ಅಭಂಗ

ಅಭಂಗ ಹಿಂದೂ ದೇವತೆ ವಿಠ್ಠಲನ ಪ್ರಶಂಸೆಯಲ್ಲಿ ಹಾಡಲಾದ ಭಕ್ತಿಪ್ರಧಾನ ಕಾವ್ಯದ ಒಂದು ರೂಪ.

"ಅಭಂಗ" ಶಬ್ದದ ಅರ್ಥ ಭಂಗವಿಲ್ಲದ, ಅಂದರೆ ದೋಷರಹಿತ, ನಿರಂತರ ಪ್ರಕ್ರಿಯೆ, ಈ ಸಂದರ್ಭದಲ್ಲಿ ಒಂದು ಕವಿತೆಯನ್ನು ಸೂಚಿಸುತ್ತದೆ. ತದ್ವಿರುದ್ಧವಾಗಿ, ಭಜನೆಗಳೆಂದು ಪರಿಚಿತವಿರುವ ಭಕ್ತಿಗೀತೆಗಳು ಆಂತರಿಕ ಪ್ರಯಾಣದ ಮೇಲೆ ಕೇಂದ್ರೀಕರಿಸುತ್ತವೆ. ಅಭಂಗಗಳು ಸಮುದಾಯಕೇಂದ್ರೀಯ ಅನುಭವದ ಹೆಚ್ಚು ಉತ್ಸಾಹಿ ಅಭಿವ್ಯಕ್ತಿಗಳಾಗಿವೆ. ಅಭಂಗವನ್ನು ಓವಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಅಭಂಗಗಳನ್ನು ಭಕ್ತರು ಪಂಢರಪುರದ ದೇವಸ್ಥಾನಗಳಿಗೆ ತೀರ್ಥಯಾತ್ರೆ ಹೋಗುವ ಅವಧಿಯಲ್ಲಿ ಹಾಡುತ್ತಾರೆ.

ಅಭಂಗ
ಒಬ್ಬ ವಾರಕರಿ ಆಳಂದಿಯಿಂದ ಪಂಢರಪುರಕ್ಕೆ ಪ್ರಯಾಣಿಸುತ್ತಿದ್ದಾನೆ

ಮರಾಠಿ ಭಜನೆಗಳು ನಮನ್‍ನಿಂದ (ದೇವರ ಆವಾಹನೆ) ಶುರುವಾಗುತ್ತವೆ, ಇದನ್ನು ರೂಪಾಂಚಾ ಅಭಂಗ್ ಅನುಸರಿಸುತ್ತದೆ (ಮಾನವ ರೂಪದಲ್ಲಿ ವ್ಯಕ್ತೀಕರಿಸುವ ಮೂಲಕ ದೇವರ ದೈಹಿಕ ಸೌಂದರ್ಯವನ್ನು ಚಿತ್ರಿಸುವುದು) ಮತ್ತು ಕೊನೆಯಲ್ಲಿ ಆಧ್ಯಾತ್ಮಿಕ ಹಾಗೂ ನೈತಿಕ ಸಂದೇಶಗಳನ್ನು ಕೊಡುವ ಭಜನೆಗಳನ್ನು ಹಾಡಲಾಗುತ್ತದೆ. ಭೀಮಸೇನ ಜೋಷಿ, ಸುರೇಶ್ ವಾಡ್ಕರ್, ಅರುಣಾ ಶ್ರೀರಾಮ್, ಜಯತೀರ್ಥ ಮೇವುಂಡಿ ಮತ್ತು ಜಿತೇಂದ್ರ ಅಭಿಶೇಕಿ ಅಭಂಗಗಳನ್ನು ಹಾಡಿದ ಕೆಲವು ಪ್ರಸಿದ್ಧ ಸಂಗೀತಗಾರರು. ಇದು ಶಾಸ್ತ್ರೀಯ ಮತ್ತು ಶಾಸ್ತ್ರೀಯೇತರ ಸಂಗೀತಗಾರರಿಂದ ಪ್ರದರ್ಶಿಸಲ್ಪಟ್ಟ ಸಂಗೀತದ ಒಂದು ರೂಪವಾಗಿದೆ. ದಕ್ಷಿಣ ಭಾರತದಾದ್ಯಂತ ಭಜನ ಕಛೇರಿಗಳಲ್ಲಿ ಇದು ಅವಿಭಾಜ್ಯವಾಗಿದೆ.

ತುಕಾರಾಮ್ ಪುಣೆಯ ಹತ್ತಿರದ ದೇಹು ಪಟ್ಟಣದಲ್ಲಿ ವಾಸಿಸುತ್ತಿದ್ದ ಒಬ್ಬ ಹದಿನೇಳನೆಯ ಶತಮಾನದ ಕವಿಯಾಗಿದ್ದನು. ಇವನು ಒಬ್ಬ ಜನಪ್ರಿಯ ಕವಿಯಾಗಿದ್ದನು ಮತ್ತು ತನ್ನ ಕಾಲದ ವಾರಕರಿ ಚಳುವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದನು. ವಾರಕರಿ ಚಳುವಳಿಯು ಧಾರ್ಮಿಕ ಕ್ರಿಯಾವಿಧಿಗಳು ಮತ್ತು ರಹಸ್ಯಮಯ ಧರ್ಮಾಚರಣೆಗಳ ಕುರುಡು ವಿಧೇಯತೆಯ ಬದಲು, ದೇವರ ಕಡೆ ಭಕ್ತಿ ಹಾಗೂ ಪ್ರೀತಿ ಮೇಲೆ ಒತ್ತು ಹಾಕಲು ಪ್ರಯತ್ನಿಸಿತು. ಸಂತ ತುಕಾರಾಮನು ೫೦೦೦ಕ್ಕೂ ಹೆಚ್ಚು ಅಭಂಗಗಳನ್ನು ಬರೆದನು ಎಂದು ಹೇಳಲಾಗಿದೆ. ಇವುಗಳಲ್ಲಿ ಅನೇಕ ಅಭಂಗಗಳು ವಿಠ್ಠಲನಿಗೆ ಅರ್ಪಿತವಾಗಿದ್ದವು, ಆದರೆ ಹೆಚ್ಚಾಗಿ ತನ್ನ ಕಾಲದ ಸಾಮಾಜಿಕ ಅನ್ಯಾಯಗಳನ್ನು ಟೀಕಿಸುತ್ತಿದ್ದವು. ಅವು ಪ್ರಬಲ ನೀತಿಬೋಧೆಗಳಾಗಿದ್ದವು, ಮತ್ತು ಇಂದಿಗೂ ಉಪಯುಕ್ತವಾಗಿವೆ.

ಶಿವಾಜಿಯ ಗುರುಗಳಾದ ಸಮರ್ಥ ರಾಮದಾಸರು ನಾಮಸಂಕೀರ್ತನೆಯ ಈ ಸಂಪ್ರದಾಯವನ್ನು ತಂಜಾವೂರಿಗೆ ತೆಗೆದುಕೊಂಡು ಹೋಗುವಲ್ಲಿ ಮಹತ್ವಪೂರ್ಣ ಪಾತ್ರವಹಿಸಿದ್ದರು. ಇದು ದಕ್ಷಿಣ ಭಾರತದಲ್ಲಿ ಅಭಂಗಗಳನ್ನು ಶಾಸ್ತ್ರೀಯ ರೂಪದಲ್ಲಿ ಹಾಡುವುದಕ್ಕೆ ಕಾರಣವಾಯಿತು ಮತ್ತು ಇವನ್ನು ದಕ್ಷಿಣ ಭಾರತದ ಕರ್ನಾಟಕ ಹಾಗೂ ಭಜನ ಕಛೇರಿಗಳ ಅವಿಭಾಜ್ಯ ಭಾಗವಾಗಿ ಮಾಡಿತು.

ಕೆಲ ಪ್ರಖ್ಯಾತ ಅಭಂಗಗಳು

ಹಾಡು ಆಲ್ಬಮ್ / ಸಿನಿಮ ಹೆಸರು ಗಾಯಕರು ಸಾಹಿತ್ಯ ಸಂಗೀತ ಸಂಯೋಜಕರು
ಜ್ಞಾನಿಯಾಂಚ ರಾಜ ಗುರು ಅಭಂಗವಾಣಿ -೧ ಭೀಮಸೇನ ಜೋಷಿ ಸಂತ ತುಕಾರಾಂ ಭೀಮಸೇನ ಜೋಷಿ
ರಾಜಸ ಸುಕುಮಾರ್ ಮದನಾಚ ಪುತಳ ಅಭಂಗ -೧ ಭೀಮಸೇನ ಜೋಷಿ ಸಂತ ತುಕಾರಾಂ ಭೀಮಸೇನ ಜೋಷಿ
ಧ್ಯಾನ್ ಕರು ಝಾತ ಸಂತಾಂಚೆ ಆಭಂಗ್ ಜಯತೀರ್ಥ ಮೇವುಂಡಿ ಸಮರ್ಥ ರಾಮದಾಸರು ಮಹೇಶ್ ಮಹದೇವ್


ಉಲ್ಲೇಖಗಳು

Tags:

ಪಂಢರಪುರಭಜನೆವಿಠ್ಠಲಹಿಂದೂ

🔥 Trending searches on Wiki ಕನ್ನಡ:

ಮಡಿವಾಳ ಮಾಚಿದೇವಮಾದರ ಚೆನ್ನಯ್ಯದ್ವಿರುಕ್ತಿಮತದಾನ ಯಂತ್ರಕಂಸಾಳೆಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಹನುಮಂತವಾಲ್ಮೀಕಿನಂಜನಗೂಡುಗೋವಿಂದ ಪೈಕೆ. ಅಣ್ಣಾಮಲೈಸವರ್ಣದೀರ್ಘ ಸಂಧಿಮದುವೆಭೂಮಿಉತ್ತಮ ಪ್ರಜಾಕೀಯ ಪಕ್ಷಸಜ್ಜೆಒಂದನೆಯ ಮಹಾಯುದ್ಧನದಿವಚನಕಾರರ ಅಂಕಿತ ನಾಮಗಳುಸಿಂಧೂತಟದ ನಾಗರೀಕತೆಅಷ್ಟಾಂಗ ಮಾರ್ಗಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಧನಂಜಯ್ (ನಟ)ಬೆಂಗಳೂರು ಗ್ರಾಮಾಂತರ ಜಿಲ್ಲೆಪಾಕಿಸ್ತಾನಕನ್ನಡದಲ್ಲಿ ವಚನ ಸಾಹಿತ್ಯದ್ರಾವಿಡ ಭಾಷೆಗಳುಕಮಲದಹೂಚಂದ್ರಶೇಖರ ಕಂಬಾರವಿಜಯ ಕರ್ನಾಟಕಕೃಷ್ಣಾ ನದಿಶ್ರವಣಬೆಳಗೊಳಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕಿತ್ತೂರು ಚೆನ್ನಮ್ಮಹವಾಮಾನಸರ್ವಜ್ಞಸಾರ್ವಜನಿಕ ಆಡಳಿತರಾಜ್ಯಸಭೆತರಕಾರಿದಂತಿದುರ್ಗಆಟಸುದೀಪ್ಹಂಪೆದಸರಾಯೂಟ್ಯೂಬ್‌ಬೆಂಗಳೂರಿನ ಇತಿಹಾಸಬಂಡಾಯ ಸಾಹಿತ್ಯಹೈದರಾಲಿರಾಸಾಯನಿಕ ಗೊಬ್ಬರಪಾಲಕ್ಅಲ್ಲಮ ಪ್ರಭುಕರ್ನಾಟಕ ಐತಿಹಾಸಿಕ ಸ್ಥಳಗಳುಕರ್ನಾಟಕ ವಿಧಾನ ಸಭೆಸಾಮ್ರಾಟ್ ಅಶೋಕಬಳ್ಳಾರಿಬೌದ್ಧ ಧರ್ಮತೆಂಗಿನಕಾಯಿ ಮರಸಂಶೋಧನೆಲೋಕಸಭೆಕರ್ನಾಟಕದ ಮಹಾನಗರಪಾಲಿಕೆಗಳುಪ್ರಜ್ವಲ್ ರೇವಣ್ಣಆಮೆದಾಳಿಂಬೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಪಪ್ಪಾಯಿಬಿಳಿ ರಕ್ತ ಕಣಗಳುದಾವಣಗೆರೆಭಾರತದ ರೂಪಾಯಿಕನ್ನಡ ರಂಗಭೂಮಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿದಾಳಯಣ್ ಸಂಧಿಜಯಪ್ರಕಾಶ ನಾರಾಯಣಸಿದ್ಧರಾಮಕಾಮಾಲೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕನ್ನಡ ಸಾಹಿತ್ಯ🡆 More