು ತಾತ್ಕಾಲಿಕ ಪ್ರಾಂಶುಪಾಲರಾಗಿದ್ದರು. ಪವೆಲ್ ಬಂದು ಸೇರಿದ ನಂತರ ಎಪ್ರಿಲ್ ೧೮೪೧ರಲ್ಲಿ ಪ್ರೌಢಶಾಲಾ ವಿಭಾಗವನ್ನು ತೆರೆಯಲಾಯಿತು. ಆ ವರ್ಷದಲ್ಲೇ ಶಾಲೆಯನ್ನು ಪೊಫಮಿನ ಬ್ರಾಡ್ವೇಗೆ ಸ್ಥಳಾಂತರಿಸಲಾಯಿತು.


ಈ ಶಾಲೆಯು ಬೆಳೆದು ಪ್ರೆಸಿಡೆನ್ಸಿ ಕಾಲೆಜ್ ಆಯಿತು. ೧೮೫೭ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯವು ಸ್ಥಾಪಿತವಾದಾಗ ಪ್ರೆಸಿಡೆನ್ಸಿ ಕಾಲೆಜ್ ಅದಕ್ಕೆ ಸೇರಸಲ್ಪಟ್ಟಿತು. ೧೮೭೦ರಲ್ಲಿ ಕಾಲೆಜನ್ನು ಮರಿನ ಬೀಚಿನ ಎದುರಿರುವ ಕಾಮರಾಜ್ ಸಾಲೈಗೆ ಸ್ಥಳಾಂತರಿಸಲಾಗಿ, ಇಂದಿಗೂ ಅಲ್ಲೇ ಇದೆ.

ಪ್ರಸಿದ್ಧರಾದ ಹಳೆಯ ವಿದ್ಯಾರ್ಥಿಗಳು

ಪ್ರೆಸಿಡೆನ್ಸಿ ಕಾಲೆಜಿನ ಕೆಲವು ಪ್ರಸಿದ್ಧರಾಗಿರುವ ವಿದ್ಯಾರ್ಥಿಗಳ ಪರಿಚಯ ಹೀಗಿವೆ:


  • ಸರ್ ಸಿ ಪಿ ರಾಮಸ್ವಾಮಿ ಅಯ್ಯರ್, ತಿರುವಾಂಕೂರಿನ ದಿವಾನರು.
  • ಡಾ ಸರ್ವೆಪಲ್ಲಿ ಗೋಪಾಲ್, ಇತಿಹಾಸ ತಜ್ಞ ಮತ್ತು ರಾಷ್ಟ್ರೀಯ ಪುಸ್ತಕ ವಿಶ್ವಸ್ಥ ಸಮಿತಿ (ನ್ಯಾಶನಲ್ ಬುಕ್ ಟ್ರಸ್ಟ್)ಯ ಸಭಾಧ್ಯಕ್ಷ.
  • ವಿ ಕೆ ಕೃಷ್ಣ ಮೆನೊನ್, ಕೇಂದ್ರ ರಕ್ಷಾ ಮಂತ್ರಿ (೧೯೫೭-೧೯೬೨)
  • ಸಿ ಸುಬ್ರಮಣಿಯಮ್, ಕೇಂದ್ರ ಅರ್ಥ ಸಚಿವ ಮತ್ತು ಹಸಿರು ಕ್ರಾಂತಿಯ ಹರಿಕಾರ
  • ಎನ್ ರಾಮ್, ‘ದ ಹಿಂದೂ’ ಪತ್ರಿಕೆಯ ಮ್ಯಾನೇಜಿಂಗ್ ಡೈರೆಕ್ಟರ್


ಕೊಂಡಿಗಳು

Tags:

ಚೆನ್ನೈ

🔥 Trending searches on Wiki ಕನ್ನಡ:

ಭಗವದ್ಗೀತೆಮತದಾನಎಸ್. ಬಂಗಾರಪ್ಪಹೆಳವನಕಟ್ಟೆ ಗಿರಿಯಮ್ಮಸೂಪರ್ (ಚಲನಚಿತ್ರ)ರೋಹಿತ್ ಶರ್ಮಾಉಡುಪಿ ಜಿಲ್ಲೆಸಾಮಾಜಿಕ ಸಮಸ್ಯೆಗಳುಮೊಘಲ್ ಸಾಮ್ರಾಜ್ಯದಾಳಿಂಬೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಗದಗಪಂಜೆ ಮಂಗೇಶರಾಯ್ವೀಳ್ಯದೆಲೆ1935ರ ಭಾರತ ಸರ್ಕಾರ ಕಾಯಿದೆಕರ್ಬೂಜಕಾಮಾಲೆಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಚಿಕ್ಕಮಗಳೂರುರೇಣುಕಇಸ್ಲಾಂ ಧರ್ಮಕರ್ನಾಟಕ ರತ್ನಸಾಯಿ ಪಲ್ಲವಿಜವಾಹರ‌ಲಾಲ್ ನೆಹರುಯೋಗಓಂಶ್ರೀ ಸಿದ್ದೇಶ್ವರ ಸ್ವಾಮಿಜಿಗಳುತೀ. ನಂ. ಶ್ರೀಕಂಠಯ್ಯಹವಾಮಾನಧಾರವಾಡಜನ್ನಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಅವತಾರಉಪನಿಷತ್ಪಶ್ಚಿಮ ಬಂಗಾಳಅಣ್ಣಯ್ಯ (ಚಲನಚಿತ್ರ)ಮೈಗ್ರೇನ್‌ (ಅರೆತಲೆ ನೋವು)ಸಿಂಹದಿಕ್ಸೂಚಿಸಂವತ್ಸರಗಳುಬೆಳಗಾವಿಬಿ.ಎಲ್.ರೈಸ್ಎಲೆಕ್ಟ್ರಾನಿಕ್ ಮತದಾನಪಟ್ಟದಕಲ್ಲುಭಾರತದ ರಾಷ್ಟ್ರೀಯ ಉದ್ಯಾನಗಳುಹದ್ದುಸಿದ್ದರಾಮಯ್ಯಸಿ. ಎನ್. ಆರ್. ರಾವ್ಭಾರತಭಾರತೀಯ ಭೂಸೇನೆಬಾಗಲಕೋಟೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮಹಾತ್ಮ ಗಾಂಧಿರಾಮಾನುಜಬಸವೇಶ್ವರಭರತ-ಬಾಹುಬಲಿಒಗಟುಅಮಿತ್ ಶಾಹಾಗಲಕಾಯಿಮದುವೆಧನಂಜಯ್ (ನಟ)ಸಚಿನ್ ತೆಂಡೂಲ್ಕರ್ತುಂಗಭದ್ರಾ ಅಣೆಕಟ್ಟುಲಿಂಗಾಯತ ಪಂಚಮಸಾಲಿಬಸವರಾಜ ಬೊಮ್ಮಾಯಿಕರ್ನಾಟಕ ಐತಿಹಾಸಿಕ ಸ್ಥಳಗಳುಶಂಕರ್ ನಾಗ್ರಾಷ್ಟ್ರೀಯ ಉತ್ಪನ್ನಪಂಚ ವಾರ್ಷಿಕ ಯೋಜನೆಗಳುಪೂರ್ಣಚಂದ್ರ ತೇಜಸ್ವಿಸರ್ಪ ಸುತ್ತುಮಳೆಬಿಲ್ಲುಬುದ್ಧಕೃಷ್ಣ ಮಠಬೀದರ್ತುಮಕೂರುಕಾರ್ಮಿಕರ ದಿನಾಚರಣೆಆದೇಶ ಸಂಧಿವೇದವ್ಯಾಸ🡆 More