ಬಿಡಾರಂ ಕೃಷ್ಣಪ್ಪ: ಕರ್ನಾಟಕ ಸಂಗೀತದ ವಿದ್ವಾಂಸರು

ಬಿಡಾರಂ ಕೃಷ್ಣಪ್ಪ (ಕ್ರಿ.ಶ.೧೮೬೬ - ೧೯೩೧) ಗಾನವಿಶಾರದ ಎಂದು ಬಿರುದು ಹೊಂದಿದ್ದ ಕೃಷ್ಣಪ್ಪನವರು ೧೮೬೬ ರಲ್ಲಿ ಮೈಸೂರಿನಲ್ಲಿ ಜನಿಸಿದರು.

ಇವರ ಹಿರಿಯರು ದಕ್ಷಿಣ ಕನ್ನಡಜಿಲ್ಲೆಯವರು. ಕರ್ನಾಟಕ ಸಂಗೀತದ ಬಹುದೊಡ್ಡ ವಿದ್ವಾಂಸರು. ಇವರ ಶಿಷ್ಯರಲ್ಲಿ ಟಿ.ಚೌಡಯ್ಯ, ಬಿ.ದೇವೇಂದ್ರಪ್ಪ ಮುಂತಾದವರು ಪ್ರಮುಖರು. ಬಿಡಾರಂ ಕೃಷ್ಣಪ್ಪ(೧೮೬೬-೧೯೩೧)ನಾಲ್ಮಡಿ ಕೃಷ್ಣರಾಜೇಂದ್ರ ಒಡೆಯರ ಆಸ್ಥಾನದಲ್ಲಿ ಕರ್ಣಾಟಕ ಸಂಗೀತ ವಿದ್ವಾಂಸರು, ಮತ್ತು ವಾಗ್ಗೇಯಕಾರರು ಸಹಿತ. ಚಾಮರಾಜ ಒಡೆಯರ (೧೮೬೨-೧೮೯೪) ಆಸ್ಥಾನದಲ್ಲಿಯೂ ತಮ್ಮ ಕೃತಿ ರಚನೆ ಹಾಗೂ ಸಂಗೀತದಿಂದ ಹೆಸರುವಾಸಿಯಾಗಿದ್ದರು.

'ಬಿಡಾರಂ' ಎಂಬ ಹೆಸರು ಬರಲು ಕಾರಣ

ಬಿಡಾರಂ ಕೃಷ್ಣಪ್ಪ: ಬಿಡಾರಂ ಎಂಬ ಹೆಸರು ಬರಲು ಕಾರಣ, ಜನನ, ಮರಣ
ಬಿಡಾರಂ ಕೃಷ್ಣಪ್ಪ

'ಮುಮ್ಮಡಿ ಕೃಷ್ಣರಾಜ ಒಡೆಯರ' ಕಾಲದಲ್ಲಿ ಒಂದು 'ಯಕ್ಷಗಾನ ತಂಡ' ಮೈಸೂರಿಗೆ ಆಗಮಿಸಿತ್ತು. ಅವರ ಪ್ರದರ್ಶನ ಕಂಡ ಮಹಾಸ್ವಾಮಿಗಳು ಅವರಲ್ಲಿ ಕೆಲವರನ್ನು ಮೈಸೂರಿನಲ್ಲಿಯೇ ಉಳಿಸಿಕೊಂಡು 'ಶಿವರಾಮ್ ಪೇಟೆ'ಯಲ್ಲಿ ಅವರಿಗೆ ಬಿಡಾರಗಳನ್ನು ಕಟ್ಟಿಸಿಕೊಟ್ಟರು. ಹೀಗೆ ಅಲ್ಲಿ ವಾಸಿಸುತ್ತಿದ್ದ ಕೃಷ್ಣಪ್ಪ, ಮತ್ತು ನಿವಾಸಿಗಳಿಗೆ 'ಬಿಡಾರದವರೆಂಬ ಹೆಸರು' ಬಂತು.

ಜನನ

'ಕೃಷ್ಣಪ್ಪ', ಕೊಂಕಣಿ ಭಾಷೆ ಮಾತಾಡುವ 'ಗೌಡ ಸಾರಸ್ವತ ಬ್ರಾಹ್ಮಣ'ರ ಜಾತಿಯಲ್ಲಿ ಹೊಸ ಉಡುಪಿ ಜಿಲ್ಲೆಯ 'ನಂದಲಿಕ' ಊರಿನಲ್ಲಿ ಕ್ರಿ.ಶ. ೧೮೬೬ ರಲ್ಲಿ ಗೋಕುಲಷ್ಟಮಿಯ ದಿನ ಜನಿಸಿದರು. ಜನಿಸಿದ ಶಿಶುವಿಗೆ 'ಕೃಷ್ಣ'ನೆಂದು ನಾಮಕರಣವಾಯಿತು. ಚಿಕ್ಕ ವಯಸ್ಸಿನಲ್ಲೇ ತಂದೆಯವರ ದೇಹಾಂತವಾಯಿತು. ತಾಯಿಯ ಆಸರೆಯಲ್ಲಿ ಬಡತನದಲ್ಲಿ ಬೆಳೆದ ಕೃಷ್ಣ ಮತ್ತು ಅವನ ಅಣ್ಣನಿಗೆ ಹರಿದಾಸರ ಕೃತಿಗಳೇ ಜೀವನಕ್ಕೆ ಆಧಾರವಾಯಿತು. ದಿವವೂ ಭಿಕ್ಷಾಟಣೆಯಿಂದ ಜೀವನ ಸಾಗುತ್ತಿತ್ತು. ತಿಮ್ಮಯ್ಯನೆಂಬ ಸಾಹುಕಾರರ ಅನುಗ್ರಹದಿಂದ ಸಂಗೀತ ಕಲಿಯಲು ಪ್ರಯತ್ನ ನಡೆಯಿತು. ಆಗಿನ ಕಾಲದ ಸುಪ್ರಸಿದ್ಧ ಸಂಗೀತ ವಿದ್ವಾಂಸ, ಕರೂರು ರಾಮಸ್ವಾಮಿಯವರಲ್ಲಿ ಶಿಷ್ಯವೃತ್ತಿಯನ್ನು ಪ್ರಾರಂಭಿಸಿದರು. ಸಾಹುಕಾರ ತಿಮ್ಮಯ್ಯನವರ ಹಣದ ಆಸರೆ ಮತು ಬಿಡಾರದಲ್ಲಿ ವಾಸ, ನಡೆಯುತ್ತಿತ್ತು. ಸಾಹುಕಾರ ತಿಮ್ಮಯ್ಯ ನವರ ಪ್ರಯತ್ನದಿಂದ ಮೈಸೂರರಮನೆಯಲ್ಲಿ ಸಂಗೀತ ವಿದ್ವಾಂಸರಾಗಿ ನೇಮಕಗೊಂಡರು. ಗಾನವಿಶಾರದರೆಂದು ಅರಮನೆಯಲ್ಲಿ ಪ್ರಸಿದ್ಧಿಹೊಂದಿದ್ದಲ್ಲದೆ, ನಟನೆಯಲ್ಲೂ ಒಳ್ಳೆಯ ಕೌಶಲ್ಯವನ್ನು ಹೊಂದಿದ್ದರು.ಕನ್ನಡ ಭಾಷೆಯಲ್ಲಿ ಹರಿದಾಸ ಕೃತಿಗಳಿಗೆ ವಿಶೇಷ ಮಹತ್ವವನ್ನು ಕೊಟ್ಟು, ಜನಪ್ರಿಯರಾದರು. ಬಿಡಾರಂ ಕೃಷ್ಣಪ್ಪನವರಿಗೆ ಶ್ರೀ ತ್ಯಾಗರಾಜರು,ಶ್ಯಾಮಾಶಾಸ್ತ್ರಿಗಳು ಹಾಗೂ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಬಗ್ಗೆ ಗೌರವವಿತ್ತು. ಆದರೆ,ಹೆಚ್ಚಿನ ಒಲವು, ಸಂಗೀತ ಪಿತಾಮಹ ಶ್ರೀ ಪುರುಂದರ ದಾಸರ,ವ್ಯಾಸತೀರ್ಥರ,ವಾದಿರಾಜರ,ಹಾಗೂ ಕನಕದಾಸರಿಂದ ರಚಿತವಾದ ಅನುಪಮ ಕನ್ನಡ ಕೃತಿಗಳನ್ನು ಕಂಡರೆ ಪ್ರಾಣ. ಹೀಗೆ ಕನ್ನಡಕ್ಕಾಗಿ ವಿಶಿಷ್ಟಸೇವೆ ಸಲ್ಲಿಸಿದರು. ಕೆಲಕಾಲ, ವೀಣೆ ಶೇಷಣ್ಣನವರ ಬಳಿ ಸಂಗೀತವನ್ನು ಅಭ್ಯಾಸಮಾಡಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶೈಲಿಯನ್ನು ದೇವರನಾಮಗಳಿಗೆ ಬಳಸಿ ವೇಕಿಕೆಯ ಮೇಲೆ ಹಾಡಿ ಜನಪ್ರಿಯಮಾಡಿದರು. ದೇವರ ನಾಮಗಳನ್ನು ಹಾಡುವುದಲ್ಲ್ದೆ ಕೃತಿರಚನೆಯನ್ನೂ ಮಾಡಿದರು.

ಮರಣ

'ಬಿಡಾರಂ ಕೃಷ್ಣಪ್ಪನವರು', ೧೯೩೧ ನೆಯ ಇಸವಿ,ಮಾರ್ಚ್ ತಿಂಗಳ ೨೯ ರಂದು ದೈವಾಧೀನರಾದರು. .

ಪ್ರಶಸ್ತಿಗಳು

  1. ಶುದ್ಧ ಸ್ವರಾಚಾರ್ಯ,
  2. ಪಲ್ಲವಿ ಕೃಷ್ಣಪ್ಪ,
  3. ಗಾನ ವಿಶಾರದ,

ಶಿಷ್ಯರು

ಪಿಟೀಲುವಾದಕ,ಟಿ ಚೌಡಯ್ಯ

ಉಲ್ಲೇಖಗಳು

Tags:

ಬಿಡಾರಂ ಕೃಷ್ಣಪ್ಪ ಬಿಡಾರಂ ಎಂಬ ಹೆಸರು ಬರಲು ಕಾರಣಬಿಡಾರಂ ಕೃಷ್ಣಪ್ಪ ಜನನಬಿಡಾರಂ ಕೃಷ್ಣಪ್ಪ ಮರಣಬಿಡಾರಂ ಕೃಷ್ಣಪ್ಪ ಪ್ರಶಸ್ತಿಗಳುಬಿಡಾರಂ ಕೃಷ್ಣಪ್ಪ ಶಿಷ್ಯರುಬಿಡಾರಂ ಕೃಷ್ಣಪ್ಪ ಉಲ್ಲೇಖಗಳುಬಿಡಾರಂ ಕೃಷ್ಣಪ್ಪಕರ್ನಾಟಕ ಸಂಗೀತಟಿ.ಚೌಡಯ್ಯದಕ್ಷಿಣ ಕನ್ನಡಮೈಸೂರು೧೮೬೬೧೯೩೧

🔥 Trending searches on Wiki ಕನ್ನಡ:

ಪುಷ್ಕರ್ ಜಾತ್ರೆಮೊಘಲ್ ಸಾಮ್ರಾಜ್ಯಪೊನ್ನರಾಷ್ಟ್ರಕವಿತಲಕಾಡುಚನ್ನಬಸವೇಶ್ವರಸೇತುವೆವಿಧಾನ ಸಭೆಹಳೇಬೀಡುಚಂದ್ರಗುಪ್ತ ಮೌರ್ಯಮೂಲಭೂತ ಕರ್ತವ್ಯಗಳುವಿನಾಯಕ ದಾಮೋದರ ಸಾವರ್ಕರ್ಭಾರತದ ರಾಷ್ಟ್ರಪತಿಶಬರಿಶಾತವಾಹನರುವಿಜಯಪುರಸಂಯುಕ್ತ ರಾಷ್ಟ್ರ ಸಂಸ್ಥೆಮಾಲಿನ್ಯಒಂದನೆಯ ಮಹಾಯುದ್ಧಕನ್ನಡ ಸಾಹಿತ್ಯ ಸಮ್ಮೇಳನಪ್ರಜಾಪ್ರಭುತ್ವಧಾರವಾಡಕೆ. ಎಸ್. ನಿಸಾರ್ ಅಹಮದ್ಸ್ವಾಮಿ ವಿವೇಕಾನಂದವೆಂಕಟೇಶ್ವರ ದೇವಸ್ಥಾನಸಂಪತ್ತಿನ ಸೋರಿಕೆಯ ಸಿದ್ಧಾಂತತಾಜ್ ಮಹಲ್ಭಾರತ ಗಣರಾಜ್ಯದ ಇತಿಹಾಸಕನ್ನಡದ ಉಪಭಾಷೆಗಳುಒಂದೆಲಗಪೀನ ಮಸೂರಕಂದಶಿವರಾಮ ಕಾರಂತರಾಮ್ ಮೋಹನ್ ರಾಯ್ಭಾರತದಲ್ಲಿ ಮೀಸಲಾತಿಮಳೆಗಾಲಏಷ್ಯಾಸಂತಾನೋತ್ಪತ್ತಿಯ ವ್ಯವಸ್ಥೆಸಾಲುಮರದ ತಿಮ್ಮಕ್ಕಪಂಪದೇವತಾರ್ಚನ ವಿಧಿಪೌರತ್ವಬಿ. ಜಿ. ಎಲ್. ಸ್ವಾಮಿರೋಸ್‌ಮರಿಸಾಮವೇದಭಾರತದ ಸರ್ವೋಚ್ಛ ನ್ಯಾಯಾಲಯಗಾಂಧಿ ಮತ್ತು ಅಹಿಂಸೆಕೇಶಿರಾಜಮಹಾತ್ಮ ಗಾಂಧಿಮಣ್ಣಿನ ಸಂರಕ್ಷಣೆಕುಂದಾಪುರಸಂವಿಧಾನಕ್ರಿಕೆಟ್ಶ್ರೀ ರಾಘವೇಂದ್ರ ಸ್ವಾಮಿಗಳುಭಾರತದ ಇತಿಹಾಸದ.ರಾ.ಬೇಂದ್ರೆಚಕ್ರವರ್ತಿ ಸೂಲಿಬೆಲೆಜನಪದ ಕಲೆಗಳುಉಪ್ಪಿನ ಸತ್ಯಾಗ್ರಹಕನ್ನಡ ಸಾಹಿತ್ಯ ಪ್ರಕಾರಗಳುಕರಾವಳಿ ಚರಿತ್ರೆಪಾಟೀಲ ಪುಟ್ಟಪ್ಪಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುಕಂಠೀರವ ನರಸಿಂಹರಾಜ ಒಡೆಯರ್ಧ್ವನಿಶಾಸ್ತ್ರಇಮ್ಮಡಿ ಪುಲಕೇಶಿತಿಂಥಿಣಿ ಮೌನೇಶ್ವರಅರಿಸ್ಟಾಟಲ್‌ಪತ್ರಿಕೋದ್ಯಮಹೂವುಜೀವನಚರಿತ್ರೆಪ್ರಗತಿಶೀಲ ಸಾಹಿತ್ಯಜನ್ನಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುನಡುಕಟ್ಟುಮುಟ್ಟುಸೌರಮಂಡಲ🡆 More