ಸದಾಶಿವನಗರ

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಸದಾಶಿವನಗರ ಲೋಯರ್ ಪ್ಯಾಲೇಸ್ ಆರ್ಚರ್ಡ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಿದೆ.

ಈ ಬಡಾವಣೆಗೆ ಕರಾವಳಿಯ ಪ್ರಸಿದ್ಧ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ರೀ ಕಾರ್ನಾಡು ಸದಾಶಿವರಾವ್ ಅವರ ಹೆಸರನ್ನು ಇಡಲಾಗಿದೆ. ವಿಪರ್ಯಾಸವೆಂದರೆ ಸದಾಶಿವರಾಯರು ಆಗರ್ಭ ಶ್ರೀಮಂತರಾಗಿ ಜನಿಸಿದರೂ ಸರಳ ಜೀವನ ನಡೆಸಿ ತಮ್ಮ ಸರ್ವಸ್ವವನ್ನೂ ಸ್ವಾತಂತ್ರ್ಯ ಹೋರಾಟಕ್ಕೆ ಮುಡಿಪಾಗಿಟ್ಟು ಅಂತ್ಯ ಕಾಲದಲ್ಲಿ ಕಡು ಬಡವರಂತೆ ದಾರುಣವೇ ಎನ್ನಬಹುದಾಗಿ ಬದುಕಿದವರು. ಆದರೆ ಅವರ ಹೆಸರನ್ನು ಹೊತ್ತ ಬಡಾವಣೆಯು ಪ್ರತಿಷ್ಠಿತರ ನೆಲೆದಾಣವಾಗಿದ್ದು ಜನ ಸಾಮಾನ್ಯರು ಮುಟ್ಟಲಾರದ ಭೂಮಿಯ ಬೆಲೆ ಹೊತ್ತು ನಿಂತಿದೆ.

ವೈಯಾಲಿಕಾವಲ್, ಬೆಂಗಳೂರು ಅರಮನೆ, ಮಲ್ಲೇಶ್ವರಂಗಳಿಂದ ಸುತ್ತುವರಿದ ಈ ಬಡಾವಣೆ ವಿಸ್ತಾರವಾದ ರಸ್ತೆ, ಉದ್ಯಾನಗಳಿಂದಲೂ ವಿಶಾಲವಾದ ನಿವೇಶನಗಳಲ್ಲಿ ಕಟ್ಟಲಾಗಿರುವ ದೊಡ್ಡ ಬಂಗಲೆಗಳಿಂದಲೂ ಕೂಡಿದೆ. ಬೆಂಗಳೂರಿನಲ್ಲಿದ್ದ ನೂರಾರು ಕೆರೆಗಳಲ್ಲಿ ಉಳಿದಿರುವ ಕೆಲವೇ ಕೆರೆಗಳಲ್ಲಿ ಒಂದಾದ ಸ್ಯಾಂಕಿ ಕೆರೆ ಈ ಪ್ರದೇಶದಲ್ಲಿ ವಿಸ್ತರಿಸಿದೆ. ಕೆಂಪೇಗೌಡರು ತಮ್ಮ ಆಡಳಿತ ಕಾಲದಲ್ಲಿ ಬೆಂಗಳೂರು ನಗರದ ಆಯಕಟ್ಟಿನ ಎತ್ತರದ ಪ್ರದೇಶಗಳಲ್ಲಿ ನಿರ್ಮಿಸಿದ್ದ ಕಾವಲು ಗೋಪುರಗಳಲ್ಲೊಂದು ಇಲ್ಲೇ ಇದೆ. ಈ ಗೋಪುರಕ್ಕೆ ಸಮೀಪವೇ ಸರ್ ಇನಾಯತುಲ್ಲಾ ಮೇಖ್ರಿಯವರ ಹೆಸರನ್ನು ಹೊತ್ತ ಪ್ರಸಿದ್ಧ ಮೇಖ್ರಿ ವೃತ್ತವಿದೆ.

ಸದಾಶಿವನಗರದಲ್ಲಿ ಅನೇಕ ಪ್ರಸಿದ್ಧ ವ್ಯಕ್ತಿಗಳು ಬಾಳಿದ್ದರು, ನೆಲೆಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಡಾ! ರಾಜ್‍ಕುಮಾರ್ ಅವರ ಮನೆ ಇದೇ ಬಡಾವಣೆಯಲ್ಲಿದೆ.

Tags:

ಕರಾವಳಿಬೆಂಗಳೂರು

🔥 Trending searches on Wiki ಕನ್ನಡ:

ಹವಾಮಾನಕರಗಭಾರತದ ಸ್ವಾತಂತ್ರ್ಯ ದಿನಾಚರಣೆಆಂಡಯ್ಯಗರ್ಭಧಾರಣೆಸಂಖ್ಯೆಟಿಪ್ಪು ಸುಲ್ತಾನ್ಗದ್ದಕಟ್ಟುಗುರುರಾಜ ಕರಜಗಿಬುಧಭಾರತದ ಆರ್ಥಿಕ ವ್ಯವಸ್ಥೆಬೀಚಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಭಾರತದ ಸಂಸತ್ತುಕರ್ನಾಟಕ ಯುದ್ಧಗಳುಉದಯವಾಣಿರಾಜ್‌ಕುಮಾರ್ಬಸವೇಶ್ವರಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಬ್ಲಾಗ್ದಿಯಾ (ಚಲನಚಿತ್ರ)ಚಿಪ್ಕೊ ಚಳುವಳಿಗೌತಮ ಬುದ್ಧಉಪನಯನಕನ್ನಡ ಸಂಧಿಯುಧಿಷ್ಠಿರಜರಾಸಂಧಶ್ರೀ ರಾಮ ನವಮಿಕಿತ್ತೂರು ಚೆನ್ನಮ್ಮಹೆಳವನಕಟ್ಟೆ ಗಿರಿಯಮ್ಮಭಾರತದ ರಾಷ್ಟ್ರೀಯ ಉದ್ಯಾನಗಳುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸಾಮಾಜಿಕ ಸಮಸ್ಯೆಗಳುಸಂಸ್ಕೃತಿವಾಟ್ಸ್ ಆಪ್ ಮೆಸ್ಸೆಂಜರ್ಒಂದನೆಯ ಮಹಾಯುದ್ಧರಾಣಿ ಅಬ್ಬಕ್ಕಕನ್ನಡವಿಜ್ಞಾನಜಾಗತಿಕ ತಾಪಮಾನಶ್ರೀ ಸಿದ್ಧಲಿಂಗೇಶ್ವರಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸುವರ್ಣ ನ್ಯೂಸ್ಭಾರತದ ಸರ್ವೋಚ್ಛ ನ್ಯಾಯಾಲಯದಯಾನಂದ ಸರಸ್ವತಿಡೊಳ್ಳು ಕುಣಿತಕನ್ನಡ ಗಣಕ ಪರಿಷತ್ತುಪಾಂಡವರುನೈಸರ್ಗಿಕ ಸಂಪನ್ಮೂಲಮತದಾನಗೂಗಲ್ಕೇಂದ್ರ ಲೋಕ ಸೇವಾ ಆಯೋಗಚದುರಂಗಸೂಫಿಪಂಥವೆಂಕಟೇಶ್ವರ ದೇವಸ್ಥಾನಚಿಕ್ಕಮಗಳೂರುಕನ್ನಡ ಅಕ್ಷರಮಾಲೆಪ್ಲಾಸ್ಟಿಕ್ಭೂತಾರಾಧನೆಸೆಸ್ (ಮೇಲ್ತೆರಿಗೆ)ಕುರುಬಕಲ್ಯಾಣಿಋತುಕೊಡಗಿನ ಗೌರಮ್ಮಗುಣ ಸಂಧಿಸ್ವಾಮಿ ವಿವೇಕಾನಂದಆದಿ ಕರ್ನಾಟಕಪಾಟೀಲ ಪುಟ್ಟಪ್ಪಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಶಿಕ್ಷಕಹಿಂದಿ ಭಾಷೆಪೆಟ್ರೋಮ್ಯಾಕ್ಸ್ (ಚಲನಚಿತ್ರ)ಶಿವರಾಜ್‍ಕುಮಾರ್ (ನಟ)ರಂಗಭೂಮಿಸಮಾಸ🡆 More