ಪರಿಸರ ನಿರ್ವಹಣಾ ವ್ಯವಸ್ಥೆ

ಪರಿಸರವನ್ನು ಸಂರಕ್ಷಿಸಲು ಒಂದು ಸಂಸ್ಥೆ ಕೈಗೊಳ್ಳುವ ಪೂರ್ವನಿಧಾರಿತ, ನಿಯಮಬದ್ಧವಾದ ಕ್ರಮಗಳನ್ನು ಪರಿಸರ ನಿರ್ವಹಣಾ ವ್ಯವಸ್ಥೆ(Environmental Management System) ಎಂದು ಕರೆಯಬಹುದು.ಸಾಮಾನ್ಯವಾಗಿ ಬಳಕೆಯಾಗುವ ಪರಿಸರ ನಿರ್ವಹಣಾ ವ್ಯವಸ್ಥೆ ಐ.ಎಸ್.ಓ ೧೪೦೦೧() ನ ಮೇಲೆ ನಿರ್ಧಾರಿತವಾಗಿದೆ.

ಅದಕ್ಕೆ ಪರ್ಯಾಯವಾಗಿ EMAS(ECo Management and Audit Scheme) ಅನ್ನು ಕೂಡಾ ಬಳಸಬಹುದು.

ಪರಿಸರ ನಿರ್ವಹಣಾ ವ್ಯವಸ್ಥೆ
PDCA-Cycle

ಗುರಿಗಳು

ಪರಿಸರ ನಿರ್ವಹಣಾ ವ್ಯವಸ್ಥೆಯ ಗುರಿಗಳೆಂದರೆ ತ್ಯಾಜ್ಯ ನಿಯಂತ್ರಣ ಮತ್ತು ನಿಯಮಪಾಲನೆ

ನಿಯಮ ಪಾಲನೆ

ಕಂಪೆನಿಯ ಕಾರ್ಯನಿರ್ವಹಣೆಗೆ ಸರ್ಕಾರದ ಕೆಲವು ನಿಯಮಗಳ ಪಾಲನೆ ಅತ್ಯಗತ್ಯ. ಈ ಕನಿಷ್ಟತಮ ನಿಯಮಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.

ತ್ಯಾಜ್ಯ ನಿರ್ವಹಣೆ

ಪರಿಸರ ಸಂಬಂಧಿ ನಿಯಮಗಳನ್ನು ರೂಪಿಸಲು,ನಿರ್ವಹಿಸಲು, ಮತ್ತು ವೀಕ್ಷಿಸಲು ಪರಿಸರ ನಿರ್ವಹಣಾ ವ್ಯವಸ್ಥೆ ಸಹಾಯ ಮಾಡುತ್ತದೆ. ತ್ಯಾಜ್ಯ ನಿರ್ವಹಣೆ ಎಂಬುದು ವ್ಯವಸ್ಥೆಯ ವಿನ್ಯಾಸದಿಂದ ಶುರುವಾಗಿ ತ್ಯಾಜ್ಯದ ಪುನರ್ಬಳಕೆಯ ತನಕದ ಎಲ್ಲ ಹಂತದವರೆಗೂ ಮುಖ್ಯವಾಗುತ್ತದೆ.

ಮುಖ್ಯಾಂಶಗಳು

  1. ಮಾಲಿನ್ಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ, ಪರಿಸರ ಸಂಬಂಧಿ ತರಬೇತಿ ಕೈಗೊಳ್ಳುವ ಇದು ಕಂಪೆನಿಯ ನಿರ್ವಹಣಾ ಮಂಡಳಿಗೆ ಪರಿಸರ ಸಂಬಂಧಿ ಸಲಹೆ,ಮಾಹಿತಿಗಳನ್ನು ನೀಡುವ ವ್ಯವಸ್ಥೆಯಾಗಿಯೂ ಕಾರ್ಯ ನಿರ್ವಹಿಸುತ್ತದೆ.
  2. ಕಂಪೆನಿಗೆ ಸಂಬಂಧಪಟ್ಟ ಪರಿಸರ ಸಂಬಂಧಿ ವಿಷಯಗಳನ್ನು ನೋಡಿಕೊಳ್ಳುವ ಒಂದು ನಿಯಮಬದ್ಧ ವ್ಯವಸ್ಥೆ ಇದು
  3. ಕಂಪೆನಿಯ ಉತ್ಪನ್ನಗಳಿಂದ ಸದ್ಯಕ್ಕೆ ಮತ್ತು ಭವಿಷ್ಯದಲ್ಲಿ ಪರಿಸರದ ಮೇಲಾಗುವ ಪರಿಣಾಮಗಳನ್ನು ಅವಲೋಕಿಸಿ ಅವುಗಳ ಪರಿಹಾರಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ
  4. ಕಂಪೆನಿಯ ಪಾಲುದಾರರು ಮತ್ತು ಉತ್ಪನ್ನಗಳ ಸರಬರಾಜುದಾರರು ತಮ್ಮದೇ ಆದ ಪರಿಸರ ನಿರ್ವಹಣಾ ವ್ಯವಸ್ಥೆಯನ್ನು ನಿರ್ಮಿಸುವಂತೆ ಪ್ರೋತ್ಸಾಹಿಸುತ್ತದೆ.
  5. ಕಂಪೆನಿಯ ಉದ್ಯೋಗಿಗಳಿಗೆ ತಮ್ಮ ಕಾರ್ಯದಲ್ಲಿ ಪರಿಸರ ಸಂಬಂಧಿ ಜವಾಬ್ದಾರಿಗಳನ್ನು ಹಂಚುತ್ತದೆ
  6. ಇದಕ್ಕಾಗಿ ಬೇಕಾದ ತರಬೇತಿಯನ್ನು ಕೊಡಲು ಮತ್ತು ಫಲಿತಾಂಶಗಳನ್ನು ಅವಲೋಕಿಸಲು ಒಂದು ವ್ಯವಸ್ಥೆಯನ್ನು ನಿರ್ಮಿಸುತ್ತದೆ
  7. ಸಂಬಂಧಿತ ಶಾಸನಗಳನ್ನು ಅರ್ಥ ಮಾಡಿಕೊಂಡು ಆ ನಿಟ್ಟಿನಲ್ಲಿ ಉತ್ಪನ್ನಗಳನ್ನು ಕೇಂದ್ರೀಕರಿಸಲು ಸಹಕರಿಸುತ್ತದೆ.

ಕಾರ್ಯನಿರ್ವಹಣಾ ವ್ಯವಸ್ಥೆ

ಪರಿಸರ ನಿರ್ವಹಣಾ ವ್ಯವಸ್ಥೆ ಯೋಜಿಸು-ಮಾಡು-ವೀಕ್ಷಿಸು-ಕೆಲಸ ಮಾಡು(PDCA Plan Do Check Act)ಎಂಬ ವರ್ತುಲ ನಿಯಮದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತದೆ. ಇದರಲ್ಲಿ ಮೊದಲಿಗೆ ಪರಿಸರ ನಿರ್ವಹಣಾ ವ್ಯವಸ್ಥೆಯನ್ನು ವಿನ್ಯಾಸ ಮಾಡಲಾಗುತ್ತದೆ. ನಂತರ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಕಾರ್ಯರೂಪಕ್ಕೆ ಬಂದ ವ್ಯವಸ್ಥೆಯನ್ನು ವೀಕ್ಷಿಸಿ ಅದರಲ್ಲಿನ ಲೋಪದೋಷಗಳನ್ನು ಗಮನಿಸಿ ಅದನ್ನು ಸರಿಪಡಿಸಲು ಕಾರ್ಯನಿರ್ವಹಿಸಲಾಗುತ್ತದೆ. ನಿರಂತರ ಬದಲಾವಣೆಗಳ ಮೂಲಕ ಈ ವ್ಯವಸ್ಥೆ ಉತ್ತಮಪಡಿಸಿಕೊಳ್ಳುತ್ತಾ ಸಾಗುತ್ತದೆ.


ಉಲ್ಲೇಖಗಳು

Tags:

ಪರಿಸರ ನಿರ್ವಹಣಾ ವ್ಯವಸ್ಥೆ ಗುರಿಗಳುಪರಿಸರ ನಿರ್ವಹಣಾ ವ್ಯವಸ್ಥೆ ಮುಖ್ಯಾಂಶಗಳುಪರಿಸರ ನಿರ್ವಹಣಾ ವ್ಯವಸ್ಥೆ ಕಾರ್ಯನಿರ್ವಹಣಾ ವ್ಯವಸ್ಥೆಪರಿಸರ ನಿರ್ವಹಣಾ ವ್ಯವಸ್ಥೆ ಉಲ್ಲೇಖಗಳುಪರಿಸರ ನಿರ್ವಹಣಾ ವ್ಯವಸ್ಥೆ

🔥 Trending searches on Wiki ಕನ್ನಡ:

ಗೋಕಾಕ್ ಚಳುವಳಿಪುಟ್ಟರಾಜ ಗವಾಯಿಗ್ರಹಕುಂಡಲಿಕನ್ನಡ ಸಂಧಿಭಾರತದ ಚುನಾವಣಾ ಆಯೋಗಸಾರ್ವಜನಿಕ ಆಡಳಿತಮಲಬದ್ಧತೆರೇಣುಕಖಗೋಳಶಾಸ್ತ್ರಸಾಮ್ರಾಟ್ ಅಶೋಕಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಮಾದರ ಚೆನ್ನಯ್ಯಕೃಷ್ಣಾ ನದಿರಾಮ ಮಂದಿರ, ಅಯೋಧ್ಯೆನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಭಾಷೆಕನಕದಾಸರುರಾಮವಚನ ಸಾಹಿತ್ಯಚಪ್ಪಾಳೆಮಾಧ್ಯಮಅಮೇರಿಕ ಸಂಯುಕ್ತ ಸಂಸ್ಥಾನಸ್ವಾಮಿ ವಿವೇಕಾನಂದಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಸೂರ್ಯ ಗ್ರಹಣಚಿತ್ರದುರ್ಗಕರ್ನಾಟಕದ ಮುಖ್ಯಮಂತ್ರಿಗಳುಬಾದಾಮಿರತ್ನತ್ರಯರುರಾಯಚೂರು ಜಿಲ್ಲೆಕೃಷ್ಣರಾಜನಗರರವೀಂದ್ರನಾಥ ಠಾಗೋರ್ಬಸವೇಶ್ವರನೈಸರ್ಗಿಕ ಸಂಪನ್ಮೂಲವಿಭಕ್ತಿ ಪ್ರತ್ಯಯಗಳು1935ರ ಭಾರತ ಸರ್ಕಾರ ಕಾಯಿದೆಭಾರತದಲ್ಲಿ ಪಂಚಾಯತ್ ರಾಜ್ತಾಪಮಾನಸಂಶೋಧನೆಪ್ರಜಾವಾಣಿಅಂತಿಮ ಸಂಸ್ಕಾರಕುಟುಂಬಮಡಿವಾಳ ಮಾಚಿದೇವನಾಗರೀಕತೆದಶಾವತಾರಶಾಲೆಗುಡಿಸಲು ಕೈಗಾರಿಕೆಗಳುಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಆರತಿರವಿಚಂದ್ರನ್ಬ್ಯಾಡ್ಮಿಂಟನ್‌ಜಯಂತ ಕಾಯ್ಕಿಣಿಮಹಿಳೆ ಮತ್ತು ಭಾರತಪಾಂಡವರುಕಾರ್ಮಿಕರ ದಿನಾಚರಣೆನೀರಾವರಿಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಕನ್ನಡ ಸಾಹಿತ್ಯಕರ್ನಾಟಕದ ಜಾನಪದ ಕಲೆಗಳುನಿರ್ವಹಣೆ ಪರಿಚಯಅಯೋಧ್ಯೆಮಧ್ವಾಚಾರ್ಯರಾಜಧಾನಿಗಳ ಪಟ್ಟಿರಾಯಲ್ ಚಾಲೆಂಜರ್ಸ್ ಬೆಂಗಳೂರುಹೊನ್ನಾವರಶಬ್ದಮಣಿದರ್ಪಣಆದೇಶ ಸಂಧಿಬಂಗಾರದ ಮನುಷ್ಯ (ಚಲನಚಿತ್ರ)ಕರ್ನಾಟಕದ ಶಾಸನಗಳುವಂದೇ ಮಾತರಮ್ಸ್ಯಾಮ್ ಪಿತ್ರೋಡಾಕಲಬುರಗಿಚುನಾವಣೆನೀನಾದೆ ನಾ (ಕನ್ನಡ ಧಾರಾವಾಹಿ)ಕರ್ನಾಟಕ ಲೋಕಾಯುಕ್ತಸಿಂಧನೂರು🡆 More