ಅಪ್ಸರೆಯರು

ಅಪ್ಸರೆಯರು ಸ್ವರ್ಗ ಲೋಕದ ದೇವತಾ ಸ್ತ್ರೀಯರು.

ದೇವಲೋಕದಲ್ಲಿ ಸಾವಿರಾರು ಮಂದಿ ಅಪ್ಸರೆಯರಿದ್ದರೆಂದು ಹೇಳಲಾಗುತ್ತದೆ. ಇವರು ಚಿರ ತರುಣಿಯರು. ಮುಪ್ಪು ಇವರನ್ನು ಆವರಿಸಲಾರದು. ಇವರನ್ನು ಸ್ವರ್ಗಲೋಕದ ವೇಶೈಯರೆಂದು ಕರೆಯಲಾಗಿದೆ. ಇಂದ್ರನ ಅಡಿಯಾಳುಗಳಾಗಿ ಅವನು ಹೇಳಿದವರನ್ನು ತೃಪ್ತಿ ಪಡಿಸುವುದೇ ಇವರ ಕೆಲಸವಾಗಿತ್ತು. ಕಶ್ಯಪನ ಹೆಂಡತಿ ತಿಲೋತ್ತಮೆ ರಂಭೆ, ಊರ್ವಶಿ, ಮೇನಕೆ, ಮನೋರಮಾ ಮುಂತಾದ ಹದಿಮೂರು ಮಂದಿ ಅಪ್ಸರೆಯರಿಗೆ ಜನ್ಮ ನೀಡಿದಳು.

ಅಪ್ಸರೆಯರು
ಉತ್ತರಪ್ರದೇಶದಲ್ಲಿರುವ ೧೨ನೆಯ ಶತಮಾನದ ಮರಳುಕಲ್ಲಿನ ಆಪ್ಸರೆಯ ಪುತ್ಥಳಿ.
ಅಪ್ಸರೆಯರು
ಅಪ್ಸರ ಮೇನಕ-ವಿಶ್ವಾಮಿತ್ರ
ಅಪ್ಸರೆಯರು
ಅಪ್ಸರ ರಂಭ
ಅಪ್ಸರೆಯರು
Apsara, Devi Jagadambi Temple, Khajuraho, Madhya Pradesh, India
ಅಪ್ಸರೆಯರು
The Apsara of Borobudur, the flying celestial maiden depicted in a bas-relief of the 9th-century Borobudur temple, Java, ಇಂಡೋನೇಷ್ಯಾ.

ಪುರಾಣಗಳಲ್ಲಿ ಅಪ್ಸರೆಯರು

ಹಿಂದೂ ಪುರಾಣ ಶಾಸ್ತ್ರ ಹಾಗೂ ಧರ್ಮದ ಪ್ರಕಾರ ಇವರು ಕ್ಷೀರಾಬ್ದಿ ಮಥನ ಸಂದರ್ಭದಲ್ಲಿ ನೀರಿನಿಂದ ಉದ್ಬವಿಸಿದವರು. ಇಂದ್ರನ ಆಸ್ಥಾನದ ನರ್ತಕಿಯರು. ಅಥರ್ವಣವೇದದಲ್ಲಿ ಅಪ್ಸರೆಯರಿಗೆ ಗಂಧರ್ವರೊಂದಿಗೆ ಸಂಬಂಧ ಕಲ್ಪಿಸಲಾಗಿದೆ. ಅದರ ಪ್ರಕಾರ ಇವರ ಕಾರ್ಯಕ್ಷೇತ್ರ ಭೂಮಿವರೆಗೂ ವ್ಯಾಪಿಸಿದೆ. ಇವರು ಭೂಲೋಕದಲ್ಲಿ ಅಂಜೂರದ ಮರಗಳಲ್ಲಿ ವಾಸಿಸುತ್ತಾ ಝಲ್ಲರಿ ಮತ್ತು ವೀಣೆಯನ್ನು ನುಡಿಸುತ್ತಿದ್ದರು. ಇವರನ್ನು ವರಿಸಲು ಸುರಾಸುರರು ನಿರಾಕರಿಸಿದುದರಿಂದ ಇವರು ಸ್ವೇಚ್ಛಾಚಾರಿಗಳಾದರು. ಮರಣ ಹೊಂದಿದ ವೀರರಿಗೆ ಇವರನ್ನು ಬಹುಮಾನವಾಗಿ ಕೊಡಲಾಗುತ್ತಿತ್ತು. ಅಪ್ಸರೆಯರ ರೂಪ, ಲಾವಣ್ಯದ ಬಗ್ಗೆ, ಅವರು ಮುನಿಗಳ ತಪಸ್ಸನ್ನು ಕೆಡಿಸಿದ್ದರ ಬಗ್ಗೆ ಅನೇಕ ಕಥೆಗಳು ಪುರಾಣದಲ್ಲಿ ಕಂಡು ಬರುತ್ತವೆ. ಭೂಲೋಕದ ಅನೇಕರೊಂದಿಗೆ ಇವರು ಸಂಸರ್ಗಗೊಂಡ ಕಥೆಗಳು ಬಹಳಷ್ಟಿವೆ. ಉದಾ:-ವಿಶ್ವಾಮಿತ್ರ-ಮೇನಕೆ ಪ್ರಸಂಗ.

ಪುರಾಣ ಕಾವ್ಯದಲ್ಲಿ ಅಪ್ಸರೆಯರು

  • ಹಳಗನ್ನಡ ಕಾವ್ಯವಾದ 'ಹರಿವಂಶದಲ್ಲಿ ಅಪ್ಸರೆಯರು ತಮ್ಮ ಒಡೆಯನಾದ ಇಂದ್ರನ ಆಸ್ಥಾನದಲ್ಲಿ ಗೀತ, ನೃತ್ಯ, ನಾಟಕ, ರೂಪಕಗಳನ್ನು ಮಾಡುತ್ತಾ ಮನರಂಜನೆ ನೀಡುವ ಕೆಲಸ ಮಾಡುತ್ತಿದ್ದರು. ಇವರು ತಮಗಿಷ್ಟ ಬಂದ ರೂಪವನ್ನು ಹೊಂದಬಲ್ಲ ಶಕ್ತಿ ಹೊಂದಿದ್ದರು.
  • ಭಾರತೀಯ ಮಹಾಕಾವ್ಯವಾದ ಮಹಾಭಾರತದಲ್ಲಿ ಅರ್ಜುನ ನಪುಂಸಕನಾಗಲೂ ಊರ್ವಶಿ ಕೊಟ್ಟ ಶಾಪವೇ ಕಾರಣವಾಗುತ್ತದೆ. ಅರ್ಜುನ ಉತ್ತರನನ್ನು ಪ್ರಚೋದಿಸಲು ಅಪ್ಸರೆಯರು ನಿನ್ನ ತೊತ್ತಾಗುವರು ಎಂದು ಹೇಳುತ್ತಾನೆ.

ಲೇಖನ ನೆರವು

  • ಕನ್ನಡ ಜಾನಪದ ವಿಶ್ವಕೋಶ ಸಂಪುಟ-೧

ಉಲ್ಲೇಖಗಳು

Tags:

ಅಪ್ಸರೆಯರು ಪುರಾಣಗಳಲ್ಲಿ ಅಪ್ಸರೆಯರು ಪುರಾಣ ಕಾವ್ಯದಲ್ಲಿ ಅಪ್ಸರೆಯರು ಲೇಖನ ನೆರವುಅಪ್ಸರೆಯರು ಉಲ್ಲೇಖಗಳುಅಪ್ಸರೆಯರು

🔥 Trending searches on Wiki ಕನ್ನಡ:

ಪರಮಾಣುಅಲಂಕಾರಪರಿಣಾಮರವಿಚಂದ್ರನ್ನೀರುಅನುಶ್ರೀಭಾರತೀಯ ಭಾಷೆಗಳುಮುದ್ದಣಸುಭಾಷ್ ಚಂದ್ರ ಬೋಸ್ನೀರಾವರಿಸುಗ್ಗಿ ಕುಣಿತನಿರುದ್ಯೋಗಆರತಿಅವತಾರಯಕೃತ್ತುಭಾರತದ ಸ್ವಾತಂತ್ರ್ಯ ಚಳುವಳಿಅನುನಾಸಿಕ ಸಂಧಿಭೀಮಸೇನದ್ವಂದ್ವ ಸಮಾಸತುಳಸಿದೇವರ ದಾಸಿಮಯ್ಯಅಂತಿಮ ಸಂಸ್ಕಾರಚಿತ್ರಲೇಖಹವಾಮಾನಭಾರತದ ಸ್ವಾತಂತ್ರ್ಯ ದಿನಾಚರಣೆಕನ್ನಡದಲ್ಲಿ ಸಣ್ಣ ಕಥೆಗಳುಪುರಂದರದಾಸಕೋಟ ಶ್ರೀನಿವಾಸ ಪೂಜಾರಿನಾಗಸ್ವರಶ್ರೀನಿವಾಸ ರಾಮಾನುಜನ್ಚಾಲುಕ್ಯದಿಯಾ (ಚಲನಚಿತ್ರ)ಕನ್ನಡ ಸಾಹಿತ್ಯ ಸಮ್ಮೇಳನಒಕ್ಕಲಿಗಕನ್ನಡ ರಂಗಭೂಮಿಅಷ್ಟ ಮಠಗಳುಶ್ರವಣಬೆಳಗೊಳನಿಯತಕಾಲಿಕಮಾನವನಲ್ಲಿ ನಿರ್ನಾಳ ಗ್ರಂಥಿಗಳುಕರ್ನಾಟಕದ ಸಂಸ್ಕೃತಿಹಸ್ತ ಮೈಥುನವಿಜಯವಾಣಿಪುನೀತ್ ರಾಜ್‍ಕುಮಾರ್ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಯು. ಆರ್. ಅನಂತಮೂರ್ತಿಜಪಾನ್ತೆಲಂಗಾಣರಾಜಕೀಯ ವಿಜ್ಞಾನಡಿ.ಕೆ ಶಿವಕುಮಾರ್ತಾಳಗುಂದ ಶಾಸನನಚಿಕೇತಕರ್ನಾಟಕದ ಇತಿಹಾಸಕರ್ನಾಟಕ ವಿಧಾನ ಪರಿಷತ್ಭಾರತೀಯ ಧರ್ಮಗಳುಹಣಕಾಸುಕ್ರಿಯಾಪದಚಂದ್ರಶೇಖರ ಕಂಬಾರ೧೮೬೨ವ್ಯಕ್ತಿತ್ವರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಶಾಲೆದ್ವಿಗು ಸಮಾಸಸ್ಕೌಟ್ ಚಳುವಳಿಸೈಯ್ಯದ್ ಅಹಮದ್ ಖಾನ್ಯೋಗಕನಕದಾಸರುಸ್ತ್ರೀಬಳ್ಳಾರಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸಾವಯವ ಬೇಸಾಯರಂಗಭೂಮಿವಾಯು ಮಾಲಿನ್ಯಪ್ರಾಥಮಿಕ ಶಾಲೆಪಾರ್ವತಿಮಾಸ🡆 More