ಈಟಿ

ಉದ್ದವಾದ ಕೋಲಿನ ತುದಿಗೆ ಮೊನಚಾದ ಉಕ್ಕಿನ ಅಲಗನ್ನು ಸಿಕ್ಕಿಸಿರುವ ಭರ್ಜಿಯಂಥ ಒಂದು ಆಯುಧ (ಲ್ಯಾನ್ಸ್).

ಇದನ್ನು ಬಲುಮಟ್ಟಿಗೆ ಕುದುರೆ ಸವಾರರು ಹಿಡಿದಿರುತ್ತಾರೆ. ಆಯುಧವಾಗಿ ಇದು ಪರಿಣಾಮಕಾರಿಯೇ ಎಂಬ ಬಗ್ಗೆ ವಿವಾದವಿದೆ. ಕತ್ತಿ ಇದಕ್ಕಿಂತ ಹೆಚ್ಚು ಉಪಯುಕ್ತವೆಂದೂ ಕೊಲ್ಲಲು ಹೆಚ್ಚು ಶಕ್ತವೆಂದೂ ಪರಿಗಣಿತವಾಗಿದೆ. ಈಟಿ ತಲ್ಲಣಗೊಳಿಸುವ ಶಸ್ತ್ರ. ಆದರೆ ಕ್ಷಿಪ್ರ ಪ್ರಯೋಗಕ್ಕೆ ಕತ್ತಿಯೇ ಲೇಸು. ಆಧುನಿಕ ಯುದ್ಧಕ್ರಮದಲ್ಲಿ ಈಟಿ ಅನುಪಯುಕ್ತ ಆಯುಧ. ಈಗ ಅದನ್ನು ಕುದುರೆ ಸವಾರರು ಉತ್ಸವ ಸಮಾರಂಭಗಳಲ್ಲಿ ಅಲಂಕಾರ ಸಂಕೇತವಾಗಿ ಹಿಡಿದಿರುತ್ತಾರೆ. ಈಟಿಯ ಉದ್ದ ಪ್ರಾರಂಭದಲ್ಲಿ ೧೬' ಇದ್ದು ಈಗ ೧೯' ೧" ಆಗಿದೆ. ಅದರ ತುದಿ ಮೊನಚು ಮತ್ತು ಕತ್ತಿಯಂತೆ ಅಗಲವಾಗಿ ಅಥವಾ ಎಲೆಯಾಕಾರದಲ್ಲಿ ಇದೆ. ಮೊದಮೊದಲು ಈಟಿಯ ಕೋಲನ್ನು ಬೂದಿ ಮರದಿಂದ ಮಾಡುತ್ತಿದ್ದರು. ಈಗ ಗಟ್ಟಿ ಬಿದಿರಿನ ಗಳೆಯನ್ನು ಉಪಯೋಗಿಸುತ್ತಾರೆ. ಈಟಿಗೆ ಚರ್ಮದಿಂದ ಮಾಡಿದ ತೂಗಾಸರೆಯುಂಟು. ಸವಾರಿ ಮಾಡುವಾಗ ಅದರ ಬುಡ ಒಂದು ಸಣ್ಣ ಚರ್ಮಕೋಶದಲ್ಲಿ ತಂಗಿರುತ್ತದೆ.

ಈಟಿಯ ಇತಿಹಾಸ

ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಈ ಆಯುಧ ಎಂದು ಹುಟ್ಟಿತೆಂಬುದು ಗೊತ್ತಾಗಿಲ್ಲ. ಅಸ್ಸೀರಿಯ, ಗ್ರೀಕ್ ಮತ್ತು ರೋಮ್ ದೇಶಗಳಲ್ಲಿ ಇದು ಉಪಯೋಗದಲ್ಲಿತ್ತು. ೧೬೫೫ರಲ್ಲಿ ಈ ಆಯುಧವುಳ್ಳ ಕೆಲವೇ ಸ್ಪೇನ್ ಸೈನಿಕರು ಸ್ಯಾನ್ ಡಾಮಿಂಗೊ ಎಂಬ ಪ್ರದೇಶದಲ್ಲಿ, ಇದನ್ನು ಹೊಂದಿರದ ಬ್ರಿಟಿಷ್ ಯೋಧರನ್ನು ಸೋಲಿಸಿದರೆಂದು ತಿಳಿದುಬಂದಿದೆ. ೧೮೧೧ರಲ್ಲಿ ನೆಪೋಲಿಯನ್ ವಾಟರ್ಲು ಎಂಬಲ್ಲಿ ಈಟಿ ಹಿಡಿದ ತನ್ನ ಸವಾರರ ಮೂಲಕ ಬ್ರಿಟಿಷರನ್ನು ಸೋಲಿಸಿ ಪ್ರಶಂಸಾರ್ಹ ಜಯಗಳಿಸಿದ. ಇದರಿಂದ ಪಾಠ ಕಲಿತ ಬ್ರಿಟಿಷರು ತಮ್ಮ ಅನೇಕ ದಳಗಳನ್ನು ಈಟಿ ಪಡೆಗಳನ್ನಾಗಿ ಮಾರ್ಪಡಿಸಿದರು. ಭಾರತ ಸೇನೆಯ ಚರಿತ್ರೆಯಲ್ಲಿ ಈಟಿ ದಳದವರು ಬಹಳ ಹಿರಿಮೆಯ ಪಾತ್ರವನ್ನು ವಹಿಸಿದ್ದಾರೆ. ೧೯೧೬ರಲ್ಲಿ ಇಪ್ಪತ್ತೊಂದನೆಯ ಈಟಿ ಪಡೆಯವರು ವಾಯವ್ಯ ಪ್ರದೇಶದ ಮಹಮಂಡ್ ಎಂಬ ಜನರಲ್ಲಿ ಬಹಳ ಹಾವಳಿ ನಡೆಸಿದರು. ಎಸ್‍ಡ್ರಿಲಾನ್ ಎಂಬ ಬಯಲಿನಲ್ಲಿ ಮುಂದುವರಿಯುತ್ತಿದ್ದಾಗ್ಗೆ ಲೆಜ್ಜುನ್ ಎಂಬ ಸ್ಥಳದಲ್ಲಿ ಭಾರತದ ಎರಡನೆಯ ಈಟಿ ಪಡೆ ತುರ್ಕಿಯವರನ್ನು ಓಡಿಸಿತು.

ಉಲ್ಲೇಖ

http://www.indifferentlanguages.com/translate/kannada-english/%E0%B2%88%E0%B2%9F%E0%B2%BF https://www.duhoctrungquoc.vn/dict/kn/%E0%B2%88%E0%B2%9F%E0%B2%BF_%E0%B2%8E%E0%B2%B8%E0%B3%86%E0%B2%A4

Tags:

ಆಯುಧಕುದುರೆಚರ್ಮಮರ

🔥 Trending searches on Wiki ಕನ್ನಡ:

ಕಾಂತಾರ (ಚಲನಚಿತ್ರ)ಫುಟ್ ಬಾಲ್ಭಾರತ ಬಿಟ್ಟು ತೊಲಗಿ ಚಳುವಳಿವಿಜಯನಗರಮಾದಿಗಮದಕರಿ ನಾಯಕಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಸಿಂಗಾಪುರಧೀರೂಭಾಯಿ ಅಂಬಾನಿಮಧುಮೇಹಎನ್ ಆರ್ ನಾರಾಯಣಮೂರ್ತಿಸಂಸ್ಕಾರಕಂಪ್ಯೂಟರ್ನೀತಿ ಆಯೋಗಅಂಜನಿ ಪುತ್ರಬದ್ರ್ ಯುದ್ಧಕನ್ನಡಪ್ರಭಹಸಿರು ಕ್ರಾಂತಿಅಣುಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವಡ್ಡಾರಾಧನೆಬಂಡೀಪುರ ರಾಷ್ಟ್ರೀಯ ಉದ್ಯಾನವನಸಮಸ್ಥಾನಿಮಾನವನ ನರವ್ಯೂಹಮಾರಿಕಾಂಬಾ ದೇವಸ್ಥಾನ (ಸಾಗರ)ಸುರಪುರದ ವೆಂಕಟಪ್ಪನಾಯಕಚೋಮನ ದುಡಿಗೊರೂರು ರಾಮಸ್ವಾಮಿ ಅಯ್ಯಂಗಾರ್ಆರ್ಯಭಟ (ಗಣಿತಜ್ಞ)ಸಂವಹನಒಡೆಯರ್ಅಶೋಕನ ಶಾಸನಗಳುಹೈದರಾಲಿಮೋಕ್ಷಗುಂಡಂ ವಿಶ್ವೇಶ್ವರಯ್ಯಕೈವಾರ ತಾತಯ್ಯ ಯೋಗಿನಾರೇಯಣರುವರ್ಲ್ಡ್ ವೈಡ್ ವೆಬ್ಪಪ್ಪಾಯಿಧೊಂಡಿಯ ವಾಘ್ಕನ್ನಡದಲ್ಲಿ ಸಣ್ಣ ಕಥೆಗಳುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಅಶ್ವತ್ಥಮರಕುಮಾರವ್ಯಾಸಯುರೇನಿಯಮ್ವಿಶ್ವ ಮಹಿಳೆಯರ ದಿನವರ್ಣತಂತು (ಕ್ರೋಮೋಸೋಮ್)ರಾಷ್ಟ್ರೀಯತೆಅಸಹಕಾರ ಚಳುವಳಿಮಯೂರವರ್ಮಭರತ-ಬಾಹುಬಲಿಮಡಿವಾಳ ಮಾಚಿದೇವರೋಸ್‌ಮರಿಸಾವಯವ ಬೇಸಾಯಶೇಷಾದ್ರಿ ಅಯ್ಯರ್ವಿನಾಯಕ ಕೃಷ್ಣ ಗೋಕಾಕಇಂಡಿಯಾನಾಉತ್ಪಾದನೆಜ್ಯೋತಿಷ ಶಾಸ್ತ್ರಭಾರತದಲ್ಲಿ ಬಡತನರೈತಕೆ. ಎಸ್. ನಿಸಾರ್ ಅಹಮದ್ಭಾರತೀಯ ನದಿಗಳ ಪಟ್ಟಿಭಾರತ ಸಂವಿಧಾನದ ಪೀಠಿಕೆಇ-ಕಾಮರ್ಸ್ವಿಕ್ರಮಾರ್ಜುನ ವಿಜಯದಶಾವತಾರಬುದ್ಧಶುಭ ಶುಕ್ರವಾರವೇದಕೈಗಾರಿಕೆಗಳ ಸ್ಥಾನೀಕರಣಧರ್ಮಸ್ಥಳಜೇನು ಹುಳುರಾಷ್ಟ್ರೀಯ ಸೇವಾ ಯೋಜನೆಭಾರತದಲ್ಲಿ ಕೃಷಿಛಂದಸ್ಸುಉಡುಪಿ ಜಿಲ್ಲೆ🡆 More