ಬಿ.ಟಿ.ಎಮ್. ಲೇಔಟ್ ವಿಧಾನಸಭಾ ಕ್ಷೇತ್ರ

ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರ (ಕ್ಷೇತ್ರ ಸಂಖ್ಯೆ-೧೭೨) ಬೆಂಗಳೂರು ನಗರ ಜಿಲ್ಲೆಗೆ ಸೇರಿರುವ, ೨೮ ಕ್ಷೇತ್ರಗಳಲ್ಲಿ ಒಂದು.

ಈ ಕ್ಷೇತ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಭಾಗವೂ ಹೌದು. ಬೊಮ್ಮನಹಳ್ಳಿ, ಜಯನಗರ, ಚಿಕ್ಕಪೇಟೆ ಮತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರಗಳು ಬಿಟಿಎಮ್ ಲೇಔಟ್ ಕ್ಷೇತ್ರದ ಸುತ್ತಲೂ ಇರುವ ಇತರ ಕ್ಷೇತ್ರಗಳು.

ಬಿ.ಟಿ.ಎಮ್. ಲೇಔಟ್ ವಿಧಾನಸಭಾ ಕ್ಷೇತ್ರ
ಬೆಂಗಳೂರು ನಗರ ಜಿಲ್ಲೆಯ ನಕ್ಷೆ. ಬಿಟಿಎಮ್ ಲೇಔಟ್ ಕ್ಷೇತ್ರ ಕೆಂಪು ಬಣ್ಣದಲ್ಲಿದೆ.

ಕ್ಷೇತ್ರದ ವಿಶೇಷತೆ

ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು ೨೦೦೮ರಲ್ಲಿ. ಈ ಕ್ಷೇತ್ರದ ಹೆಸರಿನಲ್ಲಿ ೩ ಊರುಗಳ ಹೆಸರಿದೆ. ಅವು- ಬೈರಸಂಧ್ರ, ತಾವರೆಕೆರೆ ಮತ್ತು ಮಡಿವಾಳ. ೨೦೦೮ರಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಆಗುವ ಮುನ್ನ ಈ ಕ್ಷೇತ್ರ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತು. ಕ್ಷೇತ್ರದ ವಿಭಜನೆಯ ನಂತರ ತನ್ನ ವ್ಯಾಪ್ತಿಯಲ್ಲಿದ್ದ ಜಕ್ಕಸಂದ್ರ, ಇಜಿಪುರ, ಕೋರಮಂಗಲ ಸೇರಿದಂತೆ ಜಯನಗರ ಕ್ಷೇತ್ರದಲ್ಲಿದ್ದ ಲಕ್ಕಸಂದ್ರ ಸುದ್ದಗುಂಟೆಪಾಳ್ಯ ಮತ್ತು ಮಡಿವಾಳ ಪ್ರದೇಶಗಳು ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಆಗಿ ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಆದರೆ ತನ್ನ ಹೆಸರಿನ ಮೊದಲಿಗೆ ಇದ್ದ ಬೈರಸಂದ್ರ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಆಯಿತು.

ಪ್ರಸ್ತುತ, ಬೃಹತ್ ಬೆಂಗಳೂರು ನಗರಪಾಲಿಕೆಯ ೮ ವಾರ್ಡುಗಳು-ಕಲ್ಲಸಂದ್ರ, ಆಡುಗೋಡಿ, ಈಜಿಪುರ, ಕೋರಮಂಗಲ, ಸುದ್ದಗುಂಟೆಪಾಳ್ಯ, ಮಡಿವಾಳ, ಜಕ್ಕಸಂದ್ರ ಮತ್ತು ಬಿಟಿಎಮ್ ಲೇಔಟ್- ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ.

ಚುನಾವಣಾ ಇತಿಹಾಸ

ಈ ಕ್ಷೇತ್ರಕ್ಕೆ ಮೊದಲ ಬಾರಿಗೆ ಚುನಾವಣೆ ನಡೆದದ್ದು ೨೦೦೮ರಲ್ಲಿ. ಅಂದಿನಿಂದ ಒಟ್ಟು ೪ ಬಾರಿ (೨೦೦೮, ೨೦೧೩, ೨೦೧೮, ೨೦೨೩) ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಮಲಿಂಗಾರೆಡ್ಡಿ ಅವರೇ ಗೆಲುವು ಸಾಧಿಸುತ್ತಿದ್ದಾರೆ. ೨೦೦೮ರ ಪ್ರಥಮ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಜಿ ಪ್ರಸಾದ್ ರೆಡ್ಡಿ ವಿರುದ್ಧ ರಾಮಲಿಂಗಾ ರೆಡ್ಡಿ ೧೮೫೭ ಮತಗಳ ಅಂತರದಲ್ಲಿ ಜಯಗಳಿಸಿದ್ದರು. ಅಂದು ಪ್ರಸಾದ್ ರೆಡ್ಡಿ ೪೪,೯೪೯ ಮತಗಳನ್ನು ಪಡೆದಿದ್ದರೆ, ರಾಮಲಿಂಗಾರೆಡ್ಡಿ ೪೬,೮೦೫ ಮತಗಳನ್ನು ಪಡೆದಿದ್ದರು.

ಇನ್ನು, ೨೦೧೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸುಧಾಕರ್ ಅವರ ವಿರುದ್ಧ ಜಯಗಳಿಸಿದರು. ಅಂದಿನ ಚುನಾವಣೆಯಲ್ಲಿ ಸುಧಾಕರ್ ೨೦,೬೬೪ ಮತಗಳನ್ನು ಪಡೆದರೆ, ರಾಮಲಿಂಗಾ ರೆಡ್ಡಿ ಅವರು ೬೯,೭೧೨ ಮತಗಳನ್ನು ಪಡೆದಿದ್ದರು.

೨೦೧೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎದುರಾಳಿ, ಬಿಜೆಪಿ ಪಕ್ಷದ ಲಲ್ಲೇಶ್ ರೆಡ್ಡಿ ೪೬,೬೦೭ ಮತಗಳನ್ನು ಪಡೆದರೆ , ರಾಮಲಿಂಗಾರೆಡ್ಡಿ ೬೭,೦೮೫ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.

ಮತದಾರರು

ಅಂಕಿ ಅಂಶ

ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ವಲಸಿಗರ ಮತಗಳು ನಿರ್ಣಾಯಕವಾಗಿವೆ ಎನ್ನಬಹುದು. ಉತ್ತರ ಭಾರತೀಯರು, ಮಲಯಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಒಟ್ಟು ಮತದಾರರ ಸಂಖ್ಯೆ ೨,೭೫,೦೨೮

  • ಪುರುಷ ಮತದಾರರು-೧,೪೩,೨೬೬
  • ಮಹಿಳಾ ಮತದಾರರು-೧,೩೧,೭೧೭
  • ತೃತೀಯ ಲಿಂಗಿಗಳು- ೪೫

ಜಾತಿವಾರು ಲೆಕ್ಕಾಚಾರ

ರೆಡ್ಡಿ ಮತ್ತು ತಿಗಳ ಸಮುದಾಯದ ಮತಗಳು ನಿರ್ಣಾಯಕ ಎಣಿಸುವ ಈ ಕ್ಷೇತ್ರದಲ್ಲಿ ಒಕ್ಕಲಿಗರು ೭೦,೦೦೦ ಇದ್ದರೆ, ಕ್ರಿಶ್ಚಿಯನ್ ಮತ್ತು ಮುಸ್ಲಿಮರು ೫೫,೦೦೦ದಷ್ಟು ಇದ್ದಾರೆ.

ಉಲ್ಲೇಖಗಳು

Tags:

ಬಿ.ಟಿ.ಎಮ್. ಲೇಔಟ್ ವಿಧಾನಸಭಾ ಕ್ಷೇತ್ರ ಕ್ಷೇತ್ರದ ವಿಶೇಷತೆಬಿ.ಟಿ.ಎಮ್. ಲೇಔಟ್ ವಿಧಾನಸಭಾ ಕ್ಷೇತ್ರ ಚುನಾವಣಾ ಇತಿಹಾಸಬಿ.ಟಿ.ಎಮ್. ಲೇಔಟ್ ವಿಧಾನಸಭಾ ಕ್ಷೇತ್ರ ಮತದಾರರುಬಿ.ಟಿ.ಎಮ್. ಲೇಔಟ್ ವಿಧಾನಸಭಾ ಕ್ಷೇತ್ರ ಉಲ್ಲೇಖಗಳುಬಿ.ಟಿ.ಎಮ್. ಲೇಔಟ್ ವಿಧಾನಸಭಾ ಕ್ಷೇತ್ರಬೆಂಗಳೂರು ನಗರ ಜಿಲ್ಲೆ

🔥 Trending searches on Wiki ಕನ್ನಡ:

ಸಂವತ್ಸರಗಳುಸಾವಿತ್ರಿಬಾಯಿ ಫುಲೆಮುಖ್ಯ ಪುಟಪರಿಸರ ವ್ಯವಸ್ಥೆಚಂದ್ರಗುಪ್ತ ಮೌರ್ಯಭಾರತೀಯ ಸ್ಟೇಟ್ ಬ್ಯಾಂಕ್ಜರ್ಮೇನಿಯಮ್ಜಾತಿಯೋನಿಕೃಷ್ಣದೇವರಾಯಕೊರೋನಾವೈರಸ್ಮಂಗಳಮುಖಿಜೋಗಿ (ಚಲನಚಿತ್ರ)ಸಮಾಜಶಾಸ್ತ್ರನೀರಾವರಿಜೋಳವಿಶ್ವ ರಂಗಭೂಮಿ ದಿನದುಗ್ಧರಸ ಗ್ರಂಥಿ (Lymph Node)ಎರಡನೇ ಮಹಾಯುದ್ಧಸಮಸ್ಥಾನಿಕುರುಬಮಯೂರವರ್ಮಗ್ರೀಸ್ತತ್ಪುರುಷ ಸಮಾಸದುರ್ವಿನೀತಹಿಂದುಸ್ತಾನಿ ಶಾಸ್ತ್ರೀಯ ಸಂಗೀತಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆದ.ರಾ.ಬೇಂದ್ರೆದಾಸ ಸಾಹಿತ್ಯಕ್ರಿಕೆಟ್ಕರ್ಣಾಟ ಭಾರತ ಕಥಾಮಂಜರಿಕಾದಂಬರಿಕರಗಏಲಕ್ಕಿಮತದಾನಮಾನ್ಸೂನ್ವಾಣಿಜ್ಯ ಪತ್ರನಿರುದ್ಯೋಗಭಾರತದಲ್ಲಿ ಮೀಸಲಾತಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭಾರತೀಯ ಕಾವ್ಯ ಮೀಮಾಂಸೆಹಣಕಾಸುಕನ್ನಡ ರಾಜ್ಯೋತ್ಸವದಶಾವತಾರಮೂಲಭೂತ ಕರ್ತವ್ಯಗಳುಕಂಪ್ಯೂಟರ್ಗ್ರಾಮ ಪಂಚಾಯತಿಕರ್ನಾಟಕದ ಇತಿಹಾಸಬಿಪಾಶಾ ಬಸುಹೆಚ್.ಡಿ.ಕುಮಾರಸ್ವಾಮಿರಾಜ್‌ಕುಮಾರ್ಯಕೃತ್ತುಪಠ್ಯಪುಸ್ತಕಮಹಾಭಾರತಇತಿಹಾಸಜೀವವೈವಿಧ್ಯಮೂಲಧಾತುಗಳ ಪಟ್ಟಿಭಾರತದ ಇತಿಹಾಸರಜನೀಕಾಂತ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸಿದ್ಧಯ್ಯ ಪುರಾಣಿಕಮರಣದಂಡನೆಗೌತಮ ಬುದ್ಧಲಿಂಗಾಯತ ಧರ್ಮಮದಕರಿ ನಾಯಕಮಿನ್ನಿಯಾಪೋಲಿಸ್ಸೂರ್ಯೋದಯಭಾರತದ ನದಿಗಳುಜಲಶುದ್ಧೀಕರಣಭಾರತದ ಉಪ ರಾಷ್ಟ್ರಪತಿಆಮ್ಲ ಮಳೆದಾಸವಾಳಬಾದಾಮಿ ಶಾಸನಪ್ರಸ್ಥಭೂಮಿಅವರ್ಗೀಯ ವ್ಯಂಜನ🡆 More