ವೈಕುಂಠ ಶುಕ್ಲಾ

ವೈಕುಂಠ ಶುಕ್ಲಾ ಅಥವಾ ಬೈಕುಂಠ ಶುಕ್ಲಾ (15 ಮೇ 1907 - 14 ಮೇ 1934) ಅವರು ಒಬ್ಬ ಭಾರತೀಯ ರಾಷ್ಟ್ರೀಯತಾವಾದಿ ಮತ್ತು ಕ್ರಾಂತಿಕಾರಿ.

ಅವರು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ಸ್ಥಾಪಕರಲ್ಲಿ ಒಬ್ಬರಾದ ಯೋಗೇಂದ್ರ ಶುಕ್ಲಾ ಅವರ ಸೋದರಳಿಯರಾಗಿದ್ದರು. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ಗಲ್ಲಿಗೇರಿಸಲು ಕಾರಣವಾದ ಸರ್ಕಾರಿ ಅನುಮೋದಕರಾಗಿದ್ದ ಫಣೀಂದ್ರ ನಾಥ್ ಘೋಷ್ ಅವರನ್ನು ಹತ್ಯೆಗೈದಿದ್ದಕ್ಕಾಗಿ ಇವರನ್ನು ಗಲ್ಲಿಗೇರಿಸಲಾಯಿತು.

ಶುಕ್ಲಾ ಅವರು 1907 ರ ಮೇ 15 ರಂದು (ಇನ್ನೊಬ್ಬ ಕ್ರಾಂತಿಕಾರಿ- ಸುಖದೇವ್ ಅವರ ಅದೇ ದಿನ) ಬಂಗಾಳ ಪ್ರೆಸಿಡೆನ್ಸಿಯ (ಈಗ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ) ಮುಜಫರ್‌ಪುರ ಜಿಲ್ಲೆಯ ಜಲಾಲ್‌ಪುರ ಗ್ರಾಮದಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಗ್ರಾಮದಲ್ಲಿ ಪಡೆದರು ಮತ್ತು ಮಥುರಾಪುರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾದರು. ಅವರು 1930 ರಲ್ಲಿ ನಾಗರಿಕ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಂಧಿಸಲ್ಪಟ್ಟು ಪಾಟ್ನಾ ಕ್ಯಾಂಪ್ ಜೈಲಿನಲ್ಲಿ ಇರಿಸಲ್ಪಟ್ಟರು. ಗಾಂಧಿ-ಇರ್ವಿನ್ ಒಪ್ಪಂದದ ನಂತರ ಇತರ ಸತ್ಯಾಗ್ರಹಿಗಳೊಂದಿಗೆ ಅವರನ್ನು ಬಿಡುಗಡೆ ಮಾಡಲಾಯಿತು. ನಂತರ ಅವರು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್‌ನ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದು ಕ್ರಾಂತಿಕಾರಿಯಾದರು.

ಕೆಲಸ

ಶುಕ್ಲಾ ಅವರು 1930 ರ ಉಪ್ಪಿನ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ಅವರು ಹಿಂದೂಸ್ತಾನ್ ಸೇವಾದಳ ಮತ್ತು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್‌ ನಂತಹ ಕ್ರಾಂತಿಕಾರಿ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದರು. ಭಾರತೀಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು 1931 ರಲ್ಲಿ ಲಾಹೋರ್ ಪಿತೂರಿ ಪ್ರಕರಣದ ವಿಚಾರಣೆಯ ಪರಿಣಾಮವಾಗಿ ಗಲ್ಲಿಗೇರಿಸಿದ್ದು ಇಡೀ ದೇಶವನ್ನು ಬೆಚ್ಚಿಬೀಳಿಸಿದ ಘಟನೆಯಾಗಿದೆ.

ಸಾವು

ಇಲ್ಲಿಯವರೆಗೆ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್‌ನ ಪ್ರಮುಖ ಸದಸ್ಯರಾಗಿದ್ದ ಫಣೀಂದ್ರ ನಾಥ್ ಘೋಷ್ ಅವರು ಅಪ್ರೂವರ್ ಆಗಿ, ಸಾಕ್ಷ್ಯವನ್ನು ನೀಡುವ ಮೂಲಕ ವಿಶ್ವಾಸಘಾತ ಮಾಡಿದರು, ಇದು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುಗಳ ಮರಣದಂಡನೆಗೆ ಕಾರಣವಾಯಿತು. ಪ್ರತೀಕಾರದ ಕಾರ್ಯವಾಗಿ ಘೋಷ್ ಅವರ ಮರಣದಂಡನೆಯನ್ನು ಯೋಜಿಸಲು ಶುಕ್ಲಾ ಅವರನ್ನು ನಿಯೋಜಿಸಲಾಯಿತು. ಅವರು 9 ನವೆಂಬರ್ 1932 ರಂದು ಅದನ್ನು ಯಶಸ್ವಿಯಾಗಿ ನಡೆಸಿದರು. ಅವರನ್ನು ಬಂಧಿಸಿ ಹತ್ಯೆಗಾಗಿ ವಿಚಾರಣೆಗೆ ಗುರಿಪಡಿಸಲಾಯಿತು. ಶುಕ್ಲಾ ಅವರನ್ನು ಅಪರಾಧಿ ಎಂದು ಘೋಷಿಸಿ 1934 ರ ಮೇ 14 ರಂದು ಗಯಾ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಆಗ ಅವರು ಕೇವಲ 27 ವರ್ಷ ವಯಸ್ಸಿನವರಾಗಿದ್ದರು.

ಉಲ್ಲೇಖಗಳು

Tags:

ಭಗತ್ ಸಿಂಗ್ಸುಖದೇವ್ ಥಾಪರ್

🔥 Trending searches on Wiki ಕನ್ನಡ:

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಒಂದೆಲಗರೇಣುಕಕರ್ನಾಟಕ ಹೈ ಕೋರ್ಟ್ಹನುಮಂತಸ್ವಚ್ಛ ಭಾರತ ಅಭಿಯಾನಕಾರಡಗಿಗ್ರಹಣಬೆಲ್ಲಮಳೆಗಾಲಸಾಮ್ರಾಟ್ ಅಶೋಕಹಾಗಲಕಾಯಿವಾಟ್ಸ್ ಆಪ್ ಮೆಸ್ಸೆಂಜರ್ಶಿಕ್ಷಣಅಶ್ವತ್ಥಮರಶ್ರವಣಬೆಳಗೊಳಜೀವಕೋಶಮಾರುತಿ ಸುಜುಕಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಲೋಪಸಂಧಿತ. ರಾ. ಸುಬ್ಬರಾಯತಂತ್ರಜ್ಞಾನಧೃತರಾಷ್ಟ್ರಕರ್ನಾಟಕ ವಿಧಾನ ಪರಿಷತ್ಕರ್ನಾಟಕದ ಜಾನಪದ ಕಲೆಗಳುಕೇಂದ್ರಾಡಳಿತ ಪ್ರದೇಶಗಳುವಡ್ಡಾರಾಧನೆಆದಿವಾಸಿಗಳುಬಳ್ಳಾರಿಕವಿಕರ್ನಾಟಕದ ತಾಲೂಕುಗಳುಜಿ.ಎಸ್.ಶಿವರುದ್ರಪ್ಪಕಲ್ಪನಾಜರಾಸಂಧಬ್ಯಾಡ್ಮಿಂಟನ್‌ಹೋಬಳಿಮೂಲಧಾತುಮೈಸೂರು ದಸರಾಗುಲಾಬಿಭತ್ತರಾಮ್ ಮೋಹನ್ ರಾಯ್ಅನುಭವ ಮಂಟಪಲಕ್ಷ್ಮಿಕೊರೋನಾವೈರಸ್ಮಾಲ್ಡೀವ್ಸ್ವಾಣಿವಿಲಾಸಸಾಗರ ಜಲಾಶಯಭಾರತದ ರಾಜಕೀಯ ಪಕ್ಷಗಳುಅರವಿಂದ ಘೋಷ್ಭಾರತೀಯ ಶಾಸ್ತ್ರೀಯ ನೃತ್ಯಸಿದ್ಧರಾಮಏಡ್ಸ್ ರೋಗಗೋಕರ್ಣಪರಿಸರ ವ್ಯವಸ್ಥೆಭಜರಂಗಿ (ಚಲನಚಿತ್ರ)ಕೊಡಗಿನ ಗೌರಮ್ಮಜೋಗಿ (ಚಲನಚಿತ್ರ)ಚಿಲ್ಲರೆ ವ್ಯಾಪಾರಕ್ಯಾನ್ಸರ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಆಂಡಯ್ಯಮುರುಡೇಶ್ವರಋಗ್ವೇದಮಹೇಂದ್ರ ಸಿಂಗ್ ಧೋನಿಪೊನ್ನಚಿನ್ನರೋಮನ್ ಸಾಮ್ರಾಜ್ಯಮಾನವನ ವಿಕಾಸಪ್ರಕಾಶ್ ರೈಇಂದಿರಾ ಗಾಂಧಿಅಶ್ವತ್ಥಾಮಸಂತೆಕರ್ಮಧಾರಯ ಸಮಾಸಪಂಪಮೈಗ್ರೇನ್‌ (ಅರೆತಲೆ ನೋವು)ಕನ್ನಡ ಗಣಕ ಪರಿಷತ್ತು🡆 More