ಪರಾಶರ

ಪರಾಶರ ವೇದಸ್ತುತನಾದ ಒಬ್ಬ ಋಷಿ.

ಋಗ್ವೇದದಲ್ಲಿ ವಸಿಷ್ಠರೊಂದಿಗೆ ಈತನ ಉಲ್ಲೇಖವಿದೆ. ನಿರುಕ್ತದ ಪ್ರಕಾರ ಈತ ವಸಿಷ್ಠನ ಮಗ. ಮಹಾಕಾವ್ಯದ ಪ್ರಕಾರ ವಸಿಷ್ಠನ ಮಗನಾದ ಶಕ್ತಿಯ ಮಗ. ಶಕ್ತಿ ಮಹರ್ಷಿಯಿಂದ ಅದೃಶ್ಯಂತಿಯಲ್ಲಿ ಜನಿಸಿದವ. ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಶಕ್ತಿಮುನಿಯನ್ನು ಒಬ್ಬ ರಾಕ್ಷಸ ಕೊಂದ. ತನ್ನ ಸಂತತಿ ನಶಿಸುವುದೆಂದು ಹತಾಶನಾಗಿದ್ದ (ಪರಾಶ) ವಸಿಷ್ಠ ವಂಶೋದ್ಧಾರಕನಿಗೆ ಪರಾಶರನೆಂದು ಹೆಸರಿಟ್ಟ. ತನ್ನ ತಂದೆ ರಾಕ್ಷಸನಿಂದ ಹತನಾದದ್ದನ್ನು ತಿಳಿದ ಪರಾಶರ ಲೋಕವಿನಾಶಕ್ಕಾಗಿ ಯಜ್ಞ ಮಾಡತೊಡಗಿದ. ಅದು ಸಲ್ಲದೆಂಬ ವಸಿಷ್ಠನ ಉಪದೇಶದಿಂದ ಆ ಯಜ್ಞವನ್ನು ನಿಲ್ಲಿಸಿ ರಾಕ್ಷಸ ವಿನಾಶಕ್ಕಾಗಿ ಯಜ್ಞ ಮಾಡತೊಡಗಿದ. ತೀರ್ಥಯಾತ್ರಾನಿಮಿತ್ತದಿಂದ ಭೂಮಂಡಲದಲ್ಲಿ ಸುತ್ತುತ್ತಿದ್ದ ಈತ ಒಮ್ಮೆ ಯಮುನಾ ನದಿಯ ಬಳಿಗೆ ಬಂದಾಗ ಬೆಸ್ತಕನ್ಯೆಯಾದ ಸತ್ಯವತಿಯನ್ನು ಕೂಡಿದನಾದರೂ ಅನಂತರ ಆಕೆಗೆ ಕನ್ಯತ್ವವನ್ನು ಅನುಗ್ರಹಿಸಿದ ಇವರ ಮಗನೇ ವ್ಯಾಸ.

ತಾಯಿಯ ಗರ್ಭದಲ್ಲಿರುವಾಗಲೇ ಪರಾಶರ ವೇದಾಧ್ಯಯನನಿರತನಾಗಿದ್ದ. ಕಪಿಲನ ಶಿಷ್ಯನಾದ ಈತ ವಿಷ್ಣುಪುರಾಣವನ್ನು ಪೌಲಸ್ತ್ಯನಿಂದ ಪಡೆದು ಮೈತ್ರೇಯನಿಗೆ ಬೋಧಿಸಿದ. ಧರ್ಮಶಾಸ್ತ್ರ ಹಾಗೂ ನ್ಯಾಯಶಾಸ್ತ್ರದ ಬಗೆಗಿನ ಗ್ರಂಥಗಳು ಇವನ ಹೆಸರಿನಲ್ಲಿವೆ. ಜನಕ ಮತ್ತು ಪರಾವಶರ ಸಂವಾದವನ್ನೇ ಪರಾಶಗೀತೆ ಎನ್ನುತ್ತಾರೆ.

ಪರಾಶರ 26 ನೆಯ ದ್ವಾಪರದ ವ್ಯಾಸನೆಂದೂ ಒಂದು ಋಗ್ವೇದ ಶಾಖೆಯ ಹಾಗೂ ಸಾಮವೇದ ಗುರುವೆಂದೂ ತಿಳಿಯಲಾಗಿದೆ.

ಮತ್ತೊಬ್ಬ ಪರಾಶರ ಪ್ರಸಿದ್ಧ ನ್ಯಾಯಶಾಸ್ತ್ರದ ಕರ್ತೃ. ಯಾಜ್ಞವಲ್ಕ್ಯ ಈತನನ್ನು ಉಲ್ಲೇಖಿಸಿದ್ದಾನೆ. ವ್ಯಾಖ್ಯಾನಕಾರರೂ ಆಗಾಗ್ಗೆ ಈತನನ್ನು ಉಲ್ಲೇಖಿಸಿದ್ದಾರೆ. ತಂತ್ರದ ಪ್ರತಿಷ್ಠತ ಲೇಖಕನ ಹೆಸರೂ ಪರಾಶರನೆಂದಿದೆ. ಜ್ಯೋತಿಶಾಸ್ತ್ರ ಕೃತಿಯೊಂದರ ಕರ್ತೃತ್ವವೂ ಪರಾಶರನೆಂದಿದೆ. ಇವರು ಕ್ರಮವಾಗಿ ಮೂರು ಮತ್ತು ನಾಲ್ಕನೆಯ ಪರಾಶರರಿಬೇಕು ಎಂದು ತಿಳಿಯಲಾಗಿದೆ.

ಉಲ್ಲೇಖ

ಪರಾಶರ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಋಗ್ವೇದಮಹಾಕಾವ್ಯಯಜ್ಞಯಮುನಾರಾಕ್ಷಸವಸಿಷ್ಠವ್ಯಾಸಸತ್ಯವತಿ

🔥 Trending searches on Wiki ಕನ್ನಡ:

ಆಯುಷ್ಮಾನ್ ಭಾರತ್ ಯೋಜನೆಮುಹಮ್ಮದ್ಭಾರತದ ಸ್ವಾತಂತ್ರ್ಯ ಚಳುವಳಿವೃತ್ತಪತ್ರಿಕೆಆದಿವಾಸಿಗಳುಇತಿಹಾಸದಕ್ಷಿಣ ಕನ್ನಡಬಿಳಿಗಿರಿರಂಗನ ಬೆಟ್ಟಮೌರ್ಯ ಸಾಮ್ರಾಜ್ಯಭಾರತದ ರಾಷ್ಟ್ರಪತಿಭಾರತದಲ್ಲಿ ತುರ್ತು ಪರಿಸ್ಥಿತಿಸೂಪರ್ (ಚಲನಚಿತ್ರ)ಶಕ್ತಿವಿಜಯಪುರ ಜಿಲ್ಲೆಪ್ಯಾರಾಸಿಟಮಾಲ್ಗೌತಮಿಪುತ್ರ ಶಾತಕರ್ಣಿಶನಿಕನ್ನಡ ಸಾಹಿತ್ಯ ಸಮ್ಮೇಳನನಾಗಚಂದ್ರಜ್ಯೋತಿಬಾ ಫುಲೆಐಹೊಳೆಕರ್ನಾಟಕದ ಮಹಾನಗರಪಾಲಿಕೆಗಳುಬೀದರ್ಭ್ರಷ್ಟಾಚಾರಕರ್ಣನಾಮಪದಚಿಕ್ಕಮಗಳೂರುಪಶ್ಚಿಮ ಬಂಗಾಳರೋಸ್‌ಮರಿಲಿಂಗಾಯತ ಪಂಚಮಸಾಲಿಸೂರ್ಯ (ದೇವ)ಬಿರಿಯಾನಿಟೈಗರ್ ಪ್ರಭಾಕರ್ಯುಗಾದಿಮೂಲಭೂತ ಕರ್ತವ್ಯಗಳುಮಾನವ ಸಂಪನ್ಮೂಲಗಳುಪ್ಲೇಟೊರಾಷ್ಟ್ರಕೂಟಮಾರಾಟ ಪ್ರಕ್ರಿಯೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆತುಮಕೂರುಕನ್ನಡದಲ್ಲಿ ಸಣ್ಣ ಕಥೆಗಳುದೇವತಾರ್ಚನ ವಿಧಿಚದುರಂಗದ ನಿಯಮಗಳುಬಾಬು ಜಗಜೀವನ ರಾಮ್ಬೆರಳ್ಗೆ ಕೊರಳ್ಭಾರತೀಯ ಮೂಲಭೂತ ಹಕ್ಕುಗಳುಕಪ್ಪೆ ಅರಭಟ್ಟಡಿ.ಎಸ್.ಕರ್ಕಿನಾಗರೀಕತೆಅಟಲ್ ಬಿಹಾರಿ ವಾಜಪೇಯಿರಾಣೇಬೆನ್ನೂರುಹಿಂದೂ ಮದುವೆಬಿ.ಎಲ್.ರೈಸ್ಪ್ರತಿಷ್ಠಾನ ಸರಣಿ ಕಾದಂಬರಿಗಳುಧಾರವಾಡಭೋವಿಮಲೆನಾಡುಗೋವಿನ ಹಾಡುಕರ್ನಾಟಕದ ಇತಿಹಾಸಭಾರತದ ಸಂವಿಧಾನದ ಏಳನೇ ಅನುಸೂಚಿನಳಂದಬೇವುಅನಸುಯ ಸಾರಾಭಾಯ್ಕಾರ್ಯಾಂಗಭರತನಾಟ್ಯಪಂಜೆ ಮಂಗೇಶರಾಯ್ಮುಂಗಾರು ಮಳೆಕರ್ನಾಟಕ ಸಂಗೀತಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮೋಕ್ಷಗುಂಡಂ ವಿಶ್ವೇಶ್ವರಯ್ಯಆದೇಶ ಸಂಧಿಎ.ಪಿ.ಜೆ.ಅಬ್ದುಲ್ ಕಲಾಂಬ್ರಾಹ್ಮಣಪೂನಾ ಒಪ್ಪಂದ🡆 More