ಗುಜರಾತ್ ರಾಜ್ಯ ಮಹಿಳಾ ಆಯೋಗವು 1993 ರಲ್ಲಿ ಗುಜರಾತ್ ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ರಚಿತವಾದ ಶಾಸನಬದ್ಧ ಸಂಸ್ಥೆಯಾಗಿದೆ. ಗುಜರಾತ್ ಸರ್ಕಾರವು ರಾಜ್ಯದಲ್ಲಿ ಮಹಿಳಾ ಕಲ್ಯಾಣ ಆಯೋಗವನ್ನುಅರೆ ನ್ಯಾಯಾಂಗ ಸಂಸ್ಥೆಯಾಗಿ ಸ್ಥಾಪಿಸಿದೆ.
ಇದು ಮಹಿಳೆಯರಿಗೆ ಸಂಬಂಧಿಸಿದ ನಿರ್ದಿಷ್ಟ ಸಮಸ್ಯೆಗಳನ್ನು ತನಿಖೆ ಮಾಡಲು ಮತ್ತು ರಾಜ್ಯದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಗುಜರಾತ್ ರಾಜ್ಯ ಮಹಿಳಾ ಆಯೋಗವನ್ನು ರಚಿಸಲಾಗಿದೆ. ಆಯೋಗವು ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಮತ್ತು ಕುಟುಂಬ ಮತ್ತು ಸಮುದಾಯದಲ್ಲಿ ಎದುರಿಸುತ್ತಿರುವ ಯಾವುದೇ ರೀತಿಯ ಕಿರುಕುಳ ಮತ್ತು ಸಮಸ್ಯೆಗಳ ವಿರುದ್ಧ ಅವರ ರಕ್ಷಣೆ ಮತ್ತು ಸಮಾನತೆಯನ್ನು ಖಚಿತಪಡಿಸಿಕೊಳ್ಳುವಂತೆ ಮಾಡುವ ಅಧಿಕಾರವನ್ನು ಹೊಂದಿದೆ.
ಮಹಿಳೆಯರ ಸಬಲೀಕರಣ, ಕಲ್ಯಾಣ ಮತ್ತು ಅಭಿವೃದ್ಧಿಗಾಗಿ, ಕಮೀಷನರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯು 1988 ರಿಂದ ಕಾರ್ಯನಿರ್ವಹಿಸುತ್ತಿದೆ. ಭಾರತ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಜಾರಿಗೊಳಿಸಲಾಗಿದೆ.
ಗಂಗಾ ಸ್ವರೂಪ - ಆರ್ಥಿಕ ನೆರವು ಯೋಜನೆ: ಈ ಯೋಜನೆಯನ್ನು 1979 ರಿಂದ ಪ್ರಾರಂಭಿಸಲಾಗಿದೆ, 01/04/2019 ರಿಂದ ಆರ್ಥಿಕ ಸಹಾಯವನ್ನು ಹೆಚ್ಚಿಸಲಾಗಿದೆ ಮತ್ತು ವಿಧವೆ ಮಹಿಳೆಯರಿಗೆ 1250/-ರೂ. ನೀಡಲಾಗುತ್ತದೆ. ಮೊದಲಿನ ಕಾನೂನಿನ ಪ್ರಕಾರ ಮಗನಿಗೆ 21 ವರ್ಷ ವಯಸ್ಸಾದರೆ ಈ ಸಹಾಯವನ್ನು ನಿಲ್ಲಿಸಬೇಕಾಗಿತ್ತು. ಅದನ್ನು ಇಲ್ಲಿ ತೆಗೆದುಹಾಕಿ ಜೀವಿತಾವಧಿ ಇರುವ ತನಕ ಸಹಾಯ ಧನ ನೀಡಬೆಕು ಎಂಬ ಹೊಸ ಷರತ್ತನ್ನು ಮಾಡಿತು. ಇದರ ನೆರವು ಪಡೆಯಲು ಗ್ರಾಮೀಣ ಪ್ರದೇಶದ ಫಲಾನುಭವಿಗಳ ಕುಟುಂಬದ ವಾರ್ಷಿಕ ಆದಾಯ ರೂ. 1, 20,000/- ಮತ್ತು ನಗರ ಪ್ರದೇಶಗಳಿಗೆ ರೂ. 1, 50,000/-.ಗಿಂತ ಹೆಚ್ಚಿರಬಾರದು. ಈ ನೆರವಿನ ಮೊತ್ತವನ್ನು ವಿಧವೆಯರ ಅಂಚೆ ಕಚೇರಿ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆ ಗುಜರಾತ್ ರಾಜ್ಯದಲ್ಲಿ ಸುಮಾರು 9.00 ಲಕ್ಷ ಫಲಾನುಭವಿಗಳಿಗೆ ನೆರವು ನೀಡುತ್ತಿದೆ.
ವಹ್ಲಿ ದಿಕ್ರಿ ಯೋಜನೆ: 02/08/2019 ರಂದು ಜನಿಸಿದ ಮಗಳು (01/08/2019 ರಂದು ರಾತ್ರಿ 11:59 ರ ನಂತರ) ಪ್ರಯೋಜನಕ್ಕೆ ಅರ್ಹರಾಗಿರುತ್ತಾಳೆ. ಮಗಳ ಜನನದ ಸಮಯದಲ್ಲಿ, ತಾಯಿಯ ವಯಸ್ಸು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿರಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳ ವಾರ್ಷಿಕ ಆದಾಯ ರೂ. 2,00, 000/- ಅಥವಾ ಅದಕ್ಕಿಂತ ಕಡಿಮೆ ಇರಬೇಕು. ದಂಪತಿಯ ಮೊದಲ 3 ಮಕ್ಕಳಲ್ಲಿ ಎರಡು ಹೆಣ್ಣು ಮಕ್ಕಳು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ. ಮಗಳನ್ನು 1ನೇ ತರಗತಿಗೆ ಸೇರಿಸುವ ಸಂದರ್ಭದಲ್ಲಿ ರೂ. 4000/- ನೀಡಲಾಗುತ್ತದೆ. 9ನೇ ತರಗತಿಗೆ ಮಗಳ ಪ್ರವೇಶ ಸಂದರ್ಭದಲ್ಲಿ ರೂ. 6000/- ನೀಡಲಾಗುತ್ತದೆ. 18 ವರ್ಷ ವಯಸ್ಸಿನಲ್ಲಿ ರೂ. 1,00,000/- ಉನ್ನತ ವ್ಯಾಸಂಗ/ಮದುವೆಗೆ ಸಹಾಯವಾಗಿ ನೀಡಲಾಗುತ್ತದೆ.
ಮಹಿಳಾ ವಿಕಾಸ ಪ್ರಶಸ್ತಿ: ಗುಜರಾತ್‌ನ ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಮತ್ತು 10 ವರ್ಷಗಳಿಂದ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತೆಯರ ಗಮನಾರ್ಹ ಕಾರ್ಯವನ್ನು ಉತ್ತೇಜಿಸಲು ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಎನ್‌ಜಿಒಗೆ ಅವರ ಗಮನಾರ್ಹ ಕೆಲಸಕ್ಕಾಗಿ ಪ್ರಶಸ್ತಿ ರೂ. 1,00,000/- . ಮಹಿಳಾ ಸಮಾಜ ಸೇವಕರಿಗೆ ರೂ. 50,000/- ವೈಯಕ್ತಿಕ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತಿದೆ.
ಗುಜರಾತ್ ರಾಜ್ಯ ಮಹಿಳಾ ಆಯೋಗವನ್ನು ಅಧ್ಯಕ್ಷರು ಮತ್ತು 4 ಸದಸ್ಯರನ್ನೊಳಗೊಂಡಂತೆ ರಚಿಸಲಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ನೇಮಕಕ್ಕೆ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯು ನಿಯಮಗಳನ್ನು ರೂಪಿಸುತ್ತದೆ.
ಶ್ರೀಮತಿ ವಿದ್ಯಾಗೌಡೆ, ಗುಜರಾತ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆಗಿದ್ದಾರೆ. ಅವರು ಇತರ ಸದಸ್ಯರೊಂದಿಗೆ 3 ವರ್ಷಗಳ ಅವಧಿಗೆ ಅಧಿಕಾರವನ್ನು ಹೊಂದಿರುತ್ತಾರೆ.
ಈ ಕೆಳಗಿನ ಚಟುವಟಿಕೆಗಳನ್ನು ನಿರ್ವಹಿಸಲು ಗುಜರಾತ್ ರಾಜ್ಯ ಮಹಿಳಾ ಆಯೋಗವನ್ನು ರಚಿಸಲಾಗಿದೆ:
This article uses material from the Wikipedia ಕನ್ನಡ article ಗುಜರಾತ್ ರಾಜ್ಯ ಮಹಿಳಾ ಆಯೋಗ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.