ವರದರಾಜ ಪೆರುಮಾಳ್ ದೇವಾಲಯ, ಕಾಂಚಿಪುರಂ

ವರದರಾಜ ಪೆರುಮಾಳ್ ಅಥವಾ 'ಹಸ್ತಗಿರಿ' ಅಥವಾ 'ಅತ್ತಿಯೂರನ್' ಎಂದು ಕರೆಸಿಕೊಳ್ಳುವ ಮಹಾ ವಿಷ್ಣುವಿನ ಈ ದೇವಾಲಯವಿರುವುದು ತಮಿಳುನಾಡಿನ ಪುರಾತನ ಹಾಗು ಧಾರ್ಮಿಕ ನಗರವಾದ ಕಾಂಚಿಪುರದಲ್ಲಿ.

ತಮಿಳುನಾಡಿನ ಭಕ್ತಿ ಪರಂಪರೆಯಲ್ಲಿ ಅಗ್ರ ಸ್ಥಾನ ಪಡೆದಿರುವ ವೈಷ್ಣವ ಪಂಥದ ೧೨ ಸಂತರು ಅಥವಾ ಆಳ್ವಾರರುಗಳು ಭೇಟಿ ಕೊಟ್ಟ ಮಹಾ ವಿಷ್ಣುವಿನ ೧೦೮ ದಿವ್ಯ ಕ್ಷೇತ್ರಗಳಲ್ಲಿ ಈ ವರದರಾಜ ಸ್ವಾಮಿಯ ಆಲಯವು ಒಂದಾಗಿದೆ. ಕಾಂಚಿಪುರದ ಉಪನಗರವಾದ ಸ್ಥಳದಲ್ಲಿ ಈ ಆಲಯವು ಸ್ಥಿತ್ಯವಾಗಿದೆ, ಹಾಗು ಇನ್ನಿತರ ಅನೇಕ ವಿಷ್ಣುವಿನ ದೇವಾಲಯಗಳು ಇಲ್ಲಿವೆ. ಆದರಿಂದ ಕಾಂಚಿನಗರದ ಈ ಭಾಗಕ್ಕೆ 'ವಿಷ್ಣು ಕಂಚಿ' ಎಂದೂ ಕರೆಯಲಾಗುತ್ತದೆ.ವೈಷ್ಣವ ಪಂಥದಲ್ಲಿ ವಿಶಿಷ್ಟಾದ್ವೆತ ಪ್ರವರ್ತಕರಾಗಿದ್ದ ಶ್ರೀ ರಾಮಾನುಜಾಚಾರ್ಯರು ಇಲ್ಲಿ ನೆಲೆಸಿದ್ದರು ಎನ್ನಲಾಗಿದೆ.

ಕಂಚಿಯ ಏಕಂಬರೇಶ್ವರ, ಕಾಮಾಕ್ಷಿ ದೇವಾಲಯಗಳು ಜನಜನಿತವಾಗಿರುವಂತೆಯೇ ವರದರಾಜ ಸ್ವಾಮಿಯ ಆಲಯವು ಪ್ರಸಿದ್ದಿಯಲ್ಲಿರುವುದರಿಂದ ಕಂಚಿಯನ್ನು 'ಮುಮೂರ್ತಿ ವಾಸಂ' ಎಂದು ತಮಿಳು ಸ್ಥಳೀಯ ಭಕ್ತರು ಸಂಭೋದಿಸುವುದುಂಟು. ತಮಿಳುನಾಡಿನ ಶ್ರೀರಂಗಂ ಹಾಗು ಕಂಚಿ ವರದರಾಜ, ಆಂಧ್ರಪ್ರದೇಶತಿರುಪತಿ ಹಾಗು ಕರ್ನಾಟಕದ ಮೇಲುಕೋಟೆ ಇವು ನಾಲ್ಕು ಸ್ಥಳಗಳು ವೈಷ್ಣವ ಮತದ ಪರಿಪಾಲಕರಿಗೆ ಅತಿ ಪವಿತ್ರ ಕ್ಷೇತ್ರಗಳಾಗಿವೆ. ಈ ನಾಲ್ಕು ಕ್ಷೇತ್ರಗಳ ದರ್ಶನದಿಂದ ಪರಮಪದ ಲಭ್ಯವಾಗುತ್ತದೆ ಎನ್ನುವುದು ವೈಷ್ಣವ ಪಂಥದ ಬಲವಾದ ನಂಬುಗೆ.


ವರದ ರಾಜ ಪೆರುಮಾಳ್ ದೇವಾಲಯದ ಚಿತ್ರ ಮಾಹಿತಿ

ಆಕರಗಳು

Tags:

🔥 Trending searches on Wiki ಕನ್ನಡ:

ವಿಜಯನಗರ ಸಾಮ್ರಾಜ್ಯಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಹಸ್ತ ಮೈಥುನಸಂಧಿಕನ್ನಡ ವಿಶ್ವವಿದ್ಯಾಲಯಮೇರಿ ಕ್ಯೂರಿತೀ. ನಂ. ಶ್ರೀಕಂಠಯ್ಯಭಾರತದ ಬುಡಕಟ್ಟು ಜನಾಂಗಗಳುಹಂಪೆರಾಯಲ್ ಚಾಲೆಂಜರ್ಸ್ ಬೆಂಗಳೂರುಮಂಗಳ (ಗ್ರಹ)ಪ್ರಜಾಪ್ರಭುತ್ವಭಾರತೀಯ ಶಾಸ್ತ್ರೀಯ ಸಂಗೀತಸಂಧ್ಯಾವಂದನ ಪೂರ್ಣಪಾಠಭಾರತದಲ್ಲಿ ಪಂಚಾಯತ್ ರಾಜ್ಜಿ.ಎಸ್. ಘುರ್ಯೆಗಣರಾಜ್ಯೋತ್ಸವ (ಭಾರತ)ರಾಜಾ ರವಿ ವರ್ಮಸರ್ವೆಪಲ್ಲಿ ರಾಧಾಕೃಷ್ಣನ್ಮಧ್ವಾಚಾರ್ಯಚೋಳ ವಂಶಮರಾಠಾ ಸಾಮ್ರಾಜ್ಯರಾಮಾನುಜಶಿಶುನಾಳ ಶರೀಫರುಕರ್ನಾಟಕ ಸರ್ಕಾರಬ್ರಾಹ್ಮಣಮಫ್ತಿ (ಚಲನಚಿತ್ರ)ಭಾರತದಲ್ಲಿನ ಚುನಾವಣೆಗಳುಕಂದದ್ರೌಪದಿ ಮುರ್ಮುಅರ್ಥ ವ್ಯತ್ಯಾಸಪ್ರಬಂಧಮತದಾನ (ಕಾದಂಬರಿ)ದೇವನೂರು ಮಹಾದೇವಕೇದರನಾಥ ದೇವಾಲಯಮಂತ್ರಾಲಯಅಲಂಕಾರಪ್ರವಾಸಿಗರ ತಾಣವಾದ ಕರ್ನಾಟಕಮಲ್ಲಿಕಾರ್ಜುನ್ ಖರ್ಗೆಭಾರತದ ಸ್ವಾತಂತ್ರ್ಯ ದಿನಾಚರಣೆಗೌತಮಿಪುತ್ರ ಶಾತಕರ್ಣಿಪಠ್ಯಪುಸ್ತಕರಾಧಿಕಾ ಕುಮಾರಸ್ವಾಮಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸಾಮಾಜಿಕ ಸಮಸ್ಯೆಗಳುಸಿ. ಎನ್. ಆರ್. ರಾವ್ಮಹಾಭಾರತಕನ್ನಡ ಸಾಹಿತ್ಯ ಪರಿಷತ್ತುವಂದೇ ಮಾತರಮ್ಗೋಲ ಗುಮ್ಮಟಕೃಷ್ಣಾ ನದಿಇಮ್ಮಡಿ ಪುಲಿಕೇಶಿಹಲ್ಮಿಡಿ ಶಾಸನಕೆ. ಎಸ್. ನರಸಿಂಹಸ್ವಾಮಿದಾಳಿಂಬೆವೈದಿಕ ಯುಗಕರ್ಬೂಜಸಿಂಧನೂರುಮಂಜುಳಕರ್ನಲ್‌ ಕಾಲಿನ್‌ ಮೆಕೆಂಜಿಸಮುದ್ರಗುಪ್ತಭಾರತದ ವಿಜ್ಞಾನಿಗಳುಸಾಹಿತ್ಯರಾಮ್ ಮೋಹನ್ ರಾಯ್ಚದುರಂಗ (ಆಟ)ರಾಮಾಯಣಭಾರತೀಯ ನದಿಗಳ ಪಟ್ಟಿಜೀವನ ಚೈತ್ರಶ್ರವಣಬೆಳಗೊಳಕರ್ನಾಟಕ ಲೋಕಸೇವಾ ಆಯೋಗಚಿಕ್ಕಮಗಳೂರುಮೈಗ್ರೇನ್‌ (ಅರೆತಲೆ ನೋವು)ಕೆಳದಿ ನಾಯಕರುಕರ್ನಾಟಕದ ಮುಖ್ಯಮಂತ್ರಿಗಳುಹಾವೇರಿಶ್ರೀಕೃಷ್ಣದೇವರಾಯಬಂಗಾರದ ಮನುಷ್ಯ (ಚಲನಚಿತ್ರ)ಕಬ್ಬು🡆 More