ವಾತಾವರಣದಲ್ಲಿ ಮರುಪ್ರವೇಶಿಸುವಿಕೆ

ಮಾನವ ನಿರ್ಮಿತ ಅಥವಾ ಪ್ರಾಕೃತಿಕ ವಸ್ತುಗಳು ಬಾಹ್ಯಾಕಾಶದಿಂದ ಭೂಮಿಯಂತಹ ಯಾವುದಾದರೂ ಒಂದು ಗ್ರಹದ ವಾತಾವರಣವನ್ನು ಪ್ರವೇಶಿಸುವದನ್ನು ವಾತಾವರಣದಲ್ಲಿ ಮರುಪ್ರವೇಶಿಸುವಿಕೆ ಅಥವಾ ವಾಯುಮಂಡಲದಲ್ಲಿ ಪ್ರವೇಶಿಸುವಿಕೆ ಎಂದು ಹೇಳಬಹುದು.

ಸಾಮಾನ್ಯವಾಗಿ ಉಪಕಕ್ಷೀಯ ಅಂತರಿಕ್ಷನೌಕೆಗಳು ಮತ್ತು ಸ್ಥಿರ ಕಕ್ಷೆಯಲ್ಲಿದ್ದು ಮರಳಿ ಬರುತ್ತಿರುವ ಗಗನನೌಕೆಗಳು ಈ ಕ್ರಿಯೆಯ ಮೂಲಕ ವಾತಾವರಣವನ್ನು ಹಾದು, ಭೂಮಿಯನ್ನು ತಲುಪುತ್ತವೆ. ಈ ಕ್ರಿಯೆಯು ಸಾಮಾನ್ಯವಾಗಿ ವಾಯುಮಂಡಲವನ್ನು ಪ್ರವೇಶಿಸುವಾಗ ಘರ್ಷಣೆಯಿಂದ ಉಂಟಾಗುವ ಉಷ್ಣತೆಯಿಂದ (ಏರೋಡೈನಾಮಿಕ್ ಹೀಟಿಂಗ್) ಗಗನನೌಕೆಯನ್ನು ರಕ್ಷಿಸುವುದಕ್ಕಾಗಿ ವಿಶೇಷ ಕ್ರಮಗಳನ್ನೊಳಗೊಂಡಿರುತ್ತದೆ.ಅಂತರಿಕ್ಷನೌಕೆಗಳ ಅತಿವೇಗದ ವಾತಾವರಣದ ಮರುಪ್ರವೇಶಿಸುವಿಕೆಗಾಗಿ ಹಲವಾರು ಅತ್ಯುನ್ನತ ತಂತ್ರಙ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.

ವಾತಾವರಣದಲ್ಲಿ ಮರುಪ್ರವೇಶಿಸುವಿಕೆ
ಮಂಗಳ ಗ್ರಹ ಅನ್ವೇಷಣ ರೋವರ್ ನೌಕೆಯ ಏರೋಶೆಲ್ ಯಂತ್ರವು, ಮಂಗಳದ ವಾತಾವರಣವನ್ನು ಪ್ರವೇಶಿಸುತ್ತಿರುವುದು. ಕಲಾವಿದನ ಕಲ್ಪನೆ.
ವಾತಾವರಣದಲ್ಲಿ ಮರುಪ್ರವೇಶಿಸುವಿಕೆ
ಆಪೋಲೊ ಕಮಾಂಡ್ ಮಾಡ್ಯೂಲ್ ಒಂದು ನಿಶ್ಚಿತ ಕೋನದಲ್ಲಿ ವಾಲಿಕೊಂಡು ವಾಯುಮಂಡಲವನ್ನು ಪ್ರವೇಶಿಸುತ್ತಿರುವುದು, ಕಲಾವಿದನ ಕಲ್ಪನೆ.

ಇತಿಹಾಸ

ವಾಯುಮಂಡಲದಲ್ಲಿ ಪ್ರವೇಶಿಸುವಿಕೆಯ ತಂತ್ರಙ್ಞಾನವು ಶೀತಲಯುದ್ಧದ ಪರಿಣಾಮವಾಗಿ ಅಭಿವೃದ್ಧಿಹೊಂದಿತು. ಅಮೆರಿಕಾ ಮತ್ತು ಸೋವಿಯೆಟ್ ರಶಿಯಾ ದೇಶಗಳು ಎರಡನೇ ವಿಶ್ವಯುಧ್ಧದ ಸಮಯದಲ್ಲಿ ಕ್ಷಿಪಣಿ ಮತ್ತು ಅಣ್ವಸ್ತ್ರಗಳ ತಂತ್ರಙ್ಞಾನವನ್ನು ಅಭಿವೃದ್ಧಿಪಡಿಸಿದವು.ನಂತರ ಎರಡೂ ದೇಶಗಳು ಈ ತಂತ್ರಙ್ಞಾನಗಳ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಬೃಹತ್ ಸಂಶೋಧನೆ ಮತ್ತು ವಿಕಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಇದರಿಂದ ವಾತಾವರಣದ ಮರುಪ್ರವೇಶಿಸುವಿಕೆ ತಂತ್ರಙ್ಞಾನವು ವಿಕಾಸಹೊಂದಲು ನೆರವಾಯಿತು.

Tags:

ಉಷ್ಣತೆಬಾಹ್ಯಾಕಾಶಭೂಮಿಮಾನವ

🔥 Trending searches on Wiki ಕನ್ನಡ:

ರವಿಚಂದ್ರನ್ವಿಮರ್ಶೆಹಲ್ಮಿಡಿ ಶಾಸನಕಲ್ಯಾಣ ಕರ್ನಾಟಕಕರ್ನಾಟಕ ಐತಿಹಾಸಿಕ ಸ್ಥಳಗಳುಮಂಕುತಿಮ್ಮನ ಕಗ್ಗಲಕ್ಷ್ಮೇಶ್ವರನೀಲ್ಸ್ ಹೆನ್ರಿಕ್ ಡೇವಿಡ್ ಬೋರ್ತತ್ಪುರುಷ ಸಮಾಸಭಾರತದ ಮುಖ್ಯ ನ್ಯಾಯಾಧೀಶರುರೋಸ್‌ಮರಿವಿಕಿಪೀಡಿಯಆಸ್ಟ್ರೋ-ಏಷ್ಯಾಟಿಕ್ ಭಾಷೆಗಳುಕೃಷ್ಣ ಮಠಕೃಷ್ಣರಾಜಸಾಗರವ್ಯಾಪಾರಬನಾರಸ್ (2022 ಚಲನಚಿತ್ರ)ಕೂಡಲ ಸಂಗಮಕರ್ನಾಟಕದ ಜಾನಪದ ಕಲೆಗಳುಭಾರತೀಯ ನದಿಗಳ ಪಟ್ಟಿಪದಬಂಧಆಸ್ಟ್ರಿಯಭಾರತ ಸಂವಿಧಾನದ ಪೀಠಿಕೆವಿಜಯಪುರಶೈಕ್ಷಣಿಕ ಮನೋವಿಜ್ಞಾನಸಮಾಜ ವಿಜ್ಞಾನಮಂಡಲ ಹಾವುನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯರ ಪಟ್ಟಿಬೇಲೂರುದಾಸವಾಳಸೈಬರ್‌ನೆಟಿಕ್ಸ್ದಿಕ್ಕುಬಾನುಲಿ ನಾಟಕಸುಭಾಷ್ ಚಂದ್ರ ಬೋಸ್ಸಿಂಧೂತಟದ ನಾಗರೀಕತೆದಾಂಡಿಯಾಸಹಕಾರಿ ಸಂಘಗಳುಸಂಪತ್ಮುದ್ದಣಕನ್ನಡ ಅಕ್ಷರಮಾಲೆರಾಷ್ಟ್ರಕೂಟಮಹೇಂದ್ರ ಸಿಂಗ್ ಧೋನಿಹೆಚ್.ಡಿ.ದೇವೇಗೌಡಪೆಂಗ್ವಿನ್‌‌ಕನ್ನಡ ಛಂದಸ್ಸುಮಕ್ಕಳ ಸೈನ್ಯಜ್ಞಾನಪೀಠ ಪ್ರಶಸ್ತಿಷಟ್ಪದಿಮಲೆನಾಡುಪೂನಾ ಒಪ್ಪಂದವೈದಿಕ ಯುಗಸೋಮನಾಥಪುರಅಕ್ಷರತೆಲುಗುಹರ್ಯಂಕ ರಾಜವಂಶಆರ್ಯರುಮೋಕ್ಷಗುಂಡಂ ವಿಶ್ವೇಶ್ವರಯ್ಯಭಾರತದ ರೂಪಾಯಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಡಿಕೇರಿಭೀಮಸೇನಭಾರತದಲ್ಲಿನ ಶಿಕ್ಷಣತುಂಬೆಗಿಡಆಗಮ ಸಂಧಿಭಾಷೆಮಂಜುಳಶಾಲೆಕುರುಬಕರ್ನಾಟಕದ ಜಲಪಾತಗಳುಚಾಮರಾಜನಗರಕನ್ನಡದಲ್ಲಿ ಸಣ್ಣ ಕಥೆಗಳುಹಿಂದೂ ಮದುವೆಚಿದಂಬರ ರಹಸ್ಯಭಾರತದಲ್ಲಿ ಬಡತನಮೀಟರ್ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)ತ್ರಿಶಾಮಂತ್ರಾಲಯ🡆 More