ಸತ್ಯವತಿ ಮಹಾಭಾರತದಲ್ಲಿ ಸತ್ಯವತಿಯು ಮೀನುಗಾರನ ಮಗಳು . ಶಂತನುವಿನ ಪತ್ನಿ. ಭೀಷ್ಮನ ಮಲತಾಯಿ. ಶಂತನು ಮತ್ತು ಸತ್ಯವತಿಗೆ ಇಬ್ಬರು ಗಂಡು ಮಕ್ಕಳಾದರು, ಇವರು ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ಶಂತನು ಮಹಾರಾಜನ ನಂತರ ಸತ್ಯವತಿ ಹಸ್ತಿನಾಪುರದ ಮಹಾರಾಣಿಯಾಗಿ ರಾಜ್ಯಭಾರ ಮಾಡುತ್ತಾಳೆ. ಮಹಾಭಾರತದಲ್ಲಿ, ಚಿತ್ರಾಂಗದನು ಶಂತನು ಮತ್ತು ಸತ್ಯವತಿಯ ಹಿರಿಯ ಮಗ. ಅವನ ತಂದೆಯ ಮರಣದ ನಂತರ, ಆತನು ಹಸ್ತಿನಾಪುರದ ಸಿಂಹಾಸನವನ್ನು ಏರಿದನು, ಆದರೆ ಇದೇ ಹೆಸರಿನ ಗಂಧರ್ವನಿಂದ ಕೊಲ್ಲಲ್ಪಟ್ಟನು. ಚಿತ್ರಾಂಗದನು ಒಬ್ಬ ಮಹಾನ್ ಯೋದ್ಧನಾಗಿದ್ದನು ಮತ್ತು ಎಲ್ಲ ರಾಜರನ್ನು ಸೋಲಿಸಿದನು. ಸತ್ಯವತಿ ಮೀನಿನ ಮಗಳಾದುದ್ದರಿಂದ ಮತ್ಸ್ಯಗಂಧಿ ಎಂದೂ ನಂತರ ಯೋಜನಾಗಂಧಿ ಎಂದೂ ಕರೆಯಲಾಗಿದೆ.

ವ್ಯಾಸ, ಸತ್ಯವತಿಯ ಮಗ , ಮಹಾಭಾರತದ ಕರ್ತೃ
ಸತ್ಯವತಿ
Painting of Satyavati, standing with her back turned to King Shantanu
ಸತ್ಯವತಿಯನ್ನು ಸಂತೈಸುತ್ತಿರುವ ಶಂತನು.ಚಿತ್ರ:ರಾಜಾ ರವಿವರ್ಮ
Information
ಕುಟುಂಬಉಪರಿಚರ ವಾಸು (ತಂದೆ)
ಗಂಡ/ಹೆಂಡತಿಶಂತನು
ಮಕ್ಕಳುಪರಾಶರ ಅವರೊಂದಿಗೆ
ಚಿತ್ರಾಂಗದ ಮತ್ತು ಶಂತನು ಅವರೊಂದಿಗೆ ವಿಚಿತವಿರ್ಯ

ಆರಂಭಿಕ ಜೀವನ

ಮಹಾಭಾರತದಲ್ಲಿ ಬರುವ ದಾಶರಾಜನಿಗೆ ಉಚ್ಚೈಶ್ರವಸ್ಸು ಎಂದೂ ಹೆಸರಿದೆ. ಇವನು ಬೆಸ್ತರ ರಾಜ. ಒಮ್ಮೆ ಬೆಸ್ತರು ಮೀನು ಹಿಡಿಯುವಾಗ ಒಂದು ಹೆಣ್ಣು ಮಗು ಸಿಕ್ಕಿತು. ಅದನ್ನು ಅವರು ಈತನಿಗೆ ಒಪ್ಪಿಸಿದರು. ಮುಂದೆ ಆ ಹೆಣ್ಣು ಮಗು ಮತ್ಸ್ಯಗಂಧಿನಿ, ಸತ್ಯವತಿ, ಯೋಜನಗಂಧಿ ಎಂಬ ಹೆಸರುಗಳಿಂದ ಪ್ರಸಿದ್ಧಳಾದಳು. ಪರಾಶರ ಮುನಿಯಿಂದ ಅವಳಿಗೆ ತೇಜಸ್ವಿನಿಯಾದ ಕೃಷ್ಣದ್ವೈಪಾಯನ ಎಂಬ ಮಗ ಹುಟ್ಟಿದ. ಮುಂದೆ ಆಕೆ ಶಂತನು ಚಕ್ರವರ್ತಿಯನ್ನು ಮದುವೆಯಾದಳು.

ವಿವಾಹದ ಪ್ರಸ್ತಾವ

ಒಂದು ದಿನ ಶಂತನು ದಾಶರಾಜನ ಪುತ್ರಿ ಸತ್ಯವತಿಯನ್ನು ನೋಡಿ ಮೋಹಗೊಂಡು ಆಕೆಯನ್ನು ವಿವಾಹವಾಗುವುದಾಗಿ ದಾಶರಾಜನಿಗೆ ತಿಳಿಸಿದ. ಆದರೆ ದಾಶರಾಜ ಮುಂದೆ ಸತ್ಯವತಿಯ ಗರ್ಭದಲ್ಲಿ ಜನಿಸಿದ ಪುತ್ರನನ್ನು ಉತ್ತರಾಧಿಕಾರಿಯಾಗಿ ಮಾಡುವುದಾಗಿ ಮಾತುಕೊಟ್ಟರೆ ಮಗಳನ್ನು ಕೊಡವುದಾಗಿ ಕರಾರು ಹಾಕಿದ. ಶಂತನುವಿಗೆ ಇದು ಸಮ್ಮತವಾಗದಿದ್ದರೂ ಅವನ ಮನಸ್ಸಲ್ಲೆಲ್ಲ ಸತ್ಯವತಿ ತುಂಬಿಕೊಂಡಿದ್ದಳು. ಇದರಿಂದಾಗಿ ಶಂತನು ವ್ಯಾಕುಲನಾಗಿದ್ದ. ಈ ವಿಷಯ ಮಂತ್ರಿಯ ಮೂಲಕ ತಿಳಿದುಕೊಂಡ ಭೀಷ್ಮ ದಾಶರಾಜನಲ್ಲಿಗೆ ಹೋಗಿ ಸಂಧಾನ ನಡೆಸಿ, ತಾನು ಮದುವೆಮಾಡಿಕೊಳ್ಳದೆ ಬ್ರಹ್ಮಚಾರಿಯಾಗಿಯೇ ಉಳಿಯುವುದಾಗಿ ಪ್ರತಿಜ್ಞೆಮಾಡಿ ಸತ್ಯವತಿಯೊಂದಿಗೆ ತನ್ನ ತಂದೆಯ ವಿವಾಹ ನೆರವೇರಿಸಿದ. ಸಂತೋಷಗೊಂಡ ತಂದೆ ಮಗನಿಗೆ ಇಚ್ಛಾಮರಣಿಯಾಗೆಂದು ವರವಿತ್ತ. ಮುಂದೆ ಭೀಷ್ಮ ಸತ್ಯವತಿಯ ಮಗ ವಿಚಿತ್ರವೀರ್ಯನಿಗಾಗಿ ಕಾಶೀರಾಜನ ಪುತ್ರಿಯಾದ ಅಂಬೆ, ಅಂಬಿಕೆ, ಅಂಬಾಲಿಕೆಯರನನ್ನು ಅಪಹರಿಸಿಕೊಂಡು ಬಂದ. ಆದರೆ ಅಂಬೆ ವಿಚಿತ್ರ ವೀರ್ಯವನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆಯನ್ನು ಸಾಲ್ವರಾಜನಲ್ಲಿಗೆ ಕಳುಹಿಸಿಕೊಟ್ಟ. ವಿಚಿತ್ರವೀರ್ಯನಿಗೆ ಸಂತಾನ ಇರಲಿಲ್ಲ. ಅವನ ಸಾವಿನ ಅನಂತರ ವಂಶ ನಿಂತುಹೋಗುವ ಸ್ಥಿತಿಗೆ ಬಂತು. ಆಗ ಸತ್ಯವತಿ ಅಂಬಿಕೆ, ಅಂಬಾಲಿಕೆಯವರೊಂದಿಗೆ ಸಂತಾನಕ್ಕಾಗಿ ಕೂಡಲು ಭೀಷ್ಮನನ್ನು ಪ್ರೇರಿಸಿದರೂ ಅದಕ್ಕೆ ಭೀಷ್ಮ ಒಪ್ಪಲಿಲ್ಲ. ಬಳಿಕ ಸತ್ಯವತಿ ಭೀಷ್ಮನ ಸೂಚನೆ ಮೇರೆಗೆ ವ್ಯಾಸನನ್ನು ಬರಮಾಡಿಕೊಂಡು ಅಂಬಿಕೆ, ಅಂಬಾಲಿಕೆಯರಲ್ಲಿ ಸಂತಾನವನ್ನು ಅನುಗ್ರಹಿಸಲು ಕೇಳಿ ಕೊಂಡಳು.

🔥 Top keywords: ಮೋಹನ್ ಲಾಲ್‌ಭತ್ತಮುಖ್ಯ ಪುಟಕುವೆಂಪುವಿಶೇಷ:Searchಇ ಎ ಎಸ್ ಪ್ರಸನ್ನಲಾರ್ಡ್ಸ್ ಕ್ರಿಕೆಟ್ ಮೈದಾನಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳುನೊವಾಕ್‌ ಜೊಕೊವಿಕ್‌ (Novak Djokovic)ಪಂಪ ಪ್ರಶಸ್ತಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕದ.ರಾ.ಬೇಂದ್ರೆಛಂದಸ್ಸುದ್ವಿರುಕ್ತಿಬಿ. ಆರ್. ಅಂಬೇಡ್ಕರ್ಬಸವೇಶ್ವರಕನ್ನಡ ಸಾಹಿತ್ಯ ಸಮ್ಮೇಳನತತ್ಪುರುಷ ಸಮಾಸಆದೇಶ ಸಂಧಿಭಾರತದ ಸಂವಿಧಾನಪಾರ್ವತಿಕನ್ನಡ ಸಂಧಿಶಿವರಾಮ ಕಾರಂತಧರ್ಮಸ್ಥಳಎಸ್.ಎಲ್. ಭೈರಪ್ಪಚಂದ್ರಶೇಖರ ಕಂಬಾರಭಾರತಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಹಾರಕಕೆನಡಾಸಮುಚ್ಚಯ ಪದಗಳುಪುರಂದರದಾಸಜೀವಶಾಸ್ತ್ರಅಕ್ಕಮಹಾದೇವಿಕನ್ನಡ ಅಕ್ಷರಮಾಲೆಕನಕದಾಸರುಸಮಾಸಮಹಾತ್ಮ ಗಾಂಧಿಮೂಲಧಾತುಕನ್ನಡ ಸಾಹಿತ್ಯತತ್ಸಮ-ತದ್ಭವಭಯೋತ್ಪಾದನೆಗಿರೀಶ್ ಕಾರ್ನಾಡ್ಭೀಷ್ಮಭಾರತ ಸರ್ಕಾರಷಟ್ಪದಿರಾಮಾಯಣಪದ್ಮ ವಿಭೂಷಣಕನ್ನಡಕನ್ನಡ ವ್ಯಾಕರಣಗೌತಮ ಬುದ್ಧಪಂಪಕಂಪ್ಯೂಟರ್ವಚನಕಾರರ ಅಂಕಿತ ನಾಮಗಳುಎ.ಪಿ.ಜೆ.ಅಬ್ದುಲ್ ಕಲಾಂಜ್ಞಾನಪೀಠ ಪ್ರಶಸ್ತಿಸ್ವಾಮಿ ವಿವೇಕಾನಂದಕೇಂದ್ರಾಡಳಿತ ಪ್ರದೇಶಗಳುಅವ್ಯಯಭಗತ್ ಸಿಂಗ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಕರ್ನಾಟಕದ ಜಿಲ್ಲೆಗಳುಜಾನಪದಕನ್ನಡ ಗುಣಿತಾಕ್ಷರಗಳುವಿಭಕ್ತಿ ಪ್ರತ್ಯಯಗಳುರಾಜಧಾನಿಗಳ ಪಟ್ಟಿನವರತ್ನಗಳುರಾಜೀವ್ ಗಾಂಧಿಜಿ.ಎಸ್.ಶಿವರುದ್ರಪ್ಪಹಂಪೆವಿನಾಯಕ ಕೃಷ್ಣ ಗೋಕಾಕಜೋಡು ನುಡಿಗಟ್ಟುರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳುಡಿಸ್ಲೆಕ್ಸಿಯಾಬುದ್ಧಕನ್ನಡ ಕವಿಗಳುಅಲಂಕಾರಕುಮಾರವ್ಯಾಸ