ರಮಾಕಾಂತ್ ಶುಕ್ಲಾ

ರಾಮಕಾಂತ್ ಶುಕ್ಲಾ ಅವರು ಸಂಸ್ಕೃತ ಮತ್ತು ಹಿಂದಿ ಭಾಷೆಗಳ ಭಾರತೀಯ ವಿದ್ವಾಂಸರಾಗಿದ್ದರು.

ಭಾರತ ಸರ್ಕಾರವು ೨೦೧೩ ರಲ್ಲಿ ಅವರಿಗೆ ಸಾಹಿತ್ಯ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರು ೧೧ ನೇ ಮೇ ೨೦೨೨ ರಂದು ದೆಹಲಿಯಿಂದ ಜಾರ್ಖಂಡ್ ರಾಜ್ಯಕ್ಕೆ ರೈಲಿನಲ್ಲಿ ಭಾರತದ ಹರಿ ನಗರ (ಅಲಿಗಢ) ಬಳಿ ಹೋಗುತ್ತಿರುವಾಗ ಇಹಲೋಕ ತ್ಯಜಿಸಿದರು.

ಜೀವನಚರಿತ್ರೆ

ರಾಮಕಾಂತ್ ಶುಕ್ಲಾ ಅವರು ೨೫ ಡಿಸೆಂಬರ್ ೧೯೪೦ ರಂದು ಭಾರತದ ಉತ್ತರ ಪ್ರದೇಶದ ಖುರ್ಜಾ ನಗರದಲ್ಲಿ ಜನಿಸಿದರು. ಅವರ ಆರಂಭಿಕ ಅಧ್ಯಯನಗಳು ಸಾಂಪ್ರದಾಯಿಕ ರೀತಿಯಲ್ಲಿ ಅವರು ತಮ್ಮ ಪೋಷಕರಿಂದ ಸಂಸ್ಕೃತವನ್ನು ಕಲಿತರು - ಸಾಹಿತ್ಯಾಚಾರ್ಯ ಪಂಡಿತ್ ಬ್ರಹ್ಮಾನಂದ ಶುಕ್ಲಾ ಮತ್ತು ಪ್ರಿಯಂವದಾ ಶುಕ್ಲಾ, ಮತ್ತು ಸಾಹಿತ್ಯ ಆಚಾರ್ಯ ಮತ್ತು ಸಾಂಖ್ಯ ಯೋಗ ಆಚಾರ್ಯ ಪದವಿಗಳನ್ನು ಪಡೆದರು. ನಂತರ, ಅವರು ಆಗ್ರಾ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು ಮತ್ತು ಚಿನ್ನದ ಪದಕದೊಂದಿಗೆ ಹಿಂದಿಯಲ್ಲಿ ಎಂಎ ಮಾಡಿದರು. ನಂತರ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂಎ ಮಾಡಿದರು. ೧೯೬೭ ರಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆದರು. ಅವರ ಪಿಎಚ್‌ಡಿ ವಿಷಯವೆಂದರೆ 'ಜೈನಾಚಾರ್ಯ ರವಿಷೇಣ- ಕೃತ ಪದ್ಮಪುರಾಣ (ಸಂಸ್ಕೃತ) ಏವಂ ತುಳಸಿದಾಸ ಕೃತ ರಾಮಚರಿತಮಾನಸ್ ಕಾ ತುಳನಾತ್ಮಕ ಅಧ್ಯಾಯಯನ್.

ಶುಕ್ಲಾ ಅವರು ೧೯೬೨ ರಲ್ಲಿ ಮೋದಿ ನಗರದಲ್ಲಿರುವ ಮುಲ್ತಾನಿಮಲ್ ಮೋದಿ ಪಿಜಿ ಕಾಲೇಜಿಗೆ ಹಿಂದಿ ಉಪನ್ಯಾಸಕರಾಗಿ ಸೇರುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪಿಎಚ್‌ಡಿ ಪಡೆದ ನಂತರ, ಅವರು ೧ ಆಗಸ್ಟ್ ೧೯೬೭ ರಂದು ದೆಹಲಿಯ ರಾಜಧಾನಿ ಕಾಲೇಜ್ ದೆಹಲಿ ವಿಶ್ವವಿದ್ಯಾಲಯಕ್ಕೆ ಹಿಂದಿ ಅಧ್ಯಾಪಕ ಸದಸ್ಯರಾಗಿ ಸೇರಿದರು. ೧೯೮೬ ರಲ್ಲಿ, ಅವರು ಹಿಂದಿ ವಿಭಾಗದ ರೀಡರ್ ಆಗಿ ನೇಮಕಗೊಂಡರು ಮತ್ತು ೨೦೦೫ ರಲ್ಲಿ ನಿವೃತ್ತರಾಗುವವರೆಗೂ ಅಲ್ಲಿ ಕೆಲಸ ಮಾಡಿದರು. ಅವರು ವಿಶ್ವ ಸಂಸ್ಕೃತ ಸಮ್ಮೇಳನ ಸೇರಿದಂತೆ ಅನೇಕ ಸೆಮಿನಾರ್‌ಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಭಾರತೀಯ ಸೌಂದರ್ಯಶಾಸ್ತ್ರ ಮತ್ತು ಕಾವ್ಯ ಮತ್ತು ಸಂಸ್ಕೃತ ಸಾಹಿತ್ಯದ ಮೇಲಿನ ಅಖಿಲ ಭಾರತ ಪ್ರಾಚ್ಯವಸ್ತು ಸಮ್ಮೇಳನಗಳ ಅಧ್ಯಕ್ಷರಾಗಿದ್ದರು. ದೆಹಲಿಯಿಂದ ಪ್ರಕಟಿಸಲಾದ ತ್ರೈಮಾಸಿಕ ಜರ್ನಲ್ ಅರ್ವಾಚೀನ-ಸಂಸ್ಕೃತಂನ ಸಂಸ್ಥಾಪಕ ಮುಖ್ಯ ಸಂಪಾದಕರಾಗಿದ್ದರು. ಅವರು ಸಂಸ್ಕೃತ ಭಾಷೆಯನ್ನು ಪ್ರತಿನಿಧಿಸುವ ಆಲ್ ಇಂಡಿಯಾ ರೇಡಿಯೋ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ಪುಸ್ತಕಗಳು

ಶುಕ್ಲಾ ಅವರು ಸಂಸ್ಕೃತ ಮತ್ತು ಹಿಂದಿಯಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಅವರು ದೂರದರ್ಶನದಿಂದ ಪ್ರಸಾರವಾದ ಭಾತಿ ಮೇ ಭಾರತಂ ಎಂಬ ಸಂಸ್ಕೃತ ದೂರದರ್ಶನ ಸರಣಿಯನ್ನು ಬರೆದು ನಿರ್ದೇಶಿಸಿದ್ದಾರೆ.

  • Dr. Rama Kant Shukla (1993). Devavani-suvasah - Dr. Rama Kant Shukla felicitation volume. Devavani-Prakasanam. ISBN 978-8190030854.
  • Dr. Rama Kant Shukla (1979). Arvācīnasaṃskr̥tam. New Delhi: Devavāṇī-Pariṣad. LCCN 81910313.
  • Dr. Rama Kant Shukla (1980). Bhāti me Bhāratam. New Delhi: Devavāṇī-Pariṣad. LCCN 83906451.
  • Dr. Rama Kant Shukla (2000). Sārasvata-saṅgama. New Delhi: Jñānabhāratī Pablikeśansa. LCCN 99956208.
  • Rama Kant Shukla (2000). Sanskrit poet and scholar Rama Kant Shukla reads from his works. New Delhi: South Asian Literary Recordings Project (Library of Congress). OCLC 47738659.
  • Dr. Rama Kant Shukla (2002). "Bharatajnataham". Vedic Books. Retrieved 27 October 2014.

ಶುಕ್ಲಾ ಅವರು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಲ್ಲಿ ಶಾಸ್ತ್ರ ಚೂಡಾಮಣಿ ವಿದ್ವಾನ್ ಆಗಿ ತಮ್ಮ ಕರ್ತವ್ಯಗಳಿಗೆ ಹಾಜರಾಗಲು ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

ಪ್ರಶಸ್ತಿಗಳು ಮತ್ತು ಮನ್ನಣೆಗಳು

ರಮಾ ಕಾಂತ್ ಶುಕ್ಲಾ ಅವರು ವಿವಿಧ ಸಾಹಿತ್ಯ ಸಂಸ್ಥೆಗಳಿಂದ ಸಂಸ್ಕೃತ ರಾಷ್ಟ್ರಕವಿ, ಕವಿರತ್ನ, ಕವಿ ಸಿರೋಮಣಿ ಮತ್ತು ಹಿಂದಿ ಸಂಸ್ಕೃತ ಸೇತು ಬಿರುದುಗಳನ್ನು ಪಡೆದಿದ್ದಾರೆ. ಅವರಿಗೆ ಕಾಳಿದಾಸ್ ಸಮ್ಮಾನ್, ಸಂಸ್ಕೃತ ಸಾಹಿತ್ಯ ಸೇವಾ ಸಮ್ಮಾನ್ ಮತ್ತು ಸಂಸ್ಕೃತ ರಾಷ್ಟ್ರಕವಿ ಮುಂತಾದ ಬಿರುದುಗಳನ್ನು ಸಹ ನೀಡಲಾಗಿದೆ.

ಉತ್ತರ ಪ್ರದೇಶ ಸರ್ಕಾರವು ಡಾ. ಶುಕ್ಲಾ ಅವರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ, ಅವರು ದೆಹಲಿ ಸಂಸ್ಕೃತ ಅಕಾಡೆಮಿಯಿಂದ ಅಖಿಲ ಭಾರತೀಯ ಮೌಲಿಕ ಸಂಸ್ಕೃತ ರಚನಾ ಪುರಸ್ಕಾರವನ್ನು ಸಹ ಪಡೆದಿದ್ದಾರೆ. ಭಾರತದ ರಾಷ್ಟ್ರಪತಿಗಳು ಅವರಿಗೆ ೨೦೦೯ ರಲ್ಲಿ ಸಂಸ್ಕೃತ ವಿದ್ವಾಂಸ ಪ್ರಶಸ್ತಿಯನ್ನು ನೀಡಿದರು ಭಾರತ ಸರ್ಕಾರವು ೨೦೧೩ ರಲ್ಲಿ ಪದ್ಮಶ್ರೀ ನಾಗರಿಕ ಪ್ರಶಸ್ತಿ ನೀಡಿದರು. ಇವರು ಭಾರತೀಯ ಸಂಸ್ಕೃತ ಪ್ರಾಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು.

ರಾಮಕಾಂತ್ ಶುಕ್ಲಾ ಅವರಿಗೆ ೨೦೧೮ ರಲ್ಲಿ ಮಾಮಾ ಜನನಿಗಾಗಿ ಸಂಸ್ಕೃತದಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ರಮಾಕಾಂತ್ ಶುಕ್ಲಾ ಜೀವನಚರಿತ್ರೆರಮಾಕಾಂತ್ ಶುಕ್ಲಾ ಪುಸ್ತಕಗಳುರಮಾಕಾಂತ್ ಶುಕ್ಲಾ ಪ್ರಶಸ್ತಿಗಳು ಮತ್ತು ಮನ್ನಣೆಗಳುರಮಾಕಾಂತ್ ಶುಕ್ಲಾ ಉಲ್ಲೇಖಗಳುರಮಾಕಾಂತ್ ಶುಕ್ಲಾ ಬಾಹ್ಯ ಕೊಂಡಿಗಳುರಮಾಕಾಂತ್ ಶುಕ್ಲಾಪದ್ಮಶ್ರೀಭಾರತ ಸರ್ಕಾರಸಂಸ್ಕೃತಹಿಂದಿ

🔥 Trending searches on Wiki ಕನ್ನಡ:

ದೇವರ/ಜೇಡರ ದಾಸಿಮಯ್ಯತತ್ತ್ವಶಾಸ್ತ್ರಮೀರಾಬಾಯಿಪಾರ್ವತಿಸ್ತ್ರೀಮಡಿವಾಳ ಮಾಚಿದೇವಭೂಶಾಖದ ಶಕ್ತಿಭೂಕಂಪಪ್ಯಾರಾಸಿಟಮಾಲ್ಸೂರ್ಯವ್ಯೂಹದ ಗ್ರಹಗಳುಜೋಗಿ (ಚಲನಚಿತ್ರ)ಭಾರತೀಯ ಸಂಸ್ಕೃತಿಸಮುಚ್ಚಯ ಪದಗಳುಸವದತ್ತಿಗುಪ್ತಗಾಮಿನಿ (ಧಾರಾವಾಹಿ)ಧೀರೂಭಾಯಿ ಅಂಬಾನಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಹಾಸನ ಜಿಲ್ಲೆಚಿನ್ನಕೋಲಾರಮಹೇಂದ್ರ ಸಿಂಗ್ ಧೋನಿಕೃಷ್ಣರಾಜಸಾಗರಹುಡುಗಿಸಾರ್ವಜನಿಕ ಆಡಳಿತರಾಮ ಮಂದಿರ, ಅಯೋಧ್ಯೆಅವಲೋಕನನೈಸರ್ಗಿಕ ವಿಕೋಪಏಡ್ಸ್ ರೋಗಗಾದೆವೇದಗೃಹರಕ್ಷಕ ದಳಗುರುರಾಜ ಕರಜಗಿಗೋವಿಂದ ಪೈಪುರಾಣಗಳುಸೂರ್ಯ (ದೇವ)ಸಂತಾನೋತ್ಪತ್ತಿಯ ವ್ಯವಸ್ಥೆಕಾದಂಬರಿಪುರಾತತ್ತ್ವ ಶಾಸ್ತ್ರಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ನಾಯಕತ್ವಭಾರತದ ರಾಷ್ಟ್ರೀಯ ಉದ್ಯಾನಗಳುಹಿಂದೂ ಧರ್ಮಹದಿಬದೆಯ ಧರ್ಮಶಿವರಾಮ ಕಾರಂತಜೀವನಚರಿತ್ರೆಡಿ.ವಿ.ಗುಂಡಪ್ಪಹಣ್ಣುಆಯುರ್ವೇದಕರ್ನಾಟಕ ಸಂಗೀತವಾಲಿಬಾಲ್ಜಾತ್ರೆಹೊನೊಲುಲುಭಾರತದ ಮುಖ್ಯ ನ್ಯಾಯಾಧೀಶರುಪಂಜಾಬ್ರಮ್ಯಾಹಲ್ಮಿಡಿ ಶಾಸನಸಾವಿತ್ರಿಬಾಯಿ ಫುಲೆದುಂಬಿಕನ್ನಡ ಸಂಧಿಕರ್ನಾಟಕ ವಿಧಾನ ಪರಿಷತ್ಅಸಹಕಾರ ಚಳುವಳಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕರಗಐಹೊಳೆಇಸ್ಲಾಂಕನ್ನಡ ಛಂದಸ್ಸುಚಂಪೂಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಶಿಶುನಾಳ ಶರೀಫರುಸರ್ಪ ಸುತ್ತುಆರ್ಯಭಟ (ಗಣಿತಜ್ಞ)ಜೀವಕೋಶಅಕ್ಟೋಬರ್ರಾಮಾಚಾರಿ (ಕನ್ನಡ ಧಾರಾವಾಹಿ)ಕನ್ನಡದಲ್ಲಿ ಕಾದಂಬರಿ ಸಾಹಿತ್ಯರಂಗಭೂಮಿರಾಮಾಯಣ🡆 More