ಬಿ.ಎಸ್.ರಾಜಯ್ಯಂಗಾರ್

ಬಿ.ಎಸ್.‌ರಾಜಯ್ಯಂಗಾರ್.

(ಜನನ: ೧೯೦೧ - ಮರಣ: ಜುಲೈ ೪,೧೯೭೮) ಅದ್ಭುತವಾಗಿ ಹಾಡಿ, ಜನಮನದಲ್ಲಿ ನೆಲೆಗೊಳಿಸಿದ,'ಆಡಿಸಿದಳೆಶೋದಾ,ಜಗದೋದ್ಧಾರನಾ;' ಎಂಬ ಕೀರ್ತನೆ, ಕರ್ನಾಟಕ ಸಂಗೀತ ಪ್ರಿಯರ ಮನದಲ್ಲಿ ಇಂದಿಗೂ ಹಸಿರಾಗಿದೆ.

ಬಾಲ್ಯ

ರಾಜಯ್ಯಂಗಾರ್ ಕರ್ನಾಟಕದ ಬಾಣಾವರ ಎಂಬ ಊರಿನಲ್ಲಿ ಜನಿಸಿದರು.ತಮ್ಮ ೧೩ನೇ ವಯಸ್ಸಿಗೇ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಸೋದರಮಾವ ಶಾಮಾಚಾರ್ ಆಶ್ರಯದಲ್ಲಿ ಬೆಳೆದರು.

ಸಂಗೀತ

ಇವರ ಕಂಠವನ್ನು ಮೆಚ್ಚಿಕೊಂಡ ವರದಾಚಾರ್ ಇವರನ್ನು ತಮ್ಮ 'ರತ್ನಾವಳಿ ಥಿಯೇಟ್ರಿಕಲ್ ಕಂಪೆನಿ'ಗೆ ಸೇರಿಸಿಕೊಂಡರು.ಅಲ್ಲಿಯೇ ಶ್ರೀನಿವಾಸ ಅಯ್ಯಂಗಾರರಿಂದ ಸಂಗೀತ ಕಲಿತರು. ೧೯೩೦ರಲ್ಲಿ ಚೆನ್ನೈನ 'ಎಗ್ಮೋರ್ ಸಂಗೀತ ಸಭಾ'ದಲ್ಲಿ ನಡೆಸಿದ ಕಛೇರಿ ಇವರಿಗೆ ಪ್ರಖ್ಯಾತಿ ತಂದುಕೊಟ್ಟಿತು.ನಂತರ ೧೯೩೨ರಲ್ಲಿ 'ಓಡಿಯನ್ ಜರ್ಮನ್ ಕಂಪೆನಿ' ಅವರ ಜಗದೋದ್ಧಾರನಾ,ಕಂಡು ಕಂಡು ನೀ ಎನ್ನ,ಕ್ಷೀರ ಸಾಗರ ಶಯನ,ಬ್ರೋಚೇವರೆವರುರಾ...ಮುಂತಾದ ಕೀರ್ತನೆಗಳ ಧ್ವನಿಸುರುಳಿ ಹೊರತಂದಿತು.ಈ ಮೂಲಕ ರಾಜಯ್ಯಂಗಾರರು ದೇಶಾದ್ಯಂತ ಜನಪ್ರಿಯರಾದರು.ಇವರ ಕಛೇರಿಗಳಿಗೆ ದೇಶ-ವಿದೇಶಗಳಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಿದ್ದರು.

ಬೆಳ್ಳಿತೆರೆಯ ನಂಟು

ಇವರ ಆಪ್ತಮಿತ್ರರಾದ ಆರ್.ನಾಗೇಂದ್ರರಾಯರು ಬಲವಂತವಾಗಿ ಇವರನ್ನು ಕನ್ನಡ ಚಿತ್ರರಂಗಕ್ಕೆ ಎಳೆತಂದರು. ಹರಿಶ್ಚಂದ್ರ ಚಿತ್ರದಲ್ಲಿ ನಾರದನ ಪಾತ್ರ ನಿರ್ವಹಣೆಯೊಂದಿಗೆ,ಅವರು ಹಾಡಿದ 'ದೇವ ದೇವನೆ ಶರಣು'ಎಂಬ ಕೀರ್ತನೆ ಜನಪ್ರಿಯವಾಯಿತು.ಆರ್.ನಾಗೇಂದ್ರರಾಯರ ಇನ್ನೊಂದು ಚಿತ್ರ ಜಾತಕಫಲದಲ್ಲಿ ಕೂಡಾ ನಟಿಸಿದರು. ತೆಲುಗಿನ ಜಲಂಧರ,ತಮಿಳಿನ ನಾಟ್ಯರಾಣಿ,ಹಿಂದಿಯ ತುಳಸಿದಾಸ್ -ಅವರು ನಟಿಸಿದ ಚಿತ್ರಗಳಲ್ಲಿ ಕೆಲವು.೧೯೫೧ರಲ್ಲಿ ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗಲೇ ಸಿನಿಮಾ ತ್ಯಜಿಸಿ, ಸಂಗೀತ ಕ್ಷೇತ್ರದಲ್ಲೇ ಮುಂದುವರೆಯಲು ನಿರ್ಧರಿಸಿದರು.೧೯೫೪ರಲ್ಲಿ ಮೈಸೂರು ಆಕಾಶವಾಣಿಯಲ್ಲಿ ನೀಡಿದ 'ರಾಗಂ-ತಾನಂ-ಪಲ್ಲವಿ'ಎಂಬ ವಿಶಿಷ್ಟ ಕಛೇರಿ ಜನಪ್ರಿಯವಾಗಿದೆ.

ಪ್ರಶಸ್ತಿ,ಗೌರವಗಳು

  • ೧೯೭೩ - ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ

ಉಲ್ಲೇಖಗಳು

Tags:

ಬಿ.ಎಸ್.ರಾಜಯ್ಯಂಗಾರ್ ಬಾಲ್ಯಬಿ.ಎಸ್.ರಾಜಯ್ಯಂಗಾರ್ ಸಂಗೀತಬಿ.ಎಸ್.ರಾಜಯ್ಯಂಗಾರ್ ಬೆಳ್ಳಿತೆರೆಯ ನಂಟುಬಿ.ಎಸ್.ರಾಜಯ್ಯಂಗಾರ್ ಪ್ರಶಸ್ತಿ,ಗೌರವಗಳುಬಿ.ಎಸ್.ರಾಜಯ್ಯಂಗಾರ್ ಉಲ್ಲೇಖಗಳುಬಿ.ಎಸ್.ರಾಜಯ್ಯಂಗಾರ್ಜುಲೈ ೪೧೯೦೧೧೯೭೮

🔥 Trending searches on Wiki ಕನ್ನಡ:

ರಾವಣರತ್ನತ್ರಯರುಪ್ರಾಚೀನ ಈಜಿಪ್ಟ್‌೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಸೂರ್ಯ (ದೇವ)ಸಾರ್ವಜನಿಕ ಹಣಕಾಸುಬೇಲೂರುಅಖಿಲ ಭಾರತ ಬಾನುಲಿ ಕೇಂದ್ರಕರ್ನಾಟಕ ವಿಧಾನ ಪರಿಷತ್ರೈಲು ನಿಲ್ದಾಣರಾಷ್ಟ್ರೀಯ ಶಿಕ್ಷಣ ನೀತಿಕಮಲಪಶ್ಚಿಮ ಘಟ್ಟಗಳುಸೂರ್ಯಅಂಟಾರ್ಕ್ಟಿಕನೆಪೋಲಿಯನ್ ಬೋನಪಾರ್ತ್ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಗಂಗ (ರಾಜಮನೆತನ)ಅಂಬಿಗರ ಚೌಡಯ್ಯಉಮಾಶ್ರೀಲೋಕಸಭೆಭೋವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಜೈನ ಧರ್ಮಹಿಂದೂ ಧರ್ಮಅಮೇರಿಕದ ಫುಟ್‌ಬಾಲ್ಕ್ಷಯಮಾದಿಗರಾಷ್ಟ್ರೀಯತೆಚನ್ನಬಸವೇಶ್ವರಕಂದನದಿಹಿಮಾಲಯಮಂಗಳ (ಗ್ರಹ)ಶಿವನ ಸಮುದ್ರ ಜಲಪಾತಏಷ್ಯಾಮಲ್ಲಿಗೆಜಯಮಾಲಾಬ್ಯಾಬಿಲೋನ್ಶ್ರೀಕೃಷ್ಣದೇವರಾಯಯೋಗಮೋಕ್ಷಗುಂಡಂ ವಿಶ್ವೇಶ್ವರಯ್ಯಶಬ್ದ ಮಾಲಿನ್ಯಕಾಗೆರೋಮನ್ ಸಾಮ್ರಾಜ್ಯಸಾರಾ ಅಬೂಬಕ್ಕರ್ಬಳ್ಳಿಗಾವೆಯುಗಾದಿಶೂದ್ರ ತಪಸ್ವಿಚಕ್ರವರ್ತಿ ಸೂಲಿಬೆಲೆಗ್ರಾಹಕರ ಸಂರಕ್ಷಣೆಭಾರತೀಯ ಸಶಸ್ತ್ರ ಪಡೆಸವರ್ಣದೀರ್ಘ ಸಂಧಿಕದಂಬ ಮನೆತನಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಭತ್ತಕನ್ಯಾಕುಮಾರಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸಿದ್ದಲಿಂಗಯ್ಯ (ಕವಿ)ನರಿಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯಲಾವಣಿಪರಿಸರ ವ್ಯವಸ್ಥೆಕನ್ನಡದಲ್ಲಿ ವಚನ ಸಾಹಿತ್ಯಕಲ್ಯಾಣ ಕರ್ನಾಟಕಪತ್ರಬಂಡವಾಳಶಾಹಿವಿಜಯನಗರ ಸಾಮ್ರಾಜ್ಯಸಾಮವೇದಪುಷ್ಕರ್ ಜಾತ್ರೆಗುಪ್ತ ಸಾಮ್ರಾಜ್ಯಕನ್ನಡ ಗುಣಿತಾಕ್ಷರಗಳುಕಳಿಂಗ ಯುದ್ಧಜನಪದ ಕ್ರೀಡೆಗಳುಧಾರವಾಡನೀರಿನ ಸಂರಕ್ಷಣೆಚಂದ್ರಶೇಖರ ಕಂಬಾರ🡆 More