ಟುಫ್

ಟುಫ್- ಜ್ವಾಲಾಮುಖಿಯಿಂದ ನೇರ ಹೊರಚಿಮ್ಮಿದ ವಸ್ತುವಿನಲ್ಲಿನ ಬೂದಿ ಮತ್ತು 4ಮಿಮೀ ಗಿಂತಲೂ ಕಿರಿಯ ಗಾತ್ರದ ತುಣುಕುಗಳು ಒಟ್ಟಾಗಿ ಮೈದಳೆದ ಪದಾರ್ಥ.

ಜ್ವಾಲಾಮುಖಿಯ ಸ್ಫೋಟನೆಯ ವೇಳೆಯಲ್ಲಿ ಶಿಲಾರಸ ಮತ್ತು ಅನಿಲಗಳಷ್ಟೆ ಅಲ್ಲದೆ ನಾನಾ ಆಕಾರ ಮತ್ತು ಗಾತ್ರದ ಘನವಸ್ತುಗಳೂ ಹೇರಳವಾಗಿ ಹೊರಬರುತ್ತವೆ. ಇವು ಕಾಲಕ್ರಮದಲ್ಲಿ ಬಂಧಿಸಿ ಗಟ್ಟಿಯಾಗಿ ಒಂದು ವಿಧವಾದ ಅಗ್ನಿಶಿಲೆಗಳಾಗಿ ಮೈದಳೆಯುತ್ತವೆ. ಇಂಥ ಶಿಲೆಗಳಿಗೆ ಚೂರುಗಲ್ಲಿನ ಅಗ್ನಿಶಿಲೆಗಳು ಎಂದು ಹೆಸರು. ಟುಫ್ ಕೂಡ ಈ ಗುಂಪಿಗೆ ಸೇರಿದ ಒಂದು ಜ್ವಾಲಾಮುಖಿಜ ಅಗ್ನಿಶಿಲೆ.

ಜ್ವಾಲಾಮುಖಿಯಿಂದ ಉಚ್ಚಾಟಿಸಲ್ಪಟ್ಟ ಘನವಸ್ತುಗಳು

ಜ್ವಾಲಾಮುಖಿಯಿಂದ ಉಚ್ಚಾಟಿಸಲ್ಪಟ್ಟ ಘನವಸ್ತುಗಳನ್ನು ಅವುಗಳ ಗಾತ್ರಾನುಸಾರವಾಗಿ ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು :

ಬ್ಲಾಕ್ಸ್

ಜ್ವಾಲಾಮುಖಿದ್ವಾರ ಅಥವಾ ಶಂಕುವಿನ ಬಿರಿತದಿಂದ ಉಂಟಾದ 32 ಮಿಮೀ ಗಿಂತ ಅಧಿಕ ವ್ಯಾಸದ ಘನವಸ್ತುಗಳು. ಇವುಗಳಿಗೆ ಗುಂಡುಗಳೆಂದು (ಬ್ಲಾಕ್ಸ್) ಹೆಸರು.

ಬಾಂಬುಗಳು

ವಾಯು ಮಂಡಲದೊಳಕ್ಕೆ ಚಿಮ್ಮಲ್ಪಟ್ಟ ಶಿಲಾರಸದ ಘನೀಭವನದಿಂದ ಉಂಟಾದ ಅದೇ ಗಾತ್ರದ ಘನವಸ್ತುಗಳು. ಇವುಗಳಿಗೆ ಬಾಂಬುಗಳೆಂದು ಹೆಸರು.

ಲ್ಯಾಪಿಲ್ಲಿಗಳು

ವ್ಯಾಸವ್ಯಾಪ್ತಿ 32-4 ಮಿಮೀ ಇರುವ ಘನವಸ್ತುಗಳು. ಇವುಗಳಿಗೆ ಲ್ಯಾಪಿಲ್ಲಿಗಳೆಂದು ಹೆಸರು.

ಬೂದಿ

ವ್ಯಾಸವ್ಯಾಪ್ತಿ 4-0.5 ಮಿಮೀ ಇರುವ ಘನವಸ್ತುಗಳು. ಇವುಗಳಿಗೆ ಬೂದಿ ಎಂದು ಹೆಸರು. (0.5 ಮಿಮೀ ಗಿಂತ ಕಡಿಮೆ ವ್ಯಾಸದ ಘನವಸ್ತುಗಳಿಗೆ ದೂಳು ಎಂದು ಹೆಸರು. )

ಈ ಘನವಸ್ತುಗಳಿಂದಾದ ಶಿಲೆಗಳು

ಈ ಘನವಸ್ತುಗಳು ಸಂಘಟಿಸಿ ಶಿಲೆಗಳಾಗುತ್ತವೆ. ಗುಂಡುಗಳ ಸಂಘಟನೆಯಿಂದ ಉಂಟಾದ ಶಿಲೆಗೆ ಜ್ವಾಲಾಮುಖಿಜ ಬ್ರಿಕ್ಷಿಯ, ಬಾಂಬುಗಳಿಂದ ಉಂಟಾದ ಶಿಲೆಗೆ ಆಗ್ಲಾಮರೇಟ್, ಲ್ಯಾಪಿಲ್ಲಿಗಳಿಂದ ಉಂಟಾದ ಶಿಲೆಗೆ ಲ್ಯಾಪಿಲ್ಲಿ ಟುಫ್, ಬೂದಿ ಮತ್ತು ದೂಳಿನ ಶಿಲೀಕರಣದಿಂದ ಉಂಟಾದ ಶಿಲೆಗೆ ಟುಫ್ ಎಂದು ಹೆಸರು, ಟುಫ್‍ಗಳನ್ನು ಅವುಗಳ ಸಂಯೋಜನೆಯ ಆಧಾರದ ಮೇಲೆ ಗಾಜು ಟುಫ್, ಸ್ಫಟಿಕ ಟುಫ್, ಶಿಲಾ ಟುಫ್‍ಗಳೆಂಬ ಮೂರು ವರ್ಗಗಳಾಗಿ ವಿಂಗಡಿಸಬಹುದು.

ಜ್ವಾಲಾಮುಖಿಯಿಂದ ಎಸೆಯಲ್ಪಟ್ಟ ಘನವಸ್ತುಗಳು ಕೆಲವು ಸಾರಿ ನೇರವಾಗಿ ಜಲಜಶಿಲೆಗಳು ರೂಪುಗೊಳ್ಳುತ್ತಿರುವ ಸಂಚಯನ ಪ್ರದೇಶಗಳಲ್ಲಿ ಬೀಳಬಹುದು ಅಥವಾ ಮೊದಲು ನೆಲದ ಮೇಲೆ ಬಿದ್ದರೂ ಕಾಲಾನುಕ್ರಮದಲ್ಲಿ ಗಾಳಿ ಮತ್ತು ನೀರಿನಿಂದ ಸ್ಥಳಾಂತರಿಸಲ್ಪಟ್ಟು ಸಂಚಯನ ಪ್ರದೇಶಗಳನ್ನು ಸೇರುತ್ತವೆ. ಅಲ್ಲಿ ಸಂಚಯನಗೊಳ್ಳುತ್ತಿರುವ ಜೇಡಿ, ಮೆಕ್ಕಲು ಮರಳು ಮತ್ತು ನೋರಜುಗಳ ಜೊತೆ ಸೇರಿ ಒಂದು ವಿಧವಾದ ಸಂಕೀರ್ಣ ಜಲಜಶಿಲೆಗಳು ಉದ್ಭವಿಸುತ್ತವೆ. ಅಂಥ ಶಿಲೆಗಳಿಗೆ ಟುಫೇಷನ್ ಜಲಜಶಿಲೆಗಳೆಂದು ಹೆಸರು.

ಟುಫ್ ನಿಕ್ಷೇಪಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಬಹು ವ್ಯಾಪಕವಾಗಿ ವಿಸ್ತಾರಗೊಂಡಿವೆ. ಭೂ ಇತಿಹಾಸದಲ್ಲಿ ಜ್ವಾಲಾಮುಖಿ ಕ್ರಿಯೆಯಿಲ್ಲದ ಕಾಲವೇ ಇಲ್ಲವೆಂದರೆ ತಪ್ಪಾಗಲಾರದು. ಅಂದವೇಲೆ ಟುಫ್ ಶಿಲಾನಿಕ್ಷೇಪಗಳು ನಿರ್ಜೀವಿ ಕಲ್ಪದಿಂದ ಆಧುನಿಕ ಜೀವಿಕಲ್ಪದವರೆಗೆ ಎಲ್ಲ ಶಿಲಾಸ್ತೋಮಗಳಲ್ಲಿಯೂ ದೊರೆಯುತ್ತವೆ. ಆದರೆ ಬಹು ಪುರಾತನ ಟುಫ್‍ಗಳು ತಮ್ಮ ಮೂಲ ಸ್ಪಂಜು ರಚನೆಯನ್ನು ಕಳೆದುಕೊಂಡು ಗುರುತಿಸಲಾಗದಷ್ಟು ರೂಪಾಂತರ ಹೊಂದಿವೆ.

ಟುಫ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಟುಫ್ ಜ್ವಾಲಾಮುಖಿಯಿಂದ ಉಚ್ಚಾಟಿಸಲ್ಪಟ್ಟ ಘನವಸ್ತುಗಳುಟುಫ್ ಈ ಘನವಸ್ತುಗಳಿಂದಾದ ಶಿಲೆಗಳುಟುಫ್

🔥 Trending searches on Wiki ಕನ್ನಡ:

ವಸಾಹತು ಭಾರತಚಂದ್ರಪು. ತಿ. ನರಸಿಂಹಾಚಾರ್ಯುಗಾದಿಕನ್ನಡ ಕಾವ್ಯಇಮ್ಮಡಿ ಪುಲಿಕೇಶಿಜ್ಯೋತಿಷ ಶಾಸ್ತ್ರಹನುಮಾನ್ ಚಾಲೀಸರೋಮನ್ ಸಾಮ್ರಾಜ್ಯಸಸ್ಯ ಅಂಗಾಂಶಕೌಲಾಲಂಪುರ್ಸಂಗೊಳ್ಳಿ ರಾಯಣ್ಣವರ್ಣತಂತು ನಕ್ಷೆಅಲ್ಯೂಮಿನಿಯಮ್ಭಾರತದ ತ್ರಿವರ್ಣ ಧ್ವಜಧೂಮಕೇತುನೀರಾವರಿಸೀತೆಉಪ್ಪಿನ ಕಾಯಿರಾಮ್ ಮೋಹನ್ ರಾಯ್ಕನ್ನಡ ರಂಗಭೂಮಿಕನ್ನಡಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗಾದೆಮೂಲವ್ಯಾಧಿಕಾವ್ಯಮೀಮಾಂಸೆರಚಿತಾ ರಾಮ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದ ಸಂಸತ್ತುಬಿಲ್ಹಣರಾಜ್ಯಗಳ ಪುನರ್ ವಿಂಗಡಣಾ ಆಯೋಗಕರ್ನಾಟಕದಲ್ಲಿ ಬ್ಯಾಂಕಿಂಗ್ಅಕ್ಕಮಹಾದೇವಿಸಂತಾನೋತ್ಪತ್ತಿಯ ವ್ಯವಸ್ಥೆಹಿಂದೂ ಧರ್ಮಹಿಂದೂ ಮಾಸಗಳುಭಾರತೀಯ ನೌಕಾಪಡೆಕಿತ್ತಳೆದುಗ್ಧರಸ ಗ್ರಂಥಿ (Lymph Node)ಮೆಸೊಪಟ್ಯಾಮಿಯಾಅಲೆಕ್ಸಾಂಡರ್ನೈಟ್ರೋಜನ್ ಚಕ್ರಸಂಗೀತ ವಾದ್ಯಕೈಲಾಸನಾಥಚಿನ್ನದುಂಡು ಮೇಜಿನ ಸಭೆ(ಭಾರತ)ವಿದ್ಯುತ್ ಪ್ರವಾಹಬಾಲಕಾರ್ಮಿಕಕರ್ಬೂಜಹೃದಯಆಲೂರು ವೆಂಕಟರಾಯರುಉಡುಪಿ ಜಿಲ್ಲೆಎರಡನೇ ಮಹಾಯುದ್ಧಡಿಎನ್ಎ -(DNA)ಭಾರತದಲ್ಲಿ ಬಡತನಚದುರಂಗ (ಆಟ)ಅಲಂಕಾರರಾಧಿಕಾ ಪಂಡಿತ್ಮಣ್ಣುಶಾಲಿವಾಹನ ಶಕೆಮಯೂರಶರ್ಮತಂಬಾಕು ಸೇವನೆ(ಧೂಮಪಾನ)ವಿನಾಯಕ ದಾಮೋದರ ಸಾವರ್ಕರ್ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಇಸ್ಲಾಂ ಧರ್ಮಸಂಸ್ಕೃತಿಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಸರ್ವಜ್ಞವಿಜಯನಗರಫುಟ್ ಬಾಲ್ಕುಮಾರವ್ಯಾಸಸಿದ್ಧಯ್ಯ ಪುರಾಣಿಕಲೋಹಾಭಮೀನಾ (ನಟಿ)ಎಚ್. ಜೆ . ಲಕ್ಕಪ್ಪಗೌಡಕಾಗೋಡು ಸತ್ಯಾಗ್ರಹಗುಪ್ತ ಸಾಮ್ರಾಜ್ಯಲಿಪಿವಿಭಕ್ತಿ ಪ್ರತ್ಯಯಗಳು🡆 More