ಗುಜರಾತ್ ಜೈನ ತೀರ್ಥಕ್ಷೇತ್ರಗಳು

ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ.

ಗುಜರಾತ್ ರಾಜ್ಯವು ಜೈನ ತೀರ್ಥ ಕ್ಷೇತ್ರಗಳ (Gujarat Jain piligrimage centers) ತವರೂರಾಗಿದೆ.

ಗುಜರಾತ್ ಕ್ಷೇತ್ರವನ್ನು ಹಾಗೂ ಪಕ್ಕದ ರಾಜಸ್ತಾನದ ಮೌಂಟ್ ಅಬು ಕ್ಷೇತ್ರವನ್ನು ನೋಡಲು ಸರಳ ಮಾರ್ಗದರ್ಶಿ ಇಲ್ಲಿದೆ.

ಬೆಂಗಳೂರು ಅಥವಾ ಚೆನ್ನೈನಿಂದ ಅಹಮದಾಬಾದ್‌ದೆ ತೆರಳಿ. ರೈಲು ಹಾಗೂ ವಿಮಾನಯಾನ ಸೌಲಭ್ಯವಿದೆ. ಅಹಮದಾಬಾದ್‌ನಿಂದ ರಾತ್ರಿ ೧೦.೦೦ ಗಂಟೆಗೆ ಹೊರಡುವ ಸೋಮನಾಥ್ ಎಕ್ಸ್‌ಪ್ರೆಸ್‌ನಲ್ಲಿ ಜುನಾಗಢ್‌ಗೆ ತೆರಳಿ. ಜುನಾಗಢ್‌ನಿಂದ ಗಿರಿನಾರ್ ಕ್ಷೇತ್ರವು ೫ ಕಿಮೀ ದೂರದಲ್ಲಿದೆ. ರಿಕ್ಷಾ ಸಂಪರ್ಕ ಲಭ್ಯವಿದೆ. ಗಿರಿನಾರ್ ಬೆಟ್ಟದ ಕೆಳಗೆ ದಿಗಂಬರ ಜೈನ ಧರ್ಮಶಾಲೆಯಿದ್ದು, ಕೊಠಡಿ ಮತ್ತು ಭೋಜನದ ವ್ಯವಸ್ಥೆ ಇಲ್ಲಿ ಲಭ್ಯವಿದೆ. ಸುಮಾರು ೯,೦೦೦ ಮೆಟ್ಟಿಲು (ಹತ್ತಿ ಇಳಿದು ಬರಲು ೧೮,೦೦೦ ಮೆಟ್ಟಿಲು)ಇರುವ ಬೆಟ್ಟವು ಕಡಿದಾಗಿದ್ದು, ಮೇಲುಗಡೆ ಶ್ವೇತಾಂಬರ ಮತ್ತು ದಿಗಂಬರ ಜಿನಾಲಯವಿದೆ. ದಿಗಂಬರ ಜೈನ ಧರ್ಮಶಾಲೆಯಲ್ಲೂ ಸುಂದರವಾದ ಜಿನಾಲಯವಿದೆ. ಶ್ರೀ ನೇಮಿನಾಥರ ಪಾದುಕೆ (ಹಿಂದೂಗಳು ಅದನ್ನು ತಮ್ಮದೆಂದು ಪೂಜಿಸುತ್ತಾರೆ) ದರ್ಶನ ಮಾಡುವಷ್ಟರಲ್ಲಿ ನೀವು ದಣಿದಿರುತ್ತೀರಿ. ದರ್ಶನ ಮುಗಿಸಿ ಬಂದು ಅಂದು ಧರ್ಮಶಾಲೆಯಲ್ಲಿ ತಂಗಿರಿ.

ಬೆಳಿಗ್ಗೆ ಗಿರಿನಾರ್‌ನಿಂದ ಜುನಾಗಢ್‌ಗೆ ತೆರಳಿ, ಅಲ್ಲಿಂದ ಸೋನಘಡ್‌ಗೆ ತೆರಳಿ (ಸುಮಾರು ೨೦೦ ಕಿಮೀ).ಬಸ್,ಖಾಸಗಿ ಬಸ್ ಸೌಲಭ್ಯವಿದೆ. ಸೋನ್‌ಘಡ್‌ನಲ್ಲಿ ದರ್ಶನ ಮುಗಿಸಿ ಅಲ್ಲಿಂದ ೨೫ ಕಿಮೀ ದೂರವಿರುವ ಪಾಲಿಟಾಣಾವನ್ನು ತಲುಪಬಹುದು. ಇಲ್ಲಿ ಉಳಿದುಕೊಳ್ಳಲು ಹಲವಾರು ಯಾತ್ರಿ ನಿವಾಸಗಳು ಲಭ್ಯವಿದೆ. ಬೆಟ್ಟದ ಕೆಳಗಿರುವ ತಲಹೇಟಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿಕೊಳ್ಳುವುದು ಉತ್ತಮ. ಹೋದ ದಿನ ರಾತ್ರಿ ಬೆಟ್ಟದ ಕೆಳಗಿರುವ ಜಿನಮಂದಿರಗಳ ದರ್ಶನ ಮಾಡಿದಲ್ಲಿ ಮಾರನೇ ದಿನ ನೀವು ಕೊಂಚ ನಿರಾಳವಾಗಿರಬಹುದು.

ಬೆಳಿಗ್ಗೆ ಬೇಗನೆ ಎದ್ದು ಬೆಟ್ಟ ಹತ್ತಲು ಆರಂಭಿಸಿದರೆ, ಸುಮಾರು ೩ ಗಂಟೆ ಅವಧಿಯ ಬಳಿಕ ನೀವು ಜಿನ ಮಂದಿರಗಳಿರುವ ಪ್ರಾಂಗಣದಲ್ಲಿರುತ್ತೀರಿ. ಇಲ್ಲಿ ನೂರಾರು ಶ್ವೇತಾಂಬರ ಮತ್ತು ಏಕೈಕ ದಿಗಂಬರ ಜಿನ ಮಂದಿರವಿದೆ. ದರ್ಶನ ಮುಗಿಸಿ ಕೆಳಗೆ ಬಂದು ಸಾಧ್ಯವಾದರೆ ಅಂದೇ ಅಹಮದಾಬಾದ್‌ಗೆ ತೆರಳಿ. ಅಹಮದಾಬಾದ್‌ನಿಂದ ರಾತ್ರಿ ಮೌಂಟ್‌ ಅಬು (ಅಬು ರೋಡ್ ರೈಲ್ವೇ ನಿಲ್ದಾಣ)ಗೆ ತೆರಳಿ. (ಕೇವಲ ೧೭೦ ಕಿಮೀ ದೂರ) ಬೆಳಿಗ್ಗೆಯಷ್ಟೊತ್ತಿಗೆ ತಲುಪಬೇಕಾದರೆ ನಿಮಗೆ ರಾತ್ರಿ ೧೧.೧೫ ಕ್ಕೆ ಪ್ಯಾಸೆಂಜರ್ ರೈಲೊಂದಿದೆ.

ಬೆಳಿಗ್ಗೆ ಅಬು ರೋಡ್ ತಲುಪಿ, ಅಲ್ಲಿಂದ ೨೭ ಕಿಮೀ ದೂರವಿರುವ ಮೌಂಟ್ ಅಬುಗೆ ತೆರಳಿ. ಟ್ಯಾಕ್ಸಿ ಮತ್ತು ಸಾರಿಗೆ ಬಸ್ ವ್ಯವಸ್ಥೆಯಿದೆ. ಮೌಂಟ್ ಅಬುನಿನಲ್ಲಿ ಅತ್ಯಂತ ಮನೋಹರವಾಗಿರುವ ದಿಲ್ವಾರಾ ಜೈನ ಮಂದಿರ, ಮತ್ತು ಇನ್ನಿತರ ಸ್ಥಳಗಳ ದರ್ಶನ ಮುಗಿಸಿ, ರಾತ್ರಿ ಅಬು ರೋಡ್ ರೈಲ್ವೆ ನಿಲ್ಧಾಣಕ್ಕೆ ಬಂದು ಅಹಮದಾಬಾದ್‌ಗೆ ಮರಳಿ.

ಈ ಮೂಲಕ ಕೇವಲ ೫ ದಿನದಲ್ಲಿ ನೀವು ಗಿರಿನಾರ್,ಸೋನ್‌ಘಡ್, ಪಾಲಿಟಾಣಾ ಮತ್ತು ರಾಜಸ್ತಾನದ ಮೌಂಟ್ ಅಬು ದರ್ಶನವನ್ನು (Girinar, Songadh, Palitana, Mount abu) ಮುಗಿಸಬಹುದು.

Tags:

en:Wikipedia:Glossaryen:Wikipedia:Guide to layouten:Wikipedia:Manual of Style

🔥 Trending searches on Wiki ಕನ್ನಡ:

ರಾಮ್ ಮೋಹನ್ ರಾಯ್ಉತ್ತರ ಕರ್ನಾಟಕವಡ್ಡಾರಾಧನೆಕರ್ನಾಟಕದ ಜಿಲ್ಲೆಗಳುಕಲ್ಯಾಣ್ಮಂಜುಳಗೋತ್ರ ಮತ್ತು ಪ್ರವರವಿಜ್ಞಾನಕೃಷ್ಣರಾಜನಗರಯುಗಾದಿಚಂದ್ರಶೇಖರ ಕಂಬಾರಕನ್ನಡ ಸಾಹಿತ್ಯರತ್ನತ್ರಯರುವೀರಪ್ಪನ್ಅನುರಾಧಾ ಧಾರೇಶ್ವರಮದುವೆಉಪೇಂದ್ರ (ಚಲನಚಿತ್ರ)ಜೈನ ಧರ್ಮಗಾಳಿ/ವಾಯುಸ್ಟಾರ್‌ಬಕ್ಸ್‌‌ಅ.ನ.ಕೃಷ್ಣರಾಯವ್ಯವಸಾಯದೇವರ/ಜೇಡರ ದಾಸಿಮಯ್ಯಅಡೋಲ್ಫ್ ಹಿಟ್ಲರ್ಶ್ರೀಕೃಷ್ಣದೇವರಾಯಲೋಕಸಭೆನಾಯಕ (ಜಾತಿ) ವಾಲ್ಮೀಕಿಭಾರತದ ಸಂವಿಧಾನದ ೩೭೦ನೇ ವಿಧಿಹಲಸುಅಂಡವಾಯುಕಂಪ್ಯೂಟರ್ಗೊಮ್ಮಟೇಶ್ವರ ಪ್ರತಿಮೆಭಾರತದ ಸಂವಿಧಾನ ರಚನಾ ಸಭೆಕನ್ನಡ ಸಾಹಿತ್ಯ ಸಮ್ಮೇಳನಕಮಲಕಾದಂಬರಿಮಣ್ಣುಇಂಡೋನೇಷ್ಯಾಪಪ್ಪಾಯಿಚಾಲುಕ್ಯರಾಹುಲ್ ಗಾಂಧಿರಾಜ್‌ಕುಮಾರ್ನರೇಂದ್ರ ಮೋದಿವಾಸ್ತುಶಾಸ್ತ್ರವೇದವ್ಯಾಸಕನ್ನಡದಲ್ಲಿ ಸಣ್ಣ ಕಥೆಗಳು೧೬೦೮ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಶಬ್ದಜವಾಹರ‌ಲಾಲ್ ನೆಹರುವೀರೇಂದ್ರ ಪಾಟೀಲ್ಶ್ರೀವಿಜಯಆನೆಗಾದೆಜೀವನಸ್ವಚ್ಛ ಭಾರತ ಅಭಿಯಾನರತನ್ ನಾವಲ್ ಟಾಟಾರಾಧೆಸೀಮೆ ಹುಣಸೆವಿರೂಪಾಕ್ಷ ದೇವಾಲಯಸನ್ನಿ ಲಿಯೋನ್ಯುರೋಪ್ಚಾಣಕ್ಯಅಳಿಲುಸಂವತ್ಸರಗಳುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದಲ್ಲಿ ಪಂಚಾಯತ್ ರಾಜ್ಸಾದರ ಲಿಂಗಾಯತದಿಕ್ಕುಚೆನ್ನಕೇಶವ ದೇವಾಲಯ, ಬೇಲೂರುತಾಳೀಕೋಟೆಯ ಯುದ್ಧಕುಕ್ಕೆ ಸುಬ್ರಹ್ಮಣ್ಯ ದೇವಾಲಯಸರ್ಕಾರೇತರ ಸಂಸ್ಥೆಗೂಗಲ್ಡಿ.ಕೆ ಶಿವಕುಮಾರ್ಮಹಾತ್ಮ ಗಾಂಧಿ🡆 More