ವರ್ಧಮಾನ ಸ್ವಾಮಿ ಬಸದಿ, ಗೇರುಸೊಪ್ಪೆ

ಈ ಬಸದಿ ವಾಸುಪೂಜ್ಯ ಭಗವಾನರ ಬಸದಿ.ತಪ್ಪು ತಿಳುವಳಿಕೆಯಿಂದ ವರ್ಧಮಾನಸ್ವಾಮಿ ಬಸದಿ ಎಂದಾಗಿದೆ.ಪ್ರಮುಖ ನಾಯಕರ ಸಪ್ರಭಾವಳಿಯ ಸುತ್ತಲಿರುವ ತೀರಥಂಕರರನ್ನು ಆಧರಿಸಿ ಸ್ಪಷ್ಟಪಡಿಸಬಹುದು.

ಸ್ಥಳ

ವರ್ಧಮಾನ ಸ್ವಾಮಿ ಬಸದಿಯು ಗೆರುಸೊಪ್ಪೆಯ ಶ್ರೀ ನೇಮಿನಾಥ ಸ್ವಾಮಿ ಬಸದಿಯ ಎದುರುಗಡೆ ಇದೆ. ಆದರೆ ಬಸದಿಯ ಸುತ್ತಲಿನ ಅಂಗಳಕ್ಕಿಂತ ಸ್ವಲ್ಪ ಎತ್ತರದ ಒಂದು ದಿಣ್ಣೆಯ ಮೇಲೆ (ಇದು ಬಸ್ತಿಯ ಅಸ್ತವಾರವೇ ಆಗಿದೆ) ನಿರ್ಮಾಣಗೊಂಡಿದೆ.

ಪ್ರಕಾರ

ಬಸದಿಯ ಪ್ರಾಕಾರವನ್ನು ಪ್ರವೇಶಿಸುವಾಗಲೇ ನಮ್ಮ ಎಡಬದಿಗೆ ಶ್ರೀ ಬಾಹುಬಲಿ ಸ್ವಾಮಿಯ ಸುಮಾರು ಆರು ಅಡಿ ಎತ್ತರದ ಶಿಲಾಮೂರ್ತಿಯನ್ನು ಪ್ರಾಕಾರಗೋಡೆಗೆ ಇರಗಿಸಿ ಇಟ್ಟಿರುವುದನ್ನು ಕಾಣಬಹುದು. ಇದು ಬಸದಿಯನ್ನು ಗುರುತಿಸಲು ಸಹಕಾರಿಯಾಗಿದೆ. ಯಾಕೆಂದರೆ ಇಲ್ಲಿಯ ಕೆಲವು ಬಸದಿಗಳ ಗರ್ಭಗೃಹದ ರಚನೆ ಏಕಪ್ರಕಾರವಾಗಿದೆ. ಇದರ ಪ್ರಾಕಾರಗೋಡೆಯ ಒಳಗಿನ ಜಗಲಿಯ ಪೂರ್ವ ದಿಕ್ಕಿಗೆ ಮೂರು ಬೃಹತ್ ಶಿಲಾಶಾಸನಗಳನ್ನೂ, ಉತ್ತರ ದಿಕ್ಕಿಗೆ ಏಳು ಬೃಹತ್ ಶಿಲಾಶಾಸನಗಳನ್ನೂ ಶಾಸನಗಳಿರುವ ಏಳು ವೀರಗಲ್ಲುಗಳನ್ನು ಒರಗಿಸಿ ಇಡಲಾಗಿದೆ.

ಕಾಲ ಮತ್ತು ನಿಮಾ‍ಣ

ಇವುಗಳ ಪೈಕಿ ಇಂದು ಬೃಹತ್ ಶಿಲಾಶಾಸನವು ಕ್ರಿ.ಶ. ೧೩೭೮ನೇ ಇಸವಿಯದ್ದಾಗಿದ್ದು, ಗೇರುಸೊಪ್ಪೆಯ ಅರಸನ ಪ್ರಜೆಯಾದ ಚಂದ್ರಪುರ (ಚಂದಾವರ)ದ ಹೊನ್ನಪ್ಪ ಶೆಟ್ಟಿಯು ಬಸದಿಗೆ ಭೂದಾನ ಮಾಡಿದ ವಿಷಯವನ್ನು ಹೇಳುತ್ತದೆ. ಇನ್ನೊಂದು ನಿಷಿಧಿ ಶಾಸನವಾಗಿದ್ದು ಕ್ರಿ.ಶ. ೧೩೯೨ನೇ ಇಸವಿಗೆ ಸಂಬಧಿಸಿದ್ದಾಗಿದೆ. ಇದು ಗೇರುಸೊಪ್ಪೆಯ ಶ್ರೀ ಅನಂತಸ್ವಾಮಿ ಬಸದಿಯನ್ನು ಯೋಜನ ಶೆಟ್ಟಿಯ ಪತ್ನಿ ರಾಮಕ್ಕ ನಿರ್ಮಿಸಿದಳು ಎಂದು ಹೇಳುತ್ತದೆ. ಮತ್ತೊಂದು ೧೪ನೇ ಶತಮಾನದ ಶಾಸನವು ಬೊಮ್ಮರಸ ಮತ್ತು ಆತನ ರಾಣಿಯ ಪುತ್ರಿಯಾದ ಶಾಂತಲಾದೇವಿಯ ಮರಣದ ಕುರಿತು ಹೇಳುತ್ತದೆ. ಇವೆಲ್ಲವುಗಳ ಶಿಸ್ತುಬದ್ಧ ಅಧ್ಯಯನವು ಈ ಸ್ಥಳದ ಹಾಗೂ ನಗಿರೆ-ಗೇರುಸೊಪ್ಪೆ ರಾಜ್ಯದ ಇತಿಹಾಸದ ಮೇಲೆ ಬಹು ಅಮೂಲ್ಯವಾದ ಬೆಳಕನ್ನು ಚೆಲ್ಲಬಹುದು. ಅಲ್ಲೇ ಬಳಿಯಲ್ಲಿ ಒಂದು ಪೀಠದ ಮೇಲೆ ಕೆಲವು ಗುಂಡು ಕಲ್ಲುಗಳನ್ನು ಇಡಲಾಗಿದೆ. ಈ ಬಸದಿಯ ನಿವೇಶನಕ್ಕೆ ಹೊರಗಿನಿಂದ ಒಂದು ಪ್ರಾಕಾರ ಗೋಡೆ ಇದ್ದು, ಒಳಗೆ ಬಸದಿಯ ಅಂಗಳ ಸಹಿತವಾಗಿ ಈ ಬಸದಿಯ ಗರ್ಭಗೃಹಕ್ಕೆ ಇನ್ನೊಂದು ಮುರ ಕಲ್ಲಿನಿಂದ ಕಟ್ಟಿದ ಪ್ರಾಕಾರ ಗೋಡೆ ಇದೆ. ಒಳಗಿನ ಅಂಗಳಕ್ಕೆ ಇಲಾಕೆಯಿಂದ ಸಿಮೆಂಟ್ ಹಾಕಲಾಗಿದೆ. ಗರ್ಭಗೃಹವೂ ಮುರಕಲ್ಲಿನಿಂದ ನಿರ್ಮಿಸಲ್ಪಟ್ಟಿದ್ದು, ಇತ್ತೀಚೆಗೆ ಸಿಮೆಂಟಿನಿAದ ಗೋಡೆಗಳನ್ನು ಬಲಗೊಳಿಸಲಾಗಿದೆ. ಬಸದಿಗೆ ಒಳಗಿನಿಂದಲೂ ಹೊರಗಿನಿಂದಲೂ ಪ್ರದಕ್ಷಿಣಾ ಪಥಗಳಿವೆ. ಗರ್ಭಗೃಹದ ಮರದ ಬಾಗಿಲನ್ನು ಸರಿಸಿ ಒಳಗೆ ಹೋದರೆ ಶ್ರೀ ವರ್ಧಮಾನ ಸ್ವಾಮಿಯ ಪರ್ಯಂಕಾಸನದ ಸುಂದರ ಶಿಲಾಬಿಂಬವು ದರ್ಶನ ಕೊಡುತ್ತದೆ. ಆದರೆ ಇಲ್ಲಿ ಶ್ರೀ ಶಾಂತಿ ತೀರ್ಥಂಕರರ ಒಂದು ಬಸದಿ ಇರುವುದಾಗಿಯೂ ಅದು ಅತ್ಯಂತ ಉತ್ತಮವಾಗಿರುವುದಾಗಿಯೂ ಡಾ.ಪಿ.ಗುರುರಾಜ ಭಟ್ಟರು ತಮ್ಮ ಸ್ಟಡೀಸ್ ಇನ್ ತುಳುವ ಹಿಸ್ಟರಿ ಆ್ಯಂಡ್ ಕಲ್ಚರ್ ಗ್ರಂಥ(ಪುಟ ೧೧೮)ದಲ್ಲಿ ಹೇಳಿದ್ದಾರೆ. ಅದನ್ನು ಕೂಡ ಇಲ್ಲಿಯ ರಾಣಿ ಚೆನ್ನಾಭೈರಾದೇವಿಯೇ ನಿರ್ಮಿಸಿದ್ದುದಾಗಿ ಅವರು ಹೇಳಿದ್ದಾರೆ. ಆದರೆ ಬಸದಿ ಯಾವುದೆಂದು ತಿಳಿದು ಬರುವುದಿಲ್ಲ.

ವಿಶೇಷ

ಪ್ರಸ್ತುತ ಈ ಗರ್ಭಗೃಹದಲ್ಲಿರುವ ಜಿನಬಿಂಬವು ಪೀಠ ಸಹಿತವಾಗಿ ಸುಮಾರು ಎರಡವರೆ ಅಡಿ ಎತ್ತರವಿದೆ. ಬೇರೆ ಜೀನಬಿಂಬಗಳಲ್ಲಿರುವಂತೆ ಇಲ್ಲಿಯೂ ತೀರ್ಥಂಕರರ ಎರಡೂ ಬದಿಗಳಲ್ಲಿ ಯಕ್ಷಯಕ್ಷಿಯರ ಉಬ್ಬುಶಿಲ್ಪಗಳಿವೆ. ಪ್ರಭಾವಳಿ ಸಹಿತವಾಗಿ ಈ ಸಮಗ್ರ ಮೂರ್ತಿಯು ಒಂದೇ ಈಲೆಯಲ್ಲಿ ಮಾಡಲ್ಪಟ್ಟಿರುವುದಾಗಿ ಹೇಳುತ್ತಾರೆ. ಪ್ರಭಾವಳಿಯಲ್ಲಿ ಮಕರ ತೋರಣದ ಅಲಂಕಾರ ಮತ್ತು ಇಪ್ಪತ್ತನಾಲ್ಕು ತೀರ್ಥಂಕರರ ಪರ್ಯಂಕಾಸನದ ಸುಂದರ ಬಿಂಬಗಳಿವೆ. ಮೂರ್ಥಯ ಶಿರದ ಹಿಂಬದಿಯಲ್ಲಿ ವೃತ್ತಾಕಾರದ ಇನ್ನೊಂದು ಪ್ರಭಾವಲಯವಿದೆ. ಎರಡೂ ಕಡೆಯಲ್ಲಿ ಚಾಮರಧಾರಿಗಳು ನಿಂತುಕೊಂಡಿದ್ದಾರೆ. ಎಲ್ಲಕ್ಕಿಂತ ಮೇಲ್ಗಡೆ ಕೀರ್ತಿಮುಖವಿದೆ. ಗರ್ಭಗುಡಿಯ ಒಳಗಡೆ ಇದಕ್ಕೆ ಸಂಬಂಧಿಸಿದ ಎರಡು ಶಿಲಾಶಾಸನಗಳಿವೆ. ಇವುಗಳಲ್ಲಿ ಮುನಿಗಳೋರ್ವರು ರಾಣಿಯೊಬ್ಬಳಿಗೆ ತತ್ವಾರ್ಥಗಳನ್ನು ಬೋಧಿಸುತ್ತಿರುವಂತೆ ತೋರಿಸಲಾಗಿದೆ. ಇಲ್ಲಿ ಅಂತಹ ಒಟ್ಟು ನಾಲ್ಕು ಆಕೃತಿಗಳಿವೆ. ಈ ಶಾಸನಗಳ ಮೇಲ್ಗಡೆಯಲ್ಲಿ ಮಂಟಪದೊಂದಿಗೆ ಜಿನೇಶ್ವರರ ಬಿಂಬಗಳಿದ್ದು ಅವರಿಗೆ ಚಾಮರ ಬೀಸುತ್ತಿರುವಂತೆ ತೋರಿಸಲಾಗಿದೆ. ಇವುಗಳಲ್ಲಿ ಬಹಳ ಐತಿಹಾಸಿಕ ಮಹತ್ವ ಇದ್ದಂತೆ ಕಾಣುತ್ತದೆ.

ಉಲ್ಲೇಖಗಳು

Tags:

ವರ್ಧಮಾನ ಸ್ವಾಮಿ ಬಸದಿ, ಗೇರುಸೊಪ್ಪೆ ಸ್ಥಳವರ್ಧಮಾನ ಸ್ವಾಮಿ ಬಸದಿ, ಗೇರುಸೊಪ್ಪೆ ಪ್ರಕಾರವರ್ಧಮಾನ ಸ್ವಾಮಿ ಬಸದಿ, ಗೇರುಸೊಪ್ಪೆ ಕಾಲ ಮತ್ತು ನಿಮಾ‍ಣವರ್ಧಮಾನ ಸ್ವಾಮಿ ಬಸದಿ, ಗೇರುಸೊಪ್ಪೆ ವಿಶೇಷವರ್ಧಮಾನ ಸ್ವಾಮಿ ಬಸದಿ, ಗೇರುಸೊಪ್ಪೆ ಉಲ್ಲೇಖಗಳುವರ್ಧಮಾನ ಸ್ವಾಮಿ ಬಸದಿ, ಗೇರುಸೊಪ್ಪೆ

🔥 Trending searches on Wiki ಕನ್ನಡ:

ಶಿಕ್ಷೆಬಾಳೆ ಹಣ್ಣುಜಯಮಾಲಾಪರಿಸರ ವ್ಯವಸ್ಥೆಕ್ಷಯದುಂಡು ಮೇಜಿನ ಸಭೆ(ಭಾರತ)ಕೊಲ್ಲೂರು ಮೂಕಾಂಬಿಕಾ ದೇವಸ್ಥಾನನವಿಲುಪೂರ್ಣಚಂದ್ರ ತೇಜಸ್ವಿಕೃಷ್ಣರಾಜಸಾಗರಶನಿಮುಂಗಾರು ಮಳೆಕೃಷಿ ಉಪಕರಣಗಳುಕಂದಬೆಂಗಳೂರುಫೀನಿಕ್ಸ್ ಪಕ್ಷಿತೆಂಗಿನಕಾಯಿ ಮರಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಇಂಡಿ ವಿಧಾನಸಭಾ ಕ್ಷೇತ್ರಪ್ಲೇಟೊಗರ್ಭಪಾತಸಾಮಾಜಿಕ ತಾಣಚಿತ್ರದುರ್ಗಹಿಂದೂ ಧರ್ಮಜೀವನ ಚೈತ್ರಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕರ್ನಾಟಕದ ಏಕೀಕರಣಕೋಟಿಗೊಬ್ಬಅಹಲ್ಯೆನಾಲ್ವಡಿ ಕೃಷ್ಣರಾಜ ಒಡೆಯರುಒಪ್ಪಂದಗಾಂಧಿ ಜಯಂತಿಕೇದಾರನಾಥಒಗಟುಚಿತ್ರದುರ್ಗ ಕೋಟೆದ್ರೌಪದಿ ಮುರ್ಮುಕನ್ನಡ ವ್ಯಾಕರಣರಾವಣಕರ್ನಾಟಕದ ಶಾಸನಗಳುತೀ. ನಂ. ಶ್ರೀಕಂಠಯ್ಯಭಾರತೀಯ ಜನತಾ ಪಕ್ಷಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಿಜಯಪುರರಾಷ್ಟ್ರೀಯ ಉತ್ಪನ್ನಉಡುಪಿ ಜಿಲ್ಲೆಭಾರತದ ವಿಜ್ಞಾನಿಗಳುಸ್ಮೃತಿ ಇರಾನಿಷಟ್ಪದಿಕೋಟಿ ಚೆನ್ನಯಕಲಬುರಗಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಹರ್ಯಂಕ ರಾಜವಂಶಹಿಂದುಸ್ತಾನಿ ಶಾಸ್ತ್ರೀಯ ಸಂಗೀತನೈಸರ್ಗಿಕ ಸಂಪನ್ಮೂಲವೈದೇಹಿರಾಜ್ಯಸಭೆಹೊಯ್ಸಳೇಶ್ವರ ದೇವಸ್ಥಾನಅಂತರರಾಷ್ಟ್ರೀಯ ಹಣಕಾಸು ಸಂಸ್ಥೆವಿಶ್ವ ಕಾರ್ಮಿಕರ ದಿನಾಚರಣೆವಿಧಾನಸೌಧಜ್ಞಾನಪೀಠ ಪ್ರಶಸ್ತಿಸುದೀಪ್ಗದಗಮಡಿವಾಳ ಮಾಚಿದೇವಪ್ರಜಾಪ್ರಭುತ್ವವಿಶ್ವೇಶ್ವರ ಜ್ಯೋತಿರ್ಲಿಂಗನರೇಂದ್ರ ಮೋದಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ತೀರ್ಥಹಳ್ಳಿನಾಡ ಗೀತೆಕನ್ನಡದಲ್ಲಿ ಮಹಿಳಾ ಸಾಹಿತ್ಯಹಿಂದೂ ಮದುವೆಬಾರ್ಲಿಶಬ್ದಮಣಿದರ್ಪಣಚಂದ್ರಕೈಗಾರಿಕಾ ಕ್ರಾಂತಿ🡆 More