ಹಬೀಬ್ ತನ್ವೀರ್‍

'ಹಬೀಬ್ ತನ್ವೀರ್'


ಹಬೀಬ್ ತನ್ವೀರ್‍ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

(ಸೆಪ್ಟೆಂಬರ್, ೧, ೧೯೨೩-ಜೂನ್, ೮, ೨೦೦೯)

ಹಬೀಬ್, ಜಾನಪದ ಮತ್ತು ಕಾವ್ಯವನ್ನು ವಿಷಿಷ್ಠವಾಗಿ ಬಳಸಿಕೊಳ್ಳುವ ಮೂಲಕ ಭಾರತೀಯ ರಂಗಭೂಮಿಗೆ ಹೊಸ ಆಯಾಮವನ್ನು ನೀಡಿ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ.

ಜನನ

೧೯೨೩ ರ ಸೆಪ್ಟೆಂಬರ್, ೧ ರಂದು, ರಾಯಿಪುರದಲ್ಲಿ ಜನಿಸಿದರು. ಎಳೆವಯಸ್ಸಿನಲ್ಲೇ ಕವಿತೆಬರೆಯುವ ಕಲೆ ಅವರಿಗೆ ಮೈಗೂಡಿಬಂದಿತ್ತು. 'ತನ್ವೀರ್' ಎಂಬ ಅಡ್ಡಹೆಸರಿನಿಂದ ಪದ್ಯಗಳನ್ನು ಬರೆದು ಅದೇಹೆಸರಿನಿಂದ ಪ್ರಸಿದ್ಧರಾದರು. ೧೯೪೪ ರಲ್ಲಿ ನಾಗಪುರದ, ' ಮೋರಿಸ್ ಕಾಲೇಜ್ 'ನಿಂದ ಬಿ. ಎ ಪರೀಕ್ಷೆಮುಗಿಸಿದ ಅವರು, ಮುಂದೆ ತಮ್ಮ ಎಂ. ಎ. ಪರೀಕ್ಷೆಯನ್ನು 'ಅಲಿಗಢ್ ಮುಸ್ಲಿಮ್ ಯೂನಿವರ್ಸಿಟಿ,' ಯಲ್ಲಿ ಮುಗಿಸಿ, 'ಮುಂಬಯಿ ನಗರದ ಆಕಾಶವಾಣಿ,' ಯಲ್ಲಿ ನಿರ್ಮಾಪಕರಾಗಿ ಉದ್ಯೋಗಕ್ಕೆ ಸೇರಿದರು. ಮುಂಬಯಿನಲ್ಲಿದ್ದಾಗ ಕೆಲವು ಹಿಂದಿ ಚಲನ-ಚಿತ್ರಗಳಲ್ಲಿ ನಟಿಸಿ, ಕೆಲವು ಚಿತ್ರಗಳಿಗೆ ಗೀತೆಗಳನ್ನೂ ಬರೆದಿದ್ದರು. 'ರಿಚರ್ಡ್ ಅಟೆನ್ಬರೋ,' ನಿರ್ಮಿಸಿದ ಗಾಂಧಿ, ಸುಚಿತ್ರ ಮುಂತಾದ ಒಟ್ಟು ೯ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಗತಿಗಾರ ಬರಹಗಾರರ ((PWA)) ಸಂಘಕ್ಕೆ ಸೇರಿದ್ದ ಅವರು, ನಂತರ ((IPTA)) 'ಇಂಡಿಯನ್ ಪೀಪಲ್ಸ್ ಥಿಯೇಟರ್,' ನ ಭಾಗವಾದರು.ಬ್ರಿಟಿಷರ ಆಡಳಿತವನ್ನು ವಿರೋಧಿಸಿದ್ದಾಕ್ಕಾಗಿ, ಹೆಚ್ಚಿನ ಇಪ್ತಾ ಸದಸ್ತ್ಯರುಗಳನ್ನು ಜೈಲಿಗೆ ಹಾಕಿದಾಗ, ಅದರ ಸಂಘಟಕರಾಗಿ, ಅವರು ಕಾರ್ಯ ನಿರ್ವಹಿಸಿದ್ದರು. ಸುಪ್ರಸಿದ್ಧ ನಾಟಕಕಾರರೆಂದು ಹೆಸರುಮಾಡಿದ್ದ ತನ್ವೀರ್ ರಿಗೆ, ೧೯೬೮ ರಲ್ಲಿ ಸಂಗೀತನಾಟಕ ಅಕ್ಯಾಡಮಿ ಪ್ರಶಸ್ತಿ, ದೊರೆಯಿತು. ತನ್ವೀರ್ ರು, ನಿರ್ದೇಶಕಿ, ' ಮೋನಿಕಾ ಮಿಶ್ರ ' ರನ್ನು ಮದುವೆಯಾದರು.

ಪ್ರಶಸ್ತಿಗಳು

  • ೧೯೮೩ ರಲ್ಲಿ 'ಪದ್ಮಶ್ರೀ ' ಪ್ರಶಸ್ತಿ,
  • ೧೯೯೬ ರಲ್ಲಿ 'ಸಂಗೀತನಾಟಕ ಅಕ್ಯಾಡಮಿಯ ಫೆಲೋಶಿಪ್,'
  • ೨೦೦೨ ರಲ್ಲಿ 'ಪದ್ಮಭೂಷಣ '

೧೯೭೨-೧೯೭೮ ರ ವರೆಗೆ ಅವರು ರಾಜ್ಯಸಭೆಯ ನಾಮಕರಣ ಸದಸ್ಯರಾಗಿದ್ದರು. ೧೯೭೫ ರಲ್ಲಿ ಅವರು ಬರೆದ 'ಚರಣ್ ದಾಸ್ ಚೋರ್' ನಾಟಕಕಕ್ಕೆ,೧೯೮೨ ರಲ್ಲಿ ಎಡಿನ್ ಬರ್ಗ್ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ, ಪ್ರಥಮ ಬಹುಮಾನ ಬಂದಿತ್ತು. ೧೯೫೯ ರಲ್ಲಿ ಭೂಪಾಲ್ ನಲ್ಲಿ " ನಯಾ ಥಿಯೇಟರ್ " ಸ್ಥಾಪಿಸಿದ್ದರು. ೨೦೦೯ ರಲ್ಲಿ ಅದು ,'ಸುವರ್ಣಮಹೋತ್ಸ ' ವನ್ನು ಆಚರಿಸುತ್ತಿದೆ.

ಹಬೀಬ್ ತನ್ವೀರ್ ನೀಡಿದ ನಾಟಕಗಳು

  • ಆಗ್ರ ಬಜಾರ್
  • ಚರಣದಾಸ್ ಚೋರ್
  • ಮಿಟ್ಟೀಕ ಘಡಿ
  • ಛತ್ತೀಸ್ ಘಡ 'ಗಾಂವ್ ಕಾ ನಾಮ್ ' ಸಸುರಾಲ್,

ಮುಂತಾದ ಹಲವು ಉತ್ಕೃಷ್ಟ ನಾಟಕಗಳು.

ಮರಣ

ಭಾರತ ನಾಟಕರಂಗದ ೮೬ ರ ಹರೆಯದ ಸುಪ್ರಸಿದ್ಧ ನಾಟಕಕಾರ, ನಿರ್ದೆಶಕ, " ಹಬೀಬ್ ತನ್ವೀರ್ " (ಹಬೀಬ್ ಅಹ್ಮದ್ ಖಾನ್) ೨೦೦೯ ರ, ಜೂನ್ ೮ ರಂದು ಮುಂಬಯಿನಲ್ಲಿ ವಿಧಿವಶರಾದರು.

Tags:

ಹಬೀಬ್ ತನ್ವೀರ್‍ ಜನನಹಬೀಬ್ ತನ್ವೀರ್‍ ಪ್ರಶಸ್ತಿಗಳುಹಬೀಬ್ ತನ್ವೀರ್‍ ಹಬೀಬ್ ತನ್ವೀರ್ ನೀಡಿದ ನಾಟಕಗಳುಹಬೀಬ್ ತನ್ವೀರ್‍ ಮರಣಹಬೀಬ್ ತನ್ವೀರ್‍

🔥 Trending searches on Wiki ಕನ್ನಡ:

ಭಾರತೀಯ ಧರ್ಮಗಳುವಿಜಯನಗರಸರೀಸೃಪದುಂಡು ಮೇಜಿನ ಸಭೆ(ಭಾರತ)ಗರ್ಭಧಾರಣೆರಾಯಲ್ ಚಾಲೆಂಜರ್ಸ್ ಬೆಂಗಳೂರುರೋಮನ್ ಸಾಮ್ರಾಜ್ಯಕುಮಾರವ್ಯಾಸಗುರುರಾಜ ಕರಜಗಿವಿಜಯದಾಸರುಕರ್ನಾಟಕದಲ್ಲಿ ಸಹಕಾರ ಚಳವಳಿಸಂವತ್ಸರಗಳುರಾಜಧಾನಿಗಳ ಪಟ್ಟಿಬುದ್ಧಕರ್ಣಯಕ್ಷಗಾನಶ್ರೀವಿಜಯಅನುಭೋಗಹಸ್ತಪ್ರತಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕರ್ನಾಟಕ ಸ್ವಾತಂತ್ರ್ಯ ಚಳವಳಿಟೊಮೇಟೊಅರಿಸ್ಟಾಟಲ್‌ಶ್ರವಣಾತೀತ ತರಂಗಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮೈಸೂರು ದಸರಾಸಾರಾ ಅಬೂಬಕ್ಕರ್ಕರ್ನಾಟಕ ಸಂಗೀತಭಾರತೀಯ ಮೂಲಭೂತ ಹಕ್ಕುಗಳುವಿದ್ಯುತ್ ಮಂಡಲಗಳುವಿಭಕ್ತಿ ಪ್ರತ್ಯಯಗಳುಗೂಗಲ್ಹೊಯ್ಸಳನೀರಾವರಿಸಿಂಧನೂರುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಡಿಜಿಲಾಕರ್ಆದೇಶ ಸಂಧಿಸೀತೆನ್ಯೂಟನ್‍ನ ಚಲನೆಯ ನಿಯಮಗಳುಕನ್ನಡ ಪತ್ರಿಕೆಗಳುಲಿಂಗಾಯತ ಧರ್ಮಮಾವಂಜಿಭಗತ್ ಸಿಂಗ್ಕನ್ನಡಪ್ರಭಕಾಳಿದಾಸಗದ್ದಕಟ್ಟುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತದ ರಾಷ್ಟ್ರಪತಿಗಳ ಪಟ್ಟಿವಿಷಮಶೀತ ಜ್ವರನವೆಂಬರ್ ೧೪ಪಿ.ಲಂಕೇಶ್ಸಂಸ್ಕೃತ ಸಂಧಿಬಿ.ಎಫ್. ಸ್ಕಿನ್ನರ್ಹೋಳಿಗುರು (ಗ್ರಹ)ಪಂಚಾಂಗಸಂಸ್ಕೃತಿಕೃಷಿ ಸಸ್ಯಶಾಸ್ತ್ರಬ್ಯಾಂಕು ಮತ್ತು ಗ್ರಾಹಕ ಸಂಬಂಧನರ ಅಂಗಾಂಶಬ್ರಾಟಿಸ್ಲಾವಾಸಂಗೊಳ್ಳಿ ರಾಯಣ್ಣಕೃತಕ ಬುದ್ಧಿಮತ್ತೆಎ.ಪಿ.ಜೆ.ಅಬ್ದುಲ್ ಕಲಾಂಜೀಮೇಲ್ಯೋಗಉತ್ಕರ್ಷಣ - ಅಪಕರ್ಷಣಹೆಚ್.ಡಿ.ಕುಮಾರಸ್ವಾಮಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಮಾನವನ ನರವ್ಯೂಹಶ್ರೀ ರಾಘವೇಂದ್ರ ಸ್ವಾಮಿಗಳುಮಯೂರವರ್ಮನೆಟ್‍ಫ್ಲಿಕ್ಸ್ಗಣರಾಜ್ಯಮಾರುಕಟ್ಟೆ🡆 More