ಗೊಡಚಿನಮಲ್ಕಿ ಜಲಪಾತ

ಗೊಡಚಿನಮಲ್ಕಿ ಜಲಪಾತ ಗೋಕಾಕ ಪಟ್ಟಣದಿಂದ ಸುಮಾರು ೧೯ ಕಿ.ಮೀ ದೂರದಲ್ಲಿರುವ ಒಂದು ಜಲಪಾತ.

ಬೆಳಗಾವಿಯಿಂದ 40 ಕಿ.ಮೀ. ದೂರದಲ್ಲಿದೆ. ಮಾರ್ಕಂಡೇಯ ನದಿಯಿಂದ ಉಂಟಾಗಿರುವ ಇದಕ್ಕೆ ಮಾರ್ಕಂಡೇಯ ಜಲಪಾತ ಎಂದೂ ಕರೆಯುತ್ತಾರೆ. ಇಲ್ಲಿ ಜಲಪಾತದ ಎರಡು ಹಂತಗಳಿವೆ. ಮಾರ್ಕಂಡೇಯ ನದಿಯು ಮೊದಲು ೨೫ ಮೀಟರ್ ಎತ್ತರದಿಂದ ಧುಮುಕಿ ಅನಂತರ ಹಂತದಲ್ಲಿ ೧೮ ಮೀಟರ್ ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ಎತ್ತರಕ್ಕಿಂತ ಹೆಚ್ಚು ಅಗಲವಾಗಿದ್ದು ಬಂಡೆಗಲ್ಲುಗಳ ಮೇಲೆ ಹಂತ ಹಂತವಾಗಿ ಜಾರಿದಂತೆ ಇಳಿಯುತ್ತದೆ. ಅಲ್ಲಿಂದ ಮುಂದೆ ಮಾರ್ಕಂಡೇಯ ನದಿಯು ಘೋಡ್ಗೇರಿಯಲ್ಲಿ ಘಟಪ್ರಭಾ ನದಿಯನ್ನು ಸೇರುತ್ತದೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಈ ಸ್ಥಳ ನೋಡಲು ಪ್ರಸಕ್ತ ಸಮಯ.

ಜಲಪಾತದ ದಾರಿ

ಗೋಕಾಕ ಪಟ್ಟಣದಿಂದ ಗೋಕಾಕ ಜಲಪಾತದ ರಸ್ತೆಯಲ್ಲಿ ೬ ಕಿ.ಮೀ ದೂರ ಕ್ರಮಿಸಿದರೆ ಗೋಕಾಕ ಜಲಪಾತ ಸಿಗುತ್ತದೆ. ಅಲ್ಲಿಂದ ಮುಂದೆ ಕೊಣ್ಣೂರು ರಸ್ತೆಯಲ್ಲಿ ಮುಂದುವರೆದು ಪಾಶ್ಚಾಪುರ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸುಮಾರು ೯ ಕಿ.ಮಿ. ಹೋದರೆ 'ಗೊಡಚಿನಮಲ್ಕಿ' ಎಂಬ ಗ್ರಾಮ ಸಿಗುತ್ತದೆ. ಆ ಗ್ರಾಮವನ್ನು ದಾಟಿದ ನಂತರ ಜಲಪಾತದ ವಾಹನ ನಿಲುಗಡೆ ಪ್ರದೇಶವನ್ನು ಸೇರಬಹುದು. ಜಲಪಾತಕ್ಕೆ ಹೋಗುವ ಕಾಲ್ನಡಿಯ ದಾರಿಯು ಇಲ್ಲಿಂದ ಶುರುವಾಗುತ್ತದೆ. ಕಚ್ಚಾ ಕಾಲುಹಾದಿಯಲ್ಲಿ ಸುಮಾರು ಒಂದೂವರೆ ಕಿಲೋಮೀಟರ್ ದೂರವನ್ನು ಕ್ರಮಿಸಿದರೆ ಜಲಪಾತವನ್ನು ತಲುಪಬಹುದು. ಯೋಗಿಕೊಳ್ಳದ ಬಳಿ ಇರುವ ನಿರ್ವಾಣೇಶ್ವರ ಮಠದಿಂದಲೂ ಕೂಡ ಕಾಲ್ನಡಿಗೆಯಲ್ಲಿ ಜಲಪಾತವನ್ನು ತಲುಪಬಹುದು.

ಸಾರಿಗೆ

ಗೋಕಾಕದಿಂದ ಮೇಲ್ಮಟ್ಟಿ ಮಾರ್ಗವಾಗಿ ಪಾಶ್ಚಾಪುರ ಹೋಗುವ ಬಸ್ಸುಗಳು ಗೊಡಚಿನಮಲ್ಕಿ ಮೂಲಕ ಹಾದುಹೋಗುತ್ತವೆ. ಸಾರಿಗೆ ಸಂಸ್ಥೆ ಹಾಗೂ ಖಾಸಗಿ ವಾಹನಗಳ ಅನುಕೂಲ ಇದೆ. ಗೋಕಾಕದಿಂದ ಬಾಡಿಗೆ ವಾಹನಗಳೂ ದೊರೆಯುತ್ತವೆ. ಗೊಡಚಿನಮಲ್ಕಿಯಿಂದ ೧೫ ಕಿ.ಮಿ ದೂರದಲ್ಲಿರುವ ಗೋಕಾಕ ರಸ್ತೆ ಸ್ಟೇಶನ್ನಿಗೆ ರೈಲಿನ ಮೂಲಕ ಬಂದರೆ ಅಲ್ಲಿಂದ ಬಸ್ ಸೌಕರ್ಯ ಪಡೆಯಬಹುದು.

ಹೊರಕೊಂಡಿಗಳು

Tags:

ಗೋಕಾಕಜಲಪಾತಬೆಳಗಾವಿ

🔥 Trending searches on Wiki ಕನ್ನಡ:

ದರ್ಶನ್ ತೂಗುದೀಪ್ಛಂದಸ್ಸುಪಪ್ಪಾಯಿಕರ್ಮಧಾರಯ ಸಮಾಸಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಅಶೋಕನ ಶಾಸನಗಳುಕನ್ನಡ ಚಳುವಳಿಗಳುಶೈಕ್ಷಣಿಕ ಸಂಶೋಧನೆಸ್ಯಾಮ್ ಪಿತ್ರೋಡಾಭೋವಿಹಿಂದೂ ಧರ್ಮಕವಿರಾಜಮಾರ್ಗನಿರ್ವಹಣೆ ಪರಿಚಯತೀ. ನಂ. ಶ್ರೀಕಂಠಯ್ಯಸಾಮಾಜಿಕ ಸಮಸ್ಯೆಗಳುಮೂಢನಂಬಿಕೆಗಳುರಾಷ್ಟ್ರೀಯ ಸೇವಾ ಯೋಜನೆಭಾರತೀಯ ಕಾವ್ಯ ಮೀಮಾಂಸೆಮದುವೆಸಜ್ಜೆದಾಸ ಸಾಹಿತ್ಯಸಚಿನ್ ತೆಂಡೂಲ್ಕರ್ಕರ್ನಾಟಕ ವಿಧಾನ ಪರಿಷತ್ಕನ್ನಡತಿ (ಧಾರಾವಾಹಿ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸರ್ಪ ಸುತ್ತುಕೊಡಗಿನ ಗೌರಮ್ಮಜೈನ ಧರ್ಮಗೋವಿಂದ ಪೈದಿವ್ಯಾಂಕಾ ತ್ರಿಪಾಠಿಅಳಿಲುಮಂಡಲ ಹಾವುಲಗೋರಿತಲಕಾಡುಮಲ್ಲಿಗೆಖೊಖೊಮಾಸ್ತಿ ವೆಂಕಟೇಶ ಅಯ್ಯಂಗಾರ್ಮಾನವ ಅಸ್ಥಿಪಂಜರಗಾದೆ ಮಾತುಕಲ್ಯಾಣ್ಹಾಸನವಚನಕಾರರ ಅಂಕಿತ ನಾಮಗಳುಸವದತ್ತಿಮೊದಲನೆಯ ಕೆಂಪೇಗೌಡಶ್ರೀಕೃಷ್ಣದೇವರಾಯಮಂಜುಳನೀನಾದೆ ನಾ (ಕನ್ನಡ ಧಾರಾವಾಹಿ)ದುಶ್ಯಲಾಗುಪ್ತ ಸಾಮ್ರಾಜ್ಯಗುಡಿಸಲು ಕೈಗಾರಿಕೆಗಳುಯಕೃತ್ತುಆದಿ ಶಂಕರಶಾಸನಗಳುಗೋತ್ರ ಮತ್ತು ಪ್ರವರಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆತ್ರಿವೇಣಿಜಾನಪದಸಾದರ ಲಿಂಗಾಯತಸುಭಾಷ್ ಚಂದ್ರ ಬೋಸ್ರವೀಂದ್ರನಾಥ ಠಾಗೋರ್ಎತ್ತಿನಹೊಳೆಯ ತಿರುವು ಯೋಜನೆಹೊಯ್ಸಳರಾಷ್ಟ್ರೀಯ ಶಿಕ್ಷಣ ನೀತಿಗುಣ ಸಂಧಿಸ್ಕೌಟ್ಸ್ ಮತ್ತು ಗೈಡ್ಸ್ವಿದ್ಯಾರಣ್ಯಕನ್ನಡ ರಾಜ್ಯೋತ್ಸವಆಂಧ್ರ ಪ್ರದೇಶಕೋಟ ಶ್ರೀನಿವಾಸ ಪೂಜಾರಿಕರ್ನಾಟಕ ಲೋಕಾಯುಕ್ತಯುಗಾದಿಕನ್ನಡ ಸಾಹಿತ್ಯ ಪರಿಷತ್ತುಗಿರೀಶ್ ಕಾರ್ನಾಡ್ಕರ್ನಾಟಕದ ಮಹಾನಗರಪಾಲಿಕೆಗಳುಮುದ್ದಣಪಂಚಾಂಗಸಂವಹನ🡆 More