ಸಂತ ಯೊವಾನ್ನ

ಯೇಸು ಸ್ವಾಮಿ ದೇವರ 'ದಿವ್ಯವಾಣಿ'.

ಈ ವಾಣಿ ಒಬ್ಬ ನರಮಾನವನಾಗಿ ನಮ್ಮ ನಡುವೆ ವಾಸಮಾಡಿದರು.ಹೀಗೆಂದು ಆರಂಭವಾಗುವ ಈ ನಾಲ್ಕನೆಯ ಶುಭಸಂದೇಶ ತನ್ನ ಉದ್ದೇಶವನ್ನು ತಾನೇ ಹೇಳಿಕೊಳ್ಳುತ್ತದೆ: "ಇದರಲ್ಲಿ ಬರೆದವುಗಳ ಉದ್ದೇಶ ಇಷ್ಟೆ- ಯೇಸುಸ್ವಾಮಿ ದೇವರ ಪುತ್ರ ಹಾಗೂ ಲೋಕೋದ್ದಾರಕ ಎಂದು ನೀವು ನಂಬಿ ವಿಶ್ವಾಸಿಸಬೇಕು. ಹೀಗೆ ವಿಶ್ವಾಸಿಸಿ ಅವರ ಹೆಸರಿನಲ್ಲಿ ಸಜ್ಜೀವವನ್ನು ಪಡೆಯಬೇಕು.

ಅಮರವಾದ ಈ ದಿವ್ಯವಾಣಿ ಮಾಡಿದ ನಾನಾ ಸೂಚಕಕಾರ್ಯಗಳಲ್ಲಿ ಕೆಲವೇ ಕೆಲವು ಯೊವಾನ್ನನು ಬರೆದ ಈ ಪುಸ್ತಕದಲ್ಲಿ ವರದಿಯಾಗಿವೆ. ಯೇಸುಸ್ವಾಮಿ ದೇವರ ಎಕೈಕ ಪುತ್ರ ಹಾಗೂ ಪುರಾತನ ಕಾಲದಿಂದಲೂ ದೇವರು ವಾಗ್ದಾನ ಮಾಡಿದ ಲೋಕೋದ್ಧಾರಕ ಎಂಬ ಸತ್ಯವನ್ನು ಸಾದೃಶ್ಯಪಡಿಸುವುದೇ ಈ ಸೂಚಕಕಾರ್ಯಗಳ ಗುರಿ ಹಾಗು ಧ್ಯೇಯ.

ಅನಂತರ ಬೋಧನಾಭಾಗ ಆರಂಭವಾಗುತ್ತದೆ. ಸ್ವಾಮಿಯ ಈ ಅಮೋಘ ಬೋಧನೆಯನ್ನು ಕೇಳಿದ ಕೆಲವರು ಅವರಲ್ಲಿ ವಿಶ್ವಾಸವಿಟ್ಟು ಅವರಿಗೆ ಶರಣಾಗುತ್ತಾರೆ: ಮಿಕ್ಕವರು ಅಂಥ ವಿಶ್ವಾಸವನ್ನು ನಿರಾಕರಿಸುತ್ತಾರೆ. ಯೇಸುಸ್ವಾಮಿಗೂ ಅವರ ಆಪ್ತಶಿಷ್ಯರಿಗೂ ಇದ್ದ ನಿಕಟ ಬಾಂಧವ್ಯವನ್ನು ಅಧ್ಯಾಯ ೧೩ ರಿಂದ ೧೭ ರವರೆಗೆ ಓದುಗನ ಮನಮುಟ್ಟುವಂತೆ ವರ್ಣಿಸಲಾಗಿದೆ. ಶತ್ರುಗಳು ಸ್ವಾಮಿಯನ್ನು ಬಂಧಿಸಿದ ರಾತ್ರಿ, ಅವರನ್ನು ಯೋಗ್ಯವಾದುದು. ಅನಂತರದ ಅಧ್ಯಾಯಗಳಲ್ಲಿ ಯೇಸುವಿನ ಬಂಧನ, ನ್ಯಾಯವಿಚಾರಣೆ, ಶಿಲುಬೆಮರಣ, ಪುನರುತ್ಥಾನ, ಶಿಷ್ಯರಿಗಿತ್ತ ದಿವ್ಯ ದರ್ಶನಗಳು - ಇವುಗಳನ್ನು ವಿವರಿಸಲಾಗಿದೆ.

ಕೆಲವು ಮೂಲಪ್ರತಿಗಳಲ್ಲಿ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಸ್ತ್ರೀಯ ವೃತ್ತಾಂತವಿಲ್ಲ. ಮತ್ತೆ ಕೆಲವು ಪ್ರತಿಗಳಲ್ಲಿ ಅದು ಬೇರೆ ಬೇರೆ ಅಧ್ಯಾಯಗಳಡಿ ಕಾಣಿಸಿಕೊಳ್ಳುತ್ತದೆ. ಈ ಕಾರಣ, ಈ ವೃತ್ತಾಂತವನ್ನು. (೮,೧-೧೧) ಅವರಣಗಳೊಳಗೆ ಕೊಡಲಾಗಿದೆ.

ಕ್ರಿಸ್ತ ಯೇಸು ಅನುಗ್ರಹಿಸುವ ಜೀವ ಸತ್ಯವಾದುದು, ನಿತ್ಯವಾದುದು. ಆದೊಂದು ಪರಮೋನ್ನತ ಕೊಡುಗೆ. 'ಮಾರ್ಗವೂ ಸತ್ಯವೂ ಜೀವವೂ ನಾನೇ' ಎಂದ ಸ್ವಾಮಿ ಈ ಅಮರ ಜೀವವನ್ನು ತನ್ನ ಕರೆಗೆ ಓಗೊಡುವ ಭಕ್ತಾದಿಗಳಿಗೆ ಇಹದಲ್ಲೇ ನೀಡುತ್ತಾರೆಂದು ಲೇಖಕ ಯೊವಾನ್ನನು ಹಲವಾರು ವಿಧದಲ್ಲಿ ನಿರೊಪಿಸುತ್ತಾನೆ. ದಿನನಿತ್ಯದ ಬಳಕೆಗಾಗುವ ನೀರು, ರೊಟ್ಟಿ, ಬೆಳಕು, ದ್ರಾಕ್ಷಾರಸ ಮುಂತಾದ ಪದಾರ್ಥಗಳ ಮೂಲಕ, ಕುರಿ, ಕುರಿಗಾಹಿ ಇಂಥ ಸಾಮಾನ್ಯ ಉದಾಹರಣೆಗಳ ಮೂಲಕ ಆಳವಾದ ಆಧ್ಯಾತ್ಮಿಕ ಸತ್ಯಗಳನ್ನು ವ್ಯಕ್ತಪಡಿಸುವುದು ಯೊವಾನ್ನನ ವೈಶಿಷ್ಟ್ಯವೆನ್ನಬಹುದು.

ಉಲ್ಲೇಖ

Tags:

ಮಾನವ

🔥 Trending searches on Wiki ಕನ್ನಡ:

ಪ್ರೇಮಾಅರುಣಿಮಾ ಸಿನ್ಹಾಆದಿಪುರಾಣಭಾರತದಲ್ಲಿ ಮೀಸಲಾತಿಕದಂಬ ರಾಜವಂಶಉಡುಪಿ ಜಿಲ್ಲೆಶಿವರಾಮ ಕಾರಂತಬಸವೇಶ್ವರಗುಣ ಸಂಧಿಚಿಕ್ಕಮಗಳೂರುಗಣರಾಜ್ಯೋತ್ಸವ (ಭಾರತ)ಅಂತರಜಾಲಕರ್ನಾಟಕದ ನದಿಗಳುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಶ್ರೀಕೃಷ್ಣದೇವರಾಯರಾಗಿಹರ್ಡೇಕರ ಮಂಜಪ್ಪಕಂಪ್ಯೂಟರ್ಮಕರ ಸಂಕ್ರಾಂತಿಪರಮಾಣುನಂಜನಗೂಡುಸೇತುವೆಭಾರತದ ಸ್ವಾತಂತ್ರ್ಯ ದಿನಾಚರಣೆವಿಕಿಪೀಡಿಯಡಿ.ವಿ.ಗುಂಡಪ್ಪಭಗತ್ ಸಿಂಗ್ಮೊದಲನೇ ಅಮೋಘವರ್ಷಬಹುವ್ರೀಹಿ ಸಮಾಸದೂರದರ್ಶನಸತಿ ಪದ್ಧತಿಎ.ಕೆ.ರಾಮಾನುಜನ್ಶಬರಿತುಳಸಿಭಾರತದ ಮಾನವ ಹಕ್ಕುಗಳುಮೂಲಧಾತುಶಿಕ್ಷಣಕೇಂದ್ರ ಸಾಹಿತ್ಯ ಅಕಾಡೆಮಿಅಲಂಕಾರಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆದ್ವಿರುಕ್ತಿಕರಪತ್ರಗಿಳಿವಿಮೆರೇಡಿಯೋದಲಿತಬ್ಯಾಡ್ಮಿಂಟನ್‌ಮಳೆಗಾಲಮಹಾತ್ಮ ಗಾಂಧಿಮಂಡ್ಯತತ್ಸಮ-ತದ್ಭವಕೂಡಲ ಸಂಗಮನಡುಕಟ್ಟುಭಾರತೀಯ ರಿಸರ್ವ್ ಬ್ಯಾಂಕ್ಪುಟ್ಟರಾಜ ಗವಾಯಿಪುರಾತತ್ತ್ವ ಶಾಸ್ತ್ರಪು. ತಿ. ನರಸಿಂಹಾಚಾರ್ಸಂಗೊಳ್ಳಿ ರಾಯಣ್ಣವಿಜಯದಾಸರುಮೈಸೂರು ಚಿತ್ರಕಲೆಹಿಪ್ಪಲಿಕನ್ನಡದ ಉಪಭಾಷೆಗಳುಟಿ. ವಿ. ವೆಂಕಟಾಚಲ ಶಾಸ್ತ್ರೀಕೃತಕ ಬುದ್ಧಿಮತ್ತೆಕನ್ನಡ ಸಾಹಿತ್ಯ ಸಮ್ಮೇಳನವೈದೇಹಿಮಗುವಿನ ಬೆಳವಣಿಗೆಯ ಹಂತಗಳುಕಬಡ್ಡಿಬೆಂಗಳೂರಿನ ಇತಿಹಾಸವಲ್ಲಭ್‌ಭಾಯಿ ಪಟೇಲ್ಜೋಗಭಗವದ್ಗೀತೆದರ್ಶನ್ ತೂಗುದೀಪ್ಖೊ ಖೋ ಆಟಶಬ್ದಮಂಜಮ್ಮ ಜೋಗತಿಕನ್ನಡದಲ್ಲಿ ಅಂಕಣ ಸಾಹಿತ್ಯಕುಟುಂಬ🡆 More