ಪಾರ್ತೆನಾನ್

ಪಾರ್ತೆನಾನ್ ಕಿ.ಪೂ.

447-432 ರಲ್ಲಿ ಗ್ರೀಸಿನ ದೊರೆ ಪೆರ್ಲಿಕೀಸನ ಕಾಲದಲ್ಲಿ ಆಥೆನ್ಸ್ ನಗರದ ಮಧ್ಯಭಾಗದಲ್ಲಿ ಅಕ್ರೋಪೊಲೀಸ್‍ನಲ್ಲಿ ನಿರ್ಮಿತವಾದ ಅತೀನ ದೇವತೆಯ ಮಂದಿರ. ಗ್ರೀಕ್ ವಾಸ್ತುಶಿಲ್ಪದ ಅತ್ಯುತ್ತಮ ನಿರ್ಮಾಣಗಳಲ್ಲೊಂದೆಂದು ಇದು ಪರಿಗಣಿತವಾಗಿದೆ.

ಪಾರ್ತೆನಾನ್
ಅಥೆನ್ಸ್ ನಲ್ಲಿನ ಪಾರ್ಥೆನಾನ್

ಇಕ್ಟಿನಸ್ ಮತ್ತು ಕ್ಯಾಲೆಕ್ರೇಟಸ್ ಇದನ್ನು ನಿರ್ಮಿಸಿದರು. ಪಿಡಿಯಾಸ್ ಇದರ ಶಿಲ್ಪದ ಮೇಲ್ವಿಚಾರಕನಾಗಿದ್ದ.

ದೇವಾಲಯದ ಮುಂಭಾಗ ಹಿಂಭಾಗಗಳಲ್ಲಿ ಎಂಟು, ಮತ್ತು ಇಬ್ಬದಿಗಳಲ್ಲಿ ಹದಿನೇಳು ಸ್ತಂಭಗಳಿವೆ. ಮಂದಿರದೊಳಗೆ, ಮಧ್ಯಾಂಗಣದ ಪಶ್ಚಿಮದ ಕೊನೆಯಲ್ಲಿ, ಸುಮಾರು 12 ಮೀ ಎತ್ತರದ ಅತೀನ ಪಾರ್ತೆನಾಸ್ ವಿಗ್ರಹವಿತ್ತು. ಈ ದೇವತೆಯ ಗೌರವಾರ್ಥ ನಡೆಯುತ್ತಿದ್ದ ಮೆರವಣಿಗೆಯನ್ನು ಚಿತ್ರಿಸುವ ಶಿಲಾಪಟ್ಟಿಕೆ ಈ ದೇವಾಲಯದ ಗೋಡೆಯ ಸುತ್ತಲೂ ಇತ್ತು. ಈ ಪಟ್ಟಿಕೆ 160 ಮೀ. ಉದ್ದವಿತ್ತು. ಇದರಲ್ಲಿ 92 ಮೀ. ಉದ್ದದಷ್ಟು ಭಾಗ ಇಂದೂ ಉಳಿದಿದೆ. ಕ್ರಿ.ಶ. 6 ನೆಯ ಶತಮಾನದಲ್ಲಿ ಈ ದೇವಾಲಯ ಕ್ರೈಸ್ತ ಮಂದಿರವಾಗಿ ಮಾರ್ಪಟ್ಟಿತು. ಅನಂತರ ಇದಕ್ಕೆ ಮಿನಾರತ್ತನ್ನು ನಿರ್ಮಿಸಿ ಮಸೀದಿಯಾಗಿ ಬದಲಾಯಿಸಲಾಯಿತು. 1687 ರಲ್ಲಿ ತುರ್ಕರು ಇದನ್ನು ಗುಂಡಿನ ಮದ್ದನ್ನು ತುಂಬಿಡಲು ಬಳಸುತ್ತಿದ್ದರು. ಆಗ ಸಂಭವಿಸಿದ ಸ್ಫೋಟನೆಯಿಂದ ದೇವಾಲಯದ ಮಧ್ಯಭಾಗ ಹಾಳಾಯಿತು. ದೇವಾಲಯದ ಸುತ್ತಣ ಶಿಲಾಪಟ್ಟಿಕೆಯ ಕೆಲವು ಭಾಗಗಳನ್ನು 1806 ರಲ್ಲಿ ಶ್ರೀಮಂತನೊಬ್ಬ ಲಂಡನ್ನಿಗೆ ಕೊಂಡೊಯ್ದ. ಇವು ಈಗ ಲಂಡನ್ನಿನ ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲವೆ. 18 ನೆಯ ಶತಮಾನದ ವೇಳೆಗೆ ಈ ದೇವಾಲಯದ ಶಿಲ್ಪಕಲಾ ಸೌಂದರ್ಯದ ಅರಿವಾಗತೊಡಗಿತು. ಇದನ್ನು ಜೀರ್ಣೋದ್ಧಾರ ಮಾಡಲಾಯಿತು.

ಪಾರ್ತೆನಾನ್
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಅಕ್ರೋಪೊಲಿಸ್ಅಥೆನ್ಸ್ಗ್ರೀಸ್

🔥 Trending searches on Wiki ಕನ್ನಡ:

ಚದುರಂಗ (ಆಟ)ವಿಚ್ಛೇದನಲಕ್ಷ್ಮೀಶಬಡ್ಡಿ ದರಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಪ್ರಾಥಮಿಕ ಶಿಕ್ಷಣತಾಳಗುಂದ ಶಾಸನರಾಷ್ಟ್ರೀಯ ಶಿಕ್ಷಣ ನೀತಿಮಾನವನಲ್ಲಿ ನಿರ್ನಾಳ ಗ್ರಂಥಿಗಳುರಂಗಭೂಮಿಬಂಗಾರದ ಮನುಷ್ಯ (ಚಲನಚಿತ್ರ)ರಾಯಚೂರು ಜಿಲ್ಲೆಸಿದ್ದಲಿಂಗಯ್ಯ (ಕವಿ)ಜಯಂತ ಕಾಯ್ಕಿಣಿಹುಬ್ಬಳ್ಳಿಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ವಚನಕಾರರ ಅಂಕಿತ ನಾಮಗಳುಜಿ.ಎಸ್.ಶಿವರುದ್ರಪ್ಪಸಂವತ್ಸರಗಳುಮಂಟೇಸ್ವಾಮಿಸಮಾಸವಾಯು ಮಾಲಿನ್ಯಊಳಿಗಮಾನ ಪದ್ಧತಿಕಾದಂಬರಿಭಾರತದ ರಾಷ್ಟ್ರೀಯ ಉದ್ಯಾನಗಳುಸಂಸ್ಕಾರಅಮೇರಿಕ ಸಂಯುಕ್ತ ಸಂಸ್ಥಾನದಿವ್ಯಾಂಕಾ ತ್ರಿಪಾಠಿವಿಕಿರಣಕಿತ್ತೂರು ಚೆನ್ನಮ್ಮಭಾರತದ ರಾಷ್ಟ್ರಗೀತೆಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುರತನ್ ನಾವಲ್ ಟಾಟಾಕ್ರೀಡೆಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಭರತನಾಟ್ಯಶಿರ್ಡಿ ಸಾಯಿ ಬಾಬಾಯೋಗಸೌರಮಂಡಲನಾಗರೀಕತೆಸೂರ್ಯವ್ಯೂಹದ ಗ್ರಹಗಳುಮೊದಲನೇ ಅಮೋಘವರ್ಷಹತ್ತಿವಾಲ್ಮೀಕಿಸಂಗ್ಯಾ ಬಾಳ್ಯಾ(ನಾಟಕ)ಜಾಗತಿಕ ತಾಪಮಾನಮೊದಲನೆಯ ಕೆಂಪೇಗೌಡನಾಯಕ (ಜಾತಿ) ವಾಲ್ಮೀಕಿವಾದಿರಾಜರುಗೋಪಾಲಕೃಷ್ಣ ಅಡಿಗಕರ್ನಾಟಕದ ಜಾನಪದ ಕಲೆಗಳುಭಾರತದ ಸಂವಿಧಾನದ ೩೭೦ನೇ ವಿಧಿಮಧುಮೇಹಲೆಕ್ಕ ಬರಹ (ಬುಕ್ ಕೀಪಿಂಗ್)ಇಂಡಿಯನ್ ಪ್ರೀಮಿಯರ್ ಲೀಗ್ತುಳುಪೊನ್ನಪ್ರಬಂಧ ರಚನೆರೈತ ಚಳುವಳಿಪರಿಸರ ವ್ಯವಸ್ಥೆಗರ್ಭಧಾರಣೆಅಕ್ಷಾಂಶ ಮತ್ತು ರೇಖಾಂಶಬಯಲಾಟಮೈಸೂರು ಅರಮನೆಮಲೇರಿಯಾಸವದತ್ತಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕೈಗಾರಿಕೆಗಳುಬೀಚಿಕ್ಯಾನ್ಸರ್ಬಿಳಿ ರಕ್ತ ಕಣಗಳುವಿರಾಟ್ ಕೊಹ್ಲಿಸಂಯುಕ್ತ ಕರ್ನಾಟಕಮಡಿವಾಳ ಮಾಚಿದೇವಕರ್ನಾಟಕದ ಜಿಲ್ಲೆಗಳುದ.ರಾ.ಬೇಂದ್ರೆ🡆 More