ಬೆಜವಾಡ ವಿಲ್ಸನ್

ಬೆಜವಾಡ ವಿಲ್ಸನ್ ಶೋಷಿತ ಸಮುದಾಯಗಳ ನಡುವೆ ಹುಟ್ಟಿ ಅವರ ಮಾನವ ಹಕ್ಕುಗಳ ಪರವಾಗಿ ಹೋರಾಡುತ್ತಿದ್ದಾರೆ.

ಬೆಜವಾಡ ವಿಲ್ಸನ್ ಶೋಷಿತರ ಮಾನವ ಹಕ್ಕು, ಜೀವಿಸುವ ಹಕ್ಕಿನ ಬಗ್ಗೆ ಜೀವನ ಪೂರ್ತಿ ಶ್ರಮಿಸುತ್ತಿರುವ ಚೇತನ. ಶೋಷಿತರ ಪರ ಅವರ ಹೋರಾಟಕ್ಕೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿದೆ.

ಕೀಳು ವೃತ್ತಿ ವಿರುದ್ಧ ಹೋರಾಟ

  • ತೋಟಿ' ಎಂಬ ಪೌರಕಾರ್ಮಿಕ ಸಮುದಾಯದಲ್ಲಿ ಹುಟ್ಟಿ ಶಾಲೆಯಲ್ಲೂ "ತೋಟಿ" ಎಂಬ ಹಂಗಿನ ನುಡಿ ತಿಂದು ಶಾಲೆ ಕಲಿತು ಎಂಪ್ಲಾಯ್ ಮೆಂಟ್ ಎಕ್ಸ್ ಚೇಂಜ್ ಗೆ ಹೋದಾಗ ಅಲ್ಲಿಯೂ ಕೂಡ ಸಿಬ್ಬಂದಿ ಇವರ ಜಾತಿ ನೋಡಿ ಉದ್ಯೋಗ ಕಾಲಂನಲ್ಲಿ "ಸ್ಕ್ಯಾವೆಂಜರ್" ಹುದ್ದೆಗೆ ಎಂದು ಅರ್ಜಿ ಭರ್ತಿಮಾಡಿಕೊಳ್ಳುತ್ತಾರೆ. ಇಂತಹ ಅಪಮಾನಗಳೇ ವಿಲ್ಸನ್‍ರನ್ನು ಈ ಕೀಳು ವೃತ್ತಿ ವಿರುದ್ಧ ಹೋರಾಡಲು ಪ್ರೇರೇಪಿಸಿತು.
  • 1993ರಲ್ಲಿ ಈ ಸಂಬಂಧ ಜನಪ್ರತಿನಿಧಿಗಳಿಗೆ ಪತ್ರ ಬರೆಯುವ ಹೋರಾಟ ಆರಂಭಿಸಿದ ವಿಲ್ಸನ್ 1993 ಸಂಸತ್ತು ಇದರ ವಿರುದ್ಧ ಅಂದರೆ ತಲೆಮೇಲೆ ಮಲಹೊರುವ ಪದ್ದತಿ ವಿರುದ್ಧ ಮಸೂದೆ ರೂಪಿಸಿ ನಿಷೇಧ ಹೇರುವಲ್ಲಿ ಮಹತ್ವದ ಭೂಮಿಕೆ ನಿಭಾಯಿಸಿದರು. 1993ರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಂಕರನ್ ಮತ್ತು ಪಾಲ್ ದಿವಾಕರ್ ರವರ ಜೊತೆಗೂಡಿ "ಸಫಾಯಿ ಕರ್ಮಚಾರಿ ಆಂದೋಲನ" ಸ್ಥಾಪಿಸಿದರು.
  • ವಿಲ್ಸನ್ 2003 ರಲ್ಲಿ ಈ ಸಂಬಂಧ ರಾಜ್ಯಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡ ಸಲ್ಲಿಸಿದರು. ಪರಿಣಾಮ ಎಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಹಾಜರಾಗುವಂತೆ ನೋಟೀಸ್ ನೀಡಿದ ಕೋರ್ಟ್ ತಲೆಮೇಲೆ ಮಲಹೊರುವ ಪದ್ಧತಿ ನಿಷೇಧಿಸಿರುವ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ತಾಕೀತು ಮಾಡಿತು.
  • ಪರಿಣಾಮ ಎಲ್ಲಾ ರಾಜ್ಯಗಳು ಇದನ್ನು ಪರಿಗಣಿಸಿ ತಲೆ ಮೇಲೆ ಮಲ ಹೊರುವ ಪದ್ಧತಿ ಯನ್ನು ತಮ್ಮ ರಾಜ್ಯಗಳಲ್ಲಿ ಸಂಪೂರ್ಣ ನಿಷೇಧಿಸುವಲ್ಲಿ ಕ್ರಮಕೈಗೊಂಡವು. ಅಂದಹಾಗೆ ಇಷ್ಟಕ್ಕೆ ಸುಮ್ಮನೆ ಕೂರದ ವಿಲ್ಸನ್ ತಲೆ ಮೇಲೆ ಮಲಹೊರುವ ನಿಷೇಧದ ಅನುಷ್ಠಾನಕ್ಕೆ ಕಾನೂನು ಹೋರಾಟವನ್ನು ಕೂಡ ವಿವಿಧ ರಾಜ್ಯಗಳ ವಿರುದ್ಧ ಕೈಗೆತ್ತಿಕೊಂಡಿತು.
  • ಇದರ ಫಲವಾಗಿ ಶೋಷಿತ ಸಮುದಾಯಗಳ ಜನರನ್ನು ಮಲ ಹೊರಲು ಬಳಸಿಕೊಂಡ ಆರೋಪದ ಮೇಲೆ ಅನೇಕ ಕಡೆ ಬಂಧನವೂ ಕೂಡ ನಡೆಯಿತು. ಈ ನಿಟ್ಟಿನಲ್ಲಿ 2010 ರ 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ತಲೆ ಮೇಲೆ ಹೊರುವ ಪದ್ದತಿ ನಿಷೇಧ ಆದ್ಯತೆ ಪಡೆಯಿತು ಮತ್ತು 2012 ರಲ್ಲಿ ಅಂದಿನ ಯುಪಿಎ ಸರ್ಕಾರ ಇದರ ಬಗ್ಗೆ ಒಂದು ವಿಶೇಷ ಕಾರ್ಯಪಡೆಯನ್ನು ಕೂಡ ನೇಮಿಸಿ ನಿರ್ಮೂಲನೆಗೆ ಕ್ರಮಕೈಗೊಂಡಿತು.
  • ಈ ಸಂಬಂಧ ವಿಶೇಷ ಗುಂಪೊಂದನ್ನು ನೇಮಿಸಿದ ಯೋಜನಾ ಆಯೋಗ ಬೆಜವಾಡ ವಿಲ್ಸನ್ ರಿಗೆ ಅದರ ನೇತೃತ್ವ ವಹಿಸಿ ಅದರ ಮೂಲಕ ಪೌರಕಾರ್ಮಿಕರ ಪುನರ್ವಸತಿ, ಅವರನ್ನು ಆ ವೃತ್ತಿಯಿಂದ ಬಿಡಿಸುವುದು, ನೀಡಬೇಕಾದ ಪರಿಹಾರ ಇದರ ಬಗ್ಗೆ ಸಮಗ್ರ ವರದಿ ತಯಾರಿಸಿತು. ಖುಷಿಯ ವಿಚಾರವೆಂದರೆ ಬೆಜವಾಡ ವಿಲ್ಸನ್ ರ ಈ ಸಾಧನೆಗೆ ಈ ಬಾರಿಯ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿರುವುದು.
  • ಈ ಬಗ್ಗೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಸಮಿತಿ ಅಭಿಪ್ರಾಯ ಇಲ್ಲಿ ದಾಖಲಿಸುವುದಾದರೆ "ಬೆಜವಾಡ ವಿಲ್ಸನ್‍ರನ್ನು, 2016, ರ ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ಸಮಿತಿ ಗುರುತಿಸಿದ್ದು ದಲಿತರಿಗೆ ಮಾನವ ಘನತೆ ಮರುಕಲ್ಪಿಸಿಕೊಡುವ ನಿಟ್ಟಿನಲ್ಲಿ ಭಾರತದಲ್ಲಿ ಅಸ್ತಿತ್ವದಲ್ಲಿರುವ ಕೀಳು ಮಟ್ಟದ ದಾಸ್ಯವಾದ " ಮನುಷ್ಯರನ್ನು ಬಳಸಿ ಜಾಡಮಾಲಿ ಕೆಲಸ ಮಾಡಿಸುವ" ಪದ್ಧತಿ ವಿರುದ್ಧ ಹೋರಾಡುವ ದಿಸೆಯಲ್ಲಿ ವಿಲ್ಸನ್ ರು ರೂಪಿಸಿದ ತಳಮಟ್ಟದ ಹೋರಾಟ. ಈ ಸಂಬಂಧ ಅವರ ನೈತಿಕ ಸ್ಥೈರ್ಯ, ಅಗಾಧವಾದ ಕೌಶಲ". ಖಂಡಿತ, ಪ್ರಶಸ್ತಿಗೆ ಅರ್ಹ ಆಗಬೇಕಾದ್ದೆ ಇಂತಹ ಕಳಕಳಿಯ ತಳಮಟ್ಟದ, ತಳ ‌ಮಟ್ಟದ ಜನೆರೆಡೆಗಿನ ಹೋರಾಟಗಳು.

ಪ್ರಶಸ್ತಿ/ಗೌರವ

  1. ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ -೨೦೧೭

ಉಲ್ಲೇಖ

Tags:

🔥 Trending searches on Wiki ಕನ್ನಡ:

ಆದಿ ಗೋದ್ರೇಜ್ಸಾರಾ ಅಬೂಬಕ್ಕರ್ಭ್ರಷ್ಟಾಚಾರಗೋಲ ಗುಮ್ಮಟಜಯಚಾಮರಾಜ ಒಡೆಯರ್ಅಥಣಿ ಮುರುಘೕಂದ್ರ ಶಿವಯೋಗಿಗಳುತ್ರಿಪದಿಕೋವಿಡ್-೧೯ಕರ್ನಾಟಕದ ಜಿಲ್ಲೆಗಳುವಿರೂಪಾಕ್ಷ ದೇವಾಲಯಭಾರತದಲ್ಲಿನ ಚುನಾವಣೆಗಳುಪ್ರಜಾವಾಣಿಲಾವಂಚವ್ಯವಸಾಯಜೀವವೈವಿಧ್ಯವಿನಾಯಕ ಕೃಷ್ಣ ಗೋಕಾಕಅರವಿಂದ ಘೋಷ್ಹುಲಿಋತುವ್ಯಾಕ್ಸಿನೇಷನ್ (ಲಸಿಕೆ ಹಾಕುವುದು)ಬಡತನಮಾನವ ಸಂಪನ್ಮೂಲಗಳುಅನುಭವ ಮಂಟಪನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಜೋಗಹೊಂಗೆ ಮರಕೆ. ಎಸ್. ನರಸಿಂಹಸ್ವಾಮಿಕರ್ನಾಟಕ ಹೈ ಕೋರ್ಟ್ಕರ್ನಾಟಕದ ಅಣೆಕಟ್ಟುಗಳುಮಾನವ ಹಕ್ಕುಗಳುಸಿಂಧೂತಟದ ನಾಗರೀಕತೆಎಲಾನ್ ಮಸ್ಕ್ದಲಿತಭಾಷಾಂತರಉರ್ಜಿತ್ ಪಟೇಲ್ಗುರುರಾಜ ಕರಜಗಿಶ್ರೀರಂಗಪಟ್ಟಣಗುಪ್ತ ಸಾಮ್ರಾಜ್ಯಭಾರತದಲ್ಲಿ ಮೀಸಲಾತಿನೇಮಿಚಂದ್ರ (ಲೇಖಕಿ)ಯುಗಾದಿಕರಗಯೋಗ ಮತ್ತು ಅಧ್ಯಾತ್ಮಸವರ್ಣದೀರ್ಘ ಸಂಧಿಊಳಿಗಮಾನ ಪದ್ಧತಿತೆಲುಗುಜ್ಞಾನಪೀಠ ಪ್ರಶಸ್ತಿಯೂಟ್ಯೂಬ್‌ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಲಡಾಖ್ಕರ್ನಾಟಕ ಸ್ವಾತಂತ್ರ್ಯ ಚಳವಳಿಕ್ರಿಯಾಪದಮಲಬದ್ಧತೆವರ್ಗೀಯ ವ್ಯಂಜನಬಾಲ ಗಂಗಾಧರ ತಿಲಕಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಟಿಪ್ಪು ಸುಲ್ತಾನ್ವ್ಯಾಸರಾಯರುಉತ್ತರ ಕನ್ನಡಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಚರ್ಚ್ಭಾರತೀಯ ಸಂಸ್ಕೃತಿಆಮ್ಲಗಳು ಮತ್ತು ಪ್ರತ್ಯಾಮ್ಲಗಳುವಚನಕಾರರ ಅಂಕಿತ ನಾಮಗಳುಮಂಡ್ಯಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಮಾಜ ವಿಜ್ಞಾನಭಾರತದ ರಾಷ್ಟ್ರಗೀತೆಮಹೇಂದ್ರ ಸಿಂಗ್ ಧೋನಿ೧೮೬೨ವಿನೋಬಾ ಭಾವೆಪ್ಯಾರಾಸಿಟಮಾಲ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಬಿ.ಜಯಶ್ರೀಅಸಹಕಾರ ಚಳುವಳಿಮಾರುಕಟ್ಟೆ🡆 More