ವೀರಭದ್ರ ದೇವಸ್ಥಾನ, ಹಿರಿಯಡ್ಕ

ವೀರಭದ್ರಸ್ವಾಮಿ ದೇವಸ್ಥಾನವು ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿರುವ ಒಂದು ದೇವಸ್ಥಾನವಾಗಿದ್ದು, ಈ ದೇವಾಲಯವು ವೀರಭದ್ರ, ಬ್ರಹ್ಮ ಮತ್ತು ಸಿರಿ ದೈವಗಳಿಗೆ ಸಮರ್ಪಿತವಾದ ಪವಿತ್ರ ಸ್ಥಳವಾಗಿದೆ.ಇದು ಆಲಡಿ ದೇವಸ್ಥಾನಗಳಲ್ಲಿ ಒಂದು.ಇದು ಪಂಚ ದೈವಗಳನ್ನು ಒಳಗೊಂಡಿದೆ.

ಇತಿಹಾಸ

ಶ್ರೀ ವೀರಭದ್ರ ದೇವಸ್ಥಾನವು ಭವ್ಯವಾದ ಇತಿಹಾಸವನ್ನು ಹೊಂದಿದೆ. ಇದು ಪ್ರಾಚೀನ ದೇವಾಲಯವಾಗಿದ್ದು, ಹಿಂದಿನ ದಿನಗಳಲ್ಲಿ ಬೆರ್ಮಾರು, ನಾಗ, ರಕ್ತೇಶ್ವರಿ, ಕ್ಷೇತ್ರಪಾಲ ಮತ್ತು ಮಹಿಶಾಂತಯ್ಯ ಮುಂತಾದ 'ಪಂಚ ಶಕ್ತಿ'ಗಳನ್ನು ಪೂಜಿಸಲಾಗುತ್ತಿತ್ತು. ಒಂದು ಕುತೂಹಲಕಾರಿ ಕಥೆಯ ಪ್ರಕಾರ ಇಲ್ಲಿ ವೀರಭದ್ರನ ಅಸ್ತಿತ್ವವೇ ಇರಲಿಲ್ಲ. ಪ್ರಧಾನ ಅರ್ಚಕರಾಗಿದ್ದ ಅಡಕತ್ತಾಯ ಅವರು ಕರೆತಂದರು. ಅಂದಿನ ರಾಜ ಹಾಗು ಅಡಕತ್ತಾಯನ ನಡುವೆ ಭಿನ್ನಾಭಿಪ್ರಾಯ ಮೂಡಿತು. ಇದರಿಂದ ಅವರು ಬ್ರಹ್ಮನಿಗಿಂತ ಹೆಚ್ಚು ಶಕ್ತಿಶಾಲಿ ದೇವರನ್ನು ತರುವ ಸವಾಲು ತೆಗೆದುಕೊಂಡರು. ಖಾಂಡ್ಯದಲ್ಲಿ ಸುದೀರ್ಘ ಪ್ರಾರ್ಥನೆಯ ನಂತರ, ವೀರಭದ್ರ ಅವರನ್ನು ಆಶೀರ್ವದಿಸಿ ಅವರೊಂದಿಗೆ ಹಿರಿಯಡ್ಕಕ್ಕೆ ಬಂದರು. ಹಲವಾರು ದಿನಗಳ ಪ್ರಯಾಣದ ನಂತರ ಅಂಜಾರು ಬೀಡಿನ ಆಳ್ವಾ ಹೆಗಡೆ ಮತ್ತು ಕುರ್ಲಾ ಹೆಗಡೆ ಕುಟುಂಬದವರ ಸಹಾಯದಿಂದ ದೇವರ ದೇವಸ್ಥಾನವನ್ನು ನಿರ್ಮಿಸಿದರು. ಇತರ ಪರಿವಾರದ ದೈವಗಳಿಗೆ ಗಣಶಾಲೆಯನ್ನು ನಿರ್ಮಿಸಲಾಯಿತು.

ರಚನೆ

ಪ್ರತಿ ದಿನ ಅಡಕತ್ತಾಯನಿಗೆ ಎರಡು ಪೂಜೆ, ವೀರಭದ್ರನಿಗೆ ಮೂರು ಪೂಜೆ ನಡೆಯುತ್ತದೆ. ನಾಲ್ಕು ಮುಖಗಳನ್ನು ಒಳಗೊಂಡಿರುವ ವೀರಭದ್ರನ ಲೋಹದ ವಿಗ್ರಹವಿದೆ. ಸ್ವಾಮಿಯ ಎಡ ಮತ್ತು ಬಲ ಭಾಗದಲ್ಲಿ ಅಬ್ಬಗ ಮತ್ತು ದಾರಗವನ್ನು ಸ್ಥಾಪಿಸಲಾಗಿದೆ.

ಮುಖ್ಯ ಕಮಾನಿನ ಪಕ್ಕದಲ್ಲಿ ದೇವತೆಗಳ ಗುಡಿಗಳನ್ನು ನಿರ್ಮಿಸಲಾಗಿದೆ. ಈ ದೇಗುಲಗಳಲ್ಲಿ ಸ್ಥಾಪಿಸಲಾಗುವ ದೈವಿಕ ಶಕ್ತಿಗಳು ಘಂಟಾ ಕರ್ಣ, ಗಜ ಕರ್ಣ, ಮಾಲಿ ಸುಮಾಲಿ, ದಂಡಪಾಣಿ - ಶೂಲಪಾಣಿ ಎಂಬ ರುದ್ರ ಗಣಗಳ ಸದಸ್ಯರಾಗಿರುತ್ತವೆ. ಧ್ವಜಸ್ತಂಭದ ಬಳಿ ನಿರ್ಮಿಸಲಾದ ಕಲ್ಲಿನ ರೂಪದಲ್ಲಿ ಮತ್ತೊಂದು ದೈವಿಕ ಶಕ್ತಿಯಾದ ಭೂತರಾಜನನ್ನು ಇರಿಸಲಾಗಿದ್ದು, ಹೊರ ಆವರಣದಲ್ಲಿ ಬೊಬ್ಬರ್ಯ ದೈವವನ್ನು ಸ್ಥಾಪಿಸಲಾಗಿದೆ. ಇಲ್ಲಿ ಪಿಲ್ಚಂಡಿ, ಗಣಶಾಲಾ, ರಕ್ತೇಶ್ವರಿ, ಅಡಕಥಾಯ ಗುಡಿ, ಕ್ಷೇತ್ರಪಾಲದ ಚಿಕ್ಕ ದೇಗುಲಗಳನ್ನೂ ಕಾಣಬಹುದು. ಪ್ರೇತಕಲ್ಲು ಸೇರಿದಂತೆ ಇತರ ಕುಟುಂಬ ದೈವಗಳನ್ನು ಸಹ ಸ್ಥಾಪಿಸಲಾಗಿದೆ.

ಮಹತ್ವ

ಹಿರಿಯಡ್ಕದ ಹಲವು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ವೀರಭದ್ರಸ್ವಾಮಿ ದೇವಸ್ಥಾನವು ಕಾರ್ಕಳದಿಂದ ೨೪ ಕಿ.ಮೀ. ಮತ್ತು ಉಡುಪಿಯಿಂದ ೧೫ಕಿ.ಮೀ. ದೂರದಲ್ಲಿದೆ. ದೇವಾಲಯಕ್ಕೆ ೮೦೦ ವರ್ಷಗಳ ಇತಿಹಾಸವಿದೆ. ಪ್ರತಿವರ್ಷ ಎಪ್ರಿಲ್-ಮೇ ತಿಂಗಳಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಹಲವಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಉಡುಪಿ, ಮಂಗಳೂರು, ಶಿವಮೊಗ್ಗ ಚಿಕ್ಕಮಗಳೂರಿನಿಂದ ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.ಈ ದೇವಾಲಯವನ್ನು ಆಳ್ವಾ ಹೆಗಡೆ ಮತ್ತು ಕುರ್ಲಾ ಹೆಗಡೆ ಕುಟುಂಬದವರು ನಿರ್ವಹಿಸುತ್ತಿದ್ದಾರೆ.

ಬ್ರಹ್ಮಲಿಂಗೇಶ್ವರ ಮತ್ತು ವೀರಭದ್ರ ಸ್ವಾಮಿಗಳು ಮುಖ್ಯ ದೇವರುಗಳು ಮತ್ತು ಇತರ ಪರಿವಾರದ ದೈವಗಳನ್ನು ಸಹ ಇಲ್ಲಿ ಪೂಜಿಸಲಾಗುತ್ತದೆ. ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಬಯಕೆಯನ್ನು ಪೂರೈಸಲು ಅತ್ಯಂತ ಶಕ್ತಿಶಾಲಿ ದೇವಾಲಯಗಳಲ್ಲಿ ಒಂದಾಗಿದೆ ಎಂದು ನಂಬುತ್ತಾರೆ. ಇಲ್ಲಿನ ನಗಾರಿ ಶಬ್ದವು ಸುತ್ತಲಿನ ೪ ಕಿ.ಮೀ.ನಲ್ಲಿ ಪ್ರತಿಧ್ವನಿಸುತ್ತದೆ.ಈ ದೇವಸ್ಥಾನಕ್ಕೆ ರಾಜಗೋಪುರ, ನಗಾರಿಗೋಪುರ, ಪಡುಗೋಪುರ ಎಂಬ ೩ ಗೋಪುರಗಳಿಂದ ಪ್ರವೇಶವಿದೆ. ಸುಮಾರು ೭೨ ಅಡಿ ಉದ್ದದ ಧ್ವಜಸ್ತಂಭವನ್ನು ಇಲ್ಲಿ ಕಾಣಬಹುದು.

ಉಲ್ಲೇಖಗಳು

Tags:

ವೀರಭದ್ರ ದೇವಸ್ಥಾನ, ಹಿರಿಯಡ್ಕ ಇತಿಹಾಸವೀರಭದ್ರ ದೇವಸ್ಥಾನ, ಹಿರಿಯಡ್ಕ ರಚನೆವೀರಭದ್ರ ದೇವಸ್ಥಾನ, ಹಿರಿಯಡ್ಕ ಮಹತ್ವವೀರಭದ್ರ ದೇವಸ್ಥಾನ, ಹಿರಿಯಡ್ಕ ಉಲ್ಲೇಖಗಳುವೀರಭದ್ರ ದೇವಸ್ಥಾನ, ಹಿರಿಯಡ್ಕ

🔥 Trending searches on Wiki ಕನ್ನಡ:

ಅನುಪಮಾ ನಿರಂಜನವಿಷ್ಣುಶರ್ಮಲಿಂಗ ವಿವಕ್ಷೆಚಿತ್ರದುರ್ಗ ಕೋಟೆಭಾರತದ ರಾಷ್ಟ್ರಪತಿಗಳ ಪಟ್ಟಿಹಲ್ಮಿಡಿ ಶಾಸನಮಂಕುತಿಮ್ಮನ ಕಗ್ಗಮೊಘಲ್ ಸಾಮ್ರಾಜ್ಯಬಹುರಾಷ್ಟ್ರೀಯ ನಿಗಮಗಳುತುಳಸಿಗುರುನಾನಕ್ಅಂಚೆ ವ್ಯವಸ್ಥೆಜನಪದ ಕಲೆಗಳುಛತ್ರಪತಿ ಶಿವಾಜಿಬಿ.ಎಲ್.ರೈಸ್ಗಣೇಶಮುಮ್ಮಡಿ ಕೃಷ್ಣರಾಜ ಒಡೆಯರುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಮಂಜುಳಕರ್ನಾಟಕ ವಿಧಾನ ಸಭೆಪು. ತಿ. ನರಸಿಂಹಾಚಾರ್ನಾಮಪದದಲಿತನೀರುಅಂಬರೀಶ್ರಸ(ಕಾವ್ಯಮೀಮಾಂಸೆ)ವಿದ್ಯುತ್ ಮಂಡಲಗಳುಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಕೃಷ್ಣಶಬ್ದಕರ್ನಾಟಕದ ತಾಲೂಕುಗಳುಅಕ್ಬರ್ಕನ್ನಡ ಛಂದಸ್ಸುಆದಿ ಶಂಕರಯಕ್ಷಗಾನಕರ್ನಾಟಕ ಯುದ್ಧಗಳುಶಾಂತರಸ ಹೆಂಬೆರಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಚೋಳ ವಂಶಭಾವಗೀತೆಭರತ-ಬಾಹುಬಲಿಪತ್ರಕಿರುಧಾನ್ಯಗಳುಕ್ರೀಡೆಗಳುಕನ್ನಡದಲ್ಲಿ ಅಂಕಣ ಸಾಹಿತ್ಯಸಂವಿಧಾನಮೂಢನಂಬಿಕೆಗಳುಭಾರತದ ಮಾನವ ಹಕ್ಕುಗಳುಕಾರ್ಲ್ ಮಾರ್ಕ್ಸ್ಮಾರ್ಟಿನ್ ಲೂಥರ್ ಕಿಂಗ್ಬಾರ್ಬಿವಸುಧೇಂದ್ರಪುನೀತ್ ರಾಜ್‍ಕುಮಾರ್ರಾಶಿಮೋಕ್ಷಗುಂಡಂ ವಿಶ್ವೇಶ್ವರಯ್ಯಶ್ರೀಕೃಷ್ಣದೇವರಾಯಕನ್ನಡ ಸಾಹಿತ್ಯ ಪರಿಷತ್ತುಕನ್ನಡವ್ಯಂಜನಮಳೆಗೌತಮ ಬುದ್ಧಜಯಂತ ಕಾಯ್ಕಿಣಿಕಣ್ಣುಸ್ವಾಮಿ ವಿವೇಕಾನಂದಗುಣ ಸಂಧಿಅವ್ಯಯವಾಸ್ಕೋ ಡ ಗಾಮಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕ್ಯಾನ್ಸರ್ಮಕರ ಸಂಕ್ರಾಂತಿಸರಸ್ವತಿಜೈನ ಧರ್ಮಭಗವದ್ಗೀತೆಚನ್ನಬಸವೇಶ್ವರವಿಭಕ್ತಿ ಪ್ರತ್ಯಯಗಳುಮಯೂರಶರ್ಮಆಂಧ್ರ ಪ್ರದೇಶಐಹೊಳೆ🡆 More