ಸೂತನಬ್ಬಿ ಜಲಪಾತ ಹನುಮಾನ್‌ ಗುಂಡಿ


ಸೂತನಬ್ಬಿ ಜಲಪಾತ ಹನುಮಾನ್‌ ಗುಂಡಿ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಸೂತನಬ್ಬಿ ಜಲಪಾತ ಹನುಮಾನ್‌ ಗುಂಡಿ
ಹನುಮಾನ್‌ ಗುಂಡಿ(ಸೂತನಬ್ಬಿ)
ಸೂತನಬ್ಬಿ ಜಲಪಾತ ಹನುಮಾನ್‌ ಗುಂಡಿ
ಹನುಮಾನ್‌ ಗುಂಡಿ
  • ಪಶ್ಚಿಮ ಘಟ್ಟದ 'ಕುದುರೆ ಮುಖ'. ಅಭಯಾರಣ್ಯದ ವನಸಿರಿಯ ಮಧ್ಯೆ ಕಂಗೊಳಿಸುವ, ಕಣ್ಮನ ಮುದಗೊಳಿಸುವ ನೂರಾರು ರಮಣೀಯ ಜಲಧಾರೆಗಳಲ್ಲಿ ಹನುಮಾನ್‌ ಗುಂಡಿ ಒಂದು.
  • ತುಂಗಾ ನದಿಯು ಸೃಷ್ಟಿಸಿರುವ ಈ ಜಲಪಾತ "ಭದ್ರಾ ಅಭಯಾರಣ್ಯ" ವ್ಯಾಪ್ತಿಯಲ್ಲಿ ಬರುತ್ತದೆ. ಹನುಮಾನ್‌ ಗುಂಡಿ ಎನ್ನುವುದು ಜಲಪಾತದ ಹೆಸರಲ್ಲ. ಅದು ಜಲಪಾತ ಇರುವ ಜಾಗದ ಹೆಸರು. ಈ ಜಲಪಾತವನ್ನು "ಸೂತನಬ್ಬಿ' ಎಂದು ಕರೆಯುತ್ತಾರೆ. ಆದರೆ ಇಂದು ಇದು "ಹನುಮಾನ್‌ ಗುಂಡಿ' ಜಲಪಾತ ಎಂದೇ ಪ್ರಸಿದ್ಧಿ ಪಡೆದಿದೆ. ಪಶ್ಚಿಮ ಘಟ್ಟದಲ್ಲಿ ಬಹುದೂರದವರೆಗೆ ಸುತ್ತಿಕೊಂಡು ಹರಿದು ಈ ಜಲಪಾತ ಸೃಷ್ಟಿಯಾಗುವುದರಿಂದ ಇದಕ್ಕೆ "ಸೂತನಬ್ಬಿ' ಎಂಬ ಹೆಸರು ಬಂದಿದೆ ಎನ್ನುತ್ತಾರೆ.
  • ಹನುಮಾನ್‌ ಗುಂಡಿ ಎಂಬ ಹೆಸರಿನ ಬಗ್ಗೆ ಸ್ಥಳೀಯರು ಕಾಲ್ಪನಿಕಕತೆಯೊಂದನ್ನು ಹೇಳುತ್ತಾರೆ. ಹಿಂದೆ ಹನುಮಂತನು ಈ ದಾರಿಯಾಗಿ ಹಾರಿ ಹೋಗುವಾಗ ಇಲ್ಲಿ ತನ್ನ ಕಾಲನ್ನು ಇರಿಸಿದ್ದ. ಇದರಿಂದ ಗುಂಡಿ ಸೃಷ್ಟಿಯಾಗಿದೆ. ಹಾಗಾಗಿ "ಹನುಮಾನ್‌ ಗುಂಡಿ' ಎಂಬ ಹೆಸರು ಬಂತು.

ಹೋಗುವ ದಾರಿ

  • ಕಾರ್ಕಳದ ಬಜಗೋಳಿ ಯಿಂದ ಅರಣ್ಯ ಇಲಾಖೆಯವರ ಒಪ್ಪಿಗೆ ಪಡೆದು (ಮೀಸಲು ಅರಣ್ಯ ಪ್ರದೇಶವಾದುದರಿಂದ ಅರಣ್ಯ ಇಲಾಖೆಯ ಒಪ್ಪಿಗೆ ಕಡ್ಡಾಯ) ಕುದುರೆಮುಖ ಮಾರ್ಗವಾಗಿ ಎಸ್‌.ಕೆ ಬಾರ್ಡರ್‌ (ಸೌತ್‌ ಕೆನರಾ ಬಾರ್ಡರ್‌-ಈಗ ಉಡುಪಿ) ಮೂಲಕ ನೇರ ಮುಂದಕ್ಕೆ ಸಾಗಬೇಕು. ಹೀಗೆ ದಟ್ಟ ಅರಣ್ಯದ ಮಧ್ಯೆ ಸಾಗುವ ವೇಳೆ ರಸ್ತೆಯ ಎಡಬದಿಯಲ್ಲಿ ಹನುಮಾನ್‌ ಗುಂಡಿ ಜಲಪಾತ ಕಾಣಸಿಗುತ್ತದೆ. ಅಲ್ಲಿ ಅರಣ್ಯ ಇಲಾಖೆ ಯವರ ಟಿಕೆಟ್‌ ಕೌಂಟರ್‌ ಇದೆ. ಆದರೆ ಅಲ್ಲಿ ರಸ್ತೆ ಬದಿಗೆ ಜಲಪಾತ ಕಾಣಿಸುವುದಿಲ್ಲ. ಬದಲಾಗಿ ನೀರು ಧುಮುಕುವ ಶಬ್ದ ಮಾತ್ರ ಕೇಳಿಸುತ್ತದೆ.
  • ಹನುಮಾನ್‌ ಗುಂಡಿಯ ಸುತ್ತಲೂ ದಟ್ಟ ಅರಣ್ಯ ಇರುವುದರಿಂದ ಮಳೆಗಾಲದಲ್ಲಿ ಅಲ್ಲಿಗೆ ತೆರಳುವುದು ಸ್ವಲ್ಪ ಕಷ್ಟ. ಯಾಕೆಂದರೆ ಮಳೆಗಾಲದಲ್ಲಿ ಅಲ್ಲಿ ಜಿಗಣೆ (ಉಂಬುಳ) ಎನ್ನುವ ರಕ್ತ ಹೀರುವ ಹುಳದ ಉಪಟಳ ಹೆಚ್ಚು. ಅಲ್ಲದೆ ಮಳೆ ಜೋರಾಗಿ ಇರುವುದರಿಂದ ಮೆಟ್ಟಲುಗಳು ಜಾರುತ್ತಿರು ತ್ತವೆ. ಜಲಪಾತ ವೀಕ್ಷಣೆಗೆ ಅವಕಾಶ ಪ್ರತಿದಿನ ಬೆಳಗ್ಗೆ ೯ರಿಂದ ಸಂಜೆ ೫ ಗಂಟೆವರೆಗೆ ಮಾತ್ರ.
  • ಅಲ್ಲಿಂದ ಅರಣ್ಯ ಇಲಾಖೆಯವರು ನಿರ್ಮಿಸಿದ ಸಿಮೆಂಟಿನ ಸುಮಾರು ೩೦೦ ಮೆಟ್ಟಲುಗಳ ಮೂಲ ಕ ಇಳಿಯುತ್ತಿದ್ದಂತೆ ಹಾಲಿನ ಹೊಳೆಯಂತೆ ೨೨ ಮೀ. ಎತ್ತರದಿಂದ ಧುಮುಕುವ ನಯನ ಮನೋಹರ ಜಲಪಾತ ಕಾಣಸಿಗುವುದು. ಸಮುದ್ರ ಮಟ್ಟದಿಂದ ೭೩೨ ಮೀ. ಎತ್ತರದಲ್ಲಿದೆ ಈ ಜಲಪಾತ."ನಮನ"

ಗ್ಯಾಲರಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

🔥 Trending searches on Wiki ಕನ್ನಡ:

ಲಿಂಗಸೂಗೂರುಆಟಚೋಮನ ದುಡಿನಿರ್ಮಲಾ ಸೀತಾರಾಮನ್ಸಬಿಹಾ ಭೂಮಿಗೌಡಗರ್ಭಧಾರಣೆಕನ್ನಡ ಸಾಹಿತ್ಯ ಪ್ರಕಾರಗಳುಕಿತ್ತಳೆಪರಿಸರ ವ್ಯವಸ್ಥೆಇಮ್ಮಡಿ ಪುಲಿಕೇಶಿಉಪೇಂದ್ರ (ಚಲನಚಿತ್ರ)ಜ್ಞಾನಪೀಠ ಪ್ರಶಸ್ತಿಭಾರತದಲ್ಲಿ ತುರ್ತು ಪರಿಸ್ಥಿತಿಗೂಗಲ್ಮಂಕುತಿಮ್ಮನ ಕಗ್ಗಸಿಂಧೂತಟದ ನಾಗರೀಕತೆಮಹಾವೀರಬೀಚಿಅರಬ್ಬೀ ಸಾಹಿತ್ಯರಚಿತಾ ರಾಮ್ವಿಜ್ಞಾನದ್ವಿರುಕ್ತಿಪಠ್ಯಪುಸ್ತಕಅಮೃತಬಳ್ಳಿಹೊಯ್ಸಳಆರ್ಯಭಟ (ಗಣಿತಜ್ಞ)ನಾಯಕ (ಜಾತಿ) ವಾಲ್ಮೀಕಿಮಹಮದ್ ಬಿನ್ ತುಘಲಕ್ದೂರದರ್ಶನಕಾಮಾಲೆಆವಕಾಡೊಭಾಷೆಮಹಾಭಾರತವೃದ್ಧಿ ಸಂಧಿಸು.ರಂ.ಎಕ್ಕುಂಡಿದೇವರ/ಜೇಡರ ದಾಸಿಮಯ್ಯಹನುಮಾನ್ ಚಾಲೀಸವೆಂಕಟೇಶ್ವರ ದೇವಸ್ಥಾನಪ್ರವಾಸಿಗರ ತಾಣವಾದ ಕರ್ನಾಟಕಹಿಂದೂ ಮಾಸಗಳುಗೋಲ ಗುಮ್ಮಟಮುದ್ದಣಭಾರತದ ಸ್ವಾತಂತ್ರ್ಯ ಚಳುವಳಿಕೈಗಾರಿಕೆಗಳುಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆನೀರುವಿದ್ಯಾರಣ್ಯಸೌರಮಂಡಲಜಯಂತ ಕಾಯ್ಕಿಣಿಮಳೆಗಾಲಅಂತರಜಾಲಚಂದ್ರಯಾನ-೩ಉಡಝಾನ್ಸಿ ರಾಣಿ ಲಕ್ಷ್ಮೀಬಾಯಿಕನ್ನಡಪ್ರಭಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಬೆಳಗಾವಿರಾಹುಲ್ ಗಾಂಧಿಕರ್ನಾಟಕ ಜನಪದ ನೃತ್ಯಕರ್ನಾಟಕ ಆಡಳಿತ ಸೇವೆಕರ್ಕಾಟಕ ರಾಶಿಕ್ಷತ್ರಿಯಅಭಿಮನ್ಯುಭಾರತದ ಸಂವಿಧಾನಆಮ್ಲ ಮಳೆಸಮಾಜವಾದಭಾರತೀಯ ರಿಸರ್ವ್ ಬ್ಯಾಂಕ್ಸರ್ವೆಪಲ್ಲಿ ರಾಧಾಕೃಷ್ಣನ್ಚಂದ್ರಗುಪ್ತ ಮೌರ್ಯಬಂಡಾಯ ಸಾಹಿತ್ಯಸಿದ್ದಲಿಂಗಯ್ಯ (ಕವಿ)ಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಕನ್ನಡ ರಾಜ್ಯೋತ್ಸವದುಂಡು ಮೇಜಿನ ಸಭೆ(ಭಾರತ)ಒಂದನೆಯ ಮಹಾಯುದ್ಧಮುಟ್ಟು ನಿಲ್ಲುವಿಕೆನಿರಂಜನಯಕೃತ್ತು🡆 More