ಶೇಂಗಾ ಹೋಳಿಗೆ

ಶೇಂಗಾ ಹೋಳಿಗೆಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಮಾಡುವ ಒಂದು ಸಿಹಿ ತಿಂಡಿಯಾಗಿದೆ.

ಒಬ್ಬಟ್ಟು ಮಾಡುವ ರೀತಿಯಲ್ಲಿಯೇ ಈ ಹೋಳಿಗೆಯನ್ನು ಮಾಡಲಾಗುತ್ತದೆ, ಉತ್ತರ ಕರ್ನಾಟಕದಲ್ಲಿ ಇದನ್ನು ಹೆಚ್ಚಾಗಿ ಹಬ್ಬ,ಮದುವೆ,ಸಿಮಂತ ಸಮಯದಲ್ಲಿ ಮಾಡುತ್ತಾರೆ.

ಬಳಸುವ ಸಾಮಗ್ರಿಗಳು

ಮಾಡುವ ವಿಧಾನ

ಶೇಂಗಾ ಆಥವಾ ನೆಲಗಡಲೆ ಅಥವಾ ಕಡಲೆಕಾಳು ಬಳಸಿ ಇದನ್ನು ಮಾಡಲಾಗುತ್ತದೆ. ಶೇಂಗಾವನ್ನು ಸ್ವಚ್ಛಗೊಳಿಸಿ ಅದನ್ನು ಚೆನ್ನಾಗಿ ಹುರಿಯಬೇಕು. ಶೇಂಗಾವನ್ನು ರುಬ್ಬಿ ಅದಕ್ಕೆ ಬೆಲ್ಲವನ್ನು ಸೇರಿಸಬೇಕು ನಂತರ ಅದಕ್ಕೆ ಎಳ್ಳನ್ನು ಬೆರೆಸಿ, ಮತ್ತೊಮ್ಮೆ ರುಬ್ಬಿಕೊಳ್ಳಬೇಕು. ಎಲ್ಲವನ್ನು ಚೆನ್ನಾಗಿ ಮಿಶ್ರಣಗೊಳಿಸಬೇಕು. ಒಂದು ಬದಿಯಲ್ಲಿ ಗೋಧಿ ಹಿಟ್ಟನ್ನು ಚಪಾತಿ ಮಾಡುವ ಹಿಟ್ಟಿನ ಹಾಗೇ ನಾದಿಕೊಳ್ಳಬೇಕು. ನಂತರ ಶೇಂಗಾದ ಮಿಶ್ರಣವನ್ನು ಉಂಡೆಯ ರೀತಿಯಲ್ಲಿ ಮಾಡಿಕೊಂಡು ಗೋಧಿ ಹಿಟ್ಟಿನೊಂದಿಗೆ ಸೇರಿಸಿ ಚಪಾತಿಯ ಹಾಗೇ ಗುಂಡಗೆ ಮಾಡಬೇಕು ಆಗ ಅದನ್ನು ಚಪಾತಿಯ ಹಾಗೇ ತವೆಯ ಮೇಲೆ ಬೇಯಿಸಿಕೊಂಡರೆ ಸಾಕು. ಇದನ್ನು ತುಪ್ಪದೊಂದಿಗೆ ತಿನ್ನಬಹುದು

ಪೋಷಕಾಂಶಗಳು ಮತ್ತು ಆರೋಗ್ಯ

ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ6, ನಯಾಸಿನ್, ಫೋಲೆಟ್, ಪೊಟ್ಯಾಶಿಯಂ, ಸೋಡಿಯಂ, ಒಳ್ಳೆಯ ಕೊಲೆಸ್ಟ್ರಾಲ್, ಹೃದಯಕ್ಕೆ ಸಹಕಾರಿಯಾದ ಒಳ್ಳೆಯ ಕೊಬ್ಬಿನ ಅಂಶ, ಪ್ರೋಟೀನ್ ಅಂಶ, ನಾರಿನ ಅಂಶ,ಕಾರ್ಬೋಹೈಡ್ರೇಟ್ ಅಂಶ, ಕ್ಯಾಲೋರಿಗಳು, ಸಕ್ಕರೆ ಅಂಶ, ಕಬ್ಬಿಣ, ಮೆಗ್ನೀಷಿಯಂ, ಕ್ಯಾಲ್ಸಿಯಂ ಮತ್ತು ಫಾಸ್ಪರಸ್. ಕಡಲೆ ಬೀಜಗಳನ್ನು ನೆನೆಸಿ ಸೇವನೆ ಮಾಡುವುದರಿಂದ ಉಂಟಾಗುವ ಆರೋಗ್ಯದ ಲಾಭಗಳು ಕಡಲೆ ಬೀಜಗಳಲ್ಲಿ ಹೃದಯಕ್ಕೆ ಸಹಕಾರಿಯಾದ ಕೆಲವೊಂದು ಅಂಶಗಳು ಕಂಡು ಬರುತ್ತವೆ ಎಂಬುದು ತಿಳಿದಿದೆ. ಹೀಗಾಗಿ ಹೃದಯವನ್ನು ಮತ್ತು ಹೃದಯ ರಕ್ತನಾಳಗಳನ್ನು ಕಡಲೆ ಬೀಜಗಳು ಆರೋಗ್ಯಕರವಾಗಿ ಕಾಪಾಡುತ್ತವೆ. ಸಾಧಾರಣವಾಗಿ ಹಸಿ ಕಡಲೆ ಬೀಜ ಅಥವಾ ಹುರಿದು ತಿನ್ನುವುದಕ್ಕಿಂತ ಕಡಲೆ ಬೀಜಗಳನ್ನು ನೆನೆಸಿ ಆಗಾಗ ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಲಾಭಗಳು ಜಾಸ್ತಿ. ಹೃದಯಕ್ಕೆ ಸಂಬಂಧಪಟ್ಟಂತೆ ನೋಡುವುದಾದರೆ ರಕ್ತನಾಳಗಳಲ್ಲಿ ರಕ್ತಸಂಚಾರವನ್ನು ಹೆಚ್ಚು ಮಾಡುವ ಗುಣ ಕಡಲೇ ಬೀಜಗಳಲ್ಲಿ ಕಂಡು ಬರುತ್ತದೆ. ಹೀಗಾಗಿ ಇಡೀ ದೇಹದ ತುಂಬಾ ಅತ್ಯುತ್ತಮ ಪ್ರಮಾಣದ ರಕ್ತ ಸಂಚಾರ ಉಂಟಾಗುವಂತೆ ಮಾಡುತ್ತದೆ.

ಉಲ್ಲೇಖಗಳು

Tags:

ಶೇಂಗಾ ಹೋಳಿಗೆ ಬಳಸುವ ಸಾಮಗ್ರಿಗಳುಶೇಂಗಾ ಹೋಳಿಗೆ ಮಾಡುವ ವಿಧಾನಶೇಂಗಾ ಹೋಳಿಗೆ ಪೋಷಕಾಂಶಗಳು ಮತ್ತು ಆರೋಗ್ಯಶೇಂಗಾ ಹೋಳಿಗೆ ಉಲ್ಲೇಖಗಳುಶೇಂಗಾ ಹೋಳಿಗೆಉತ್ತರ ಕರ್ನಾಟಕಒಬ್ಬಟ್ಟುಸಿಹಿಸೀಮಂತ

🔥 Trending searches on Wiki ಕನ್ನಡ:

ಒಗಟುವಿನಾಯಕ ದಾಮೋದರ ಸಾವರ್ಕರ್ಶ್ರೀ ರಾಮಾಯಣ ದರ್ಶನಂಅಮ್ಮಗೋವಿಂದ ಪೈಮಡಿಕೇರಿಕನ್ನಡ ಕಾವ್ಯಶಬ್ದಮಣಿದರ್ಪಣಬಹುವ್ರೀಹಿ ಸಮಾಸಪುನೀತ್ ರಾಜ್‍ಕುಮಾರ್ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಚೆನ್ನಕೇಶವ ದೇವಾಲಯ, ಬೇಲೂರುಶಾಂತಲಾ ದೇವಿ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಪೂನಾ ಒಪ್ಪಂದಹಲಸುಮಂಡಲ ಹಾವುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಗಿಡಮೂಲಿಕೆಗಳ ಔಷಧಿವೀರಗಾಸೆದೇವರ ದಾಸಿಮಯ್ಯಕಲಬುರಗಿದಶಾವತಾರಮೌರ್ಯ ಸಾಮ್ರಾಜ್ಯವಾಲ್ಮೀಕಿಸಿದ್ದಪ್ಪ ಕಂಬಳಿಮಂಜುಳಉದಯವಾಣಿಯೇಸು ಕ್ರಿಸ್ತಭಾರತೀಯ ಜನತಾ ಪಕ್ಷಕರಗಸಾಹಿತ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಆದೇಶ ಸಂಧಿಗ್ರಹಕೋಟ ಶ್ರೀನಿವಾಸ ಪೂಜಾರಿಮಂಗಳ (ಗ್ರಹ)ಪಾಂಡವರುಕಾದಂಬರಿಅಯೋಧ್ಯೆಗಾದೆರಸ(ಕಾವ್ಯಮೀಮಾಂಸೆ)ರುಡ್ ಸೆಟ್ ಸಂಸ್ಥೆಜಲ ಮಾಲಿನ್ಯಸಜ್ಜೆಲಕ್ಷ್ಮೀಶರಾಷ್ತ್ರೀಯ ಐಕ್ಯತೆಉಪ್ಪಿನ ಸತ್ಯಾಗ್ರಹಕಾಂತಾರ (ಚಲನಚಿತ್ರ)ದರ್ಶನ್ ತೂಗುದೀಪ್ಅಂಡವಾಯುಕರ್ಬೂಜನಾಗರೀಕತೆಎಳ್ಳೆಣ್ಣೆಸ್ತ್ರೀಆದಿ ಶಂಕರಕವಿಗಳ ಕಾವ್ಯನಾಮಸಾಮ್ರಾಟ್ ಅಶೋಕಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ಬ್ಯಾಡ್ಮಿಂಟನ್‌ಕರ್ನಾಟಕ ಸ್ವಾತಂತ್ರ್ಯ ಚಳವಳಿಮಂಕುತಿಮ್ಮನ ಕಗ್ಗಏಕರೂಪ ನಾಗರಿಕ ನೀತಿಸಂಹಿತೆಪಂಪ ಪ್ರಶಸ್ತಿಗೀತಾ (ನಟಿ)ಬ್ಲಾಗ್ಸ್ವಚ್ಛ ಭಾರತ ಅಭಿಯಾನಗ್ರಹಕುಂಡಲಿಪಂಚ ವಾರ್ಷಿಕ ಯೋಜನೆಗಳುಗೋಕಾಕ್ ಚಳುವಳಿಪ್ರೀತಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಭಾರತದ ಇತಿಹಾಸರೈತವಾರಿ ಪದ್ಧತಿಕೃಷ್ಣಸವರ್ಣದೀರ್ಘ ಸಂಧಿಮೂಲಭೂತ ಕರ್ತವ್ಯಗಳು🡆 More